Date: 02-03-2021
Location: ಬೆಂಗಳೂರು
ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಅಮೆರಿಕದ ಇನ್ಸ್ಟಾಲೇಷನ್ ಆರ್ಟ್ ಕಲಾವಿದ ಸ್ಯು ಬಿಂಗ್ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.
ಕಲಾವಿದ: ಸ್ಯು ಬಿಂಗ್ (Xu Bing)
ಜನನ: 1955
ಶಿಕ್ಷಣ: ಸೆಂಟ್ರಲ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್, ಬೀಜಿಂಗ್
ವಾಸ: ಬೀಜಿಂಗ್, ಚೀನಾ; ನ್ಯೂಯಾರ್ಕ್, ಅಮೆರಿಕ
ಕವಲು: ಪ್ರಿಂಟ್ ಮೇಕಿಂಗ್
ವ್ಯವಸಾಯ: ಇನ್ಸ್ಟಾಲೇಷನ್ ಆರ್ಟ್, ಪ್ರಿಂಟ್‌ಮೇಕಿಂಗ್, ಕ್ಯಾಲಿಗ್ರಫಿ
ಸ್ಯು ಬಿಂಗ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:
ಸ್ಯು ಬಿಂಗ್ ಅವರ ವೆಬ್ ಸೈಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:
ಚೀನಾದ ಸಾಂಸ್ಕೃತಿಕ ಶುದ್ಧೀಕರಣಕ್ಕೆ ಇಳಿದ ಚೇರ್‌ಮನ್ ಮಾವೊ ಅವರ ಸಾಂಸ್ಕೃತಿಕ ಕ್ರಾಂತಿಯನ್ನು ಕಲಾವಿದ ಸ್ಯು ಬಿಂಗ್ ಕಂಡದ್ದು ತನ್ನ ಕ್ಯಾಲಿಗ್ರಾಫಿಕ್ ಪರಿಣತಿಯ ಮೂಲಕ. ಅಕ್ಷರಗಳು ಭಾಷೆಯ ರೂಪದಲ್ಲಿ ಸಂವಹನ ಮಾಧ್ಯಮವಾದಾಗ ಅವು ಹೇಗೆ ರಾಜಕೀಯ ಸಂವಹನಗಳಾಗಿ ಬಿಡುತ್ತವೆ ಎಂಬುದನ್ನು ಸ್ಯು ಬಿಂಗ್ ಪರಿಣಾಮಕಾರಿಯಾಗಿ ವಿಡಂಬಿಸಿದ್ದಾರೆ. ಒಂದು ಸಂವಹನವನ್ನು “What it should be and what it could be” ಎಂಬ ಹಿನ್ನೆಲೆಯಲ್ಲಿ ವಿಶ್ಲೇಷಿಸುತ್ತಾ, ಸಾಂಸ್ಕೃತಿಕ ಶುದ್ಧೀಕರಣದ ಪ್ರಕ್ರಿಯೆಗೆ ಪ್ರತಿರೋಧ ತೋರಿಸಿದ ಸ್ಯು ಬಿಂಗ್ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಾದ ಪ್ರಮುಖ ಕಲಾವಿದರಲ್ಲೊಬರು.
1995ರಲ್ಲಿ ಜನಿಸಿದ ಸ್ಯು ಬಿಂಗ್ ತಂದೆ ಪೀಕಿಂಗ್ ವಿವಿಯ ಚರಿತ್ರೆ ವಿಭಾಗದ ಮುಖ್ಯಸ್ಥರಾಗಿದ್ದರೆ, ತಾಯಿ ಗ್ರಂಥಾಲಯ ವಿಜ್ಞಾನ ವಿಭಾಗದ ಸಂಶೋಧಕಿ. ಸ್ಯು ಐವರು ಮಕ್ಕಳಲ್ಲಿ ನಡುವಿನವರು. ಅಕಾಡೆಮಿಕ್ ವಾತಾವರಣದಲ್ಲೇ ಬೆಳೆದ ಸ್ಯು ಬಿಂಗ್, ಸಹಜವಾಗಿಯೇ ತನ್ನ ಬಾಲ್ಯದ ಹೆಚ್ಚಿನ ಕ್ಷಣಗಳನ್ನು ಗ್ರಂಥಾಲಯಗಳಲ್ಲಿ ಕಳೆದರು. ಕಲೆಯಲ್ಲಿ ಆಸಕ್ತಿ ಇತ್ತು. ಆದರೆ, 1966ರಲ್ಲಿ ಸಾಂಸ್ಕೃತಿಕ ಕ್ರಾಂತಿ ಆರಂಭಗೊಂಡಾಗ, ಸ್ಯು ಕುಟುಂಬ ವಿಘಟನೆಗೊಳ್ಳಬೇಕಾಯಿತು ಮತ್ತು ಸ್ಯು ತಂದೆತಾಯಿಯರು ಲೇಬರ್ ಕ್ಯಾಂಪ್ ಸೇರಿದರೆ, ಸ್ಯು ನಗರದಿಂದ ದೂರ ಹಳ್ಳಿಗೆ ತೆರಳಿ, ದೈಹಿಕ ಶ್ರಮದ ಕೆಲಸಗಳನ್ನು ಮಾಡಬೇಕಾಯಿತು.
