ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್

Date: 19-01-2021

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಜರ್ಮನಿಯ ಕಂಟೆಂಪೊರರಿ ಆರ್ಟ್ ಕಲಾವಿದ ಒಲಫರ್ ಎಲಿಯಾಸನ್ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದ: ಒಲಫರ್ ಎಲಿಯಾಸನ್ (Olafur Eliasson)
ಜನನ: 05 ಫೆಬ್ರವರಿ, 1967
ಶಿಕ್ಷಣ: ರಾಯಲ್ ಡೇನಿಷ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್
ವಾಸ: ಬರ್ಲಿನ್, ಜರ್ಮನಿ
ಕವಲು: ಕಂಟೆಂಪೊರರಿ ಆರ್ಟ್, ಸಾಮಾಜಿಕ ಪಾಲುದಾರಿಕೆ ಚಳುವಳಿ (Social practice movement)
ವ್ಯವಸಾಯ: ಇನ್ಸ್ಟಾಲೇಷನ್ ಆರ್ಟ್, ಶಿಲ್ಪಗಳು

ಒಲಫರ್ ಎಲಿಯಾಸನ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:
ಒಲಫರ್ ಎಲಿಯಾಸನ್ ಅವರ ವೆಬ್ ಸೈಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಕಲೆಯನ್ನು ಗ್ಯಾಲರಿಗಳ, ಮ್ಯೂಸಿಯಂಗಳ ನಾಲ್ಕು ಗೋಡೆಗಳ ನಡುವಿನಿಂದ ಹೊರಗೊಯ್ದು, ಸಮಾಜಕ್ಕೆ ಪ್ರಸ್ತುತಗೊಳಿಸುವ ಪ್ರಯತ್ನಗಳಲ್ಲಿ ಮುಂಚೂಣಿಯ ಕಲಾವಿದರಾಗಿರುವ ಒಲಫರ್ ಎಲಿಯಾಸನ್ ನಮ್ಮ ಕಾಲದ ಮಹತ್ವದ ಸಮಕಾಲೀನ ಕಲಾವಿದರಲ್ಲೊಬ್ಬರು. ಸಾರ್ವಜನಿಕ ವಲಯದಲ್ಲಿ ವಾಸ್ತುಶಿಲ್ಪಗಳು, ನಾಗರಿಕ ಬದುಕು, ಕಲಾ ಶಿಕ್ಷಣ, ಕಾನೂನು, ಸುಸ್ಥಿರತೆ ಮತ್ತು ಹವಾಮಾನ ಬದಲಾವಣೆಗಳಂತಹ ಸಂಗತಿಗಳಲ್ಲಿ ವ್ಯಕ್ತಿಗತ ಭಾವನೆಗಳು ಮತ್ತು ಅನುಭವಗಳನ್ನು ಸ್ಥೂಲವಾದ ಸಾಮಾಜಿಕ ಅನುಭವಗಳನ್ನಾಗಿ ರೂಪಿಸುವ ಪ್ರಯತ್ನ ಅವರದು. ಇದಕ್ಕಾಗಿ ವಿವಿಧ ರಂಗಗಳ ಪರಿಣತರನ್ನು ಜೊತೆಗೂಡಿಸಿಕೊಂಡು ಸಾಮಾಜಿಕ ವ್ಯವಸ್ಥೆಯಲ್ಲಿ ಸಕಾರಾತ್ಮಕ ಹಸ್ತಕ್ಷೇಪಗಳನ್ನು ನಡೆಸುವ ಮೂಲಕ ಸಂಸ್ಕೃತಿ, ಸಮುದಾಯ, ನಿಸರ್ಗಗಳ ಕುರಿತಾದ ಸ್ಥಾಪಿತ ಯೋಚನೆಗಳನ್ನು ಕಲೆಯ ಮೂಲಕವೇ ಪ್ರಶ್ನಿಸುವ ಒಲಫರ್ ಅವರು ಸಹಜವಾಗಿಯೇ ಈಗ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (UNDP)ದ ಹವಾಮಾನ ಬದಲಾವಣೆ-ಸುಸ್ಥಿರ ಅಭಿವೃದ್ಧಿಗಳ ಸದಾಶಯ ರಾಯಭಾರಿಯು ಹೌದು.

