Date: 01-01-2025
Location: ಬೆಂಗಳೂರು
‘ಬಘೀರ’ ಚಿತ್ರದ ನಂತರ ಶ್ರೀಮುರಳಿ ಅಭಿನಯದ ಹೊಸ ಚಿತ್ರ ಯಾವುದು? ಈ ಪ್ರಶ್ನೆಗೆ ಕಳೆದ ವರ್ಷವೇ ಉತ್ತರ ಸಿಕ್ಕಿತ್ತು. ‘ಬಘೀರ’ ನಂತರ ಶ್ರೀಮುರಳಿ ‘ಪರಾಕ್’ ಎಂಬ ಚಿತ್ರದಲ್ಲಿ ನಟಿಸುತ್ತಾರೆ ಎಂದು ಕಳೆದ ವರ್ಷವೇ ಘೋಷಣೆಯಾಗಿತ್ತು. ಈ ವರ್ಷ ಶ್ರೀಮುರಳಿ ಹುಟ್ಟುಹಬ್ಬದ (ಡಿಸೆಂಬರ್ 17) ಸಂದರ್ಭದಲ್‍ಲಿ ‘ಪರಾಕ್’ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಇದಲ್ಲದೆ, ಶ್ರೀಮುರಳಿ ಅಭಿನಯದಲ್ಲಿ ಇನ್ನೂ ಒಂದು ಹೊಸ ಚಿತ್ರವನ್ನು ಘೋಷಿಸಲಾಗಿದೆ.
ತೆಲುಗಿನ ಜನಪ್ರಿಯ ನಿರ್ಮಾಣ ಸಂಸಥೆಗಳ ಪೈಕಿ ಪೀಪಲ್ ಮೀಡಿಯಾ ಫ್ಯಾಕ್ಟರಿ ಸಹ ಒಂದು. ‘ಕಾರ್ತಿಕೇಯ 2’, ‘ವೆಂಕಿ ಮಾಮ’, ‘ಮಿಸ್ಟರ್ ಬಚ್ಚನ್’ ಮುಂತಾದ ಚಿತ್ರಗಳನ್ನು ನಿರ್ಮಿಸಿರುವ ಈ ಸಂಸ್ಥೆಯು ಇದೀಗ ‘ಜಿ2’, ‘ದಿ ರಾಜ ಸಾಬ್’, ‘ಮಿರಾಯ್’, ‘ಜಾಟ್’ ಮುಂತಾದ ಚಿತ್ರಗಳನ್ನು ನಿರ್ಮಿಸುತ್ತಿದೆ. ಈಗ ಈ ಸಂಸ್ಥೆಯು ಶ್ರೀಮುರಳಿ ಅಭಿನಯದಲ್ಲಿ ಕನ್ನಡ ಚಿತ್ರವೊಂದನ್ನು ನಿರ್ಮಿಸುವುದಾಗಿ ಘೋಷಿಸಿದೆ.
ಕನ್ನಡದ ಹೊಂಬಾಳೆ ಫಿಲಂಸ್, ಕೆ.ವಿ.ಎನ್. ಪ್ರೊಡಕ್ಷನ್ಸ್ ಸಂಸ್ಥೆಗಳು ಬೇರೆ ಭಾಷೆಗಳ ಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿವೆ. ತೆಲುಗು ಮತ್ತು ಚಿತ್ರಗಳನ್ನು ಈ ಸಂಸ್ಥೆಗಳು ನಿರ್ಮಿಸುತ್ತಿವೆ. ಈಗ ತೆಲುಗಿನ ಜನಪ್ರಿಯ ನಿರ್ಮಾಣ ಸಂಸ್ಥೆಯು ಕನ್ನಡಕ್ಕೆ ಬಂದಿರುವುದು ವಿಶೇಷ.
ಸದ್ಯ ಶ್ರೀಮುರಳಿ ಹುಟ್ಟುಹಬ್ಬಕ್ಕೆ ಕೈ ಜೋಡಿಸುತ್ತಿರುವ ಬಗ್ಗೆ ಅಧಿಕೃತ ಪೋಸ್ಟರ್ ಬಿಡುಗಡೆ ಆಗಿದೆ. ಮಿಕ್ಕಂತೆ ಚಿತ್ರದ ಬಗ್ಗೆ ಯಾವೊಂದು ಮಾಹಿತಿಯನ್ನೂ ನಿರ್ಮಾಣ ಸಂಸ್ಥೆ ಬಹಿರಂಗ ಮಾಡಿಲ್ಲ. ಚಿತ್ರದ ನಿರ್ದೇಶಕರು ಯಾರು? ಯಾವಾಗ ಶುರು? ಯಾರೆಲ್ಲಾ ಅಭಿನಯಿಸುತ್ತಾರೆ? ಮುಂತಾದ ಯಾವ ವಿಷಯಗಳನ್ನೂ ನಿರ್ಮಾಣ ಸಂಸ್ಥೆ ಬಹಿರಂಗ ಮಾಡಿಲ್ಲ. ಸದ್ದಿಲ್ಲದೆ ತಯಾರಿಗಳು ನಡೆಯುತ್ತಿದ್ದು, ಮುಂದಿನ ವರ್ಷ ಇನ್ನಷ್ಟು ಚಿತ್ರ ಶುರುವಾಗುವ ಸಾಧ್ಯತೆ ಇದೆ.
ಶ್ರೀಮುರಳಿ ಅಭಿನಯದ ‘ಬಘೀರ’ ಚಿತ್ರವು ಅಕ್ಟೋಬರ್ 31ರಂದು ಬಿಡುಗಡೆಯಾಗಿದ್ದು, ಚಿತ್ರವು ಬಾಕ್ಸ್ ಆಫೀಸ್‍ನಲ್ಲಿ 20 ಕೋಟಿ ರೂ. ಗಳಿಕೆ ಮಾಡಿದೆ. ಚಿತ್ರವು ಈಗಾಗಲೇ ನೆಟ್‍ಫ್ಲಿಕ್ಸ್ ಓಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ. ಸುಮಾರು ಐದು ವರ್ಷಗಳ ನಂತರ ನೆಟ್‍ಫ್ಲಿಕ್ಸ್ನಲ್ಲಿ ಬಿಡುಗಡೆಯಾದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
‘ಇದು ಹೈ ವೋಲ್ಟೇಜ್ ಪ್ರೇಮಕಥೆ …’ ಎಂಬ ಅಡಿಬರಹದೊಂದಿಗೆ ಬರುತ್ತಿದೆ ನಿರಂಜನ್ ಶೆಟ್ಟಿ ಅಭಿನ...
ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್, ‘ಜಿಮ್ಮಿ’ ಎ...
ಗಣೇಶ್ ಬಹಳ ವರ್ಷಗಳಿಂದ ಬೇರೆ ತರಹದ ಪಾತ್ರ ಮಾಡಬೇಕು ಎಂದು ಪ್ರಯತ್ನಿಸುತ್ತಿದ್ದರಂತೆ. ಆದರೆ, ಕಾರಣಾಂತರಗಳಿ...
©2025 Book Brahma Private Limited.