ಎಲ್ಲಾ ಲೋಕಗಳ ತಾಯಿಬೇರು ಜಾನಪದ ಲೋಕ; ಹಂಪನಾ

Date: 22-11-2024

Location: ಬೆಂಗಳೂರು


ಬೆಂಗಳೂರು: ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ‘ನಾಡೋಜ ಎಚ್.ಎಲ್. ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು 2024 ನ. 22 ಶುಕ್ರವಾರದಂದು ನಗರದ ಜೆ.ಸಿ ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಯಿತು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಸಾಹಿತಿ, ಜಾನಪದ ವಿದ್ವಾಂಸ ಪುರುಷೋತ್ತಮ ಬಿಳಿಮಲೆ ಅವರು ಗುಡ್ಡಪ್ಪ ಜೋಗಿ ಅವರಿಗೆ ‘ನಾಡೋಜ ಎಚ್.ಎಲ್. ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿಯನ್ನು’ ಪ್ರದಾನಿಸಿದರು.

ನಂತರದಲ್ಲಿ ಮಾತನಾಡಿದ ಅವರು, "ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕುಲಪತಿಗಳಾಗಿದ್ದ ಸಂದರ್ಭದಲ್ಲಿ ಬಹು ದೊಡ್ಡ ಜಾನಪದ ಲೋಕವನ್ನೇ ಅವರು ಕಟ್ಟಿದರು. ಹಳ್ಳಿಗಳಿಗೆ ಭೇಟಿ ನೀಡಿ ಹಾಳಾಗುತ್ತಿದ್ದ ಸಾಂಸ್ಕೃತಿಕ ಪರಿಕರಗಳನ್ನು ಸಂಗ್ರಹಿಸಿ ಜಾನಪದ ಲೋಕದಲ್ಲಿ ಸಂಗ್ರಹಿಸುತ್ತಿದ್ದರು. ಇಂದು ಅಂತಹ ಕೆಲಸವನ್ನು ಮಾಡುತ್ತಿರುವ, ಜಾನಪದ ಕಲೆಯನ್ನು ಉಳಿಸುತ್ತಿರುವ ಹಲವು ಸಮುದಾಯಗಳು ನಮ್ಮಲ್ಲಿವೆ. ಅಂತಹ ಸಮುದಾಯದವರಲ್ಲಿ ಗುಡ್ಡಪ್ಪ ಜೋಗಿ ಕೂಡ ಒಬ್ಬರು. ಅವರ ಜಾನಪದ ಕಾರ್ಯಕ್ಕೆ ಇಂದು ಈ ಪ್ರಶಸ್ತಿ ಲಭಿಸಿದೆ," ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಹಿರಿಯ ಸಾಹಿತಿ, ಸಂಶೋಧಕ ಹಂಪ ನಾಗರಾಜಯ್ಯ ಮಾತನಾಡಿ, "ನಮ್ಮಲ್ಲಿ ಎಷ್ಟೊಂದು ಲೋಕಗಳಿವೆ. ಆ ಎಲ್ಲಾ ಲೋಕಗಳ ತಾಯಿಬೇರು ಜಾನಪದ ಲೋಕ. ಅಂತಹ ಕ್ಷೇತ್ರದಲ್ಲಿ ಅಂತಹ ದೊಡ್ಡ ಕೆಲಸ ಮಾಡಲು ಕರ್ನಾಟಕದಲ್ಲಿ ದೊಡ್ಡ ಅಧಿಕಾರಿಯಾಗಿದ್ದರೂ, ತನ್ನ ಅಧಿಕಾರವನ್ನು ಪಕ್ಕದಲ್ಲಿಟ್ಟು, ತನ್ನ ತಿಳುವಳಿಕೆಯ ಸಮಸ್ತವನ್ನೂ ಜಾನಪದ ಅಧ್ಯಯನಕ್ಕೆಂದು ಮೀಸಲಿಟ್ಟ ವ್ಯಕ್ತಿ ಎಚ್.ಎಲ್. ನಾಗೇಗೌಡ ಅವರು. ಕರ್ನಾಟಕದ ಉದ್ದಗಲಕ್ಕೂ ಸಂಚಾರಿಸಿ, ಅನೇಕ ಗೀತೆಗಳನ್ನು ದಾಖಲಿಸಿ ಒಂದು ಲೋಕವನ್ನೇ ಸೃಷ್ಟಿಸಿದರು. ನನಗೆ ಬಹಳ ಆತ್ಮೀಯರಾಗಿದ್ದರು. ಇಂದಿನ ಪ್ರಶಸ್ತಿ ಪುರಸ್ಕೃತರಾದ ಗುಡ್ಡಪ್ಪ ಜೋಗಿ ಅವರು ತಮ್ಮ ಬದುಕನ್ನೇ ಜಾನಪದಕ್ಕೋಸ್ಕರ ಮುಡಿಪಾಗಿಸಿ, ನಾಡಿನುದ್ದಕ್ಕೂ ಕ್ರಮಿಸಿದ್ದರೆ. ಇಂತಹ ಪ್ರಶಸ್ತಿ ಅವರಿಗೆ ಲಭಿಸಿದ್ದು ಖುಷಿಯ ಸಂಗತಿ," ಎಂದರು.

