Date: 08-11-2024
Location: ಬೆಂಗಳೂರು
ಬೆಂಗಳೂರು: ಯಕ್ಷಗಾನ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವ 'ಸಾರ್ಥಕ ಸಾಧಕ' ಪ್ರಶಸ್ತಿಗೆ ಭಾಗವತ ಉಮೇಶ್ ಭಟ್ ಬಾಡ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಯಕ್ಷಸಿಂಚನ ಟ್ರಸ್ಟ್ ತಿಳಿಸಿದೆ.
ಉಮೇಶ್ ಭಟ್ ಅವರು ನಲವತ್ತು ವರ್ಷಗಳಿಂದ ಭಾಗವತಿಕೆ ನಡೆಸಿಕೊಡುತ್ತಿದ್ದಾರೆ. ಪ್ರಸಿದ್ದ ಕಲಾವಿದರಾದ ಚಿಟ್ಟಾಣಿ ರಾಮಚಂದ್ರ ಹೆಗಡೆ, ಜಲವಳ್ಳಿ ವೆಂಕಟೇಶ್ ರಾವ್ ಮತ್ತು ಕುಮಟಾ ಗೋವಿಂದ ನಾಯ್ಕ ಅವರು ಕಟ್ಟಿದ ಮೇಳದಲ್ಲಿ ಭಾಗವತರಾಗಿ ಕೆಲಸ ಮಾಡಿದ್ದಾರೆ .
ನಗರದ ಉದಯಭಾನು ಕಲಾಸಂಘದಲ್ಲಿ ಇದೇ 17ರಂದು ನಡೆಯಲಿರುವ ಟ್ರಸ್ಟ್‌ನ 15 ವಾರ್ಷಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಟ್ರಸ್ಟ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರು: ಕೊಂಕಣಿಯ ಗೌರವಾನ್ವಿತ ಪ್ರಮುಖ ಸಾಹಿತಿ ಮೀನಾ ಕಾಕೊಡಕಾರ ಅವರು 2024 ನಂ. 08 ಶುಕ್ರವಾರದಂದು ಅಗಲಿದ್ದಾರೆ. ...
ಹೊಸಪೇಟೆ: ಕರ್ನಾಟಕ ಇತಿಹಾಸ ಅಕಾಡೆಮಿಯ 'ಇತಿಹಾಸ ಸಂಸ್ಕೃತಿಶ್ರೀ' ಪ್ರಶಸ್ತಿಗೆ ಸಂಶೋಧಕ ಪ್ರೊ. ಕೆ.ಆರ್....
ಬೆಂಗಳೂರು : ಗಾಯನ ಸಮಾಜ ನೀಡುವ ಶ್ರೀ ಕಲಾಜ್ಯೋತಿ ಪ್ರಶಸ್ತಿಗೆ ವಿದುಷಿ ಶಂಕರಿಮೂರ್ತಿ ಆಯ್ಕೆಯಾಗಿದ್ದಾರೆ. \ ಕೆ ಆರ್...
©2024 Book Brahma Private Limited.