ಗಾಂಧಿಯ ತೀವ್ರವಾದ ರಾಜಕೀಯ ಬರವಣಿಗೆ ಶೈಲಿ ಯಾವ ಸಾಹಿತಿಯಿಂದಲೂ ಸಾಧ್ಯವಾಗಿಲ್ಲ; ಹೆಚ್.ಕೆ. ಪಾಟೀಲ್

Date: 21-12-2024

Location: ಬೆಂಗಳೂರು


ಮಂಡ್ಯ: ‘ಸಾಹಿತ್ಯದಲ್ಲಿ ಎಡ ಬಲಗಳಿದ್ದರು ಕೂಡ, ಬಹಳಷ್ಟು ಸಾಹಿತಿಗಳು ಸಾಹಿತ್ಯ ಕ್ಷೇತ್ರಕ್ಕೆ ಅಗಾಧವಾದ ಕೊಡುಗೆಯನ್ನು ನೀಡಿದ್ದಾರೆ. ಸಾಹಿತ್ಯ, ಸಂಸ್ಕೃತಿಯಲ್ಲಿ ದೊಡ್ಡ ಹೆಸರನ್ನು ಮಾಡಿದವರು ಮಾತ್ರ ರಾಜಕೀಯವಾಗಿ ಬಲವಾಗಲು ಸಾದ್ಯ," ಎಂದು ಬಿ.ಎಲ್. ಶಂಕರ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ಡಿ.20, 21, 22ರಂದು ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಪ್ರಧಾನ ವೇದಿಕೆ "ರಾಜಮಾತೆ ಕೆಂಪನಂಜಮ್ಮಣ್ಣಿ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್’" ನಲ್ಲಿ ಹಮ್ಮಿಕೊಂಡಿದ್ದ "ಸಾಹಿತ್ಯದಲ್ಲಿ ರಾಜಕೀಯ ಹಾಗೂ ರಾಜಕೀಯದಲ್ಲಿ ಸಾಹಿತ್ಯ" ಕುರಿತ ಗೋಷ್ಠಿಯಲ್ಲಿ ಅವರು ತಮ್ಮ ಆಶಯ ನುಡಿಗಳನ್ನಾಡಿದರು.

