Date: 12-03-2025
Location: ಬೆಂಗಳೂರು
ಬೆಂಗಳೂರು: "ಇಂದು ಪ್ರಶಸ್ತಿಯನ್ನು ಯಾರು ಕೊಡುತ್ತಿದ್ದಾರೆ, ಯಾರಿಂದ ಕೊಡಲಾಗುತ್ತೆ, ಎಲ್ಲಿ ಕೊಡುತ್ತಾರೆ ಎಂಬುದು ಬಹಳ ಮುಖ್ಯ ಆಗುತ್ತೆ. ಯಾಕೆಂದರೆ ಇಂದು ಬರಹಗಾರರಿಗಿಂತ ಪ್ರಶಸ್ತಿಗಳೇ ಹೆಚ್ಚಿವೆ. ಲೇಖಕರಿಗೆ ಒಂದಲ್ಲಾ ಒಂದು ಪ್ರಶಸ್ತಿ ಸಿಗುತ್ತದೆ. ಆದರೆ ಈ ಪ್ರಶಸ್ತಿಯನ್ನು ಬರಗೂರು ಪ್ರತಿಷ್ಠಾನ ಸಬೀಹಾ ಭೂಮಿಗೌಡ ಅವರಿಂದ ಬಾಪೂಜಿ ಸಭಾಂಗಣದಲ್ಲಿ ಕೊಡುತ್ತಿರುವುದು ತೆಗೆದುಕೊಳ್ಳಲು ಕಾರಣ," ಎಂದು ಎನ್ ಗಾಯತ್ರಿ ಅವರು ಹೇಳಿದರು.
ನಗರದ ಬಾಪೂಜಿ ಸಭಾಂಗಣದಲ್ಲಿ ನಾಡೋಜ ಡಾ. ಬರಗೂರು ಪ್ರತಿಷ್ಠಾನ (ರಿ.) ವತಿಯಿಂದ ಗಿರಿಜಾ ಲೋಕೇಶ್ ಮತ್ತು ಎನ್ ಗಾಯತ್ರಿ ಅವರಿಗೆ ಶ್ರೀಮತಿ ರಾಜಲಕ್ಷ್ಮಿ ಬರಗೂರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
"ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇಂದು ಧಕ್ಕೆ ಬಂದಿದೆ. ಪ್ರಕೃತಿ ಬಗ್ಗೆ ಮಾತ್ರ ಇಂದು ಬರೆಯ ಬಹುದು. ವ್ಯಕ್ತಿ, ವಿಚಾರಗಳ ಬಗ್ಗೆ ಬರೆಯುವುದು ಸಂಕಷ್ಟವಾಗಿದೆ. ವಿವಿಧ ಅಸ್ಮಿತೆ ಸಾಹಿತ್ಯ ಬೆಳೆಸುತ್ತಿದೆ. ಆದರೆ ಅಸ್ಮಿತೆಗಳ ನಡುವೆ ಗೋಡೆಗಳೂ ರಚನೆ ಆಗುತ್ತಿದೆ," ಎಂದು ಗಾಯತ್ರಿ ಅವರು ಆತಂಕ ವ್ಯಕ್ತಪಡಿಸಿದರು.
ರಾಜ್ ಕುಮಾರ್ ಬಿಟ್ಟರೆ ನಾನೇ ಹಳೆಬಳು: ರಾಜ್ ಕುಮಾರ್ ಬಿಟ್ಟರೆ ನಾನೇ ಹಳೆಬಳು. ಅವರೊಂದಿಗೆ ಬಾಲ ನಟಿಯಾಗಿ ನಟಿಸಿದ್ದೆ. ಧೂಮಕೇತು ಚಿತ್ರದಲ್ಲಿ ರಾಜ್ ಕುಮಾರ್ ಸ್ನೇಹಿತೆಯಾಗಿ ನಟಿಸಿದ್ದೆ. ರಾಜ್ ಕುಮಾರ್ ಅವರಿಂದ ಪರಿಚಿತಳಾದವಳು ಎನ್ನುವುದು ಸಂತೋಷದ ನೆನಪು. ಗೆಳತಿಯ ಹೆಸರಿನಲ್ಲಿ ಪ್ರಶಸ್ತಿ ಪಡೆಯುತ್ತಿರುವುದು ಸಂತೋಷ ಎಂದು ರಂಗಭೂಮಿ ಕಲಾವಿದೆ, ಚಿತ್ರ ನಟಿ ಗಿರಿಜಾ ಲೋಕೇಶ್ ನೆನಪುಗಳನ್ನು ಹಂಚಿಕೊಂಡರು.
