“ಜೀವನಾನುಭವಗಳಿಂದ ಕೂಡಿದ ಆಗುಹೋಗುಗಳ ಮತ್ತು ವೈಚಾರಿಕ ವಿಚಾರಗಳನ್ನು ಹೆಕ್ಕಿ ತೆಗೆದು ಹೃದಯದಿಂದ ಗೀಚಿ ಬರವಣಿಗೆಯ ರೂಪವನ್ನು ಕೊಟ್ಟು ಓದುಗರ ಮುಂದಿರಿಸಿದ್ದಾರೆ,” ಎನ್ನುತ್ತಾರೆ ಸುರೇಶ್ ಮಲ್ಲಿಗೆ ಮನೆ. ಅವರು ಸುರೇಶ್ ಎಲ್. ರಾಜಮಾನೆ ಅವರ “ರಾಜಿಯಾಗದ ರಕ್ತದ ಕಣ” ಕೃತಿ ಕುರಿತು ಬರೆದ ವಿಮರ್ಶೆ.
ಆತ್ಮೀಯ ಗೆಳೆಯ ಸುರೇಶ್ ರಾಜಮನೆಯ ಬರಹಗಳೇ ವಿಶೇಷ ಮತ್ತು ವಿಶಿಷ್ಟ್ಯ. ಯಾವುದಕ್ಕೂ ಜೋತು ಬೀಳದೆ ತನ್ನದೇ ಸ್ವಾಪಜ್ಞತೆಯನ್ನು ಉಳಿಸಿ ಬೆಳೆಸಿಕೊಂಡು ಇದ್ದುದನ್ನು ಇದ್ದಂತೆ ಬರೆದು ನಮ್ಮ ಓದುಗನೆದಿರಿಟ್ಟು ಒರೆಹಚ್ಚುವವನು. ಈಗಾಗಲೇ ಆರು ಕೃತಿಗಳನ್ನು ರಚಿಸಿ ತನ್ನದೇಯಾದ ಒಂದು ಓದುಗ ಅಭಿಮಾನಿಗಳ ಬಳಗವನ್ನು ಸೃಷ್ಟಿಸಿಕೊಂಡಿದ್ದಾನೆ.
ಸಾಮಾನ್ಯವಾಗಿ ಅಲ್ಲಿನ ಪ್ರಾದೇಶಿಕ ವಸ್ತುಸ್ಥಿತಿ,ಪರಿಸರ ಮತ್ತು ವ್ಯಕ್ತಿಗಳಂತ ಪ್ರಭಾವಿ ಬರಹಗಾರರ ಬರಹಗಳಿಗೆ ಮಾರು ಹೋಗದೆ ವಿಕೇಂದ್ರಿತನಾಗಿ ವಿಸ್ತಾರ ವಿಚಾರ ಮನೋಭಾವವನ್ನು ರೂಡಿಸಿಕೊಂಡು ಇಲ್ಲಿ ಸಲ್ಲುವವ ಅಲ್ಲಿಯೂ ಸಲ್ಲುವವನಂತೆ ತನ್ನ ಬರವಣಿಗೆಯ ಚಾಪನ್ನು ಸಾರಾಸಗಟಾಗಿ ಮತ್ತು ನಿರಾಂತಕವಾಗಿ ಮೂಡಿಸಿದ್ದಾನೆ.
ಪ್ರಸ್ತುತ "ರಾಜಿಯಾಗದ ರಕ್ತದ ಕಣ" ಕವನ ಸಂಕಲನವು ನನಗೊಂದು ಹೊಸ ಬಗೆಯ ಅನುಭವವನ್ನು ಮೂಡಿಸಿದೆ. ಬಿಡುಗಡೆಗೊಳಿಸಿದ ಪ್ರತಿಯೊಂದು ಹೊಸ ಕೃತಿಯಲ್ಲೂ ನವನವೀನತೆ ಮತ್ತು ಸಾಹಿತ್ಯ ಕೃಷಿಯಲ್ಲಿ ನುರಿತದ್ದು ಎದ್ದು ಕಾಣುವಂತಿದೆ.
ಸುರೇಶ್ ರಾಜಮನೆಯವರ ಈ ಕೃತಿಯಲ್ಲಿ,
"ಪ್ರತಿಭಟನೆ ಹೆಸರಿನಲ್ಲಿ ಮಾಡುವ
ಅಂತರ್ಕಲಹಗಳ ಮರ್ಮತೆ ಇದೆ.
ಸಂಸಾರದ ಸಾರಾಂಶವಿದೆ."
"ಧರ್ಮಗಳ ಕುರಿತಾಗಿ ಹೇಳುತ್ತಾ,
ಧರ್ಮಗಳ ಬೇಲಿಗೆ ಬಳ್ಳಿಯೊಂದು
ತಬ್ಬಿ ಕೊಂಡಿದೆ,
ಹೃದಯದಿಂದ ಹೂ ಬಿಟ್ಟಿದೆ ಹಾತೊರೆಯುತ್ತಿದೆ
ಮನುಷ್ಯ ಮನುಷ್ಯನಾಗಲಿ ಮತ್ಸರ ದೂರವಾಗಲಿ
ಹೂ ಸಂವಿಧಾನದ ಕನಸಿರಲಿಯೆಂದು;
ಜಾತಿ ಧರ್ಮಗಳ ಸುಳಿಯಿಂದ ಹೊರಬಂದು ನಾವೆಲ್ಲರೂ ಒಂದೇ ನಮ್ಮ ಭಾವನೆಯನ್ನು ಹೊಂದಬೇಕೆನ್ನುತ್ತಾರೆ."
