ವಿಜ್ಞಾನದ ಲೇಖನಗಳನ್ನು ಮೊದಲ ಬಾರಿಗೆ ಪ್ರೂಫ್ ಮಾಡಿದ್ದೊಂದು ಹೊಸ ಅನುಭವ


"ದಂಡೇಲಿ ನಿಂತು ನೋಡ್ದಾಗ ಸಮುದ್ರ ವಿಶಾಲವಾಗಿ, ಒಂದೇ ಸಮನಾಗಿರುವಂತೆ ಕಾವ್ಯಾತ್ಮಕವಾಗಿ ಕಾಣ್ಸುತ್ತೆ. ಅದೆ ಸಮುದ್ರದಾಳ ಹೊಕ್ಕು ನೋಡ್ದಾಗ ಅದರೊಳಗಿನ ಕಂದರ, ಜೀವರಾಶಿಗಳ ಹೊಸಲೋಕವೇ ದೃಗ್ಗೋಚರವಾಗುತ್ತೆ," ಎನ್ನುತ್ತಾರೆ ಪ್ರಶಾಂತ ಸಾಗರ. ಅವರು ಮಧು ವೈ.ಎನ್ ಅವರ "ಆರ್ಟಿಫೀಶಿಯಲ್ ಇಂಟೆಲಿಜೆನ್ಸ್, ಸರಳಗನ್ನಡದಲ್ಲಿ" ಕೃತಿ ಕುರಿತು ಬರೆದ ವಿಮರ್ಶೆ.

ಕನ್ನಡದಲ್ಲಿ ಕತೆ, ಕಾದಂಬರಿ ಪ್ರಕಾರದ ಸೃಜನಶೀಲ ಸಾಹಿತ್ಯ ವಿಪುಲವಾಗಿದೆ. ಆದರೆ ತಾಂತ್ರಿಕ ಕ್ಷೇತ್ರದಲ್ಲಿರುವ ಅನೇಕ ಲೇಖಕರಿದ್ದೂ ಕೂಡ ಅವರದು ಸಾಮಾಜಿಕ ಕೃತಿಗಳೇ ಹೇರಳವಾಗಿವೇ ಹೊರತು ತಮ್ಮ ಕ್ಷೇತ್ರದ ವೈಜ್ಞಾನಿಕ ವಿಷಯಗಳ ಬಗ್ಗೆ ಪುಸ್ತಕ ಬರೆದವರು ವಿರಳ. ದಂಡೇಲಿ ನಿಂತು ನೋಡ್ದಾಗ ಸಮುದ್ರ ವಿಶಾಲವಾಗಿ, ಒಂದೇ ಸಮನಾಗಿರುವಂತೆ ಕಾವ್ಯಾತ್ಮಕವಾಗಿ ಕಾಣ್ಸುತ್ತೆ. ಅದೆ ಸಮುದ್ರದಾಳ ಹೊಕ್ಕು ನೋಡ್ದಾಗ ಅದರೊಳಗಿನ ಕಂದರ, ಜೀವರಾಶಿಗಳ ಹೊಸಲೋಕವೇ ದೃಗ್ಗೋಚರವಾಗುತ್ತೆ.

ಮೊದಲನೇದು ಯಾವುದಾದ್ರೂ ವಿಷಯದ ಬಗ್ಗೆ ಜನಸಾಮಾನ್ಯರ ಮೇಲ್ನೋಟ ಆದ್ರೆ ಎರಡನೇದು ಆಯಾ ಕ್ಷೇತ್ರದಲ್ಲಿ ಸಕ್ರಿಯವಾಗಿರೋ ಪರಿಣಿತರ ಒಳನೋಟದಂತೆ. ಸಸ್ಯವಿಜ್ಞಾನಿ ಬಿ.ಜಿ.ಎಲ್ ಸ್ವಾಮಿ, ಕೆ.ಎನ್.ಗಣೇಶಯ್ಯ, ಟಿ.ಎಸ್.ಚನ್ನೇಶ್ ಅವರಂತಹ ಬೆರಳೆಣಿಕೆಯ ಲೇಖಕರು ಮಾತ್ರ ತಮ್ಮ ಕಾರ್ಯಕ್ಷೇತ್ರದ ಕುರಿತಾಗಿ ಬರೆದವರು ನೆನಪಾಗ್ತಾರೆ. ಈಗಲೂ ಸಹ ನಮಗೆ ಯಾವುದಾದ್ರು ವೈಜ್ಞಾನಿಕ ಮಾಹಿತಿ ಬೇಕು ಅಂದ್ರೆ ಇಂಗ್ಲಿಷ್ ಪುಸ್ತಕಗಳು, ಅಂತರ್ಜಾಲದ ಮೊರೆ ಹೋಗಬೇಕಾದ ಪರಿಸ್ಥಿತಿ ಇದೆ. ಅಂತದ್ರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಮಧು ವೈ.ಎನ್ ಅವರು ತಮ್ಮ ಸಾಫ್ಟ್‌ವೇರ್ ಕ್ಷೇತ್ರದ ಕುರಿತಾಗಿ ಅನೇಕ ಲೇಖನಗಳು, 'ಡಾರ್ಕ್ ವೆಬ್' ಪುಸ್ತಕದ ನಂತರ ಈಗ ಹೊರ ತಂದಿರುವ ಮತ್ತೊಂದು ಕೃತಿ 'ಆರ್ಟಿಫೀಶಿಯಲ್ ಇಂಟೆಲಿಜೆನ್ಸ್' ಮೂಲಕ ಆ ಕೊರತೆಯನ್ನು ನೀಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ.