ಜಾಗತೀಕರಣ ಮತ್ತು ಪರಿಸರವಾದದ ಬಗ್ಗೆ ತನ್ನ ಪ್ರೇಕ್ಷಕರು ಯೋಚಿಸುವಂತೆ ಮಾಡುವ ಒಲಫರ್, ಕಲೆ ಬರಿಯ ಸೌಂದರ್ಯ ಅಥವಾ ಅನುಭವವಲ್ಲ ಬದಲಾಗಿ ಜಗತ್ತನ್ನು ಸಹನೀಯಗೊಳಿಸುವ ಪ್ರಯತ್ನಗಳ ಎಚ್ಚರಿಕೆಯ ಗಂಟೆಯೂ ಆಗಬಲ್ಲುದು, ಜನರನ್ನು ಯೋಚನೆಗೆ ಹಚ್ಚಬಲ್ಲುದು ಅನ್ನುತ್ತಾರೆ. ಅವರು ಬೆಳಕು, ನೀರು, ಗಾಳಿ, ಪರಿಸರ – ಹೀಗೆ ಪಂಚಭೂತಗಳನ್ನು ತನ್ನ ಕಲಾಭಿವ್ಯಕ್ತಿಯನ್ನು ಹಿಗ್ಗಿಸುವ ಪರಿಕರಗಳಾಗಿ ಬಳಸುವ ರೀತಿ ಅನನ್ಯ.

ಡೆನ್ಮಾರ್ಕಿನ ಕೋಪನ್‌ಹೆಗನ್‌ನಲ್ಲಿ ಕರಾವಳಿಯ ಟೇಲರ್ ತಾಯಿ ಮತ್ತು ಮೀನಿನ ಬೋಟ್ ಅಡುಗೆಯವರಾಗಿದ್ದ ಹವ್ಯಾಸಿ ಕಲಾವಿದರೊಬ್ಬರ ಮಗನಾಗಿ ಜನಿಸಿದ ಒಲಫರ್ ಐದು ವರ್ಷದವರಿರುವಾಗಲೇ ಹೆತ್ತವರು ವಿಚ್ಚ್ಛೇದಿತರಾಗುತ್ತಾರೆ, ಒಲಫರ್ ತಾಯಿ-ಮಲತಂದೆಯ ಜೊತೆ ಬೆಳೆಯುತ್ತಾರೆ. ಬಾಲ್ಯದಿಂದಲೇ ಕಲೆಯಲ್ಲಿ ಆಸಕ್ತರಾಗಿದ್ದ ಒಲಫರ್ ಶಾಲೆಯಲ್ಲಿ ಬ್ರೇಕ್ ಡಾನ್ಸ್ ತಂಡ ಹೊಂದಿದ್ದು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲೂ ಭಾಗವಹಿಸಿದ್ದಿದೆ. ಡೆನಿಷ್ ರಾಯಲ್ ಅಕಾಡೆಮಿ ಕಾಲೇಜಿನಲ್ಲಿ ಕಲಾಪದವಿ ಪಡೆದ ಬಳಿಕ, ನ್ಯೂಯಾರ್ಕಿನ ಬ್ರೂಕ್ಲಿನ್‌ಗೆ ಕಲಾವಿದರೊಬ್ಬರ ಸಹಾಯಕರಾಗಿ ತೆರಳಿ ಕೆಲಸ ಮಾಡಿದ ಒಲಫರ್ ಅಲ್ಲಿ ಕ್ರಮೇಣ ತತ್ವಶಾಸ್ತ್ರ, ವಿಜ್ಞಾನಗಳ ಕಡೆ ಆಸಕ್ತಿ ಬೆಳೆಸಿಕೊಳ್ಳುತ್ತಾರೆ.