ಸುಂದರರಾಜ್ ಮಾತನಾಡಿ, ನಾನು ಕಂಡ ಅನುಪಮ ಜೋಡಿ ಬರಗೂರು ದಂಪತಿ. ನಾನು ಸಿನಿಮಾ ಮೂಲಕ ಅವರನ್ನು ಹೆಚ್ಚು ಕಂಡೆ. ನಮಗೆ ಬರಗೂರು, ಲಂಕೇಶ್, ಕಂಬಾರರು, ಗಿರೀಶ್ ಕಾರ್ನಾಡ್ ಅವರಿಂದ ಸಾಹಿತ್ಯ ಪರಿಚಯ. ಬರಗೂರು ಕುಟುಂಬ ಅನ್ನಹಾಕುವ ಕುಟುಂಬ. ರಾಜಲಕ್ಷ್ಮಿ ಅವರು ಅನ್ನಪೂರ್ಣೆ. ಜೋಕುಮಾರಸ್ವಾಮಿ ನಾಟಕದಲ್ಲಿ ಗಿರಿಜಾ ಲೋಕೇಶ್ ನನ್ನ ಜೊತೆ ನಟಿಸಿದ್ದರು. ಆ ದಿನಗಳ ನೆನಪು ಇಂದಿಗೂ ಹಸಿಯಾಗಿದೆ. ಈಗ ಅದೇ ಸ್ನೇಹಿತೆ ಗಿರೀಜಾ ಪ್ರಶಸ್ತಿ ಪಡೆಯುತ್ತಿದ್ದಾರೆ ಖುಷಿಯ ಸಮಯ ಎಂದು ಹೇಳಿದರು.
ಲೇಖಕಿ ಮತ್ತು ಮಹಿಳಾ ವಿ.ವಿ. ವಿಶ್ರಾಂತ ಕುಲಪತಿ ಸಬಿಹ ಭೂಮಿಗೌಡ ಮಾತನಾಡಿ, ಇಬ್ಬರು ಸಾಧಕಿಯರು, ಅವರಿಂದ ನಾನು ಪ್ರೇರಣೆ ಪಡೆದಿದ್ದೇನೆ. ಅಕ್ಕಂದಿರು, ಹಿರಿಯರನ್ನು ಸನ್ಮನಿಸುವುದು ಸಂತಸದ ಕ್ಷಣ ಎಂದು ಹೇಳಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಸುಂದರರಾಜ್ ಅರಸ್, ರಾಜಲಕ್ಷ್ಮಿ ಪ್ರಶಸ್ತಿ ಮತ್ತು ರಾಜಲಕ್ಷ್ಮಿ ಅವರ ಮಾತೃ ವಾತ್ಸಲ್ಯ ನೆನೆದರು. ಲಕ್ಷ್ಮೀನಾರಾಯಣ ಸ್ವಾಗತಿಸಿದರು ಮತ್ತು ಶಮಿತಾ ಮಲ್ನಾಡ್ ಕಾರ್ಯಕ್ರಮವನ್ನು ನಿರೂಪಿಸಿದರು.
ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2022, 2023 ಮತ್ತು 2024ನೇ ಸಾಲಿನಲ್ಲಿ ಜನವರಿಯಿಂದ ಡಿಸೆಂಬರ್...
ಬೆಂಗಳೂರು: "ಕೃತಿಯು ರಂಗ ಪ್ರಯೋಗಕ್ಕೆ ತಕ್ಕಂತೆ ಇಲ್ಲ ಎಂದು ವಿಜಯ ಸಿಂಹ ಈ ಕೃತಿಯಲ್ಲಿ ಹೇಳಿದ್ದಾರೆ. ಆದರೆ, ನಾನು...
ಹಾಸನ: ಸಾಹಿತ್ಯ ಮತ್ತು ಸಂಸ್ಕೃತಿಯ ಮಹಾನದಿಯಂತೆ ಹರಿದು, ಜಗತ್ತಿನ ಓದುಗರ ಮನಸ್ಸು ಮೆಚ್ಚಿ, ಕನ್ನಡದ ಗರಿಮೆಯನ್ನು ವಿಶ್ವ...
©2025 Book Brahma Private Limited.