ಬೆಂಗಳೂರು ಲಿಟ್ ಫೆಸ್ಟ್ ನಲ್ಲಿ ‘ಮಕ್ಕಳ ಸಾಹಿತ್ಯದ ಕಲರವ’ ಹೀಗಿರಲಿದೆ ನೋಡಿ...

Date: 05-12-2024

Location: ಬೆಂಗಳೂರು


ಬೆಂಗಳೂರು: ಮಕ್ಕಳನ್ನು ಸಾಹಿತ್ಯಿಕವಾಗಿ ಬಲಪಡಿಸುವ ನಿಟ್ಟಿನಲ್ಲಿ ಸಾಹಿತ್ಯ ಸಮ್ಮೇಳನಗಳಲ್ಲಿ ಮಕ್ಕಳಿಗೋಸ್ಕರ ವೇದಿಕೆಗಳನ್ನು ಕಲ್ಪಿಸಲಾಗುತ್ತಿದ್ದು, ಇಂತಹ ವೇದಿಕೆಗಳು ಮಕ್ಕಳಿಗೆ ಉತ್ತಮ ಸಾಹಿತ್ಯವನ್ನು ಹಂಚಿಕೊಳ್ಳಲು ಮತ್ತು ಚಿಕ್ಕ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಪುನರುಜ್ಜೀವನಗೊಳಿಸುವ ಸಹಕಾರಿಯಾಗುತ್ತಿದೆ. ಡಿ.14 ಮತ್ತು 15ರಂದು ಕುಮಾರಕೃಪಾ ರಸ್ತೆಯಲ್ಲಿರುವ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ನಡೆಯಲಿರುವ ಬೆಂಗಳೂರು ಲಿಟ್ ಫೆಸ್ಟ್ ನಲ್ಲಿಯೂ ಮಕ್ಕಳ ಸಾಹಿತ್ಯವನ್ನು ಪ್ರೋತ್ಸಾಹಿಸುವ ಉದ್ದೇಶದೊಂದಿಗೆ ವಿಭಿನ್ನವಾದ ಮೂರು ವೇದಿಕೆಗಳನ್ನು ಮಕ್ಕಳಿಗಾಗಿಯೇ ಕಲ್ಪಿಸಲಾಗಿದೆ.

ಈ ವೇದಿಕೆಗಳು ಮಕ್ಕಳಿಗೆ ಕಥೆ ಹೇಳುವುದರ ಜೊತೆಗೆ ವಿವಿಧ ವಿನೋದ ಚಟುವಟಿಕೆಗಳು, ಬೊಂಬೆಯಾಟ, ಕಲೆ ಮತ್ತು ಕರಕುಶಲತೆ ಪ್ರದರ್ಶನಗಳನ್ನು ನೀಡಲಿವೆ. ಅಷ್ಟೇಅಲ್ಲದೆ ಮಕ್ಕಳು ಪುಸ್ತಕಗಳ ಓದುವಿಕೆಯಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಮತ್ತು ಅವರನ್ನು ಸಾಹಿತ್ಯದ ಕಡೆಗೆ ಸೆಳೆಯುವುದರ ಬಗೆಗಿನ ಪ್ಯಾನಲ್ ಚರ್ಚೆಗಳು ಮತ್ತು ಕಾರ್ಯಾಗಾರಗಳಿರಲಿವೆ.

