Date: 03-01-2025
Location: ಬೆಂಗಳೂರು
ಗಣೇಶ್ ಬಹಳ ವರ್ಷಗಳಿಂದ ಬೇರೆ ತರಹದ ಪಾತ್ರ ಮಾಡಬೇಕು ಎಂದು ಪ್ರಯತ್ನಿಸುತ್ತಿದ್ದರಂತೆ. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ. ಈಗ ಬಹಳ ಸಮಯದ ನಂತರ ಅವರು ಹೊಸ ಚಿತ್ರವೊಂದರಲ್ಲಿ ವಿಭಿನ್ನ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ..
ಹೊಸ ವರ್ಷದಲ್ಲಿ ಗಣೇಶ್ ಅಭಿನಯದ ಹೊಸ ಚಿತ್ರವೊಂದರ ಶೀರ್ಷಿಕೆ ಅನಾವರಣವಾಗಲಿದೆ ಎಂಬ ಸುದ್ದಿಯೊಂದು ಕೇಳಿಬಂದಿತ್ತು. ಅದರಂತೆ ಅವರ ಹೊಸ ಚಿತ್ರ ‘ಪಿನಾಕ’ದ ಘೋಷಣೆಯಾಗುವುದರ ಜೊತೆಗೆ, ಚಿತ್ರದ ಟೀಸರ್ ಸಹ ಬಿಡುಗಡೆಯಾಗಿದೆ. ಈ ಚಿತ್ರವನ್ನು ತೆಲುಗಿನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿ, ಗಣೇಶ್ ಅಭಿನಯದ ಚಿತ್ರವನನು ನಿರ್ಮಿಸುತ್ತಿದ್ದು, ಈ ಚಿತ್ರದ ಮೂಲಕ ನೃತ್ಯ ನಿರ್ದೇಶಕ ಧನಂಜಯ್ ಅಲಿಯಾಸ್ ಧನು ಮಾಸ್ಟರ್ ನಿರ್ದೇಶಕರಾಗುತ್ತಿದ್ದಾರೆ.
‘ಪಿನಾಕ’ ಚಿತ್ರದಲ್ಲಿ ರುದ್ರ ಮತ್ತು ಕ್ಷುದ್ರದ ನಡುವಿನ ಸಂಘರ್ಷವಿರುತ್ತದಂತೆ. ಅಷ್ಟೇ ಅಲ್ಲ, ಗಣೇಶ್ ಪಾತ್ರವೂ ವಿಭಿನ್ನವಾಗಿರುತ್ತದಂತೆ. ಈ ಕುರಿತು ಮಾತನಾಡುವ ಗಣೇಶ್, ‘ಮೇಲ್ನೋಟಕ್ಕೆ ಇದು ಅಘೋರಿಯ ಪಾತ್ರ ಎಂದನಿಸಬಹುದು. ಆದರೆ, ಅದಲ್ಲ. ಪ್ರತಿಯೊಬ್ಬರಲ್ಲೂ ಎರಡೂ ಶಕ್ತಿಗಳಿರುತ್ತವೆ. ಅದರ ಕುರಿತಾದ ಚಿತ್ರ ಇದು. ಇದು ಪುರಾಣ ಮತ್ತು ಇತಿಹಾಸ ಮಿಶ್ರಣ ಕಥೆ. ನಾನು ಬಹಳ ದಿನಗಳಿಂದ ಬೇರೆ ತಹರದ ಪಾತ್ರಗಳಿಗಾಗಿ ಕಾಯುತ್ತಿದ್ದೆ. ಆದರೆ, ಯಾರೂ ಈ ತರಹದ ಕಥೆಗಳನ್ನು ತರಲಿಲ್ಲ. ಕಥೆಯ ಜೊತೆಗೆ ಈ ತರಹದ ಪ್ರಯೋಗ ಮಾಡುವವರು ಮುಖ್ಯ. ಈಗ ಈ ಚಿತ್ರದಲ್ಲಿ ಅಂಥದ್ದೊಂದು ಕಥೆ ಮತ್ತು ಪ್ರಯೋಗ ಮಾಡುವ ನಿರ್ಮಾಪಕರು ಸ ಹಸಿಕ್ಕಿದ್ದಾರೆ. ಇದು ಬೇರೆ ಆಯಾಮದ ಪಾತ್ರ’ ಎಂದರು.