ಕಲಾಪದವಿಯ ಬಳಿಕ, 1995ರಲ್ಲಿ ಬರ್ಲಿನ್ ನಗರದಲ್ಲಿ ತನ್ನ ಸ್ಟುಡಿಯೊ ಸ್ಥಾಪಿಸಿದ ಒಲಫರ್, ಅಲ್ಲಿ ವಾಸ್ತುಶಿಲ್ಪಿಗಳು, ಇಂಜಿನಿಯರ್‌ಗಳು, ಕರಕುಶಲ ಕೆಲಸಗಾರರು, ಸಹಾಯಕರ ನೆರವಿನಿಂದ ತನ್ನ ಕಲಾ ಯೋಜನೆಗಳನ್ನು ನಿರ್ವಹಿಸತೊಡಗಿದರು. 2009-2014ರ ನಡುವೆ ಬರ್ಲಿನ್ ವಿವಿಯಲ್ಲಿ ಪ್ರೊಫೆಸರ್ ಆಗಿ ಕೂಡ ತನ್ನ ಚಿಂತನೆಗಳನ್ನು ಹಂಚಿಕೊಂಡ ಒಲಫರ್, ತನ್ನ ಕಲಾಕೃತಿಗಳ ಮಾರಾಟದ ಲಾಭದ ಒಂದಂಶವನ್ನು ಆಫ್ರಿಕಾದ ತಬ್ಬಲಿ ಮಕ್ಕಳನ್ನು ಸಲಹುವ ತಮ್ಮ ಸಂಸ್ಥೆಗೆ ಒದಗಿಸುತ್ತಾರೆ. ತನ್ನ ಒಲಫರ್ ಎಲಿಯಾಸನ್ ಸ್ಟುಡಿಯೊ ಅಲ್ಲದೆ, 2014ರಲ್ಲಿ ಅದರ್ ಸ್ಪೇಸಸ್ ಎಂಬ ಸ್ಟುಡಿಯೊವನ್ನು ವಾಸ್ತುಶಿಲ್ಪಿ ಸೆಬಾಸ್ಟಿಯನ್ ಬೆಹ್ಮನ್ ಅವರ ಜೊತೆ ಸೇರಿ ನಿರ್ಮಿಸಿರುವ ಒಲಫರ್, ವಿಜ್ಞಾನ, ವಾಸ್ತುಶಿಲ್ಪ, ಜಾಮೆಟ್ರಿ, ಬಾಹ್ಯಾಕಾಶ, ಪರಿಸರ ಮತ್ತಿತರ ಅಂತರ್-ಶಿಸ್ತಿನ ಪ್ರಾಯೋಗಿಕ ಕಲಾ ಯೋಜನೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಅಯಿ ವೇಯಿವೇಯಿ ಅವರಂತೆಯೇ ಕಲೆಗೊಂದು ಸಾಮಾಜಿಕ ಹೋರಾಟದ ಸ್ವರೂಪವನ್ನು ನೀಡಿರುವ ಒಲಫರ್, ಆ ಕಾರಣಕ್ಕಾಗಿಯೇ ಪ್ರಭಾವೀ ಕಲಾವಿದ.

ಅವರು ವಿದ್ಯಾರ್ಥಿಯಾಗಿದ್ದಾಗಲೇ ರಚಿಸಿದ ಇಬ್ಬನಿಯ ಬಣ್ಣಗಳ ಕಾರಂಜಿ Beauty (1993),ಆವರ ಆರಂಭಿಕ ಹಂತದ ಪ್ರಸಿದ್ಧ ಕಲಾಕೃತಿ ventilator (1997), ಪರಿಸರದ ಕುರಿತ ಅವರ ಮೊದಲ ಕಲಾಕೃತಿ Green River (1998), ಲಂಡನ್‌ನ ಟೇಟ್ ಮಾಡರ್ನ್‌ನಲ್ಲಿ ಅವರು ರಚಿಸಿದ The weather project (2003), ಅವರ ಪ್ರಸಿದ್ಧ ಕಲಾಕೃತಿ New York City Waterfalls (2008), your rainbow panorama (2011), ಕಲಾಕೃತಿ ಮಾತ್ರವಲ್ಲದೇ ವಿದ್ಯುಚ್ಛಕ್ತಿ ಇಲ್ಲದ ಆಫ್ರಿಕನ್ ಹಳ್ಳಿಗಳಲ್ಲಿ ಹಲವೆಡೆ ಬೆಳಕಿನ ಮೂಲವೂ ಆಗಿರುವ Little Sun (2012), Ice Watch (2014), Glacial rock flowe garden (2016) ಒಲಫರ್ ಅವರ ಮಹತ್ವದ, ಜಗದ್ವಿಖ್ಯಾತ ಕಲಾಕೃತಿಗಳಲ್ಲಿ ಕೆಲವು.

