ದ.ರಾ. ಬೇಂದ್ರೆ ಕಾವ್ಯಕೂಟದಿಂದ ʻದ.ರಾ. ಬೇಂದ್ರೆ ಸ್ಮೃತಿ ಲೇಖನ ಸ್ಪರ್ಧೆʼ

Date: 19-11-2022

Location: ಬೆಂಗಳೂರು


ಬೆಂಗಳೂರಿನ ದ.ರಾ. ಬೇಂದ್ರೆ ಕಾವ್ಯಕೂಟ ಅವರಿಂದ ಪಿ.ಎಚ್.ಡಿ. ಸಂಶೋಧನಾ ವಿದ್ಯಾರ್ಥಿಗಳಿಗೆ ʻನಾಕುತಂತಿ ಕವನದ ಶೈಲಿ ಹಾಗೂ ದಾರ್ಶನಿಕತೆʼ ವಿಷಯದ ಮೇಲೆ ʻದ.ರಾ. ಬೇಂದ್ರೆ ಸ್ಮೃತಿ ಲೇಖನ ಸ್ಪರ್ಧೆ 15ʼ ಏರ್ಪಡಿಸಲಾಗಿದೆ.

ಸ್ಪರ್ಧೆಯಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಕ್ರಮವಾಗಿ 5,000 ರೂ, 4,000ರೂ. ಮತ್ತು 3,000 ರೂ. ಎಂಬಂತೆ ಮೂರು ನಗದು ಬಹುಮಾನಗಳು ಇರುತ್ತವೆ.

ಸ್ಪರ್ಧೆಯ ನಿಯಮಗಳು: ಎಲ್ಲಾ ವಿಶ್ವವಿದ್ಯಾಲಯದ ಪಿ.ಎಚ್.ಡಿ. ಸಂಶೋಧನಾ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಲೇಖನ ಸುಮಾರು 2,500 ಪದಗಳಿಗೆ ಮೀರದಂತೆ ಇರಬೇಕು. ಯಾವುದೇ ರೀತಿಯ ಪ್ರವೇಶ ಧನವಿರುವುದಿಲ್ಲ. ಪ್ರತಿ ವಿಶ್ವವಿದ್ಯಾಲಯದ /ಕಾಲೇಜಿನಿಂದ ಭಾಗವಹಿಸಬಹುದಾದ ವಿದ್ಯಾರ್ಥಿಗಳ ಸಂಖ್ಯೆಗೆ ಯಾವ ಮಿತಿಯೂ ಇರುವುದಿಲ್ಲ. ಪ್ರತಿಯೊಂದು ಲೇಖನದ ಜೊತೆಯಲ್ಲಿ ಆಯಾ ಕಾಲೇಜಿನ ಮಾರ್ಗದರ್ಶಕ, ಪ್ರಾಧ್ಯಾಪಕರಿಂದ ಪಡೆದ ಅಧಿಕೃತ ಪರಿಚಯ ಪತ್ರವನ್ನು ಲಗತ್ತಿಸಿರಬೇಕು. ವಿದ್ಯಾರ್ಥಿ ತನ್ನ ಹೆಸರು, ಕಾಲೇಜಿನ ಅಂಚೆ ವಿಳಾಸದೊಂದಿಗೆ ಮನೆಯ ಅಂಚೆ ವಿಳಾಸವನ್ನೂ ಲೇಖನದ ಹಾಳೆಗಳ ಮೇಲೆ ಬರೆಯದೆ, ಪ್ರತ್ಯೇಕ ಹಾಳೆಯಲ್ಲಿ ಬರೆದು ಲೇಖನದ ಜೊತೆಗೆ ಲಗತ್ತಿಸಿರಬೇಕು. ದೂರವಾಣಿ ಸಂಖ್ಯೆಯನ್ನೂ ನೀಡಬೇಕು. ಲೇಖನವನ್ನು ಕಾಗದದ ಒಂದೇ ಮಗ್ಗುಲಲ್ಲಿ ಸ್ಪಷ್ಟವಾಗಿ ಬರೆದಿರಬೇಕು. ಲೇಖನದ ಒಂದು ಪ್ರತಿಯನ್ನು ಇಟ್ಟುಕೊಂಡು ಸ್ಪರ್ಧೆಗೆ ಮೂಲ ಪ್ರತಿಯನ್ನು ಕಳಿಸಬೇಕು. ಸ್ಪರ್ಧೆಗೆ ಬಂದ ಯಾವುದೇ ಲೇಖನವನ್ನೂ ಯಾವ ಕಾರಣಕ್ಕಾಗಿಯೂ ಹಿಂದಿರುಗಿಸುವುದಿಲ್ಲ. ಸ್ಪರ್ಧೆಯ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಲೇಖನ ಸಿದ್ಧಪಡಿಸಲು ಸಹಾಯ ಪಡೆದ ಆಕರ ಗ್ರಂಥಗಳ ಹಾಗೂ ಲೇಖನಗಳ ಪಟ್ಟಿಯನ್ನು ಲೇಖನದ ಕೊನೆಯಲ್ಲಿ ಸರಿಯಾದ ಮಾದರಿಯಲ್ಲಿ ಬರೆಯಬೇಕು.

