ಬರಹಕ್ಕೆ ಬೇಕಾದಂತಹ ಸಾರ ಸಂಗ್ರಹ ಗುಣ ಮಹಾಂತೇಶ ಅವರಲ್ಲಿದೆ; ಸಿದ್ಧರಾಮಯ್ಯ

Date: 05-10-2024

Location: ಬೆಂಗಳೂರು


ಬೆಂಗಳೂರು: ಮೈಸೂರಿನ ಕವಿತಾ ಪ್ರಕಾಶನ ಹಾಗೂ ಡಾ. ಮಹಾಂತೇಶ ಬಿರಾದಾರ ಅವರ ‘ಮುಖಪುಸ್ತಕದ ಮರೆಯದ ಮುಖಗಳು’ ಕೃತಿಯ ಲೋಕಾರ್ಪಣಾ ಕಾರ್ಯಕ್ರಮವು 2024 ಅ. 05 ಶನಿವಾರದಂದು ನಗರದ ಬಸವ ಸಮಿತಿಯ ಅನುಭವ ಮಂಟಪ ಸಭಾಂಗಣದಲ್ಲಿ ನಡೆಯಿತು.

ಕೃತಿಯನ್ನ ಲೋಕಾರ್ಪಣೆಗೊಳಿಸಿ ಮಾತನಾಡಿದ ಹಿರಿಯ ಚಿಂತಕ ಡಾ.ಎಸ್.ಜಿ. ಸಿದ್ಧರಾಮಯ್ಯ ಅವರು, "ಮುಖಪುಟದಿಂದ ಹಿಡಿದು ಈ ಕೃತಿಯಲ್ಲಿರುವ ಎಲ್ಲಾ ಭಾವ ಚಿತ್ರಗಳು, ಅನುಭವದ ನಿರೂಪಣೆಗಳೆಲ್ಲವೂ ಸರ್ವಾಂಗಸುಂದರವಾಗಿ ಮೂಡಿಬಂದಿದೆ. ಕೃತಿಯನ್ನು ಓದುತ್ತಾ ಹೋದಂತೆ ನನಗೆ ಮಹಾಂತೇಶ ಬಿರಾದಾರ ಅವರ ವ್ಯಕ್ತಿತ್ವದ ಅನಾವರಣವಾಯಿತು. ಅವರಲ್ಲಿ ಇಡೀ ಬಿಜಾಪುರ ಅಷ್ಟೇಅಲ್ಲ, ಇಡೀ ಕರ್ನಾಟಕ ಹಾಗೂ ಹೊರಭಾಗದಲ್ಲಿರುವಂತಹ ಎಲ್ಲ ಕನ್ನಡಿಗರು ಕೂಡ ಒಂದು ರೀತಿಯೊಳಗೆ ಬಳಿಸಾಲು ಬಳಗದ ಪ್ರಜ್ಞೆಯಲ್ಲಿ ಅವರೆದೆಯೊಳಗೆ ತುಂಬಿದ್ದಾರೆ. ಆ ದೃಷ್ಟಿಯಿಂದ ಕೃತಿಯೊಳಗೆ ಒಬ್ಬರಲ್ಲ, ಇಬ್ಬರಲ್ಲ, ಬರೀ ಒಂದು ಕ್ಷೇತ್ರವಲ್ಲ, ಎಲ್ಲ ಕ್ಷೇತ್ರಕ್ಕೆ ಸಂಬಂಧಪಟ್ಟಂತಹ ವ್ಯಕ್ತಿ ವಿಶೇಷತೆಗಳನ್ನು ಒಳಗೊಂಡಂತಹ ಮಾನ್ಯರು, ಮಹನೀಯರು ಇಲ್ಲಿ ಜಾಗ ಪಡೆದುಕೊಂಡಿದ್ದಾರೆ. ವೈದ್ಯರು, ವಕೀಲರು, ವಿದ್ಯಾರ್ಥಿಗಳು, ಕೃಷಿಕರು, ಬಡವರು, ಸಾಧಕರು, ಕ್ರೀಡಾಪಟುಗಳು, ಸಾಧಕರು, ಸಾಹಿತಿಗಳು ಸೇರಿದಂತೆ ಅನೇಕರ ಪರಿಚಯವನ್ನು ಇಲ್ಲಿ ಕಾಣಬಹುದು. ಬಹಳ ಆಶ್ಚರ್ಯವೆಂಬಂತೆ ಅವರು ಬರೆಯುವುದು