ಜಗತ್ತಿನ ಶ್ರೇಷ್ಟ ಕಾದಂಬರಿಗಳ ಪಟ್ಟಿಗೆ ಸೇರೋ ಕೃತಿಯಿದು


“ಜಗತ್ತಿನ ಶ್ರೇಷ್ಠ ಕಾದಂಬರಿಳ ಪಟ್ಟಿಗೆ ಸೇರೋ ಈ ಕಾದಂಬರಿಯ ಅನುವಾದ ಸರಾಗವಾಗಿ ಓದಿಸಿಕೊಂಡು ಹೋದರೂ ಅಲ್ಲಲ್ಲಿ ಹಂಪನ್ನ ಹತ್ತಿಸಿ ಎಗರಿಸುತ್ತೆ. ಸೂಕ್ಷ್ಮ ತಿದ್ದುಪಡಿಗಳಲ್ಲಾದ ತಪ್ಪುಗಳು ಕಣ್ಣಿಗೆ ಬೀಳುತ್ತೆ. ಆದರೂ ಸೊಗಸಾದ ಬರವಣಿಗೆ ಆಪ್ತವಾಗುತ್ತದೆ,” ಎನ್ನುತ್ತಾರೆ ಪುಸ್ತಕಮರೆ ಪ್ರಸಾದ ಅವರು ಶ್ರೀನಿವಾಸ ವೈದ್ಯ ಅವರ “ಕರ್ನಲ್‌ನಿಗೆ ಯಾರೂ ಬರೆಯುವುದೇ ಇಲ್ಲ” ಕೃತಿ ಕುರಿತು ಬರೆದ ವಿಮರ್ಶೆ.

ಮೂಲ ಸ್ಪ್ಯಾನಿಷ್ ಭಾಷೆಯಲ್ಲಿದ್ದ ಈ ಪುಸ್ತಕ ಇಂಗ್ಲೀಷಿನಿಂದ ಕನ್ನಡಕ್ಕೆ ಬರುವಾಗ ಎಷ್ಟು ಬದಲಾವಣೆಗಳಾಗಿದೆಯೋ ಗೊತ್ತಿಲ್ಲ. ಅನುವಾದ ಮತ್ತು ಹತ್ರ ಭಾವಾನುವಾದ ಅನಿಸುವ ಈ ಪುಸ್ತಕದ ಸೊಗಸಾದ, ಒಂಥರ ತಣ್ಣನೆಯ ಗಾಳಿ ಚಂಡಿ ಬೆನ್ನಿಗೆ ಬೀಸಿದಂತೆ ಸುಖ ಸಿಗೋಕೆ ಮೂಲ ಲೇಖಕ ಕಾರಣ ಅನಿಸೋದು ಕಾದಂಬರಿ ಓದೋಕೆ ಶುರುಮಾಡಿದ ಮೇಲೆ. ಓದೋಕು ಮೊದಲು ಈ ಪುಸ್ತಕ ಜಗತ್ ಸಾಹಿತ್ಯದಲ್ಲಿ ಇಷ್ಟೆಲ್ಲ ಪಾತ್ರ ವಹಿಸಿತ್ತು. ಮತ್ತೆ ಈ ಲೇಖಕ ಇಷ್ಟೊಂದು ಜನರನ್ನ ಮೋಡಿ ಮಾಡಿದ್ದ, ಇವನ ಸಾಹಿತ್ಯಕ್ಕೆ ನೋಬೆಲ್ ಬಂದಿತ್ತು, ಅನ್ನೋದು ಗೊತ್ತೇ ಇರಲಿಲ್ಲ. ಕೆಲವೊಂದು ಅಪಘಾತಗಳೇ ಹಾಗೆ, ಸಿಕ್ಕಾಪಟ್ಟೆ ಮನಸಲ್ಲಿ ಉಳಿಯುವಂತೆ ಮಾಡುತ್ತವೆ.