ಡಿ. 14 ಶನಿವಾರದಂದು Munchkin Land ವೇದಿಕೆಯು 4+ ವರ್ಷ ವಯೋಮಿತಿಯ ಮಕ್ಕಳ ಚಟುವಟಿಕೆಗಳನ್ನು ಒಳಗೊಂಡಿದೆ. ಮೊದಲ ದಿನ ಡಿ.14ರ ಶನಿವಾರದಂದು ಬೆಳಗ್ಗೆ 10.15 ರಿಂದ ಶ್ರೀದೇವಿ ಸುನೀಲ್ ಅವರಿಂದ `Puppets and Stories with Gruffalo', ಆದಿತಿ ರಾವ್ ಅವರಿಂದ 11 ಗಂಟೆಗೆ ‘Will Goondi Come Home?’, 11.30 ರಿಂದ ವೈಷ್ಣವಿ ಗಿರಿ ಅವರಿಂದ ‘Into the Wild’, 12 ಗಂಟೆಗೆ ಅನುಪಮಾ ಬೆಣಚಿನಮರಡಿ ಅವರಿಂದ ‘ಕೀಟಗಳ ಸ್ನೇಹದ ರಹಸ್ಯ ಕಥೆ’(A Tale of Friendship and Discovery), 12.30 ರಿಂದ ರಿದ್ಧಿ ಮನಿಯಾರ್ ದೊಡಾ ಅವರಿಂದ ‘Drip Drip Lick Lick Meow Meow’, ಮಧ್ಯಾಹ್ನ 1 ಗಂಟೆಯಿಂದ ಅಲಂಕೃತ ಅಮಾಯ ಅವರಿಂದ ‘Can you Draw Love?’, 1.30ಕ್ಕೆ ಪದ್ಮಶ್ರೀ ಮುರಳಿ ಅವರಿಂದ ‘Forest Colors’, 2.00 ಗಂಟೆಗೆ ವಿಭಾ ಸೂರ್ಯ ಅವರಿಂದ ‘Create a Potluck Lunch!’, 2.30ಕ್ಕೆ ಅಶೋಕ್ ನಾಗ್ಪಾಲ್, ಭಾಗೀರಥಿ ಮನಚಾ ‘Whispers of Wonder: Timeless Tales for Little Ones’, 3.00 ಗಂಟೆಯಿಂದ ಶರಣ್ಯ ಕುನ್ನತ್ ಅವರಿಂದ ‘Lakshmi's Little Bird’, 3.30ಕ್ಕೆ ರಾಮೇಂದ್ರ ಕುಮಾರ್ ಅವರಿಂದ ‘A Tale Of Tails’, 4 ಗಂಟೆಗೆ ಶಾಲಿನಿ ಮೂರ್ತಿ ಅವರಿಂದ ‘ಕಥೆಗಳ ತೋರಣ’(Kathegala Thorana), 4.30ಕ್ಕೆ ಶುಭೀಕ್ಷಾ ವೆಂಕಟೇಶ್ ಅವರಿಂದ ‘Rehabilitating Urban Wildlife’, 5.00 ಗಂಟೆಗೆ ಸರಯೂ ಶಿವಾನಂದಂ, ವರ್ಣಿಕಾ ಸಂಪತ್ ಕುಮಾರ್ ಅವರಿಂದ ‘Paint-a-Tale’, 5.45ಕ್ಕೆ ಇನೇಶ್ ಶೆಣೈ, ಇಶಾನ್ ಶೆಣೈ ಅವರಿಂದ ‘An Evening of Magic’ ಕಾರ್ಯಕ್ರಮ ನಡೆಯಲಿದೆ.

ಡಿ. 14 ಶನಿವಾರದಂದು Emerald City ವೇದಿಕೆಯು 8+ ವರ್ಷ ವಯೋಮಿತಿಯ ಮಕ್ಕಳ ಚಟುವಟಿಕೆಗಳನ್ನು ಒಳಗೊಂಡಿದೆ. 11 ಗಂಟೆಗೆ ಸನಿದ್ ಆಸಿಫ್ ಅಲಿ ಮತ್ತು ಪ್ರಣವ್ ಹೊಳ್ಳ ಅವರಿಂದ ‘Making of Detective Nemma: How to Create a Comic Strip?’, 11.30ಕ್ಕೆ ಗೋಕುಲ್ ರಾಟಕೊಂಡ ಅವರಿಂದ ‘Chill Skills Factory: Building Your Happy Place’, 12 ಗಂಟೆಗೆ ರಿತು ಐಲಾನಿ ಅವರಿಂದ ‘My World: A Creative Writing Workshop’, 12.30ಕ್ಕೆ ತನ್ಮಯ್ ಆಚಾರ್ಯ ಅವರಿಂದ ‘Stories through Silhouettes’, 1 ಗಂಟೆಗೆ ಪಿಕಾ ನಾನಿ ಅವರಿಂದ ‘Puzzle time with Egghead’, 1.30 ರಿಂದ ಸಾಹಿತ್ಯಾ ರಾಣಿ ಅವರಿಂದ Dear ‘World’, 2.00 ಗಂಟೆಯಿಂದ ಕ್ಷಿತೀಶ್ ಪಾಧಿ ಅವರಿಂದ ‘Shiva and Jalandhar’, 2.30 ಕ್ಕೆ ಕಾವ್ಯಾ ಶ್ರೀನಿವಾಸ್ ಅವರಿಂದ ‘Birds, Fun and Games: A Salim Ali Exploration’, 3 ಗಂಟೆಗೆ ಜೆನ್ನಿ ಪಿಂಟೋ ಅವರಿಂದ ‘The Magical Everything’, 3.30ಕ್ಕೆ ಅನುಪಮಾ ಪುರೋಹಿತ್, ಡೆವಿನಾ ಅವರಿಂದ ‘Roots and Shoots: Family Trees and Storytelling for Young Explorers’, 4 ಗಂಟೆಗೆ ಸ್ಮೃತಿ ದೇವಕುಮಾರ್ ಅವರಿಂದ ‘A Song From Where I Live’, 4.30ಕ್ಕೆ ಸಂಜನಾ ಗಣೇಶ್ ಅವರಿಂದ ‘Can you Kick it like Rukku?’, 5.00 ಗಂಟೆಗೆ ಪ್ರೀಯಾ ಮುತ್ತುಕುಮಾರ್ ಅವರಿಂದ ‘Write, Seal, Deliver: Letters to Express Yourself’ ಕಾರ್ಯಕ್ರಮಗಳು ನಡೆಯಲಿವೆ.