ಅವರು ಬರೆಯುವುದು ಒಂದು ಪುಟ, ಎರಡು ಪುಟ. ಆದರೆ ಅಷ್ಟು ಚಿಕ್ಕ ಬರೆಹದೊಳಗೆ, ಅವರ ವ್ಯಕ್ತಿತ್ವವನ್ನು ಮಾತ್ರವಲ್ಲದೇ, ಅವರ ಬಗೆಗಿನ ಪೂರ್ವೇತಿಹಾಸವನ್ನು ಒಳಗೊಂಡಂತೆ ಒಂದು ವ್ಯಕ್ತಿಚಿತ್ರವನ್ನು ಕಟ್ಟಿಕೊಡುತ್ತಾರೆ. ಇದು ವಿಶೇಷ. ಬರಹಕ್ಕೆ ಬೇಕಾದಂತಹ ಸಾರ ಸಂಗ್ರಹ ಗುಣ ಅದು ಎಲ್ಲರಿಗೂ ಬರುವುದಿಲ್ಲ. ಒಬ್ಬ ವ್ಯಕ್ತಿಯ ಸಾಧನೆಯ ಬಗ್ಗೆ ಎಷ್ಟು ಪುಟಗಳನ್ನು ಕೂಡ ಬರೆಯಬಹುದು. ಆದರೆ ಅದೇ ವ್ಯಕ್ತಿಯ ಸಾಧನೆಯನ್ನು ಒಂದು ಪುಟದೊಳಗೆ ಕಟ್ಟಿ ಕೊಡುವುದು ನಿಜವಾದ ಸವಾಲು. ಅದೇ ಮಹಾಂತೇಶ ಬಿರಾದಾರ ಅವರ ವೈಶಿಷ್ಟ್ಯತೆ," ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಹಿರಿಯ ಲೇಖಕ ರಂಜಾನ್ ದರ್ಗಾ ಅವರು ಪುಸ್ತಕದ ಕುರಿತು ಮಾತನಾಡಿ, "ಸಾಮಾಜಿಕ ಬದಲಾವಣೆಯಲ್ಲಿ ಬಿಜಾಪುರ ಬಹಳಷ್ಟು ಹಿಂದೆ ಉಳಿದಿದೆ. ಒಬ್ಬ ಪತ್ರಕರ್ತನಾಗಿ ನಾನು ಬಹಳಷ್ಟು ಪ್ರಯತ್ನ ಮಾಡಿದ್ದೇನೆ. ನಮ್ಮ ಸಂಸ್ಕೃತಿಯ ಸಂಬಂಧವನ್ನು ARTICLE 370J ನಲ್ಲಿ ಸಾಂಸ್ಕೃತಿಕವಾಗಿ ಹಾಕಲು ಹೇಳಿದ್ದೆ, ಅದು ನನ್ನ ವಾದವಾಗಿತ್ತು. ಹೀಗೆ ನನ್ನ ಪ್ರಯತ್ನ ಇಂದಿಗೂ ಕೂಡ ಮುಂದುವರೆದಿದೆ. ಇನ್ನು ಬಿಜಾಪುರ ಯಾಕೆ ಹಿಂದುಳಿದಿದ್ದೇವೆ ಅನ್ನುವುದಾದರೆ, ನಾವು ಹಿಂದೆ ಉಳಿಯಲಿಲ್ಲ. ಬದಲಾಗಿ ನಮ್ಮನ್ನ ಹಿಂದೆ ಉಳಿಸುವಂತಹ ವಾತಾವರಣವಿತ್ತು. ಆದರೆ ಅದೆಲ್ಲವನ್ನೂ ಮೀರಿ, ನಮ್ಮ ಯುವಕರು ಸಾಂಸ್ಕೃತಿಕವಾಗಿ ಮುಂದುಬರುತ್ತಿದ್ದಾರೆ, ಬಂದಿದ್ದಾರೆ ಎಂಬುವುದನ್ನು ಇಲ್ಲಿ ದಾಖಲಿಸಲಾಗಿದೆ. ಇದು ನನಗೆ ಬಹಳಷ್ಟು ಖುಷಿ ನೀಡಿದೆ," ಎಂದರು.

