Date: 22-11-2024
Location: ಬೆಂಗಳೂರು
ವಿಜಯಪುರ: ನಗರದ ಚೇತನಾ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಡಿಸೆಂಬರ್ 1 ರವಿವಾರ ಜರುಗಲಿರುವ ಕನ್ನಡ ಪುಸ್ತಕ ಪರಿಷತ್ತು ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದ ಬಾಗಲಕೋಟೆಯ ಸಾಹಿತಿ ಡಾ.ಪ್ರಕಾಶ ಖಾಡೆ ಅವರಿಗೆ ನಗರದಲ್ಲಿ ಆಮಂತ್ರಣ ನೀಡಿ ಸತ್ಕರಿಸಲಾಯಿತು. ವಿಜಯಪುರದ ಸಹೋದರ ಅಶೋಕ ಖಾಡೆ ಅವರ ಮನೆಯಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಪರಿಷತ್ತಿನ ಪದಾಧಿಕಾರಿಗಳು ಸತ್ಕರಿಸಿ ಆಮಂತ್ರಣ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಾಹಿತಿ ಶಂಕರ ಬೈಚಬಾಳ ‘ಕಳೆದ ನಾಲ್ಕು ದಶಕಗಳಿಂದ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೃಷಿ ಮಾಡಿರುವ ಡಾ.ಪ್ರಕಾಶ ಖಾಡೆಯವರು ಈ ವರೆಗೆ ಐವತ್ತೊಂದು ಪುಸ್ತಕಗಳನ್ನು ರಚಿಸಿದ್ದು, ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಅಮೋಘ ಸೇವೆಗಾಗಿ ಪರಿಷತ್ತು ಈ ಗೌರವ ನೀಡಲು ಹೆಮ್ಮೆಯಾಗುತ್ತದೆ’ ಎಂದರು.
ಸಂಚಾಲಕ ಪ್ರೊ.ಅಡವಿಸ್ವಾಮಿ ಕೊಳಮಲಿ ಮಾತನಾಡಿ ಡಾ.ಖಾಡೆ ಅವರು ಶಿಕ್ಷಣ, ಸಾಹಿತ್ಯ, ಜಾನಪದ, ಪತ್ರಿಕೊದ್ಯಮ, ರಂಗಭೂಮಿ, ಸಂಶೋಧನೆ, ಜೀವನ ಚರಿತ್ರೆ ಹಾಗೂ ಸಂಪಾದನೆ ಮೂಲಕ ಬಹುಮುಖಿ ಸಾಹಿತ್ಯ ಸಾಧನೆ ಮಾಡಿದವರು, ಅಪಾರ ಪುಸ್ತಕ ಪ್ರೀತಿಯ ಅವರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಿರುವುದು ನಮ್ಮ ಹೆಮ್ಮೆ ಎಂದರು. ಸಾಹಿತಿಗಳಾದ ಸಿದ್ದಲಿಂಗ ಮನಹಳ್ಳಿ, ಮುರುಗೇಶ ಸಂಗಮ, ಡಿ.ಜೋಶಪ್ಪ, ರಮೇಶ ಕೊಟ್ಯಾಳ, ಸುನೀಲ ಜೈನಾಪುರ, ವಿಸಂಪಾ ಖೇಡಗಿ, ಅಮರೇಶ ಸಾಲಕ್ಕಿ ಉಪಸ್ಥಿತರಿದ್ದರು. ಪರಿಷತ್ತು ಅಧ್ಯಕ್ಷ ಹಿರಿಯ ಸಾಹಿತಿ ಫ.ಗು.ಸಿದ್ದಾಪುರ, ಸಿದ್ದರಾಮ ಬಿರಾದಾರ, ಮೋಹನ ಕಟ್ಟಿಮನಿ, ಸಂಗಮೇಶ ಬದಾಮಿ ಮೊದಲಾದವರು ಡಾ.ಖಾಡೆ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ವಿಜಯಪುರದಲ್ಲಿ ಡಿ.1 ರಂದು ಜರುಗಲಿರುವ ಕನ್ನಡ ಪುಸ್ತಕ ಪರಿಷತ್ತು ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದ ಬಾಗಲಕೋಟೆಯ ಸಾಹಿತಿ ಡಾ.ಪ್ರಕಾಶ ಖಾಡೆ ಅವರಿಗೆ ಸಮ್ಮೇಳನಕ್ಕೆ ಆಹ್ವಾನ ನೀಡಲಾಯಿತು. ಪರಿಷತ್ತಿನ ಪದಾಧಿಕಾರಿಗಳು ಮತ್ತು ಸಾಹಿತಿಗಳಾದ ಪ್ರೊ.ಅಡವಿಸ್ವಾಮಿ ಕೊಳಮಲಿ, ಶಂಕರ ಬೈಚಬಾಳ, ಸಿದ್ದಲಿಂಗ ಮನಹಳ್ಳಿ, ವಿಸಂಪಾ ಖೇಡಗಿ, ಮುರುಗೇಶ ಸಂಗಮ, ರಮೇಶ ಕೊಟ್ಯಾಳ, ಸುನೀಲ ಜೈನಾಪುರ, ಅಮರೇಶ ಸಾಲಕ್ಕಿ ಹಾಗೂ ಅಶೋಕ ಖಾಡೆ, ರಿದಾನ್ ಖಾಡೆ ಚಿತ್ರದಲ್ಲಿದ್ದಾರೆ.
ಬೆಂಗಳೂರು: ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ‘ನಾಡೋಜ ಎಚ್.ಎಲ್. ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮ...
ಬೆಂಗಳೂರು: ಪಿ. ಶೇಷಾದ್ರಿ ಸಿನಿಮಾವಲೋಕನ, ಚಿತ್ರೋತ್ಸವ, ಸಿನಿಮಂಥನ 'ಮುನ್ನುಡಿ' ಚಿತ್ರದಿಂದ ಆರಂಭಗೊಂಡಿದೆ. ಹ...
ಬೆಂಗಳೂರು: ನಮ್ಮನಾಡಿನ ಸಾಂಸ್ಕೃತಿಕ ಇತಿಹಾಸ, ಆಚರಣೆಗಳು, ಕಲೆಯನ್ನು ಪ್ರತಿಬಿಂಬಿಸುವ ಒಂದಷ್ಟು ಚಲನಚಿತ್ರಗಳು ಈಗ...
©2024 Book Brahma Private Limited.