Date: 21-12-2024
Location: ಬೆಂಗಳೂರು
ಮಂಡ್ಯ: `ಜಗತ್ತು ಡಿಜಿಟಲೀಕರಣಗೊಳ್ಳುತ್ತಾ ಭಾವನೆಗಳಿಗೆ, ಮಾನಸಿಕ, ದೈಹಿಕ ಸಂಗಾತಿಗೆ ಹೆಚ್ಚಾಗಿ ಸಂಭಂದಗಳಿಗೂ ಬೆಲೆ ಇಲ್ಲದಂತಾಗಿದೆ,' ಎಂದು ಮಧು ವೈ. ಎನ್ ಹೇಳಿದರು.
ಮಂಡ್ಯದಲ್ಲಿ ಡಿ.20, 21, 22ರಂದು ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ನಗರ ಹೊರವಲಯದ ಶ್ರೀನಿವಾಸಪುರ ಬಳಿ "ಕರ್ನಾಟಕ ಚಕ್ರವರ್ತಿ ಚಿಕ್ಕದೇವರಾಜ ಒಡೆಯರ್ ಸಮನಾಂತರ ವೇದಿಕೆ - 01" ರಲ್ಲಿ “ಸೃಜನಶೀಲತೆ - ವಿದ್ಯುನ್ಮಾನ ಮಾಧ್ಯಮಗಳ ಸವಾಲುಗಳು” ಗೋಷ್ಠಿಯಲ್ಲಿ ಕೃತಕ ಬುಧಿಮತ್ತೆ ಹಾಗೂ ಚಾಟ್ ಜಿ. ಪಿ. ಟಿ ಸೃಷ್ಟಿಸಿರುವ ಸವಾಲುಗಳನ್ನು ತಮ್ಮ ವಿಚಾರಧಾರೆಯನ್ನು ಸಾಹಿತ್ಯಾಸಕ್ತರ ಮುಂದಿಟ್ಟರು.
"ಎ.ಐ ಗಳ ಅತೀ ಸೌಮ್ಯ ವರ್ತನೆಯಿಂದಾಗಿ ಮುಂದಿನ ಪೀಳಿಗೆ ಮಕ್ಕಳು ಬಹಳ ತೊಂದರೆಗೀಡಾಗುದಂತು ಖಂಡಿತ. ಎಐ ಎಂದರೆ ಒಂದು ತಂತ್ರಜ್ಞಾನ. ಚಾಟ್ ಜಿಪಿಟಿ ಎಂದರೆ ಆ ತಂತ್ರಜ್ಞಾನವನ್ನು ಬಳಸಿಕೊಂಡು ತಯಾರಿಸಿರುವ ಉಪಕರಣ. ಇನ್ನೂ ಸ್ವಲ್ಪ ಒಳಗೆ ಹೋಗಿ ನೋಡಿದರೆ ಎಐ ಎಂಬ ವಿಶಾಲ ಸಾಗರದಲ್ಲಿ ನ್ಯಾಚುರಲ್ ಲಾಂಗ್ರೇಜ್ ಪ್ರೊಸೆಸಿಂಗ್. ಅಂದರೆ ಎನ್ ಎಲ್ ಪಿ ಎಂಬ ಉಪಭಾಗದಲ್ಲಿ ಬರುವ ಉಪಕರಣ. ಎನ್ ಎಲ್ ಪಿ ಎಂದರೆ ಮನುಷ್ಯ ಭಾಷೆಯನ್ನು ಅರ್ಥಮಾಡಿಕೊಂಡು ಮನುಷ್ಯನ ಭಾಷೆಯಲ್ಲಿಯೇ ಉತ್ತರಿಸುವ ಕೌಶಲ್ಯ ಎ. ಐ ಯಿಂದ ಪಾರಾಗಲು ಸಾಧ್ಯವಿಲ್ಲಾ. ಆದರೆ ಅದಕ್ಕೆಂದು ತಯಾರಾಗಿರಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಡಾ. ಚಿದಾನಂದ ಗೌಡ ಅವರು ವಹಿಸಿದ್ದರು. ಕನ್ನಡ ಸಾಹಿತ್ಯ ಮತ್ತು ಸಾಮಾಜಿಕ ಜಾಲತಾಣಗಳು ವಿಷಯದ ಕುರಿತು ಓಂಶಿವಪ್ರಕಾಶ್ ಅವರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.
ಹಿರಿಯ ಮಾಧ್ಯಮ ತಜ್ಞರಾದ ಜಿ. ಎನ್ ಮೋಹನ್ ಅವರು, "ನಾವು ತಂತ್ರಜ್ಞಾನವನ್ನು ಅತೀ ಆಳವಾಗಿ ಅತೀವೇಗವಾಗಿ ಬಳಸುತ್ತಿದ್ದೇವೆ. ಕನ್ನಡಕ್ಕೆ ತಂತ್ರಜ್ಞಾನದ ಅವಶ್ಯಕತೆ ತುಂಬಾ ಇದೆ. ಅದರಲ್ಲಿ ಡಿಜಿಟಲ್ ಕನ್ನಡ ಪ್ರಾಧಿಕಾರ ಅತಿಮುಖ್ಯವಾಗಿದೆ. ಭಾಷೆಯ ಅಳಿವು ಉಳಿವು ಭಾಷೆಯ ಬಳಕೆ ಮೇಲೆ ನಿಂತಿರುತ್ತದೆ," ಎಂದು ಗೋಷ್ಟಿಯಲ್ಲಿ ಆಶಯ ನುಡಿಗಳನ್ನಾಡಿದರು.
