ಮನುಷ್ಯನ ವ್ಯಕ್ತಿತ್ವ ಶಿಕ್ಷಣದಿಂದ ಬಯಲಿಗೆ ಬರುತ್ತದೆ: ರಾಜಕುಮಾರ ಮಾಳಗೆ


“ಜಿ.ಬಿ.ವಿಸಾಜಿ ಅವರು ಸಾಹಿತ್ಯದ ಜೊತೆಗೆ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳ ಭಾಲ್ಕಿ ತಾಲೂಕು ವರದಿಗಾರರಾಗಿ, ಶಾಂತಿ ಕಿರಣ ಮಾಸಪತ್ರಿಕೆಯ ಪ್ರಧಾನ ಸಂಪಾದಕರಾಗಿ, ರಾಜೋಳೆ ಸಂಘರ್ಷ ಕನ್ನಡ ದಿನಪತ್ರಿಕೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ,” ಎನ್ನುತ್ತಾರೆ ಡಾ. ರಾಜಕುಮಾರ ಮಾಳಗೆ. ಅವರು ‘ಜಿ.ಬಿ.ವಿಸಾಜಿ’ ವಾಚಿಕೆ 8ಕ್ಕೆ ಬರೆದ ಪ್ರಸ್ತಾವನೆ ಇಲ್ಲಿದೆ.

ವೃತ್ತಿಯಿಂದ ಕನ್ನಡ ಉಪನ್ಯಾಸಕರಾಗಿ ನಿವೃತ್ತಿ ಹೊಂದಿ, ಪ್ರವೃತ್ತಿಯಿಂದ ಸಾಹಿತ್ಯದ ಕೃಷಿಯನ್ನು ಮಾಡುತ್ತ ಕಥೆ, ಕಾವ್ಯ, ಸಂಪಾದನೆ, ವಿಮರ್ಶೆ ಹಾಗೆ ಸಾಂಸ್ಕೃತಿಕ ಸಂಘಟನೆ ಸಮಾಜ ಸೇವೆ, ಪತ್ರಿಕಾ ವರಿದಿಗಾರರು, ಸಂಪಾದಕರು ಹೀಗೆ ಹಲವಾರು ವಿಭಾಗದಲ್ಲಿ ತಮ್ಮನ್ನ ತೊಡಗಿಸಿಕೊಂಡು ಬಂದ ಜಿ. ಬಿ. ವಿಸಾಜಿ ಅವರು ಮೂಲತ: ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕೊಹಿನೂರು ಗ್ರಾಮದ ಭೀಮರಾವ ವಿಸಾಜಿ ಮತ್ತು ಶ್ರೀಮತಿ ಶಿವಗಂಗಾ ದಂಪತಿಗಳ ಮಗನಾದ ಗುರುಲಿಂಗಪ್ಪ ವಿಸಾಜಿ ಅವರು ಆಳಂದ ತಾಲೂಕಿನ ದೇಗಾಂವ ಗ್ರಾಮದಲ್ಲಿ ದಿನಾಂಕ 5-1-1943ರಂದು ಜನಿಸಿದರು. ಇವರು ಕನ್ನಡ ವಿಷಯದಲ್ಲಿ ಎಂ. ಎ ಮತ್ತು ಪಿಎಚ್.ಡಿ ಪದವಿಯನ್ನು ಪಡೆದು ಭಾಲ್ಕಿ ಚನ್ನಬಸವೇಶ್ವರ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ, ಕನ್ನಡ ವಿಭಾಗದ ಮುಖ್ಯಸ್ಥರಾಗಿ ಬೀದರ ಕನ್ನಡ ಸ್ನಾತಕೋತ್ತರ ಕೇಂದ್ರದ ಗೌರವ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ಸಾಹಿತ್ಯ ಕೃಷಿಯನ್ನು ಮಾಡುತ್ತಾ ಬಂದಿದ್ದಾರೆ. ನೆಲದ ನುಡಿ, ಅನಂತ ಸಂಗಮ. ಮುಂಜಾವು, ಭಾವದಿಂದ ವಿನಯ ಭಂಡಾರಿ, ಚೆಂಬೆಳಕು, ಚಿಂತನಾ ದೀಪಿಕೆ, ಭಾಲ್ಕಿ ತಾಲೂಕು ದರ್ಶನ, ಸಾಹಿತ್ಯ ಅವಲೋಕನ ಸೇರಿದಂತೆ ಕಥೆ, ಕಾವ್ಯ, ಸಂಪಾದನೆ, ವ್ಯಕ್ತಿ ಪರಿಚಯ ಹೀಗೆ 30ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.