ಕಾರ್ಯಕ್ರಮದ ಅದ್ಯಕ್ಷತೆಯನ್ನು ಜಾನಪದ ವಿದ್ವಾಂಸ, ಲೇಖಕ, ಪ್ರಾಧ್ಯಾಪಕ, ಹಿ.ಚಿ. ಬೋರಲಿಂಗಯ್ಯ ಅವರು ವಹಿಸಿದ್ದರು. ಸಮಾರಂಭದಲ್ಲಿ ಹಲವಾರು ಗಣ್ಯರು ಉಪಸ್ಥಿತರಿದ್ದರು.

MORE NEWS

ಬೇಲೂರು ರಘುನಂದನ್ ಅವರಿಗೆ `ಬಿಸ್ಮಿಲ್ಲಾ ಖಾನ್ ಪುರಸ್ಕಾರ-2022’ ಪ್ರಶಸ್ತಿ ಪ್ರದಾನ

22-11-2024 ಬೆಂಗಳೂರು

ಬೆಂಗಳೂರು: ದೆಹಲಿಯ ಸಂಗೀತ ನಾಟಕ ಅಕಾಡೆಮಿಯಿಂದ ನೀಡುವ ಬಿಸ್ಮಿಲ್ಲಾ ಖಾನ್ ಪುರಸ್ಕಾರ-2022ಕ್ಕೆ ಕವಿ, ನಾಟಕಕಾರ ಬೇಲೂರು ...

ಕನ್ನಡ ಪುಸ್ತಕ ಪರಿಷತ್ತು ಸಮ್ಮೆಳನಾಧ್ಯಕ್ಷ ಡಾ.ಪ್ರಕಾಶ ಖಾಡೆಗೆ ಪರಿಷತ್ತಿನಿಂದ ಆಹ್ವಾನ

22-11-2024 ಬೆಂಗಳೂರು

ವಿಜಯಪುರ: ನಗರದ ಚೇತನಾ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಡಿಸೆಂಬರ್ 1 ರವಿವಾರ ಜರುಗಲಿರುವ ಕನ್ನಡ ಪುಸ್ತಕ ಪರಿಷತ್ತು ಸಮ್...

ಪಿ. ಶೇಷಾದ್ರಿ ಸಿನಿಮಾವಲೋಕನಕ್ಕೆ 'ಮುನ್ನುಡಿ'

21-11-2024 ಬೆಂಗಳೂರು

ಬೆಂಗಳೂರು: ಪಿ. ಶೇಷಾದ್ರಿ ಸಿನಿಮಾವಲೋಕನ, ಚಿತ್ರೋತ್ಸವ, ಸಿನಿಮಂಥನ 'ಮುನ್ನುಡಿ' ಚಿತ್ರದಿಂದ ಆರಂಭಗೊಂಡಿದೆ. ಹ...