ಕನ್ನಡ ಪುಸ್ತಕ ಪ್ರಕಟಣೆ ಮತ್ತು ಮಾರಾಟಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತೇವೆ: ನಿತಿನ್ ಷಾ

Date: 21-11-2021

Location: ಬೆಂಗಳೂರು


ಬೆಂಗಳೂರು: 'ಸಪ್ನದ ಇಪ್ಪತ್ತು ಮಳಿಗೆಗಳಲ್ಲಿ ಕನ್ನಡ ಪುಸ್ತಕ ಮಾರಾಟಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುಲಾಗುತ್ತಿದೆ' ಎಂದು ಸಪ್ನ ಬುಕ್ ಹೌಸ್ ನ ವ್ಯವಸ್ಥಾಪಕ ನಿರ್ದೇಶಕರಾದ ನಿತಿನ್ ಷಾ ತಿಳಿಸಿದರು.

ಬಸವನಗುಡಿಯ ವಾಡಿಯ ಸಭಾಂಗಣದಲ್ಲಿ ದಿನಾಂಕ 21-11-2021ರಂದು ನಡೆದ ಸಾವಣ್ಣ ಪ್ರಕಾಶನದ 12ನೇ ವಾರ್ಷಿಕೋತ್ಸವ ಹಾಗೂ ಹತ್ತು ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಅವರು ‘ಸಪ್ನದ ಇಪ್ಪತ್ತು ಮಳಿಗೆಗಳಲ್ಲಿ ಕನ್ನಡ ಪುಸ್ತಕಗಳ ಮಾರಾಟಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದೇವೆ. ಕನ್ನಡ ಪುಸ್ತಕಗಳ ಪ್ರಕಟಣೆ ಮತ್ತು ಮಾರಾಟಕ್ಕೆ ಬೇಕಾಗುವ ಎಲ್ಲಾ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ ಎಂದರು. ಅಲ್ಲದೇ ನಾನು ಕನ್ನಡಿಗನಲ್ಲದಿರಬಹುದು ಕನ್ನಡ ಬಗ್ಗೆ ಅಪಾರ ಗೌರವವಿದೆ. ಕನ್ನಡದ ಕಾರ್ಯವನ್ನು ಮುಂದೆಯೂ ಮಾಡುತ್ತೇವೆ' ಎಂದರು. ಜೊತೆಗೆ ಜಮೀಲ್ ಸಾವಣ್ಣ ನವರೂ ಸಹ ಕನ್ನಡದವರಲ್ಲದಿದ್ದರೂ ಕನ್ನಡದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದಾರೆ. ಅವರೊಂದಿಗೆ ಕನ್ನಡ ಕಾರ್ಯವನ್ನು ಮುಂದುವರೆಸುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಲೇಖಕ ಜೋಗಿ ಸಾವಣ್ಣ ಪ್ರಕಾಶನದ ಜಮೀಲ್ ಸಾವಣ್ಣ ಅವರ ಪುಸ್ತಕ ಪ್ರೀತಿಯ ಕುರಿತು ಮೆಚ್ಚುಗೆ ಸೂಚಿಸಿದರು. ಮುಖ್ಯ ಅತಿಥಿಗಳಾಗಿದ್ದ ನಾ. ಸೋಮೇಶ್ವರ ಅವರು ಇಂದು ಪ್ರಕಟವಾದ ಹತ್ತು ಕೃತಿಗಳನ್ನು ಪರಿಚಯಿಸಿದರು.