"ಯಾವುದೇ ಫಲಾಪೇಕ್ಷೆ ಇಲ್ಲದೆ ನುಡಿ ಬರಹ ಮತ್ತು ಯುನಿಕೋಡ್ ಫಾಂಟ್ಗಳ ರಚನೆಗಾಗಿ ದುಡಿದ ಕೆ. ಪಿ ರಾವ್ ಮತ್ತು ಶೇಷಾದ್ರಿ ವಾಸು ಸೇರಿದಂತೆ ಅನೇಕ ಕನ್ನಡಿಗ ತಂತ್ರಜ್ಞರನ್ನು ಸ್ಮರಿಸುತ್ತಾ, ಆಡಿಯೋ ಪುಸ್ತಕದಿಂದಾಗಿ ಅನೇಕ ಕನ್ನಡ ಕಂಠ ಕಲಾವಿದರಿಗೆ ಉದ್ಯೋಗ ದೊರೆಯುವಂತಾಗಿದೆ. ತಂತ್ರಜ್ಞಾನದಲ್ಲಿ ಕನ್ನಡ ಭಾಷೆಯ ಸುಧಾರಣೆಯು ಕೇವಲ ಬಳಕೆಯ ದೃಷ್ಟಿಯಲ್ಲಿ ಮಾತ್ರವಲ್ಲದೆ ಕನ್ನಡವನ್ನು ಅನ್ನದ ಭಾಷೆಯನ್ನಾಗಿ ರೂಪಿಸುವ ಉದ್ದೇಶವು ಇದೆ. ತಂತ್ರಜ್ಞಾನವು ನಿಂತ ನೀರಲ್ಲ ಅದೊಂದು ಸಮುದ್ರದೊಳಗೆ ಹರಿಯುತ್ತಿರುವ ತಣ್ಣನೆಯ ನದಿಯಂತೆ ಕಾಲ ಕಳೆದು ಹೊಸ ಹೊಸ ಆವಿಷ್ಕಾರಗಳು ಪ್ರಕಟಗೊಂಡಂತೆ ಅದರ ಪ್ರಾಮುಖ್ಯತೆ ಮತ್ತು ಬಳಕೆ ಹೆಚ್ಚಾಗುತ್ತಲೇ ಸಾಗುತ್ತಿವೆ.ಈ ಆಧುನಿಕ ಕಾಲ ಘಟ್ಟದಲ್ಲಿ ತಂತ್ರಜ್ಞಾನಕ್ಕೆ ತಕ್ಕಂತೆ ಪ್ರತಿಯೊಂದು ವಿಷಯವು ಹೊಂದಿಕೊಂಡು ಬದಲಾಗುವುದು ಕೂಡ ಅಷ್ಟೇ ಅನೀವಾರ್ಯವಾಗಿದೆ," ಎಂದು “ತಂತ್ರಜ್ಞಾನ ಯುಗದಲ್ಲಿ ಕನ್ನಡದ ಅನುಸಂದಾನ” ವಿಷಯದ ಬಗೆಗೆ ಶಂಕರ ಸಿಹಿಮೊಗ್ಗೆ ಅವರು ಹೇಳಿದರು.
ಅತಿಥಿಗಳ ಸ್ವಾಗತವನ್ನು ಮಡ್ಡೀಕೆರೆ ಗೋಪಾಲ್ ಮತ್ತು ವಂದನಾರ್ಪಣೆಯನ್ನು ಬಿ.ಟಿ ನಾಗೇಶ್ ಮಾಡಿದರು. ಕಾರ್ಯಕ್ರಮವನ್ನು ರುದ್ರೇಶ್ ಅವರಿ ನಿರೂಪಿಸಿದರು.
ಮಂಡ್ಯ: ಕನ್ನಡ ನಾಡು ಚೆನ್ನಾಗಿ ಬೆಳೆಯಬೇಕು ಅಂದ್ರೆ ಈ ನೆಲದಲ್ಲಿರುವ ಎಲ್ಲವೂ ಬೆಳೆಯಬೇಕು. ಭಾಷೆ ಆಡುವುದರಿಂದ, ಬರೆಯುವು...
ಮಂಡ್ಯ: "ಅಲ್ಪ ಮಾಹಿತಿಯ ದತ್ತಾಂಶವು, ವಿಪತ್ತು ನಿರ್ವಾಹಣೆಯಲ್ಲಿ ಅಲ್ಪ ಪ್ರಮಾಣದ ತೊಡಕನ್ನು ಕಡಿಮೆಗಳಿಸುತ್ತದೆ,&q...
ಮಂಡ್ಯ: ಡಿ. 21 ರಂದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ “ಸಂಚಿ ಹೊನ್ನಮ್ಮ ಮತ್ತು ಕಾದಂಬರಿ ಸಾಮ್ರಾಜ್...
©2024 Book Brahma Private Limited.