Date: 05-10-2024
Location: ಬೆಂಗಳೂರು
ಬೆಂಗಳೂರು: ಜನ ಪ್ರಕಾಶನ, ಬೆಂಗಳೂರು ವಿಜ್ಞಾನ ವೇದಿಕೆ ಹಾಗೂ ಬೆಂಗಳೂರು ಸಮಾಜ ವಿಜ್ಞಾನ ವೇದಿಕೆಯ ಸಹಯೋಗದಲ್ಲಿ ರೂಪ ಹಾಸನ ಅವರ ‘ಭೂಮ್ತಾಯಿಯ ಕಕ್ಷೆಯಲಿ ಪಕ್ಷಿಯಾಗಿ’ ಕೃತಿಯ ಬಿಡುಗಡೆ ಕಾರ್ಯಕ್ರಮವು 2024 ಅ.05 ಶನಿವಾರದಂದು ನಗರದ ಎಚ್.ಎನ್. ಮಲ್ಟಿಮೀಡಿಯಾ ಹಾಲ್ ನಲ್ಲಿ ನಡೆಯಿತು.
ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಡಾ.ಎಚ್.ಎಲ್. ಪುಷ್ಪ, "ಹೆಸರೇ ಹೇಳುವಂತೆ ಈ ಕೃತಿಯು ಪ್ರಕೃತಿಯ ಏಳು ಬೀಳುಗಳನ್ನು ಚಿತ್ರಿಸುವ ಹಲವು ಲೇಖನಗಳ ರೂಪದಲ್ಲಿ ಪ್ರಕಟಗೊಂಡಿದೆ. ಇಲ್ಲಿ ಕವಯಿತ್ರಿ ಇತರ ಸಂಘಟನೆಗಳಲ್ಲಿ ಹಾಗೂ ಪರಿಸರ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಒಂದು ರೀತಿಯ ಆಶ್ಚರ್ಯಕರ ಸಂಗತಿಯಾಗಿದೆ. ಏಕೆಂದರೆ ಕವಿಗಳಾದವರು ಕವಿತೆಗಳನ್ನು, ಸಂಕಲನಗಳನ್ನು ತರುವಲ್ಲಿಯೇ ತೊಡಗಿಕೊಂಡಿರುತ್ತಾರೆ. ಹೀಗೆ ಎರಡು ಕ್ಷೇತ್ರಗಳನ್ನ ಒಳಗೊಂಡಿರುವ ರೂಪ ಹಾಸನ ಅವರ ಈ ಪುಸ್ತಕ ಹಲವು ನಿಟ್ಟಿನಲ್ಲಿ ಮುಖ್ಯವಾಗುತ್ತದೆ. ಇವತ್ತು ಪರಿಸರ ಸಂಬಂಧಿತ ವಿಷಯಗಳನ್ನ, ಸಮಸ್ಯೆಗಳನ್ನ, ವಾದ ವಿವಾದಗಳನ್ನ, ಚರ್ಚೆಗಳನ್ನ ನಾವು ಏನು ಎದುರಿಸುತ್ತಾ ಹೋಗುತ್ತಿದ್ದೇವೆ ಎನ್ನುವುದನ್ನು ಈ ಅಂಕಣ ರೂಪದ ಪುಸ್ತಕದಲ್ಲಿ ಕಾಣಬಹುದಾಗಿದೆ. ಹಾಸನ ಜಿಲ್ಲೆಯ ಕೆಲವೇ ಕೆಲವು ಪ್ರಮುಖ ಲೇಖಕಿಯರಲ್ಲಿ ರೂಪ ಹಾಸನ ಕೂಡ ಒಬ್ಬರು. ಇವರು ಬಹಳ ದೊಡ್ಡ ಸಂಘಟನಾ ಶಕ್ತಿಯನ್ನು ಹೊಂದಿದ್ದಾರೆ," ಎಂದು ತಿಳಿಸಿದರು.
ಕೃತಿ ಕುರಿತು ‘ಸಹಜ ಸಾಗುವಳೊ’ ಸಂಪಾದಕಿ ವಿ. ಗಾಯತ್ರಿ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ಪರಿಸರ ಹೋರಾಟಗಾರ ಡಾ.ಅ.ನ. ಯಲ್ಲಪ್ಪ ರೆಡ್ಡಿ ಅವರು ವಹಿಸಿದ್ದರು.
ವೇದಿಕೆಯಲ್ಲಿ ಕೃತಿಕಾರ್ತಿ ರೂಪ ಹಾಸನ, ಬೆಂಗಳೂರು ವಿಜ್ಞಾನ ವೇದಿಕೆಯ ಕಾರ್ಯದರ್ಶಿ ಪ್ರೊ. ಸುಚರಿತ ಚಂದ್ರ ಎಂ, ಬೆಂಗಳೂರು ಸಮಾಜ ವಿಜ್ಞಾನ ವೇದಿಕೆಯ ಕಾರ್ಯದರ್ಶಿ ಡಾ. ಪ್ರತಿಮಾ ಪಿ.ಎಸ್, ಜನ ಪ್ರಕಾಶನದ ಬಿ. ರಾಜಶೇಖರಮೂರ್ತಿ ಅವರು ಉಪಸ್ಥಿತರಿದ್ದರು.
ಮಂಡ್ಯ: ಕನ್ನಡ ನಾಡು ಚೆನ್ನಾಗಿ ಬೆಳೆಯಬೇಕು ಅಂದ್ರೆ ಈ ನೆಲದಲ್ಲಿರುವ ಎಲ್ಲವೂ ಬೆಳೆಯಬೇಕು. ಭಾಷೆ ಆಡುವುದರಿಂದ, ಬರೆಯುವು...
ಮಂಡ್ಯ: "ಅಲ್ಪ ಮಾಹಿತಿಯ ದತ್ತಾಂಶವು, ವಿಪತ್ತು ನಿರ್ವಾಹಣೆಯಲ್ಲಿ ಅಲ್ಪ ಪ್ರಮಾಣದ ತೊಡಕನ್ನು ಕಡಿಮೆಗಳಿಸುತ್ತದೆ,&q...
ಮಂಡ್ಯ: ಡಿ. 21 ರಂದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ “ಸಂಚಿ ಹೊನ್ನಮ್ಮ ಮತ್ತು ಕಾದಂಬರಿ ಸಾಮ್ರಾಜ್...
©2024 Book Brahma Private Limited.