ಬೆಂಗಳೂರು ನಗರ ಜಿ. ನಾರಾಯಣ ಅವರನ್ನು ಮರೆಯುವುದಿಲ್ಲ:  ಲೀಲಾದೇವಿ ಆರ್‌. ಪ್ರಸಾದ್‌

Date: 24-09-2023

Location: ಬೆಂಗಳೂರು


ಬೆಂಗಳೂರು: ನಾಡೋಜ ಡಾ. ಜಿ. ನಾರಾಯಣ ಪ್ರತಿಷ್ಠಾನದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ನಾಡೋಜ ಡಾ. ಜಿ. ನಾರಾಯಣ ಜನ್ಮಶತಮಾನೋತ್ಸವ ಉದ್ಘಾಟನೆ ಮತ್ತು ಗೋಷ್ಠಿ ಕಾರ್ಯಕ್ರಮವು 2023 ಸೆಪ್ಟೆಂಬರ್‌ 24ನೇ ಭಾನುವಾರದಂದು ಬೆಂಗಳೂರಿನ ರವಿಂದ್ರ ಕಲಾಕ್ಷೇತ್ರದಲ್ಲಿ ನೆರವೇರಿತು.

ಇದೇ ವೇಳೆ ʻಅಕ್ಷರವ ನೀವು ಕಲಿಯಿರಿʼ ಹಾಗೂ ʻಜಿ. ನಾರಾಯಣರ ಚಿತ್ರಸಂಪುಟ' ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಮಾಜಿ ಸಚಿವೆ ಲೀಲಾದೇವಿ ಆರ್‌ ಪ್ರಸಾದ್‌ ಮಾತಾನಾಡಿ , ‘ ಜಿ. ನಾರಾಯಣ ಅವರದು ಬಹಳ ಸರಳತೆ ವ್ಯಕ್ತಿತ್ವ. ಕಾವೇರಿ ನೀರಿನ ಹೋರಾಟದ ಪ್ರಮುಖ ವ್ಯಕ್ತಿ ಜಿ. ನಾರಾಯಣ, ಆದರೆ ಇಂದಿನ ಜನತೆ ಇಂತಹ ಮಹಾನ್‌ ವ್ಯಕ್ತಿಯನ್ನು ಮರೆತಿರುವುದು ಬೇಸಾರದ ಸಂಗತಿಯಾಗಿದೆ. ಬೆಂಗಳೂರು ಕಾರ್ಪೊರೇಷನ್‌ ನ ಕೆಂಪೇಗೌಡರ ಪ್ರತಿಮೆಗೆ ಮುಖ್ಯ ಕಾರಣರಾದವರು ಜಿ. ನಾರಾಯಣ, ಅವರು ಪ್ರತಿ ಕಾರ್ಯಗಳಲ್ಲೂ ಕನ್ನಡದ ಪರ ಧ್ವನಿ ಎತ್ತಿದ ವ್ಯಕ್ತಿ ಎಂದು ಅವರ ಜೊತೆಗಿನ ಒಡನಾಟಗಳನ್ನು ನೆನಪಿಸಿಕೊಂಡರು.

ನ್ಯಾಯಮೂರ್ತಿ ಎ.ಜೆ. ಸದಾಶಿವ ಅವರು ಮಾತಾನಾಡಿ, ‘ಜಿ. ನಾರಾಯಣ ಅವರು ಬಹಳ ಸರಳ ವ್ಯಕ್ತಿತ್ವ ಹೊಂದಿದ್ದ ಧೀಮಂತರು ಎಂದು ಅವರ ಕನ್ನಡಭಿಮಾನದ ಬಗ್ಗೆ ಹಾಗೂ ಅವರ ಜೊತೆಗಿನ ಕೆಲವು ವಿಚಾರಗಳ ಬಗ್ಗೆ ನೆನಪುಗಳನ್ನು ಹಂಚಿಕೊಂಡರು.

ಸಾಹಿತಿ ನಾಡೋಜ ಪ್ರೊ. ಹಂಪ ನಾಗರಾಜಯ್ಯ ಮಾತಾನಾಡಿ, ‘ಜಿ. ನಾರಾಯಣ ಅವರ ಬದುಕು ಎಲ್ಲರಿಗೂ ಪ್ರೇರಣೆಯಾಗಿದೆ’ ಎಂದು ಪ್ರಸ್ತಾವಿಕ ನುಡಿಗಳಾನ್ನಾಡಿದರು.

‘ಜಿ. ನಾರಾಯಣ ಹಾಗೂ ನಗರಕಲ್ಯಾಣ’ ಎಂಬ ವಿಷಯದ ಬಗ್ಗೆ 1ನೇ ಗೋಷ್ಠಿ ನಡೆಯಿತು.

‘ಕರ್ನಾಟಕ ಪತ್ರಿಕಾ ಅಕಾಡೆಮಿ’ ವಿಷಯದ ಬಗ್ಗೆ ಹಿರಿಯ ಪತ್ರಕರ್ತ ಜಿ.ಎನ್‌. ರಂಗನಾಥರಾವ್ ಅವರು ವಿಷಯ ಮಂಡಿಸಿದರು.
‘ನಗರಪಾಲಿಕ’ ವಿಚಾರವಾಗಿ ಕ.ಗ.ಕಲಾ ಪರಿಷತ್ತು ಅಧ್ಯಕ್ಷ ಎಂ.ಆರ್. ಸತ್ಯನಾರಾಯಣ ಅವರು ವಿಷಯ ಮಂಡಿಸಿದರು.

