Date: 24-08-2021
Location: ಬೆಂಗಳೂರು
ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಅಮೆರಿಕ ಮೂಲದ ಕಾನ್ಸೆಪ್ಚುವಲ್ ಆರ್ಟ್ ಕಲಾವಿದ ಸೊಲೊಮನ್ ಲೆವಿಟ್ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.
ಕಲಾವಿದ: ಸೊಲೊಮನ್ ಲೆವಿಟ್ (Soloman “Sol”LeWitt)
ಜನನ: 09 ಸೆಪ್ಟಂಬರ್, 1928
ಮರಣ: 08 ಎಪ್ರಿಲ್, 2007
ಶಿಕ್ಷಣ: ಸಿರಾಕೂಸ್ ಯೂನಿವರ್ಸಿಟಿ, ನ್ಯೂಯಾರ್ಕ್; ಸ್ಕೂಲ್ ಆಫ್ ವಿಶುವಲ್ ಆರ್ಟ್ಸ್, ನ್ಯೂಯಾರ್ಕ್
ವಾಸ: ನ್ಯೂಯಾರ್ಕ್, ಅಮೆರಿಕ
ಕವಲು: ಕಾನ್ಸೆಪ್ಚುವಲ್ ಆರ್ಟ್
ವ್ಯವಸಾಯ: ಪೇಂಟಿಂಗ್, ಡ್ರಾಯಿಂಗ್, ಸ್ಕಲ್ಪ್ಚರ್
ಸೊಲ್ ಲೆವಿಟ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:
ಸೊಲ್ ಲೆವಿಟ್ ಅವರ ವೆಬ್‌ಸೈಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:
ಒಬ್ಬ ಆರ್ಕಿಟೆಕ್ಟ್ ತನ್ನ ಕೋಣೆಯಲ್ಲಿ ಕುಳಿತು ವಿನ್ಯಾಸ ಯೋಜಿಸುತ್ತಾನೆಯೇ ಹೊರತು ತಾನೇ ಸ್ವತಃ ಹೋಗಿ ಹಾರೆ ಹಿಡಿದು ಪಾಯ ತೆಗೆದು, ಕಲ್ಲು-ಸಿಮೆಂಟು ಇಟ್ಟು ಮನೆ ಕಟ್ಟುವುದಿಲ್ಲ, ಆದರೂ ಆತ ಕಲಾವಿದನೇ. ಅದೇ ರೀತಿಯಲ್ಲಿ ತಾನು ಯೋಜಿಸಿದ್ದನ್ನು ಇನ್ನೊಬ್ಬರು ಮೂರ್ತ ರೂಪಕ್ಕೆ ತಂದರೆ ಅದೂ ಕೂಡ ಕಲೆಯೇ ಎಂದು ಪ್ರತಿಪಾದಿಸಿದ ಲೆವಿಟ್ ಅವರಲ್ಲಿ ಈ ಚಿಂತನೆ ಮೊಳೆತದ್ದು, 1955ರ ಹೊತ್ತಿಗೆ ತನ್ನ ಕಲಾ ಬದುಕಿನ ಆರಂಭದ ಹಂತದಲ್ಲಿ ಆರ್ಕಿಟೆಕ್ಟ್ ಒಬ್ಬರ ಕಚೇರಿಯಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾಗ.