ಈ ಸಮಾರಂಭದಲ್ಲಿ ದಿ. ಸುಧೀಂದ್ರ ಹಾಲ್ದೊಡ್ಡೇರಿ ಅವರ ‘ನೆಟ್ ಲೋಕ’, ಜೋಗಿ ಅವರ ‘ಐ ಹೇಟ್ ಮೈ ವೈಫ್’, ರಾಜಮ್ಮ ಡಿ.ಕೆ ಅವರ ‘50 ಬದುಕು ಬದಲಿಸುವ ಕಥೆಗಳು’ , ಜಗದೀಶಶರ್ಮಾ ಸಂಪ ಅವರ ‘ಭೀಷ್ಮ ಹೇಳಿದ ಮ್ಯಾನೇಜ್ ಮೆಂಟ್ ಕಥೆಗಳು’, ಮಾಕೋನಹಳ್ಳಿ ವಿನಯ್ ಮಾಧವ್ ಅವರ ‘ಅರ್ಧ ಸತ್ಯ’, ನಂದಿನಿ ಹೆದ್ದುರ್ಗ ಅವರ ‘ಇಂತೀ ನಿನ್ನವಳೇ ಆದ’, ಶಿವಕುಮಾರ ಮಾವಳಿ ಅವರ ‘ನೊ ಮೋರ್ ಇಂಗ್ಲಿಷ್’, ಮೇಘನಾ ಸುಧೀಂದ್ರ ಅವರ ‘ಬೆಂಗಳೂರು ಕಲರ್ಸ್’, ಕಥೆಕೂಟದ ‘ಮಳೆಯಲ್ಲಿ ನೆನೆದ ಕತೆಗಳು’ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯ್ತು.

ಇದೇ ಸಂದರ್ಭದಲ್ಲಿ ಆಫ್ ಸರ್ಕಲ್ ವತಿಯಿಂದ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಇಂದು ಪ್ರಕಟವಾದ ಕೃತಿಗಳ ಲೇಖಕರೊಂದಿಗೆ ರಾಜೇಶ್ ಶೆಟ್ಟಿ ಅವರು ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅಲ್ಲದೇ ಸಾವಣ್ಣ ಪ್ರಕಾಶನ 12 ವಸಂತಗಳನ್ನು ಪೂರೈಸಿದ ಹಿನ್ನೆಲೆ ಸಂಸ್ಥೆಗೆ ಸಹಕಾರ ನೀಡಿದವರನ್ನು ಗೌರವಿಸಲಾಯ್ತು, ಜೊತೆಗೆ ಪ್ರಕಾಶನದ ಸಿಬ್ಬಂದಿಗೆ ನೆನಪಿನ ಕಾಣಿಕೆಗಳನ್ನು ನೀಡಲಾಯ್ತು. ಮುಖ್ಯ ಅತಿಥಿಗಳಾಗಿದ್ದ ಸಪ್ನ ಬುಕ್ ಹೌಸ್ ನ ವ್ಯವಸ್ಥಾಪಕ ನಿರ್ದೇಶಕರಾದ ನಿತಿನ್ ಷಾ ಅವರನ್ನು ಸನ್ಮಾನಿಸಲಾಯ್ತು.

MORE NEWS

ಅಮ್ಮ ಪ್ರಶಸ್ತಿಗೆ 2023-24ನೇ ಸಾಲಿನಲ್ಲಿ ಪ್ರಕಟವಾದ ಕೃತಿಗಳ ಆಹ್ವಾನ

07-10-2024 ಬೆಂಗಳೂರು

ಕಲಬುರಗಿ: ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ 23ನೇ ವರ್ಷದ `ಅಮ್ಮ ಪ್ರಶಸ್ತಿ&...

ಛಲವಾದಿ ವೇದಿಕೆಯಲ್ಲಿ ಬಿಡುಗಡೆಗೊಂಡ ‘ಸಂಜು ವೆಡ್ಸ್ ಗೀತಾ-2’ ಹಾಡು

07-10-2024 ಬೆಂಗಳೂರು

ಬೆಂಗಳೂರು: ಪವಿತ್ರಾ ಇಂಟರ್‌ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ ಛಲವಾದಿ ಕುಮಾರ್ ಅವರು ನಿರ್ಮಿಸಿರುವ ಕನ್ನಡದ ಬ...

ವೀರಣ್ಣ ರಾಜೂರ ಅವರಿಗೆ ‘ರಮಣಶ್ರೀ ಪ್ರಶಸ್ತಿ’

07-10-2024 ಬೆಂಗಳೂರು

ಬೆಂಗಳೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ರಮಣಶ್ರೀ ಪ್ರತಿಷ್ಠಾನದಿಂದ ಕೊಡಮಾಡಲಾಗುವ 2024ನೇ ಸಾಲಿನ 'ರ...