"ಹಬ್ಬದ ಸಡಗರವೇ ಸಂಸಾರ
ದೀಪದ ಬೆಳಕೇ ಸಂಗಾತಿ
ಸವಿ ನೆನಪುಗಳ ಸಂಭ್ರಮ
ಎನ್ನುವಂತೆ ತಮ್ಮ ಕವಿತೆಯಲ್ಲಿಯೇ ಕವಿಗೆ ಸಂಪ್ರೀತಿ."
ವಿಕೃತ ಮನಸ್ಸಿಗರ ಕುರಿತು ಧಿಕ್ಕಾರವಿದೆ.
ಪ್ರಸ್ತುತ ಧಾರ್ಮಿಕ ಕಲಹಗಳಿಂದಾಗುತ್ತಿರುವ ಕೋಮುಗಲಭೆಗಳ ಬಗ್ಗೆ ಆತಂಕ ಪಡುತ್ತಾ, ನನಗೆ ಹಗಲು ಕತ್ತಲಾಗಿ ಬದಲಾಗಿದೆ ದಿನಗಳೆಲ್ಲಾ ಲಾಕಪ್ಪಿನ ಸರಳುಗಳೊಳಗೆ ದಿಗ್ಬನಗೊಂಡು ಕುಳಿತಂತೆ ಅನಿಸುತ್ತಿದೆ ಎಂದು ವ್ಯಥೆ ಪಡುತ್ತಾರೆ.
ಮುಂದುವರೆದು,
ಇನ್ನೇನಾದೀತು? ಅನ್ನುವ ಹಾಗಿಲ್ಲ
ಎಲ್ಲವೂ ಆದೀತು.
ನನ್ನುರಿಯ ಹೊಡೆತದಿಂದ ಪಾರಾಗಲು
ಅವರ ಹೆದರಿ ಸಭೆ ಸೇರಿಸಿ ಬಂಧಿಸಿಟ್ಟಿದ್ದಾರೆ
ದುಷ್ಟರ ಮನೆಯಲ್ಲಿ ದಂಡಿಸಿಕೊಂಡಿದ್ದಕ್ಕೆ ಬೇಸರವಿದೆ ಎನ್ನುತ್ತಾರೆ.
"ನನ್ನಲ್ಲೂ ಬೆಂಕಿ ಇದೆ, ತಣ್ಣಗಿದ್ದು ಬದುಕುತ್ತಿದ್ದೇನಷ್ಟೇ. ದೀಪ ಹಚ್ಚಲೂಬಹುದು ಕಿಚ್ಚು ಹಚ್ಚಲೂಬಹುದು. ಬೆಂಕಿ ಉಗುಳಲೂಬಹುದು. ಶಕ್ತಿ ಇದ್ದರೂ ಕಪಟಿಗರ ಯುಕ್ತಿಗೆ ಬಲಿಯಾಗಿ ತೊಯ್ದು ಹೋಗುತ್ತಿದ್ದೇನೆ, ಮತ್ತೆ ಮತ್ತೆ ಮನೆಗೆ ನೀರೆರಚಿ ಬಿಡುತ್ತಿದ್ದಾರೆ… ಬೇಸಿಗೆಗಾಗಿ ಕಾಯುತ್ತಿರುವೆ...ಎಂದು ತಮ್ಮ ನೋವನ್ನು ತೋಡಿಕೊಳ್ಳುತ್ತಾರೆ."
"ಇಳಿಸಂಜೆಯಲ್ಲೊಮ್ಮೆ ಇಳಿವಯಸ್ಸಿನ ಅವ್ವನೊಂದಿಗೆ ಮಾತಿಗಿಳಿಯುತ, ಜೀವನಾನುಭವದ ಮಹಾ ಕಾವ್ಯಗಳನ್ನು ಕೇಳುತ್ತ, ಅಳಿದು ಹೋದ ಅದೆಷ್ಟೋ ಸಾಮ್ರಾಜ್ಯಗಳ ವೈಭವ ಗಳಿಗಿನ್ನೂ ತನ್ನ ಅವ್ವ ಜೀವಂತ ಸಾಕ್ಷಿ ಎನ್ನುತ್ತಾರೆ." ಸತ್ಯ, ಧರ್ಮ ಮತ್ತು ಅಹಿಂಸೆಯ ಕುರಿತಂತೆ ಗಾಂಧೀಜೀಯ ಕನಸನ್ನು ಹರವಿಕೊಳ್ಳುತ್ತಾರೆ.