ಕಲಾ ಚರಿತ್ರೆಯಲ್ಲಿ ಕಾನ್ಸೆಪ್ಚುವಲ್ ಆರ್ಟ್‌ನ ಜನಕ ಎಂದೇ ಪರಿಗಣಿತರಾಗಿರುವ ಲೆವಿಟ್ ಅವರ “ಕಲಾವಿದ ಒಬ್ಬ ಐಡಿಯಾಗಳ ಜನರೇಟರ್” ಎಂಬ ನಂಬಿಕೆ ಕಲೆಯನ್ನು ಮಾಡರ್ನ್ ನಿಂದ ಪೋಸ್ಟ್ ಮಾಡರ್ನ್ ಯುಗಕ್ಕೆ ಮಗ್ಗುಲು ಬದಲಾಯಿಸುವಂತೆ ಮಾಡಿತು. ಕಲಾವಿದ ಒಂದು ಕಲಾ ಯೋಜನೆಯನ್ನು ರೂಪಿಸಿದ ಬಳಿಕ ಅದು ಮೈತಳೆಯಲೇಬೇಕು ಎಂದೇನೂ ಇಲ್ಲ ಎಂದ ಅವರ ಹಲವು ಕಲಾಕೃತಿಗಳು ಐಡಿಯಾಗಳ ಹಂತದಲ್ಲೇ ಅಥವಾ ರಚನಾ ಪ್ರಕ್ರಿಯೆಯಾಗಿಯೇ ಬಾಕಿ ಉಳಿದಿರುವುದೂ ಇದೆ. ಗೆರೆಗಳು, ಬಣ್ಣಗಳು ಮತ್ತು ಸರಳವಾದ ಆಕೃತಿಗಳನ್ನು ಗಣಿತದ ಸಮೀಕರಣಗಳಂತೆ ಸಂಯೋಜಿಸಿ ಕಲಾಕೃತಿಗಳನ್ನು ಅವರು ಯೋಜಿಸುತ್ತಿದ್ದರು. ತನ್ನ ಕಲಾ ಯೋಜನೆಯನ್ನು ತನ್ನ ಸಹಾಯಕರಿಗೆ ಕೊಡುವಾಗಲೂ ಅದರ ಅಂತಿಮ ಸ್ವರೂಪದ ಮೇಲೆ ತನ್ನ ನಿಯಂತ್ರಣ ಇರದಂತೆ ಎಚ್ಚರ ವಹಿಸುತ್ತಿದ್ದ ಲೆವಿಟ್, ಕಲೆಯ ಮೂಲಭೂತ ತತ್ವಗಳನ್ನೇ ಪ್ರಶ್ನಿಸುತ್ತಿದ್ದರು. ಒಂದು ಅಂತಿಮ ನರೇಟಿವ್ ಹೊರಹೊಮ್ಮಿಸುವ ಅಂತಿಮ ಕಲಾಕೃತಿಗಿಂತ ಅದು ಆ ಹಂತಕ್ಕೆ ಸಾಗಿ ಬಂದ ಪ್ರಕ್ರಿಯೆ ಅವರಿಗೆ ಮಹತ್ವದ್ದಾಗಿತ್ತು. ಹಾಗಾಗಿ ಕಲಾಕೃತಿಗೆ ಅರ್ಥ ಇರಬೇಕು ಎಂಬ ವಾದದಲ್ಲಿ ಅವರಿಗೆ ನಂಬಿಕೆ ಇರಲಿಲ್ಲ.