ತಂತ್ರಾಂಶ, ಎಐ, ನೆಟ್ವರ್ಕ್ ಗಳಂತಹ ಜಟಿಲ ವಿಷಯಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳವಾಗಿ, ವಿನೋದವಾಗಿ ಬರೆದಿದ್ದಾರೆ. ಕತೆ ಕಾದಂಬರಿಗಳಲ್ಲಿ ಸಣ್ಣಪುಟ್ಟ ಅಕ್ಷರದೋಷಗಳಿದ್ರೂ ಸಹ ಅವು ಕತೆಯ ಓಘದಲ್ಲಿ ಅಷ್ಟಾಗಿ ಗಮನಕ್ಕೆ ಬರೋದಿಲ್ಲ. ಆದರೆ ವಿಜ್ಞಾನ ಸಂಗತಿಗಳಲ್ಲಿ ಒಂದು ಪದ ತಪ್ಪಾದ್ರು ಅದು ಬೇರೇನೆ ಅರ್ಥ ಕೊಡುತ್ತೆ.

ಹಾಗಾಗಿ, ಇದುವರೆಗೂ ಹತ್ತಾರು ಕಾದಂಬರಿ, ಕಥಾಸಂಕಲನಗಳನ್ನು ಪ್ರೂಫ್ ಮಾಡಿರುವ ನನಗೆ ಈ ವಿಜ್ಞಾನದ ಲೇಖನಗಳನ್ನು ಮೊದಲ ಬಾರಿಗೆ ಪ್ರೂಫ್ ಮಾಡಿದ್ದೊಂದು ಹೊಸ ಅನುಭವ.

MORE FEATURES

ನಾಗತಿಹಳ್ಳಿಯವರ ಪ್ರವಾಸಕಥನಗಳು ಇಷ್ಟವಾಗುವುದು ಇಂತಹ ಕಾರಣಗಳಿಗಾಗಿಯೇ !!

01-10-2024 ಬೆಂಗಳೂರು

“ಪ್ರಾಕೃತಿಕವಾಗಿ ಅಗರ್ಭ ಶ್ರೀಮಂತಿಕೆಯನ್ನು ಹೊಂದಿರುವ ದ್ವೀಪರಾಷ್ಟ್ರಗಳಾದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ...

ಹೊಸನೆಲೆಯಲ್ಲಿ ಕಂಡಿರಿಸಿದ ಕನ್ನಡದ ವಿವೇಕ

30-09-2024 ಬೆಂಗಳೂರು

"ಅಧ್ಯಯನದ ಉದ್ದೇಶ ಮತ್ತು ಮಹತ್ವ ಎಂಬುವ ಮೊದಲ ಅಧ್ಯಾಯದಲ್ಲಿ ಇರುವ ಭಾಷೆಯನ್ನು, ಭಾಷಾ ಸಂಸ್ಕೃತಿಯ ಸಾಂಸ್ಕೃತ...

ದೇಶದಲ್ಲಿ ವಿದ್ಯುತ್ ಇಲಾಖೆಯೊಂದನ್ನು ಹುಟ್ಟುಹಾಕಿದ ಮೊದಲ ಸಂಸ್ಥಾನ ಮೈಸೂರು

30-09-2024 ಬೆಂಗಳೂರು

“ವಿದ್ಯುತ್ ಎಂಬ ವಿಸ್ಮಯದ ಹಿನ್ನೆಲೆಯೇ ಗೊತ್ತಿಲ್ಲದ ಆ ಕಾಲಘಟ್ಟದಲ್ಲಿ ಇಂಥದ್ದೊಂದು ಮಹತ್ಕಾರ್ಯಕ್ಕೆ ಮುಂದಾದ ಆ ತ...