ದೇವರು ದಿಂಡಿರು ,ಬೊಗಳೆ ಶಾಸ್ತ್ರ ಮಂತ್ರಗಳನ್ನು ವಿರೋದಿಸಿ,ಧರಣಿಯ ಮೇಲಿನ ಸಕಲ ದೇವರಾಶಿಗಳ ಬಗ್ಗೆ ಕಾಳಜಿಯನ್ನು ತೋರುತ್ತಾರೆ.
ಜಾಗತೀಕರಣದಿಂದಾಗಿ ಪರಿಸರದ ಮೇಲಾಗುವ ದಬ್ಬಾಳಿಕೆಯನ್ನು ಹಿಯ್ಯಗೆಳೆಯುತ್ತ;
"ಅಂಗಾಲ ಕೆಳಗೊಂದು ಮುಳ್ಳು
ಕಾಲ್ಕೆದರಿ ಜಗಳಕ್ಕೆ ಸಿದ್ಧವಾಗಿದೆ
ಕಾಲಿಟ್ಟಲೆಲ್ಲಾ ಕಾಂಕ್ರೀಟ್ ಸುರಿದಿದ್ದಕ್ಕೆ
ಮುಗ್ಧರು ನಡೆದಾಡುವ ದಾರಿಯಲ್ಲಿ
ಮುಳ್ಳು ಪ್ರತಿಕಾರ ನೀಡುತ್ತಿದೆ ಎನ್ನುತ್ತಾರೆ."
ಕಲ್ಲು ಹೃದಯದವನ ಕಥೆಯನು ಹೇಳಿ,
"ಬಿತ್ತಿದ ಪ್ರತೀ ಬೀಜದ ಕಥೆಯೂ
ಕೊಳೆತ ಮೊಳಕೆಯಲ್ಲಿ ಹುಟ್ಟುವ ಸಾವಿನ
ಸಸಿ"ಯೆನ್ನುವರು.
ಹೀಗೆ ಕವಿತೆಗಳಲ್ಲಿ ಅನ್ಯಾಯ, ಅಕ್ರಮದ ವಿರುದ್ದವಾಗಿನ ಕ್ರಾಂತಿಕಾರಿತನ, ವಿಶ್ವಮಾನವ ಸಂದೇಶ, ಬದುಕು ,ಹುಟ್ಟು ಸಾವು, ಗಾಂಧೀಜಿಯವರ ಕನಸು, ರಾಜಕಾರಣಿಗಳ ಪುಡಾರಿತನ, ಪ್ರೀತಿ ಪ್ರೇಮ, ಪರಿಸರ ಪ್ರಜ್ಞೆ, ದೇವರು ದಿಂಡಿರು, ತಾಯ್ತನ ಮತ್ತು ಹೋರಾಟದಂತೆ ಎಲ್ಲವನ್ನೂ ಮಿಳಿತಗೊಂಡು ಪಳಗಿದ ಮುತ್ಸದ್ದಿತನದಿಂದ, ಜೀವನಾನುಭವಗಳಿಂದ ಕೂಡಿದ ಆಗುಹೋಗುಗಳ ಮತ್ತು ವೈಚಾರಿಕ ವಿಚಾರಗಳನ್ನು ಹೆಕ್ಕಿ ತೆಗೆದು ಹೃದಯದಿಂದ ಗೀಚಿ ಬರವಣಿಗೆಯ ರೂಪವನ್ನು ಕೊಟ್ಟು ಓದುಗರ ಮುಂದಿರಿಸಿದ್ದಾರೆ. ಇದರ ಸವಿಯನ್ನುನ್ನಲು ಪ್ರತಿಯೊಬ್ಬರೂ ಓದಲೇಬೇಕಾದ ಕೃತಿ.
ಶುಭವಾಗಲಿ ಗೆಳೆಯ.....
- ಸುರೇಶ್ ಮಲ್ಲಿಗೆ ಮನೆ
“ಇದು ಲಾರೆನ್ಸನ ಪ್ರಸಿದ್ಧ ಕಥೆ. ಹಲವಾರು ಭಾಷೆಗಳಿಗೆ ಅನುವಾದಗೊಂಡಿರುವ ಕಥೆ. ಲಾರೆನ್ಸನ ಕಥೆಗಳು ಇಂದ್ರಿಯಾತ್ಮಕ ...
"ಒಂದು ಪ್ರದೇಶದಲ್ಲಿ ಒಂದು ಆಸ್ಪತ್ರೆ ಬರುವುದು ಪ್ರಗತಿಯ ಪ್ರತೀಕವಾಗಿ. ಆಸ್ಪತ್ರೆ ಬರುವುದ ಆ ಊರಿನ ಅಗತ್ಯ. ಯಾವುದ...
“ಬದುಕಿನ ಪಯಣದಲ್ಲಿ ಗತಿಸಿದ ಅನೇಕ ಘಟನೆಗಳು, ನೋಡಿದ, ಕೇಳಿದ, ಅಂತರಂಗವನ್ನು ತಟ್ಟಿದ ಹಲವಾರು ಸಂದರ್ಭಗಳು ಆಂತರ್ಯ...
©2024 Book Brahma Private Limited.