ರಷ್ಯನ್ ವೈದ್ಯ -ಯಹೂದಿ ದಾದಿ ದಂಪತಿಗೆ ಹಾರ್ಟ್‌ಫರ್ಡಿನಲ್ಲಿ ಜನಿಸಿದ ಲೆವಿಟ್, ತನ್ನ ಆರನೇ ವಯಸ್ಸಿನಲ್ಲೇ ವೈದ್ಯ ತಂದೆಯನ್ನು ಕಳೆದುಕೊಳ್ಳುತ್ತಾರೆ. ಬಾಲ್ಯದಲ್ಲೇ ಕಲೆಯಲ್ಲಿ ಆಸಕ್ತಿ ಹೊಂದಿದ್ದ ಲೆವಿಟ್‌ಗೆ ಫಾರ್ಮಲ್ ಕಲಾ ಶಿಕ್ಷಣ ತೀರಾ ಜಡ ಅನ್ನಿಸುತ್ತಿತ್ತು. ಕಲಿಕೆಯ ಬಳಿಕ, ಸೇನೆಯ ಭಾಗವಾಗಿ ಕೊರಿಯಾ ಸಮರದ ವೇಳೆ ಅಲ್ಲಿಗೆ ತೆರಳಿದ್ದ ಲೆವಿಟ್, ಕೊರಿಯಾ, ಜಪಾನ್‌ಗಳಲ್ಲಿ ಪ್ರವಾಸ ಮಾಡೀ ಹಿಂದಿರುಗಿದ ಬಳಿಕ ನ್ಯೂಯಾರ್ಕಿನಲ್ಲಿ ನೆಲೆಯಾಗುತ್ತಾರೆ. ಅಲ್ಲಿ ಗ್ರಾಫಿಕ್ ಡಿಸೈನರ್ ಆಗಿ, ಪತ್ರಿಕೆಗಳಲ್ಲಿ-ಆರ್ಕಿಟೆಕ್ಟ್ ಕಚೇರಿಯಲ್ಲಿ ಕೆಲಸ ಮಾಡಿದ ಲೆವಿಟ್ ಕಲೆಗೆ ಬದುಕನ್ನು ಮುಡಿಪಾಗಿಡುವುದಕ್ಕಾಗಿ ಉದ್ಯೋಗ ತೊರೆಯುತ್ತಾರೆ. 1961ರ ಹೊತ್ತಿಗೆ ಕಲಾವಿದನಾಗಿ ತನ್ನದೇ ಶೈಲಿಯನ್ನು ರೂಢಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತದೆ.
1969ರ ಹೊತ್ತಿಗೆ ಅವರು ಬರೆದ Paragraphs on Conceptual Art," (1969) ಮತ್ತು"Sentences on Conceptual Art," (1969) ಎಂಬ ಎರಡು ಪ್ರಬಂಧಗಳು ಅವರ ಕಲಾಸಿದ್ಧಾಂತಕ್ಕೆ ತಳಪಾಯವಾಗುತ್ತವೆ. ಆರಂಭದಲ್ಲಿ ಕಲಾ ವಿಮರ್ಶಕರು ಗೆರೆಗಳನ್ನು ಅವುಗಳ ಸಾಂಪ್ರದಾಯಿಕ ಜವಾಬ್ದಾರಿಗಳಿಂದ ಮುಕ್ತಗೊಳಿಸುವ ಲೆವಿಟ್ ಅವರ ವಾದವನ್ನು ಒಪ್ಪದಿದ್ದರೂ 1978ರ ಹೊತ್ತಿಗೆ ಅವರ ಸಿದ್ಧಾಂತ ಜಾಗತಿಕವಾಗಿ ಮಾನ್ಯತೆ ಪಡೆಯತೊಡಗಿತು.
ಹಲವು ಗೋಡೆಚಿತ್ರಗಳು, ಸಾರ್ವಜನಿಕ ಶಿಲ್ಪಗಳಿಗಾಗಿ ಪ್ರಸಿದ್ಧರಾಗಿರುವ ಅವರು ತನ್ನ ಕಲಾಕೃತಿಗಳನ್ನು ಬೇರೆ ಕಲಾವಿದರೊಮ್ದಿಗೆ ವಿನಿಮಯ ಮಾಡಿಕೊಂಡು, ಕಲಾವಿದರಿಗೆ ಬೆಂಬಲ ಜಾಲವೊಂದನ್ನು ರೂಪಿಸಿಕೊಳ್ಳುವ ಮೂಲಕ ಕೂಡ ಕಲಾಜಗತ್ತಿಗೆ ನೆರವಾದರು. ಮೆಸಾಚುಸೆಟ್ಸ್‌ನ ಪ್ರಸಿದ್ಧ ಕಲಾಗ್ಯಾಲರಿ ಮಾಸ್ ಮೊಕಾ (MassMoCA)ದಲ್ಲಿ ಅವರ ಕಲಾಕೃತಿಗಳ ರೆಟ್ರೊಸ್ಪೆಕ್ಟಿವ್ ಪ್ರದರ್ಶನ 2033 ತನಕವೂ ಸತತವಾಗಿ ನಡೆಯಲಿದೆ.