'ರಾಜಕೀಯ ಮತ್ತು ಸಾಹಿತ್ಯ ಬೇರೆಯಲ್ಲ’; ‘ಸಾಹಿತ್ಯದಲ್ಲಿ ರಾಜಕೀಯ ಹಾಗೂ ರಾಜಕೀಯದಲ್ಲಿ ಸಾಹಿತ್ಯ' ವಿಚಾರದ ಕುರಿತು ಮಾತನಾಡಿದ ರಾಜಕೀಯ ಚಿಂತಕ ಡಾ.ಬಿ.ಎಲ್. ಶಂಕರ್, "ರಾಜಕೀಯ ಮತ್ತು ಸಾಹಿತ್ಯ ಇವೆರಡೂ ಕೂಡ ಬೇರೆಯಲ್ಲ. ಇಡೀ ಸಮುದಾಯ, ಇಡೀ ಪ್ರದೇಶದ ಆಗುಹೋಗುಗಳನ್ನು ಗಮನಿಸುವ ಸಂದರ್ಭದಲ್ಲಿ ರಾಜಕೀಯ ಪ್ರಮುಖವಾಗಿರುತ್ತದೆ. ಅದರ ಇನ್ನೊಂದು ಮುಖವೇ ಸಾಹಿತ್ಯ. ಕುವೆಂಪು ಅವರ ರಾಜಕೀಯ ಚಿಂತನೆ ಭಿನ್ನವಾಗಿದ್ದು, ತಮ್ಮ ಸಾಹಿತ್ಯದಲ್ಲಿ ರಾಜಕೀಯದ ಕುರಿತ ಚಿಂತನೆಗಳನ್ನು ಹೊರಹಾಕುತ್ತಿದ್ದರು. ಬ್ರಿಟೀಷರು ಭಾರತವನ್ನು ಬಿಟ್ಟು ಹೋದ ಕಾಲಘಟ್ಟವನ್ನು ಕೂಡ ಅವರು ತಮ್ಮ ಕವನದಲ್ಲಿ ಕಟ್ಟಿಕೊಟ್ಟಿದ್ದಾರೆ. ಹೀಗೆ ಸಾಹಿತ್ಯ ಎಲ್ಲಾ ಕಾಲಘಟ್ಟಕ್ಕೆ ಇತಿಹಾಸವನ್ನು ತಿಳಿಸುವ ಹಾಗೂ ಜನರನ್ನು ಸ್ಥಿಥ್ಯ ಪ್ರಜ್ಞೆಯಲ್ಲಿ ಮುಳುಗಿಸುವ ಅಸ್ತ್ರ. ಸಾಹಿತ್ಯದಲ್ಲಿ ಎಡ ಬಲಗಳಿದ್ದರು ಕೂಡ, ಬಹಳಷ್ಟು ಸಾಹಿತಿಗಳು ಸಾಹಿತ್ಯ ಕ್ಷೇತ್ರಕ್ಕೆ ಅಗಾಧವಾದ ಕೊಡುಗೆಯನ್ನು ನೀಡಿದ್ದಾರೆ. ಸಾಹಿತ್ಯ, ಸಂಸ್ಕೃತಿಯಲ್ಲಿ ದೊಡ್ಡ ಹೆಸರನ್ನು ಮಾಡಿದವರು ಮಾತ್ರ ರಾಜಕೀಯವಾಗಿ ಬಲವಾಗಲು ಸಾದ್ಯ," ಎಂದರು.