ಸಾಹಿತ್ಯದ ಜೊತೆಗೆ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳ ಭಾಲ್ಕಿ ತಾಲೂಕು ವರದಿಗಾರರಾಗಿ, ಶಾಂತಿ ಕಿರಣ ಮಾಸಪತ್ರಿಕೆಯ ಪ್ರಧಾನ ಸಂಪಾದಕರಾಗಿ, ರಾಜೋಳೆ ಸಂಘರ್ಷ ಕನ್ನಡ ದಿನಪತ್ರಿಕೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಜಾವಾಣಿಯಲ್ಲಿ ವರದಿಗಾರರಾಗಿ ಸುಮಾರು 15 ವರ್ಷ ಸೇವೆ ಸಲ್ಲಿಸುವುದರೊಂದಿಗೆ ಪತ್ರಿಕಾ ಧರ್ಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಈ ಭಾಗದ ಜನರ ನೋವು ನಲಿವು ಯಾತನೆಗಳನ್ನು ಕುಂದು ಕೊರತೆಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಿ ಸರಕಾರದ ಗಮನಕ್ಕೆ ತರುವ ಕೆಲಸ ಮಾಡಿದ್ದಾರೆ.

ಭಾಲ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಬೀದರ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಬೀದರ ಜಿಲ್ಲಾ ಹಸ್ತಪ್ರತಿ ಅಭಿಯಾನದ ಸಂಯೋಜಕರಾಗಿ, ಜಿಲ್ಲಾ ವರದಿಗಾರರ ಸಂಘದ ಅಧ್ಯಕ್ಷರಾಗಿ ಹೀಗೆ ಹಲವು ಸಂಘ ಸಂಸ್ಥೆಗಳ ಮೂಲಕ ಸಾಹಿತ್ಯ ಹಾಗೂ ಸಂಘಟನಾತ್ಮಕ ಕೆಲಸಗಳನ್ನು ಮಾಡಿದ್ದಾರೆ. 'ಇವರ ಸೇವೆಗೆ ಪ್ರತಿಯಾಗಿ 1993ರಲ್ಲಿ ಬಸವಕಲ್ಯಾಣ ತಾಲೂಕು ಈ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ, 2001ನೇ ಸಾಲಿನ ಬೀದರ ಜಿಲ್ಲಾ ಆರನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೌರವ, ಧರಿನಾಡು ಕನ್ನಡ ಸಂಘಟನೆಯಿಂದ ಸುವರ್ಣ ಕನ್ನಡಿಗ ಪ್ರಶಸ್ತಿ, ಬಸವೇಶ್ವರ ಸಂಘದಿಂದ ಸಾಹಿತ್ಯ ರತ್ನ ಪ್ರಶಸ್ತಿ, ಚನ್ನಬಸವ ಪಟ್ಟದೇವರ ಪುಸ್ತಕ ಪ್ರಶಸ್ತಿ, ಅಡ್ವೈಸರ್ ಪತ್ರಿಕೆಯ ವಚನ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವಾ ಸಂಘ ಸಂಸ್ಥೆಯಿಂದ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

- ಡಾ. ರಾಜಕುಮಾರ ಮಾಳಗೆ

MORE FEATURES

ಅಜ್ಞಾತವೆಂಬುದು ಬಗೆದಷ್ಟೂ ಹಿರಿದಾಗುವ, ಅರಿತಷ್ಟೂ ಆಳವಾಗುವ ಕ್ರಿಯೆ

23-09-2024 ಬೆಂಗಳೂರು

“ಅಜ್ಞಾತವೆಂಬುದು ಬಗೆದಷ್ಟೂ ಹಿರಿದಾಗುವ, ಅರಿತಷ್ಟೂ ಆಳವಾಗುವ, ಒಳಗೆ ಹೊಕ್ಕಷ್ಟೂ ವಿಸ್ತಾರವಾಗುವ ಅಚ್ಚರಿ ಎನ್ನುತ...

ಸಾವು ಯಾವಾಗಲೂ ಕಂಡ ಅನುಭವವೇ ಹೊರತು ಉಂಡ ಅನುಭವ ಅಲ್ಲ!

22-09-2024 ಬೆಂಗಳೂರು

“ಸಾವನ್ನು ಹಲವು ದಿಕ್ಕುಗಳಿಂದ ನೋಡಲು ಸಾಧ್ಯ. ಸ್ವಂತ ಸಾವಿನ ಆಚೆಗೂ ಹಲವು ಬಗೆಯ ಸಾವುಗಳಿವೆ. ಈ ಸಂಕಲನ ಅಂತಹ ಬಹು...

ಒಂದು ಅದ್ಭುತ ದೃಶ್ಯ ಕಾವ್ಯ `ಮಹಾಮಹಿಮ ಶ್ರೀ ಜಡೇ ಸಿದ್ಧ ಶಿವಯೋಗಿಗಳ ಲೀಲಾಮೃತ'

22-09-2024 ಬೆಂಗಳೂರು

"ಅವರ ಬರಹದ ಚುಂಬಕ ಶಕ್ತಿಯೇ ಹಾಗೆ, ಅವರ ಕಥೆಗಳಾಗಲೀ, ಕಾವ್ಯವಾಗಲೀ, ಲೇಖನಗಳಾಗಲೀ ಓದಲು ಆರಂಭಿಸಿದರೆ ಮುಗಿಯುವವರೆಗ...