ಸದ್ಯ ಅವರ “Unreal city” ಕಲಾಪ್ರದರ್ಶನ ಆಗ್ಮೆಂಟೆಡ್ ರಿಯಾಲಿಟಿ ತಂತ್ರಜ್ಞಾನವನ್ನು ಬಳಸಿಕೊಂಡು ಲಂಡನ್‌ನಲ್ಲಿ ನಡೆಯುತ್ತಿದೆ. ಕೊರೊನಾ ಸಂದರ್ಭದಲ್ಲಿ ನಡೆಯುತ್ತಿರುವ ಈ ಪ್ರದರ್ಶನದ ಬಗ್ಗೆ ಅವರು ಹೀಗೆ ಹೇಳಿದ್ದಾರೆ: ‘The current pandemic has caused immeasurable suffering and disrupted so much of our everyday existence together. This is especially true for those of us who value and take part in cultural life. Because many of the important cultural sites that we take for granted are all closed – cinemas, theatres, concert houses, clubs, museums and stadiums – the only public spaces where we can move about safely together is outdoors, in the shared space of the city. It’s important to celebrate – even now – that public space belongs to all of us and that it is, in fact, very valuable.’

ಲೀಡರ್ಸ್ ವಿದ್ ಲಾಕಾ (ಬ್ಲೂಮ್‌ಬರ್ಗ್ ಟಿವಿ) ಕಾರ್ಯಕ್ರಮದಲ್ಲಿಒಲಫರ್ ಎಲಿಯಾಸನ್ ಪರಿಚಯ:

ಒಲಫರ್ ಎಲಿಯಾಸನ್ ಅವರ ಉಪನ್ಯಾಸ, ಅಮೆರಿಕದ ಎಂಐಟಿ ವಿವಿಯಲ್ಲಿ:

ಚಿತ್ರ ಶೀರ್ಷಿಕೆಗಳು

ಒಲಫರ್ ಎಲಿಯಾಸನ್ ಅವರ Beauty (1993)

ಒಲಫರ್ ಎಲಿಯಾಸನ್ ಅವರ Glacial rock flower garden (2016)

ಒಲಫರ್ ಎಲಿಯಾಸನ್ ಅವರ Green river (1998)

ಒಲಫರ್ ಎಲಿಯಾಸನ್ ಅವರ Ice watch (2014)

ಒಲಫರ್ ಎಲಿಯಾಸನ್ ಅವರ Little sun (2012)

ಒಲಫರ್ ಎಲಿಯಾಸನ್ ಅವರ New York City water falls (2008)

ಒಲಫರ್ ಎಲಿಯಾಸನ್ ಅವರ The weather project (2003)

ಒಲಫರ್ ಎಲಿಯಾಸನ್ ಅವರ Unreal city (2020)

ಒಲಫರ್ ಎಲಿಯಾಸನ್ ಅವರ Ventilator (1997)

ಒಲಫರ್ ಎಲಿಯಾಸನ್ ಅವರ Waterfalls ಸರಣಿ (2016) Versailles, France.

ಒಲಫರ್ ಎಲಿಯಾಸನ್ ಅವರ Your rainbow panorama (2011)

ಈ ಅಂಕಣದ ಹಿಂದಿನ ಬರೆಹಗಳು:

ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್

“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”

“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”

ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್

ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ

“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”

“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”

“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”

“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”

“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”

“ಒಳಗಣ ಅನಂತ ಮತ್ತು ಹೊರಗಣ ಅನಂತ”

“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ

ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ

ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್

ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್

ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’

ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ

ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್

ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ

ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ

ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...