‘ಸಾಹಿತ್ಯ ಮತ್ತು ರಾಜಕೀಯ ಒಂದೇ ನಾಣ್ಯದ ಎರಡು ಮುಖಗಳು’; ‘ರಾಜಕಾರಣಿಗಳಿರಬೇಕಾದ ಸಾಹಿತ್ಯ ಪ್ರಜ್ಞೆ’ ಕುರಿತು ಮಾತನಾಡಿದ ರಾಜಕೀಯ ಚಿಂತಕ ಡಾ.ಕೆ ಅನ್ನದಾನಿ; "ರಾಜಕೀಯ ಇಲ್ಲದೇ ಸಾಹಿತ್ಯ ಇಲ್ಲ, ಸಾಹಿತ್ಯ ಇಲ್ಲದೇ ರಾಜಕೀಯವಿಲ್ಲ. ಇವೆರಡೂ ಕೂಡ ಒಂದೇ ಮುಖದ ಎರಡು ನಾಣ್ಯವಿದ್ದ ಹಾಗೆ. ಒಂದು ವೇಳೆ ಬೇರೆ ಬೇರೆಯಾದರೆ ಕಷ್ಟ. ರಾಜಕೀಯ ಹಾಗೂ ಸಾಹಿತ್ಯವನ್ನು ಹೊರತುಪಡಿಸಿ ಎನು ಕೂಡ ನಡೆಯಲು ಸಾಧ್ಯವಿಲ್ಲ. ಧರ್ಮ, ಸಾಮಾಜಿಕ ನೆಲೆಗಟ್ಟು ಅಥವಾ ಯಾವುದೇ ಇರಲಿ ಅದನ್ನ ನಿಗ್ರಹಿಸುವ, ತಡೆಯುವ ಶಕ್ತಿ ಇರುವುದು ಸಾಹಿತ್ಯಕ್ಕೆ. ’ಶಿಷ್ಟ ಸಾಹಿತ್ಯ’ ಬರವಣಿಗೆಯ ಮೂಲಕ ಆರಂಭವಾಗಿದೆ. ಆದರೆ ‘ಜನಪದ ಸಾಹಿತ್ಯ’ಕ್ಕೆ ಬರವಣಿಗೆಯಿಲ್ಲ. ಅದು ಬಾಯಿಂದ ಬಾಯಿಗೆ ಬಂದಂತಹ ಸಾಹಿತ್ಯ. ನಿರ್ಭಯವಾಗಿ ಸತ್ಯವನ್ನು ಹೇಳಲು ಸಾಧ್ಯ ಸಾಹಿತ್ಯದಿಂದ ಮಾತ್ರ. ಇವತ್ತು ರಾಜಕೀಯ ಬಹಳ ಎತ್ತರವಾದ ಸ್ಥಾನವನ್ನು ಪಡೆದುಕೊಂಡಿದೆ. ಮಂಡ್ಯದ ಜನರ ಮನಸ್ಸಲ್ಲಿ ಕೆ.ವಿ. ಶಂಕರೇಗೌಡ್ರು ಸಾಹಿತ್ಯ ಹಾಗೂ ರಾಜಕೀಯ ಹಾದಿಯಲ್ಲಿ ಇನ್ನು ಕೂಡ ಅಚ್ಚಳಿಯಾಗಿ ಉಳಿದಿದ್ದಾರೆ. ಸಾಹಿತ್ಯವನ್ನು ಯಾವ ರಾಜಕೀಯ ವ್ಯಕ್ತಿ ಅಂಟಿಸಿಕೊಳ್ಳುತ್ತಾನೋ ಅವನು ಎಂದಿಗೂ ಕೂಡ ಜನರ ಮನಸ್ಸಲ್ಲಿ, ಜನರ ಮಧ್ಯದಲ್ಲಿಯೇ ಸ್ಥಾನವನ್ನು ಗಿಟ್ಟಿಸಿಕೊಳ್ಳುತ್ತಾನೆ. ಇವತ್ತು ರಾಜಕೀಯ ಹಾಗೂ ಸಾಹಿತ್ಯ ನನ್ನೊಂದಿಗೆ ಇರೋದರಿಂದ ಮುಂದಿನ ದಿನಗಳಲ್ಲಿ ನಾನು ಇದಕ್ಕಾಗಿ ಶ್ರಮಿಸುತ್ತೇನೆ," ಎಂದು ಹೇಳಿದರು.

‘ರಕ್ತಪಾತವಿಲ್ಲದ ಯುದ್ಧ ಅಂದ್ರೆ ಅದು ರಾಜಕಾರಣ’; "ಸಾಹಿತ್ಯ ಕೃತಿಗಳಲ್ಲಿ ಕಂಡು ಬರುವ ರಾಜಕೀಯ ಚಿತ್ರಣ"ದ ಬಗ್ಗೆ ಮಾತನಾಡಿದ ರಾಜಕೀಯ ವಿಶ್ಲೇಷಕ ರವೀಂದ್ರ ರೇಷ್ಮೆ, "ರಕ್ತಪಾತವಿಲ್ಲದ ಯುದ್ಧ ಅಂದ್ರೆ ಅದು ರಾಜಕಾರಣ. ಅದು ನಮ್ಮ ಭಾರತದಲ್ಲಿದೆ. ಇದೊಂದು ಖುಷಿಯ ವಿಚಾರ. ಕ್ರೀಯಾಶೀಲತೆ ಮತ್ತು ವಿಚಾರಶೀಲತೆಯನ್ನು ನಾವು ಸಾಹಿತ್ಯದಲ್ಲಿ ಕಾಣಬಹುದು. ಸ್ವಾತಂತ್ಯ್ರ ಹೋರಾಟಗಾರರ ಬರವಣಿಗೆಗೂ ಬದುಕಿಗು ವ್ಯತ್ಯಾಸವಿರಲಿಲ್ಲ. ತಮ್ಮ ಸಮಸ್ಯೆಗಳನ್ನು, ಆಹವಲುಗಳನ್ನು ಪತ್ರದಲ್ಲಿ ಬರೆದು ಮುಖ್ಯಮಂತ್ರಿಗಳಿಗೆ ಕಳಿಸುತ್ತಿದ್ದರು. ಇದೇ ಅವರ ಬರೆವಣಿಗೆಗೆ ದೊಡ್ಡ ಮೈಲಿಗಲ್ಲು. ರಾಜಕರಣಿಗಳೇ ಸೃಷ್ಟಿಸಿರುವ ಸಾಹಿತ್ಯವನ್ನು ನಾವು ಗಂಭಿರವಾಗಿ ಪರಿಗಣಿಸಿದ್ರೆ ಪ್ರಜಾಪ್ರಭುತ್ವ ಗೆಲ್ಲಬಹುದು," ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಚ್.ಕೆ ಪಾಟೀಲ್ ಅವರ ಸಂಪಾದಕತ್ವದ ‘ನೂರನೇ ಬೆಳಗಾವಿ ಅಧಿವೇಶನ’ ಕೃತಿಯನ್ನು ಗೊ.ರು ಚನ್ನಪ್ಪ ಅವರು ಲೋಕಾರ್ಪಣೆಗೊಳಿಸಿದರು.