ನಿರ್ಮಾಪಕ ವಿಶ್ವಪ್ರಸಾದ್ ಮಾತನಾಡಿ, ‘ಕಳೆದ ಎರಡು ವರ್ಷಗಳಿಂದ ಕನ್ನಡದಲ್ಲಿ ಚಿತ್ರ ಮಾಡುವ ಪ್ರಯತ್ನ ನಡೆದಿತ್ತು. ಈ ಹಿಂದೆ ನಾವು ತೆಲುಗಿನಲ್ಲಿ ‘ಕಾರ್ತಿಕೇಯ 2’ ಚಿತ್ರವನ್ನು ನಿರ್ಮಿಸಿದ್ದೆವು. ಆ ಚಿತ್ರವನ್ನು ನೋಡಿ, ಈ ತರಹದದೊಂದು ಪ್ರಯತ್ನವನ್ನು ಕನ್ನಡದಲ್ಲೂ ಮಾಡೋಣ ಎಂದು ಗಣೇಶ್ ಹೇಳಿದ್ದರು. ಹಾಗೆ ಶುರುವಾದ ಪ್ರಯಾಣ ಇಲ್ಲಿಯವರೆಗೂ ಬಂದು ನಿಂತಿದೆ. ಅತೀಂದ್ರೀಯ ಶಕ್ತಿ ಮತ್ತು ಆಧ್ಯಾತ್ಮವನ್ನು ಸೇರಿಸಿ ಕಥೆ ಮಾಡಲಾಗಿದೆ’ ಎಂದರು.
ಧನಂಜಯ್ ಮಾತನಾಡಿ, ‘ನನಗೆ ಗಣೇಶ್ ಅವರು ‘ಹುಡುಗಾಟ’ ಸಮಯದಿಂದ ಗೊತ್ತು. ಅವರು ಎಷ್ಟು ತಮಾಷೆಯಾಗಿ ಇರುತ್ತಾರೋ, ಅಷ್ಟೇ ಗಂಭೀರವಾಗಿರುವುದಕ್ಕೆ ಸಾಧ್ಯ. ಆ ಎರಡೂ ಮುಖಗಳನ್ನು ಈ ಚಿತ್ರದಲ್ಲಿ ತೋರಿಸುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗುತ್ತಿದೆ. ಯಾವ ಪಾತ್ರಕ್ಕೆ ಬೇಕಾದರೂ ಜೀವ ತುಂಬುವ ಶಕ್ತಿ ಇದೆ. ಈ ಚಿತ್ರವು ಗಣೇಶ್ ಅವರ ಅಭಿಮಾನಿಗಳಿಗೆ ಹಬ್ಬವಾಗಲಿದೆ’ ಎಂದರು.
‘ಪಿನಾಕ’ ಚಿತ್ರವು ಕನ್ನಡ ಮತ್ತು ತೆಲುಗಿನಲ್ಲಿ ಮೂಡಿಬರುತ್ತಿದ್ದು, ಸದ್ಯ ಟೀಸರ್ ಮಾತ್ರ ಬಿಡುಗಡೆ ಆಗಿದೆ. ಚಿತ್ರದ ಚಿತ್ರೀಕರಣ ಫೆಬ್ರವರಿಯಿಂದ ಶುರುವಾಗಲಿದೆ.
‘ಅವಳ ಅಂದಕ್ಕೆ ಸೋತವರು, ಮಾತಿಗೆ ಮರುಳಾದವರು, ನಡಿಗೆಗೆ ನಡುಗಿದವರಾರೂ, ಭೂಮಿ ಮೇಲೆ ಉಳಿದೇ ಇಲ್ಲ. ...
ಕೆಲವು ವರ್ಷಗಳಿಂದ ಯಶ್ ತಮ್ಮ ಹುಟ್ಟುಹಬ್ಬವನ್ನು (ಜನವರಿ 08) ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುವುದನ್ನು ಬಿಟ್ಟಿದ...
ನಟ-ನಿರ್ಮಾಪಕ ಧನಂಜಯ್ ಮದುವೆ ತಯಾರಿಯಲ್ಲಿದ್ದಾರೆ. ಫೆಬ್ರವರಿ 16ರಂದು ಅವರು ಮೈಸೂರಿನಲ್ಲಿ ಧನ್ಯತಾ ಜೊತೆಗೆ ವಿವಾಹ...
©2025 Book Brahma Private Limited.