ಹೆಚ್ಚಿನ ಕಾನ್ಸೆಪ್ಚುವಲ್ ಕಲಾವಿದರು ಕೈಗಾರಿಕಾ ಉತ್ಪನ್ನಗಳತ್ತ ತಿರುಗಿಕೊಂಡರೆ, ಲೆವಿಟ್ ಮರ, ಕ್ಯಾನ್‌ವಾಸ್, ಬಣ್ಣಗಳಂತಹ ಸಾಂಪ್ರದಾಯಿಕ ವಸ್ತುಗಳನ್ನೇ ಬಳಸಿದರೂ ವಸ್ತುಗಳ ಬದಲಾಗಿ ಕಾನ್ಸೆಪ್ಟ್ ಮತ್ತು ಸಿಸ್ಟಮ್‌ಗಳು- ಪ್ರೋಸೆಸ್‌ಗಳತ್ತ ಗಮನ ಕೊಡುವ ಮೂಲಕ ಆ ವಸ್ತುಗಳೇ ತಮ್ಮ ಅಲ್ಪಕಾಲಿಕತೆ, ಶೈಥಿಲ್ಯ ಮತ್ತಿತರ ಗುಣಗಳ ಬಗ್ಗೆ ಗಮನ ಸೆಳೆಯುವಂತೆ ಮಾಡಿದರು.
ಸೊಲ್ ಲೆವಿಟ್ ಕುರಿತ ಒಂದು ಮಾತುಕತೆ:
ಸೊಲ್ ಲೆವಿಟ್ ಕುರಿತು ಫ್ರೆಂಚ್ ಕಲಾ ವಿಮರ್ಶಕಿ ವೆರೊನಿಕಾ ರಾಬರ್ಟ್ಸ್ ಅವರ ಉಪನ್ಯಾಸ:
ಚಿತ್ರ ಶೀರ್ಷಿಕೆಗಳು:
ಸೊಲ್ ಲೆವಿಟ್ ಅವರ Art 2000
ಸೊಲ್ ಲೆವಿಟ್ ಅವರ Distorted Cubes (A), (2001)
ಸೊಲ್ ಲೆವಿಟ್ ಅವರ Lines in Four Directions, painted extruded aluminum on building facade (1985)
ಸೊಲ್ ಲೆವಿಟ್ ಅವರ Modular Cube (1979)
ಸೊಲ್ ಲೆವಿಟ್ ಅವರ Parallel curves 2000
ಸೊಲ್ ಲೆವಿಟ್ ಅವರ Shul Print (Six Pointed Star) Linocut (2005)
ಸೊಲ್ ಲೆವಿಟ್ ಅವರ Successive rows of yellow, straight lines; From left to right & orizzontal from top to bottom, 1972
ಸೊಲ್ ಲೆವಿಟ್ ಅವರ wall drawing 305 (1977)
ಸೊಲ್ ಲೆವಿಟ್ ಅವರ Wall Drawing 459, Asymmetrical Pyramid with Color ink washes superimposed, 1985
ಸೊಲ್ ಲೆವಿಟ್ ಅವರ Wall drawing 915 (1999)
ಈ ಅಂಕಣದ ಹಿಂದಿನ ಬರೆಹಗಳು:
ಮನುಷ್ಯ ಆಗಿರೋದು ಅಂದ್ರೆ ಏನು?- ವಿಲಿಯಂ ಕೆಂಟ್ರಿಜ್
“ಸೂಪರ್ ಫ್ಲ್ಯಾಟ್” ಐ ಕ್ಯಾಂಡಿಗಳ ತಕಾಷಿ ಮುರಾಕಾಮಿ
ಅಲ್ಲಿರುವುದು ನನ್ನಮನೆ – ದೊ ಹೊ ಸುಹ್
ದಿ ಲೈಫ್ ಆಫ್ CB: ಅರ್ಥಾತ್, ಕ್ರಿಷ್ಚಿಯನ್ ಬೋಲ್ತನಸ್ಕಿ
ಅಸೆಂಬ್ಲಿಗಳಲ್ಲಿ “ಬಾಕತನ” ತೋರಿಸಿದ ಅರ್ಮಾನ್
ಪ್ರಾಮಾಣಿಕತೆಯೇ ಸೌಂದರ್ಯ- ಜೊರ್ಗ್ ಇಮ್ಮೆಂದ್ರಾಫ್
ನಾಗರೀಕತೆಯ ಒಡಕಿಗೆ ಕನ್ನಡಿ ಹಿಡಿದ ಡೊರಿಸ್ ಸಾಲ್ಸೆದೊ
ಕಾನ್ಸೆಪ್ಚುವಲ್ ಆರ್ಟ್‌ಗೆ ತಳಪಾಯ –ರಾಬರ್ಟ್ ರಾಷನ್‌ಬರ್ಗ್
ಡಿಜಿಟಲ್ ಜಗತ್ತಿನಲ್ಲಿ ಒರಿಜಿನಲ್‌ನ ಹುಡುಕಾಟ – ಥಾಮಸ್ ರಫ್
ಕಲೆ ಜಗತ್ತನ್ನು ಬದಲಾಯಿಸಲೇ ಬೇಕೆಂದಿಲ್ಲ- ಫಿಯೊನಾ ಹಾಲ್
ಜಾಗತೀಕರಣದ ಆಟಗಳ ಬೆನ್ನಟ್ಟಿರುವ ಇಂಕಾ ಶೋನಿಬೇರ್
ಅರ್ಥವಂತಿಕೆಗಾಗಿ ಅರ್ಥ ಕಳೆದುಕೊಳ್ಳಬೇಕೆಂಬ- ಗು ವೆಂಡಾ
ಗದ್ದಲದ ಲೋಕದಲ್ಲಿ ಒಳಗಿನ ಪಿಸುಮಾತು- ನಿಯೊ ಆವ್
ಕಲೆ ಒಂದು ಉತ್ಪನ್ನವಲ್ಲ ಪ್ರಕ್ರಿಯೆ- ನಾಮನ್ ಬ್ರೂಸ್
‘ಇನ್ಫಾರ್ಮೇಷನ್ ಸೂಪರ್ ಹೈವೇ’ ಹೊಳಹು- ನಾಮ್ ಜುನ್ ಪಾಯಿಕ್
ಬದುಕಿನ ಮುಜುಗರಗಳಿಗೆ ಹೊರದಾರಿ- ಸ್ಟೀವ್ ಮೆಕ್ವೀನ್
ಅವ್ಯಕ್ತವನ್ನು ವ್ಯಕ್ತದಿಂದ ವಿವರಿಸುವ ರೀಚಲ್ ವೈಟ್‌ರೀಡ್
ಒಪ್ಪಿತ ನೈತಿಕತೆಯ ದ್ವಂದ್ವಗಳ ಶೋಧ - ಸಾರಾ ಲೂಕಸ್
ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್
“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್
ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್
ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’
ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್
ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್
ಬಾರ್ಬರಾ ಕ್ರುಗರ್ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್
ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್
ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್
“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”
“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”
ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್
ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ
“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”
“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”
“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”
“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”
“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”
“ಒಳಗಣ ಅನಂತ ಮತ್ತು ಹೊರಗಣ ಅನಂತ”
“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ
ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ
ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್
ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್
ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’
ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ
ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್
ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ
ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ
ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.