‘ರಾಜಕಾರಣ ಬಿಟ್ಟು ಸಾಹಿತ್ಯ ರಚನೆ ಸಾಧ್ಯವಿಲ್ಲ’; ನಂತರದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ ಪಾಟೀಲ್, "ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನವು ಬಹಳ ವಿಜೃಂಭಣೆಯಿಂದ ನಡೆಯುತ್ತಿದೆ. ರಾಜಕೀಯ ವಿಚಾರದ ಬಗೆಗಿನ ನಡೆದ ಈ ಗೋಷ್ಠಿಯು ರಾಜಕೀಯ ಸಾಹಿತ್ಯದ ಕುರಿತ ನಂಟಿನ ಘನತೆ ಮತ್ತಷ್ಟು ಹೆಚ್ಚಾಗಿದೆ. ಸಾಹಿತ್ಯ ಸೇವೆಯನ್ನು ಮಾಡಬೇಕೆನ್ನುವ ಈ ರಾಜಕೀಯ ಗೊಂದಲದ ನಡುವಿನ ಇಚ್ಛೆ, ನೂರನೇ ಬೆಳಗಾವಿ ಅಧಿವೇಶನದ ಕೃತಿಯ ಸಂಪಾದಕತ್ವದಲ್ಲಿ ಸಾರ್ಥಕವಾಗಿದೆ. ರಾಜಕಾರಣ ಬಿಟ್ಟು ಸಾಹಿತ್ಯ ರಚನೆ ಸಾಧ್ಯವಿಲ್ಲ. ಒಂದು ವೇಳೆ ರಾಜಕೀಯವನ್ನ ಸಾಹಿತ್ಯದಲ್ಲಿ ಬಿಟ್ಟರೆ ಸಾಹಿತ್ಯದ ಬಹುಭಾಗವನ್ನು ಬಿಟ್ಟು ನಾವು ಸಾಹಿತ್ಯ ರಚನೆ ಮಾಡಿದಾಗೆ ಆಗುತ್ತದೆ. ಒಬ್ಬ ಅತ್ಯಂತ ಶ್ರೇಷ್ಠ ವಾಗ್ಮಿ, ವಿಧಾನ ಪರಿಷತ್ ಅಥವಾ ವಿಧಾನಸಭೆಯಲ್ಲಿ ಮಾತನಾಡಿದರೆ ಅದು ಯಾಕೆ ಸಾಹಿತ್ಯವಾಗುವುದಿಲ್ಲ. ಬಿ.ಎಲ್ ಶಂಕರ್ ಮಾತನಾಡಿದರೆ ಹತ್ತು ಪುಸ್ತಕಗಳ ಬಗೆಗಿನ ಮಾಹಿತಿಯನ್ನು ನೀಡುತ್ತಾರೆ. ಅಷ್ಟೊಂದು ವಿಚಾರಗಳು ಅವರಲ್ಲಿವೆ. ರಾಜಕೀಯ ವ್ಯಕ್ತಿಗಳ ಮಾತೇ ಸಾಹಿತ್ಯದ ರಚನೆ. ಸಾಹಿತ್ಯ ಸೃಷ್ಟಿಯ ಪರಿಯನ್ನು ನಾವು ಗಮನಿಸಬೇಕು. ಆ ಕೆಲಸ ಈ ಸಾಹಿತ್ಯ ಸಮ್ಮೆಳನದಿಂದಾಗಬೇಕು. ಸಾಹಿತಿಗಳು ರಾಜಕೀಯದಲ್ಲಿ ತಪ್ಪು ಕಂಡಾಗ ನೇರವಾಗಿ ಪ್ರಹಾರ ಮಾಡಬಹುದು. ಯಾವುದೇ ಸಾಹಿತ್ಯ ರಾಜಕೀಯದವರನ್ನು ಕೂಡ ಅಂಜಿಸುತ್ತಿಲ್ಲ. ಇದರ ಬದಲಾವಣೆ ಪ್ರಸ್ತುತ ದಿನಗಳಲ್ಲಿ ಮುಖ್ಯವಾಗಿದೆ. ಗಾಂಧೀಜಿಯ ಬರವಣಿಗೆಯಂತಹ ಬದಲಾವಣೆಯ ಸಾಹಿತ್ಯದ ಉದಯ, ಇಲ್ಲಿಯವರೆಗೂ ಯಾರಿಗಾದರೂ ಸಾಧ್ಯವಾಗಿದೆಯಾ..?," ಎಂದು ಚಿಂತನೆಯನ್ನು ಹೊರಹಾಕಿದರು.

