Date: 21-12-2024
Location: ಮಂಡ್ಯ
ಮಂಡ್ಯ: 70-80ರ ವರೆಗೆ ಒಮ್ಮುಖ ಸಾಹಿತ್ಯ ಇತ್ತು. ನಂತರದ ಕೆಳ ಸಮುದಾಯದ ಸಾಹಿತ್ಯ ಬರವಣಿಗೆ ಕನ್ನಡ ಸಾಹಿತ್ಯ ಲೋಕಕ್ಕೆ ಪೂರ್ಣತೆಯನ್ನುಕೊಟ್ಟಿತು. ಬಸವಲಿಂಗಪ್ಪ ಅವರ ಬೂಸಾ ಸಾಹಿತ್ಯ ಎಂಬ ಮಾತು 70 ದಶಕದಲ್ಲಿ ದಲಿತ, ಬಂಡಾಯ ಸಾಹಿತ್ಯಕ್ಕೆ ಮೂಲವಾಯಿತು ಎನ್ನಬಹುದು. ಆರಂಭವಾದ ದಲಿತ ಚಳುವಳಿ ಮತ್ತು ಸಾಹಿತ್ಯ ಒಟ್ಟೊಟ್ಟಿಗೆ ಬರುತ್ತಿತ್ತು. ಇದರಿಂದ ಬರವಣಿಗೆ ಹೆಚ್ಚು ಪರಿಣಾಮಕಾರಿಯಾಗಿತ್ತು. ಬಸವಲಿಂಗಪ್ಪ ತಮ್ಮ ಮಾತಿನಿಂದ ಅಧಿಕಾರಿಗ ಕಳೆದುಕೊಳ್ಳಬೇಕಾಗುತ್ತೆ ಎಂದು ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾನಾಂತರ ವೇದಿಕೆ 1 ರಲ್ಲಿ ನಡೆದ "ದಲಿತ ಸಾಹಿತ್ಯದ ನೆಲೆಗಳು" ಎಂಬ ವಿಷಯದ ಕುರಿತು ಅವರು ಮಾತನಾಡಿದರು. ಕನ್ನಡ ಸಾಹಿತ್ಯವನ್ನ ಬೂಸಾ ಸಾಹಿತ್ಯ ಎಂದು ಬಸವಲಿಂಗಪ್ಪ ಕರೆಯಲು ಕಾರಣ ಅದರಲ್ಲಿ ಕೆಳ ಸಮುದಾಯದದ ನೋವಿಲ್ಲ ಎಂಬುದಾಗಿತ್ತು. ಹೀಗಾಗಿ ಅಲ್ಲಿಯ ವರೆಗೆ ಏಕ ಮುಖ ಸಾಹಿತ್ಯ ಇತ್ತು. ಅವರ ಮಾತಿನ ನಂತರ ಪಂಚಮ ಪತ್ರಿಕೆ ಆರಂಭ ಆಯ್ತು. ಇದಾದ ನಂತರ ಬಹಳಷ್ಟು ಬರವಣಿಗೆಗಳು ಬಂದವು ಎಂದು ದಲಿತ ಸಾಹಿತ್ಯದ ಕುರಿತು ವಿವರಣಾತ್ಮಕವಾಗಿ ತಿಳಿಸಿದರು.
ಬಹಳಾ ಮುಖ್ಯ ಸಾಹಿತ್ಯ ನೆಲೆ ಅಂಬೇಡ್ಕರ್ ಅವರ ನೆಲೆ. ಅವರ ಬರವಣಿಗೆಗಳು ಬೇರೆ ಬೇರೆ ಭಾಷೆಗೆ ಅನುವಾದ ಆದ ನಂತರ ಅವುಗಳ ನೆಲೆ ಎಲ್ಲರಿಗೂ ಅರ್ಥಯಿಸಿಕೊಳ್ಳಲು ಸಾಧ್ಯವಾಯಿತು ಎಂದರು.