ಆಸಕ್ತರು ತಮ್ಮ ಲೇಖನವನ್ನು 2022 ಡಿಸೆಂಬರ್ 20ರ ಒಳಗೆ ಡಾ. ಜಿ. ಕೃಷ್ಣಪ್ಪ, ಅಧ್ಯಕ್ಷರು ದ.ರಾ. ಬೇಂದ್ರೆ ಕಾವ್ಯಕೂಟ, # 22, 'ಶ್ರೀಗುರುದತ್ತ ನಿಲಯ', 1ನೇ ತಿರುವು, ನೇತಾಜಿ ನಗರ ಮತ್ತಿಕೆರೆ, ಬೆಂಗಳೂರು- 560054 ವಿಳಾಸಕ್ಕೆ ಕಳುಹಿಬೇಕು.

ಇ-ಮೇಲ್- darabendrekavyakoota@gmail.com
ಸಂಚಾರಿ: 9972109209

ಲೇಖನವನ್ನು ನುಡಿಯಲ್ಲಿ ಟೈಪ್‌ ಮಾಡಿ ಇ-ಅಂಚೆಯ ಮೂಲಕವೂ ಕಳುಹಿಸಬಹುದು.

MORE NEWS

ಬರಹಗಾರರಿಗಿಂತ ಹೆಚ್ಚಿನ ಪ್ರಶಸ್ತಿಗಳಿವೆ; ಎನ್. ಗಾಯತ್ರಿ 

12-03-2025 ಬೆಂಗಳೂರು

ಬೆಂಗಳೂರು: "ಇಂದು ಪ್ರಶಸ್ತಿಯನ್ನು ಯಾರು ಕೊಡುತ್ತಿದ್ದಾರೆ, ಯಾರಿಂದ ಕೊಡಲಾಗುತ್ತೆ, ಎಲ್ಲಿ ಕೊಡುತ್ತಾರೆ ಎಂಬುದು ...

'ಕನ್ನಡ ಪುಸ್ತಕ ಸೊಗಸು ಬಹುಮಾನ'ಕ್ಕೆ ಕೃತಿಗಳ ಆಹ್ವಾನ

12-03-2025 ಬೆಂಗಳೂರು

ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2022, 2023 ಮತ್ತು 2024ನೇ ಸಾಲಿನಲ್ಲಿ ಜನವರಿಯಿಂದ ಡಿಸೆಂಬರ್‌...

ಆಗಮಡಂಬರ ಕೃತಿಯನ್ನು ರಂಗಕ್ಕೆ ತರುತ್ತೇನೆ: ಪ್ರಕಾಶ್ ಬೆಳವಾಡಿ

09-03-2025 ಬೆಂಗಳೂರು

ಬೆಂಗಳೂರು: "ಕೃತಿಯು ರಂಗ ಪ್ರಯೋಗಕ್ಕೆ ತಕ್ಕಂತೆ ಇಲ್ಲ ಎಂದು ವಿಜಯ ಸಿಂಹ ಈ ಕೃತಿಯಲ್ಲಿ ಹೇಳಿದ್ದಾರೆ. ಆದರೆ, ನಾನು...