MORE NEWS

ಪರಿಸರದ ಬಗ್ಗೆ ಎಲ್ಲರೂ ಚಿಂತಿಸಿ; ಯಲ್ಪಪ್ಪರೆಡ್ಡಿ

21-12-2024 ಬೆಂಗಳೂರು

ಮಂಡ್ಯ: "ಅಲ್ಪ ಮಾಹಿತಿಯ ದತ್ತಾಂಶವು, ವಿಪತ್ತು ನಿರ್ವಾಹಣೆಯಲ್ಲಿ ಅಲ್ಪ ಪ್ರಮಾಣದ ತೊಡಕನ್ನು ಕಡಿಮೆಗಳಿಸುತ್ತದೆ,&q...

ಶಿಕ್ಷಣ ಸಂಸ್ಥೆಗಳನ್ನು ಶಿಕ್ಷಣ ಅಂಗಡಿಗಳೆಂದರೆ ಸೂಕ್ತ; ಸಾ. ರಾ. ಗೋವಿಂದು

21-12-2024 ಬೆಂಗಳೂರು

ಮಂಡ್ಯ: ಡಿ. 21 ರಂದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ “ಸಂಚಿ ಹೊನ್ನಮ್ಮ ಮತ್ತು ಕಾದಂಬರಿ ಸಾಮ್ರಾಜ್...

ರಹಮತ್ ತರೀಕೆರೆ ಅವರಿಂದ ಪುಸ್ತಕ ಮಳಿಗೆಯಲ್ಲಿ ರಾಜಮಾನೆ ಅವರ ‘ಕಂಡದ್ದು ಕಾಣದ್ದು’ ಕೃತಿ ಲೋಕಾರ್ಪಣೆ

21-12-2024 ಬೆಂಗಳೂರು

ಮಂಡ್ಯ: ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮಂಡ್ಯದಲ್ಲಿ ಡಿ.20, 21, 22ರಂದು ಮೂರು ದಿನಗಳ ಕಾಲ ಹಮ್ಮಿಕೊಂಡಿರುವ 87ನೇ ಅಖಿ...