1976ರಲ್ಲಿ ಸಾಂಸ್ಕೃತಿಕ ಕ್ರಾಂತಿ ಕೊನೆಗೊಂಡ ಒಂದು ವರ್ಷದ ಬಳಿಕ ಬೀಜಿಂಗಿಗೆ ಹಿಂದಿರುಗಿದ ಕ್ಸು ಬಿಂಗ್ ಅಲ್ಲಿನ ಸೆಂಟ್ರಲ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್‌ನಲ್ಲಿ ಪ್ರಿಂಟ್ ಮೇಕಿಂಗ್ ವಿದ್ಯಾರ್ಥಿ ಆಗಿ ಸೇರ್ಪಡೆಗೊಂಡರು ವಿದ್ಯಾರ್ಥಿ ದೆಸೆಯ ಕೊನೆಯ ವರ್ಷದಲ್ಲಿ ಅವರು ರಚಿಸಿದ Book from the Sky (1987) ಇಂದಿಗೂ ಅವರ ಪ್ರಮುಖ ಕಲಾಕೃತಿಗಳಲ್ಲಿ ಒಂದೆಂದು ಪರಿಗಣಿತವಾಗಿದೆ.
80ರ ದಶಕದಲ್ಲಿ ಚೀನಾ ಜಾಗತಿಕ ಸಮಕಾಲೀನ ಕಲೆಗೆ ತೆರೆದುಕೊಂಡಾಗ, ಪಾಶ್ಚಾತ್ಯ ಪ್ರಭಾವದಿಂದ ತಪ್ಪಿಸಿಕೊಳ್ಳುವ ಅಲ್ಲಿನ “1985ರ ಹೊಸ ಅಲೆ” ಚಳುವಳಿಯ ಪ್ರಮುಖರಾಗಿ ಗುರುತಿಸಿಕೊಂಡ ಸ್ಯು ಬಿಂಗ್, 1989ರಲ್ಲಿ ಅವರ ತಂಡದೊಂದಿಗೆ ನಡೆಸಿದ ಕಲಾಪ್ರದರ್ಶನವನ್ನು ಸರ್ಕಾರ ಮುಚ್ಚಿಸಿತ್ತು, ಅಲ್ಲದೆ ತಿಯಾನನ್ ಮನ್ ಚೌಕದ ಪ್ರತಿಭಟನೆಗಳ ವೇಳೆ ಅವರು ಮತ್ತೆ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಬೇಕಾಯಿತು ಮತ್ತು ಅಮೆರಿಕಕ್ಕೆ ವಾಸ ಬದಲಿಸಬೇಕಾಯಿತು. ಅವರು ಅಲ್ಲಿ ಪುಟ್ಟ ಕೊಠಡಿಯಲ್ಲಿ ಇನ್ನೊಬ್ಬ ಪ್ರಮುಖ ಕಲಾವಿದ ಐವೇಯಿವೇಯಿ ಜೊತೆ ಉಳಿದುಕೊಂಡು ಹಲವು ಮಹತ್ವದ ಕೃತಿಗಳನ್ನು ರಚಿಸಿದರು. ಈ ಅವಧಿಯಲ್ಲಿ ರಚಿಸಿದ “ಕಲ್ಚರಲ್ ಆನಿಮಲ್ಸ್” ಬಹಳ ವಿವಾದಕ್ಕೀಡಾಗಿತ್ತು.
ತನ್ನ ಸಾಂಸ್ಕೃತಿಕ ಕ್ರಾಂತಿಯ ಅನುಭವಗಳ ಆಧಾರದಲ್ಲಿ ಕ್ಸು ಬಿಂಗ್ ರಚಿಸಿದ Square Word Calligraphy ಸರಣಿ ಬಹಳ ಕುತೂಹಲಕರವಾಗಿದ್ದು ಇಂಗ್ಲಿಷ್ ಅಕ್ಷರಗಳನ್ನು ಅವರು ಚೀನೀ ಅಕ್ಷರಗಳಂತೆ ದುಡಿಸಿಕೊಳ್ಳುವ ಮೂಲಕ ಅವರು ಜಾಗತಿಕವಾಗಿ ಬಹಳ ಹೆಸರು ಮಾಡಿದರು. ಚೀನಾದ ಸಾಂಸ್ಕೃತಿಕ ಹಿನ್ನೆಲೆಯನ್ನು ದೂರ ನಿಂತು ನೋಡುವ ಅವಕಾಶದ ಜೊತೆಗೇ ಸಮಕಾಲೀನ ಕಲಾಜಗತ್ತನ್ನು ಅರಿಯುವ ಅವಕಾಶವೂ ಅವರಿಗೆ ಅಮೆರಿಕದಲ್ಲಿ ದೊರಕಿತು.