ವರುಷಗಳ ವರುಷಗಳೇ ಉರುಳಿದರೂ ಬಾರದ ಪೆನ್‌ಶನ್‌ಗೆ ಕಾಯೋ ಕರ್ನಲ್ಲು, ಅಸ್ತಮಾದಿಂದ ಸುಸ್ತಾಗಿ ಉಸಿರೆಳೆದುಕೊಳ್ಳೋ ಹೆಂಡತಿ, ದೇಶಕ್ಕಾಗಿ ಹೋರಾಡಿ ಬಂದರೂ ಊಟ್ಟಕ್ಕೂ ಇಲ್ಲದ ಬಡತನ, ಕಾಳಗಗ್ಗೆ ತಯಾರಾಗುತ್ತಿರೋ ಕೋಳಿಪಡೆ ಹುಂಜ, ಸಾಮಾಜಿಕ ಅಸಮಾನತೆ, ರಾಜಕೀಯ ಭೃಷ್ಟತೆ, ಹುಸಿ ಆಸೆ, ಗೆಳೆಯ ಸಬಾಸ, ಡಾಕ್ಟರು, ವರಷಗಳಿಂದ ಮಂಕಲ್ಲೆ ಮಲಗಿರೋ ಹಾಗೆ ಯುದ್ಧ ಪರಿಣಾಮಗಳಿಂದ ಗುಣವಾಗೋಕೆ ಪ್ರಯತ್ನಪಡ್ತಾ ಇರೋ ಊರು, ಮಾರ್ಷಿಯಲ್ ಲಾ, ರಹಸ್ಯ ಪತ್ರಿಕೆ, ಗುಮಾನಿಯಲ್ಲಿ ಗುಂಡಿನಿಂದ ಸತ್ತ ಮಗ ಅಂತೆಲ್ಲ ಇದ್ರೂ ಬರೀ ಕಷ್ಟ, ಕಾರ್ಪಣ್ಯ, ಬಡತನ, ಹಸಿವು, ಹಿಂಸೆ, ಬಿಸಿಲು, ಸೋಲು, ಅನಾರೋಗ್ಯಗಳೆನ್ನಲ್ಲ ನೀಡಿ ಕರುಣೆ ಹುಟ್ಟೋ ಶೈಲಿಯನ್ನ ಬಿಟ್ಟು ಬದುಕಿನ ಕ್ರೈರ್ಯ, ಉತ್ಸಾಹಗಳನೆಲ್ಲ ಹೇಳೋ ಶೈಲಿ ಬಹಳ ವಿಶೇಷ ಅನಿಸುತ್ತೆ. ಕಾದಂಬರಿ ಬೇರೆ ದೇಶದ ಕತೆಯೆನಿಸದಿರೋಕೆ ಇಲ್ಲಿ ಕೋಳಿಪಡೆ (ಫೈಟು), ಶ್ರೀಮಂತ ಗೆಳೆಯ, ಮಂಡೆಪೆಟ್ಟು ಹೆಂಗಸು, ಒಳ್ಳೆಜನ ಡಾಕ್ಟರು ಇತ್ಯಾದಿಗಳೆಲ್ಲ ನಾವು ಕಾಣ್ತ ಬಂದಿರೋದು ಕಾರಣವಾಗುತ್ತೆ.

ಜಗತ್ತಿನ ಶ್ರೇಷ್ಟ ಕಾದಂಬರಿಳ ಪಟ್ಟಿಗೆ ಸೇರೋ ಈ ಕಾದಂಬರಿಯ ಅನುವಾದ ಸರಾಗವಾಗಿ ಓದಿಸಿಕೊಂಡು ಹೋದರೂ ಅಲ್ಲಲ್ಲಿ ಹಂಪನ್ನ ಹತ್ತಿಸಿ ಎಗರಿಸುತ್ತೆ. ಸೂಕ್ಷ್ಮ ತಿದ್ದುಪಡಿಗಳಲ್ಲಾದ ತಪ್ಪುಗಳು ಕಣ್ಣಿಗೆ ಬೀಳುತ್ತೆ. ಆದರೂ ಸೊಗಸಾದ ಬರವಣಿಗೆ ಆಪ್ತವಾಗುತ್ತದೆ.

- ಪುಸ್ತಕಮರೆ ಪ್ರಸಾದ

MORE FEATURES

ಕಥೆಗಳು ನಮ್ಮನ್ನು ಕಾಡಿ ಆವರಿಸುವಷ್ಟು ಗಾಢವಾಗಿವೆ

27-12-2024 ಬೆಂಗಳೂರು

“ಈ ಸ್ಕೂಲ ಚೌಕಟ್ಟಿನಲ್ಲಿಟ್ಟು ಇಲ್ಲಿನ ಕಥೆಗಳನ್ನು ಅರ್ಥೈಸುತ್ತಿರುವಾಗಲೇ ಇದನ್ನು ದಾಟಿ ಚಿಮ್ಮುವ ಕೆಲವು ಕತೆಗಳೂ...

ಅಂದಿನ ಬದುಕನ್ನು ಮರಳಿ ಕಟ್ಟಬೇಕು..

27-12-2024 ಬೆಂಗಳೂರು

“ಚೊಕ್ಕಟ ಕೃಷಿ ಬದುಕು ಕಟ್ಟಿಕೊಂಡು, ಕೊಟ್ಟಿಗೆ ತುಂಬ ದನಗಳನ್ನು ಸಾಕಿಕೊಂಡು, ಕೋಳಿ, ಕುರಿ, ಬೆಕ್ಕು, ನಾಯಿ, ಹಂದ...

ತೇಜಸ್ವಿ ಸಾಹಿತ್ಯವು ವಿಶ್ವದ ಅಗ್ರಮಾನ್ಯ ಸಾಹಿತ್ಯ

26-12-2024 ಬೆಂಗಳೂರು

“ತೇಜಸ್ವಿ ಸಾಹಿತ್ಯವನ್ನು ಮೆಚ್ಚುಗೆ, ಟೀಕೆ ಮತ್ತು ವಿಶ್ಲೇಷಣೆಗೆ ಈಡು ಮಾಡಿದ, ಸಮಾಜಮುಖಿಯಲ್ಲಿ ಪ್ರಕಟವಾದ ಆಯ್ದ ...