ಜಿ. ನಾರಾಯಣ ಹಾಗೂ ಸಂಘ ಸಂಸ್ಥೆಗಳು ಎಂಬ ವಿಚಾರವಾಗಿ 2ನೇ ಗೋಷ್ಠಿ ನಡೆಯಿತು.

‘ವಿನೋದ ಮಾಸಪತ್ರಿಕೆ’ ಹಿರಿಯ ಸಾಹಿತಿ ಪ್ರೊ. ಅ.ರಾ. ಮಿತ್ರ ಅವರು ‘ವಿನೋದ ಮಾಸಪತ್ರಿಕೆ’ ವಿಷಯದ ಕುರಿತು ವಿಷಯ ಮಂಡಿಸಿದರು.
‘ಕರ್ನಾಟಕ ಲೇಖಕಿಯರ ಸಂಘ’ ವಿಷಯದ ಕುರಿತು ಕ.ಲೇ.ಸಂ. ಸಾಹಿತಿ ಕೆ.ಆರ್. ಸಂಧ್ಯಾರೆಡ್ಡಿ ವಿಷಯ ಮಂಡಿಸಿದರು.
‘ಕನ್ನಡ ಅಭಿವೃದ್ಧಿ ಪ್ರಾಧಿಕಾರ’ ವಿಷಯದ ಕುರಿತು ಸಾಹಿತಿ ಎಸ್‌.ಜಿ. ಸಿದ್ದರಾಮಯ್ಯ ಅವರು ವಿಷಯ ಮಂಡಿಸಿದರು.
2ನೇ ಗೋಷ್ಠಿ ಕಾರ್ಯಕ್ರಮದಲ್ಲಿ ವಿನೋದ ಮಾಸ ಪತ್ರಿಕೆ ಸಂಪಾದಕ ಎನ್. ರಾಘವೇಂದ್ರ, ಹಾಸ್ಯ ಭಾಷಣಕಾರ ಪ್ರೊ. ಎಂ. ಕೃಷ್ಣಗೌಡ ಉಪಸ್ಥಿತರಿದ್ದರು.

‘ಜಿ. ನಾರಾಯಣ ಹಾಗೂ ಸಂಘಸಂಸ್ಥೆಗಳ ಬೆಳವಣಿಗೆ ಮತ್ತು ಹೋರಾಟ’ ವಿಚಾರವಾಗಿ 3 ನೇ ಗೋಷ್ಠಿ ನಡೆಯಿತು.

‘ಕನ್ನಡ ಸಾಹಿತ್ಯ ಪರಿಷತ್ತು’ ವಿಷಯದ ಕುರಿತು ಕ.ಸಾ.ಪ. ಮಾಜಿ ಅಧ್ಯಕ್ಷ ಗೊ.ರು. ಚನ್ನಬಸಪ್ಪ ವಿಷಯ ಮಂಡನೆ ಮಾಡಿದರು.
ಬಿ.ಎಂ.ಶ್ರೀ. ಪ್ರತಿಷ್ಠಾನ ಮತ್ತು ಉದಯಭಾನು ಕಲಾ ಸಂಘ’ ವಿಷಯದ ಕುರಿತು ಬಿ.ಎಂ.ಶ್ರೀ. ಪ್ರತಿಷ್ಠಾನ ಗೌರವಾಧ್ಯಕ್ಷ ಪಿ.ವಿ. ನಾರಾಯಣ ವಿಷಯ ಮಂಡನೆ ಮಾಡಿದರು.
‘ಕರ್ನಾಟಕ ಜಾನಪದ ಪರಿಷತ್ತು’ ವಿಷಯ ಕುರಿತು ಜಾನಪದ ವಿದ್ವಾಂಸ ಚಕ್ಕೆರೆ ಶಿವಶಂಕರ್ ವಿಷಯ ಮಂಡನೆ ಮಾಡಿದರು.

ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಸೇರಿದಂತೆ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನೇರ ಪ್ರಸಾರದ ವೀಕ್ಷಣೆಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ಪೋಟೋ ಗ್ಯಾಲರಿ:

 

 

 

MORE NEWS

ಅಮ್ಮ ಪ್ರಶಸ್ತಿಗೆ 2023-24ನೇ ಸಾಲಿನಲ್ಲಿ ಪ್ರಕಟವಾದ ಕೃತಿಗಳ ಆಹ್ವಾನ

07-10-2024 ಬೆಂಗಳೂರು

ಕಲಬುರಗಿ: ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ 23ನೇ ವರ್ಷದ `ಅಮ್ಮ ಪ್ರಶಸ್ತಿ&...

ಛಲವಾದಿ ವೇದಿಕೆಯಲ್ಲಿ ಬಿಡುಗಡೆಗೊಂಡ ‘ಸಂಜು ವೆಡ್ಸ್ ಗೀತಾ-2’ ಹಾಡು

07-10-2024 ಬೆಂಗಳೂರು

ಬೆಂಗಳೂರು: ಪವಿತ್ರಾ ಇಂಟರ್‌ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ ಛಲವಾದಿ ಕುಮಾರ್ ಅವರು ನಿರ್ಮಿಸಿರುವ ಕನ್ನಡದ ಬ...

ವೀರಣ್ಣ ರಾಜೂರ ಅವರಿಗೆ ‘ರಮಣಶ್ರೀ ಪ್ರಶಸ್ತಿ’

07-10-2024 ಬೆಂಗಳೂರು

ಬೆಂಗಳೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ರಮಣಶ್ರೀ ಪ್ರತಿಷ್ಠಾನದಿಂದ ಕೊಡಮಾಡಲಾಗುವ 2024ನೇ ಸಾಲಿನ 'ರ...