ಮುಖ್ಯ ಅತಿಥಿಗಳಾಗಿ ಕೇಂದ್ರ ವೃತ್ತ ಆದಾಯ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತ ಐಆರ್.ಎಸ್ ಶ್ರೀನಿವಾಸ ಬಿದರಿ, "ಸಮಾಜಮುಖಿ ಸ್ನೇಹಜೀವಿಯಾಗಿ ಮಹಾಂತೇಶ ಬಿರಾದಾರ ಅವರು ಗುರುತಿಸಿಕೊಂಡಿದ್ದಾರೆ. ಸಾಧು ಸಂತರ ಜೊತೆಯೂ ಅವರ ಸಂಬಂಧ ಚೆನ್ನಾಗಿದೆ," ಎಂದು ತಿಳಿಸಿದರು.

ವೇದಿಕೆಯಲ್ಲಿ ಕೃಷಿ ಇಲಾಖೆಯ ಆಯುಕ್ತ ಐಎ.ಎಸ್, ವೈ.ಎಸ್. ಪಾಟೀಲ, ಬಿಎಲ್.ಡಿಇ ಸಂಸ್ಥೆಯ ನಿರ್ದೇಶಕ ಬಸವನಗೌಡ ಎಂ.ಪಾಟೀಲ, ಕೆಎಸ್.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕ, ಐಎಫ್.ಎಸ್ ಪ್ರಶಾಂತ್ ಪಿ.ಕೆ.ಎಂ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವ ಸಮಿತಿಯ ಅದ್ಯಕ್ಷ ಅರವಿಂದ ಜತ್ತಿ ಅವರು ವಹಿಸಿದ್ದರು.ಸಮಾರಂಭದಲ್ಲಿ ಶ್ರೀ ಜ್ಯೋತಿರ್ಲಿಂಗ ಹೊನಕಟ್ಟಿ ಅವರಿಂದ ಜಾನಪದ ಗಾಯನವು ನಡೆಯಿತು.

ಕಾರ್ಯಕ್ರಮವನ್ನು ಆನ್ ಲೈನ್ ನಲ್ಲಿ ವೀಕ್ಷಿಸಲು ಬುಕ್ ಬ್ರಹ್ಮ ಯುಟ್ಯೂಬ್ ಚಾನೆಲ್ ನ ಈ ಲಿಂಕ್ ಅನ್ನು ಕ್ಲಿಕ್ ಮಾಡಿ..

MORE NEWS

ಕಲೆ, ಸಂಸ್ಕೃತಿಯಿಂದ ನಾಡು ಭಾಷೆ ಬೆಳೆಯುತ್ತದೆ ಉಳಿಯುತ್ತದೆ : ಪ್ರೊ.  ಕೃಷ್ಣೇಗೌಡ 

21-12-2024 ಬೆಂಗಳೂರು

ಮಂಡ್ಯ: ಕನ್ನಡ ನಾಡು ಚೆನ್ನಾಗಿ ಬೆಳೆಯಬೇಕು ಅಂದ್ರೆ ಈ ನೆಲದಲ್ಲಿರುವ ಎಲ್ಲವೂ ಬೆಳೆಯಬೇಕು. ಭಾಷೆ ಆಡುವುದರಿಂದ, ಬರೆಯುವು...

ಪರಿಸರದ ಬಗ್ಗೆ ಎಲ್ಲರೂ ಚಿಂತಿಸಿ; ಯಲ್ಪಪ್ಪರೆಡ್ಡಿ

21-12-2024 ಬೆಂಗಳೂರು

ಮಂಡ್ಯ: "ಅಲ್ಪ ಮಾಹಿತಿಯ ದತ್ತಾಂಶವು, ವಿಪತ್ತು ನಿರ್ವಾಹಣೆಯಲ್ಲಿ ಅಲ್ಪ ಪ್ರಮಾಣದ ತೊಡಕನ್ನು ಕಡಿಮೆಗಳಿಸುತ್ತದೆ,&q...

ಶಿಕ್ಷಣ ಸಂಸ್ಥೆಗಳನ್ನು ಶಿಕ್ಷಣ ಅಂಗಡಿಗಳೆಂದರೆ ಸೂಕ್ತ; ಸಾ. ರಾ. ಗೋವಿಂದು

21-12-2024 ಬೆಂಗಳೂರು

ಮಂಡ್ಯ: ಡಿ. 21 ರಂದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ “ಸಂಚಿ ಹೊನ್ನಮ್ಮ ಮತ್ತು ಕಾದಂಬರಿ ಸಾಮ್ರಾಜ್...