2008ರಲ್ಲಿ ಹದಿನೆಂಟು ವರ್ಷಗಳ ಬಳಿಕ ಅಮೆರಿಕದಿಂದ ತಾಯ್ನಾಡಿಗೆ ಮರಳಿದ ಕ್ಸು ಬಿಂಗ್ ತಾನು ಕಲಿತ ಶಾಲೆಯ ಉಪಾಧ್ಯಕ್ಷರಾದರು. ಆಯ್ ವೇಯಿ ವೇಯಿ ಅವರ ಒರಟು ಶೈಲಿಗೆ ಹೋಲಿಸಿದರೆ ಬಹಳ ನಾಜೂಕಾಗಿ, ಬೌದ್ಧಿಕವಾಗಿ ಕಾಣುವ ಕ್ಸು ಬಿಂಗ್ ಕಲಾಕೃತಿಗಳು ಭಾಷೆಯ ನೆಲೆಯಲ್ಲಿ ತಮ್ಮ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಕಾಮೆಂಟರಿಗಳ ಮೂಲಕ ಪೂರ್ವ ಪಶ್ಚಿಮಗಳ ವೈರುಧ್ಯಗಳನ್ನೂ, ಅವುಗಳ ನಡುವಿನ ಸೇತುವೆಗಳನ್ನೂ ಅನ್ವೇಷಿಸುತ್ತವೆ.
ಚೀನಾದ ಪುರಾತನ ಕ್ಯಾಲಿಗ್ರಾಫಿ ಕಲೆಯನ್ನೇ ಸಮಕಾಲೀನ ಕಲಾಭಾಷೆಗೆ ಒಗ್ಗಿಸಿಕೊಂಡು, ಅಂತರ್ ಸಂಸ್ಕೃತಿ ಸಂವಹನಗಳನ್ನೂ, ಆಧುನಿಕ ತಂತ್ರಜ್ಞಾನ ಮತ್ತು ಪರಿಸರಗಳ ಪ್ರಭಾವಗಳನ್ನೂ ವಿವರಿಸುವ ಸ್ಯು ಬಿಂಗ್, "No matter what outer form my works take, they are all linked by a common thread, which is to construct some kind of obstacle to people's habitual ways of thinking - what I call the 'cognitive structures' of the mind." ಎನ್ನುತ್ತಾರೆ.
ಬ್ಲೂಮ್‌ಬರ್ಗ್ ಬ್ರಿಲಿಯಂಟ್ ಐಡಿಯಾಸ್ ಸರಣಿಯಲ್ಲಿ ಸ್ಯು ಬಿಂಗ್ ಪರಿಚಯ:
ಅಮೆರಿಕದ ಮೇರಿಲ್ಯಾಂಡ್ ಕಾಲೇಜಿನ ಕಲಾ ವಿಭಾಗದಲ್ಲಿ ಸ್ಯು ಬಿಂಗ್ ಉಪನ್ಯಾಸ:
ಚಿತ್ರ ಶೀರ್ಷಿಕೆಗಳು :
ಸ್ಯು ಬಿಂಗ್ ಅವರ A Case Study of Transference- Times Overlap (2018)
ಸ್ಯು ಬಿಂಗ್ ಅವರ American Silkworm Series 2 (1995)
ಸ್ಯು ಬಿಂಗ್ ಅವರ Background Story3 (2006)
ಸ್ಯು ಬಿಂಗ್ ಅವರ Book from the Ground - Shop(2012)
ಸ್ಯು ಬಿಂಗ್ ಅವರ Book from the sky (1987)
ಸ್ಯು ಬಿಂಗ್ ಅವರ cultural animal (1994)
ಸ್ಯು ಬಿಂಗ್ ಅವರ Ghost Pounding the Wall (1994)
ಸ್ಯು ಬಿಂಗ್ ಅವರ Landscripts from the Himalayan Journal (1999)
ಸ್ಯು ಬಿಂಗ್ ಅವರ Living Word (2002)
ಸ್ಯು ಬಿಂಗ್ ಅವರ Phoenix Project (2010)
ಸ್ಯು ಬಿಂಗ್ ಅವರ Square Word Calligraphy (1996)
ಈ ಅಂಕಣದ ಹಿಂದಿನ ಬರೆಹಗಳು
ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’
ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್
ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್
ಬಾರ್ಬರಾ ಕ್ರುಗರ್ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್
ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್
ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್
“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”
“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”
ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್
ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ
“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”
“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”
“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”
“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”
“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”
“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ
ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ
ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್
ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್
ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ
ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್
ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ
ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ
ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.