ಗಾಂಧಿ ಮತ್ತು ಅಂಬೇಡ್ಕರ್ ಅಪ್ರಸ್ತುತರಾಗುತ್ತಿದ್ದಾರೆ: ಇಂದು ಅಂಬೇಡ್ಕರ್ ಮತ್ತು ಗಾಂಧಿ ಜೀ ಅಪ್ರಸ್ತುತರಾಗುತ್ತಿದ್ದಾರೆ. ಇದಕ್ಕೆ ನಾನಾ ಕಾರಣಗಳಿವೆ. ಆದರೆ, ಜಾತಿ ಪದ್ಧತಿ, ಅಸ್ಪೃಶ್ಯತೆ ಇರುವವರೆಗೊ ಅಂಬೇಡ್ಕರ್ ಜೀವಂತವಾಗಿರುತ್ತಾರೆ ಎಂದು ಮೂಡ್ನಾಕೂಡು ಹೇಳಿದರು.
ಕರ್ನಾಟಕದ ಡಿಎಸ್ಎಸ್ ಒಂದು ವಿಶ್ವ ವಿದ್ಯಾಲಯದ: ದಲಿತ ಸಾಹಿತ್ಯ ಚಳವಳಿ ಮತ್ತು ಮಹಿಳೆ ಎಂಬ ವಿಷಯವಾಗಿ ಮಾತನಾಡಿದ ಜಯದೇವಿ ಗಾಯಕವಾಡ, ಕರ್ನಾಟಕದ ದಲಿತ ಸಂಘರ್ಷ ಸಮಿತಿ ಒಂದು ವಿಶ್ವ ವಿದ್ಯಾಲಯದ ಇದ್ದಂತೆ. ಅಲ್ಲಿ ಬಹಳಷ್ಟು ಕಲಿಕೆ ಇದೆ. ಸಂಘರ್ಷ ಸಮಿತಿ ಕೇವಲ ದಲಿತ ಸಮಸ್ಯೆಗಳನ್ನ ಮುಂದಿಟ್ಟುಕೊಂಡು ಹೋರಾಡಿಲ್ಲ. ರಾಜ್ಯ ಪ್ರಮುಖ ವಿಚಾರಗಳ ಬಗ್ಗೆಯೂ ಹೋರಾಡಿದೆ. ಅದರಲ್ಲೂ ಮಹಿಳೆಯರ ಮೇಲಾದ ಅನ್ಯಾಯದ ವಿರುದ್ಧ ದನಿಯಾಗಿದೆ. ಇದಕ್ಕೆ ಹಲವು ಉದಾಹರಣೆಗಳು ಸಿಗುತ್ತದೆ ಎಂದರು.
ಇತ್ತೀಚೆಗೆ ಅಂಬೇಡ್ಕರ್ ಬಗ್ಗೆ ಮಾತು ಸದನದಲ್ಲಿ ಬಂತು. ಇಂತಹ ಕಾಲಘಟ್ಟದಲ್ಲಿ ಮಹಿಳೆಯರಾದ ನಾವು ಅಂಬೇಡ್ಕರ್ ಕೊಡುಗೆ ನೆನೆಯ ಬೇಕು. ಮಹಿಳೆ ತಂದೆ ಆಸ್ತಿಯಲ್ಲಿ ಪಾಲು, ಗಂಡನ ಆಸ್ತಿಯಲ್ಲಿ ಪಾಲು ಕೊಡಿಸಿದ್ದು ಅಂಬೇಡ್ಕರ್. ಇಂದು ಹಿಂದುಳಿದವರಿಗೆ ಅವಕಾಶ ಸಿಗಲು ಅಂಬೇಡ್ಕರ್ ಕಾರಣ ಎಂದರು.
ಮಂಡ್ಯ: ಡಿ. 21 ರಂದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ “ಸಂಚಿ ಹೊನ್ನಮ್ಮ ಮತ್ತು ಕಾದಂಬರಿ ಸಾಮ್ರಾಜ್...
ಮಂಡ್ಯ: ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮಂಡ್ಯದಲ್ಲಿ ಡಿ.20, 21, 22ರಂದು ಮೂರು ದಿನಗಳ ಕಾಲ ಹಮ್ಮಿಕೊಂಡಿರುವ 87ನೇ ಅಖಿ...
ಮಂಡ್ಯ: ‘ಸಾಹಿತ್ಯದಲ್ಲಿ ಎಡ ಬಲಗಳಿದ್ದರು ಕೂಡ, ಬಹಳಷ್ಟು ಸಾಹಿತಿಗಳು ಸಾಹಿತ್ಯ ಕ್ಷೇತ್ರಕ್ಕೆ ಅಗಾಧವಾದ ಕೊಡುಗೆಯನ...
©2024 Book Brahma Private Limited.