ಡಿ. 14 ಶನಿವಾರದಂದು Land of Oz ವೇದಿಕೆಯು 12+ ವರ್ಷ ವಯೋಮಿತಿಯ ಮಕ್ಕಳ ಚಟುವಟಿಕೆಗಳನ್ನು ಒಳಗೊಂಡಿದೆ. 11 ಗಂಟೆಗೆ ಅಂದಲೀಬ್ ವಾಜಿದ್ ಅವರಿಂದ ‘The Henna Start-up’, 11.30ಕ್ಕೆ ಅಲಕಾ ರಾಜನ್ ಸ್ಕಿನ್ನರ್ ಅವರಿಂದ ‘From Memories to Graphic Memoir’, 12ಗಂಟೆಗೆ ಗುಂಜನ್ ಸರಾಫ್ ಅವರಿಂದ ‘Don't Juggle Books!’, 12.30ಕ್ಕೆ ಅರುಣವ ಸಿನ್ಹಾ ಅವರಿಂದ ‘From Zero to Hero: Build Your Own Super Adventure’, 1 ಗಂಟೆಗೆ ಅರುಣ್ ಶ್ರೀರಾಮ್ ಅವರಿಂದ ‘And Over Or: Standup Comedy and You’, 1.30ಕ್ಕೆ ಅಶ್ವಿತಾ ಜಯಕುಮಾರ್ ಅವರಿಂದ ‘Mughal Emperors and their Journeys’, 2.00 ಗಂಟೆಗೆ ಆಶಾ ತೆರೆಸ್, ಜೀವನನಾಥ ವಿಶ್ವನಾಥ್ ಅವರಿಂದ ‘Chavittu Nadakam and Comics’, 2.30ಕ್ಕೆ ಮನ್ಸೀ ಶಾ ಅವರಿಂದ ‘Drama in Action: Theatre Games to Boost Your Creativity’, 3.30ಕ್ಕೆ ವರ್ಧಿನಿ ಅಮೀನ್ ಅವರಿಂದ ‘The Forestborns’, 4 ಗಂಟೆಗೆ ಆರ್ತಿ ಜೈನ್ ಅವರಿಂದ ‘Don't Climb on the Bullock Cart’, 4.30ಕ್ಕೆ ಮೇನಕಾ ರಾಮನ್ ಅವರಿಂದ ‘How to Win an Election: Navigating School Elections’, 5.00 ಗಂಟೆಗೆ ಮಾಲ ಕುಮಾರ್ ಅವರಿಂದ ‘Travelling Treasures: 100 Stories of How Things Came to India’ ಕಾರ್ಯಕ್ರಗಳು ನಡೆಯಲಿದೆ.

ಲಲಿತ್‌ ಅಶೋಕ್‌ ಹೋಟೆಲ್‌ನ ಮನೋಹರ ಉದ್ಯಾನವು ನೂರಾರು ಉತ್ಸಾಹಿ ಮಕ್ಕಳ ಚಟುವಟಿಕೆಗೆ ಸಾಕ್ಷಿಯಾಗಲಿದೆ. ಮಕ್ಕಳಲ್ಲಿ ಸಾಹಿತ್ಯ ಆಸಕ್ತಿಯನ್ನು ಬೆಳೆಸಲು ಇದೊಂದು ಉತ್ತಮ ವೇದಿಕೆಯಾಗಿದೆ.

MORE NEWS

ಗಣಿನಾಡು ಬಳ್ಳಾರಿಯಲ್ಲಿ ಮುಂದಿನ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

22-12-2024 ಮಂಡ್ಯ

ಕನ್ನಡ ಸಾಹಿತ್ಯ ಪರಿಷತ್ತಿನ ಸಭೆಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿಯಲ್ಲಿ ಆಯೋಜಿಸಲು ನಿರ...

ಸರ್ಕಾರಿ ಶಾಲೆಗಳ ಜಮೀನು ಒತ್ತುವರಿಗೆ ನಾವೇ ದನಿಯಾಗಬೇಕು: ಪುರುಷೋತ್ತಮ ಬಿಳಿಮಲೆ 

22-12-2024 ಮಂಡ್ಯ

ಮಂಡ್ಯ:  100 ವರ್ಷ ಪೂರೈಸಿದ ಶಾಲೆಗಳಿಗೆ ಆಟದ ಮೈದಾನ ಇತ್ತು. ಇಂದು ಅವು ಇಲ್ಲ. ಸ್ಥಳೀಯ ರಾಜಕಾಣಿಗಳ, ಪ್ರಭಾವಿಗಳ ...

ಸಾಹಿತ್ಯ ಸೂರ್ಯೋದಯಕ್ಕೆ ಸಾಕ್ಷಿಯಾದ ಪುಸ್ತಕ ಮಳಿಗೆ

22-12-2024 ಮಂಡ್ಯ

ಮಂಡ್ಯ: ಮಳೆ ತೇವವನ್ನು ಹೊತ್ತಿಟ್ಟ ದಾರಿ, ಕಾಲುಜಾರಿ ಬಿದ್ದ ಪುಟಗಳ ಕಥೆಗಳಂತಿದ್ದವು. ಜನರು ಗಲುಬೆ ಗದ್ದಲಗಳ ನಡುವೆ ಪುಸ...