Date: 30-12-2024
Location: ಬೆಂಗಳೂರು
ಸುದೀಪ್ ಅಭಿನಯದ ‘ಮ್ಯಾಕ್ಸ್’ ಚಿತ್ರವು ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದೆ. ಚಿತ್ರದಲ್ಲಿ ಒಂದು ರಾತ್ರಿಯ ಕಥೆ ಇತ್ತು. ರಾತ್ರಿ ಏಳಕ್ಕೆ ಶುರುವಾಗುವ ಚಿತ್ರವು ಬೆಳಿಗ್ಗೆ ಏಳಕ್ಕೆ ಮುಗಿಯುತ್ತದೆ. ಈಗ ಅದೇ ತರಹದ ಕಥೆ ಇನ್ನೊಂದು ಚಿತ್ರ ತೆರೆಗೆ ಬರುವುದಕ್ಕೆ ಸಜ್ಜಾಗಿದೆ. ವ್ಯತ್ಯಾಸವೆಂದರೆ ಅಲ್ಲಿ, 7ರಿಂದ 7, ಇಲ್ಲಿ 6ರಿಂದ 6. ಅಲ್ಲಿ ಸುದೀಪ್, ಇಲ್ಲಿ ವಿಜಯ್ ರಾಘವೇಂದ್ರ.
ವಿಜಯ್ ರಾಘವೇಂದ್ರ ಅಭಿನಯದ ಹೊಸ ಚಿತ್ರದ ಹೆಸರು ‘FIR 6 to 6’. ಇದೊಂದು ಥ್ರಿಲ್ಲರ್ ಚಿತ್ರವಾಗಿದ್ದು, ಈಗಾಗಲೇ ಸದ್ದಿಲ್ಲದೆ ಚಿತ್ರೀಕರಣವಾಗಿ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಈ ಹಿಂದೆ ‘ಪಟ್ಟಾಭಿಷೇಕ’ ಎಂಬ ಚಿತ್ರವನ್ನು ನಿರ್ಮಿಸಿದ್ದ ಭಾಗ್ಯ ರಮೇಶ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೆ.ವಿ. ರಮಣರಾಜ್ ಈ ಚಿತ್ರದ ನಿರ್ದೇಶಕರು. ಈ ಚಿತ್ರದ ಹಾಡುಗಳು ಮತ್ತು ಟೀಸರ್ ಇತ್ತೀಚೆಗೆ ಬಿಡುಗಡೆ ಆಗಿದೆ.
‘FIR 6 to 6’ ಚಿತ್ರದ ಕುರಿತು ಮಾತನಾಡುವ ವಿಜಯ್ ರಾಘವೇಂದ್ರ, ‘ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾ. ಇಡೀ ಚಿತ್ರವನ್ನು ರಾತ್ರಿ ಹೊತ್ತು ಚಿತ್ರೀಕರಣ ಮಾಡಿದ್ದೇವೆ. ಹಲವು ರಾತ್ರಿಗಳ ಕಾಲ ಈ ಚಿತ್ರಕ್ಕಾಗಿ ಕಷ್ಟಪಟ್ಟಿದ್ದೇವೆ. ಒಮ್ಮೊಮ್ಮೆ ಬೆಳಗಿನ ಜಾವ ನಾಲ್ಕರವರೆಗೆ ಚಿತ್ರೀಕರಣ ನಡೆದಿದ್ದೆ. ಈ ಚಿತ್ರದಲ್ಲಿ ಸಾಹಸ ದೃಶ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ’ ಎಂದರು.
ರಮಣರಾಜ್ ಈ ಹಿಂದೆ ತೆಲುಗಿನ ಜೆಡಿ ಚಕ್ರವರ್ತಿ ಅವರ ಜೊತೆ ಒಂದು ಚಿತ್ರ ಮಾಡಿದ್ದರಂತೆ. ಆ ಚಿತ್ರ ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ‘ಯುವಕನೊಬ್ಬ ಒಂದು ಘಟನೆಯಲ್ಲಿ ಸಿಕ್ಕಿ ಹಾಕಿಕೊಂಡು ನಂತರ ಆ ಸಂದರ್ಭವನ್ನು ಹೇಗೆ ಎದುರಿಸುತ್ತಾನೆ ಅನ್ನೋದನ್ನು ಸಂಜೆ ಆರರಿಂದ ಬೆಳಗಿನ ಜಾವ ಆರರವರೆಗೆ ನಡೆಯುವ ಕಥೆಯ ಮೂಲಕ ಹೇಳಲು ಪ್ರಯತ್ನಿಸಿದ್ದೇವೆ. ವಿಜಯ್ ರಾಘವೇಂದ್ರ ಅವರ ಜತೆ ಕೆಲಸ ಮಾಡಿದ್ದು ಒಳ್ಳೆಯ ಅನುಭವ. 35 ರಾತ್ರಿಗಳ ಕಾಲ ಚಿತ್ರೀಕರಣ ಮಾಡಿದ್ದೇವೆ’ ಎಂದು ಹೇಳಿದರು.
‘FIR 6 to 6’ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಜೊತೆಗೆ ಸಿರಿ ರಾಜ್, ನಾಗೇಂದ್ರ ಅರಸ್, ಬಲ ರಾಜವಾಡಿ, ಯಶ್ ಶೆಟ್ಟಿ, ಯಶ, ಶ್ವೇತಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಓಂಜಿ ಅವರ ಛಾಯಾಗ್ರಹಣ, ನಾಗೇಂದ್ರ ಅರಸ್ ಸಂಕಲನ, ಸತೀಶ್ ಬಾಬು ಹಾಗೂ ಎಂ.ಎಸ್. ತ್ಯಾಗರಾಜ್ ಸಂಗೀತವಿದೆ.
‘FIR 6 to 6’ ಚಿತ್ರವಲ್ಲದೆ, ವಿಜಯ್ ರಾಘವೇಂದ್ರ ಅಭಿನಯದ ‘ರಿಪ್ಪನ್ ಸ್ವಾಮಿ’ ಸಹ ಬಿಡುಗಡೆಗೆ ಸಜ್ಜಾಗುತ್ತಿವೆ. ಈ ಎರಡೂ ಚಿತ್ರಗಳು 2025ರಲ್ಲಿ ಬಿಡುಗಡೆಯಾಗಲಿವೆ.
ಕಳೆದ ವರ್ಷ ದಸರಾ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿದ್ದರು ನಿರ್ದೇಶಕ ವಿಜಯಪ್ರಸಾದ್. ಆದರೆ, ಅವರು ...
ಬೆಂಗಳೂರು: ನಾಟಕಕಾರ, ಚಿತ್ರಕಲಾವಿದ ಡಾ.ಡಿ.ಎಸ್. ಚೌಗಲೆ ಅವರ ‘ಸದರಬಜಾರ್’(ಕಾದಂಬರಿ) ಹಾಗೂ ‘ವಾರಸ...
ಮಂಗಳೂರು: ಲೇಖಕ ರಾಜಾರಾಂ ತಲ್ಲೂರು ಅವರ ‘ಪಿಟ್ಕಾಯಣ’ ಅಂಕಣ ಬರಹಗಳ ಕೃತಿಯು 2025 ಜ. 04 ಶುಕ್ರವಾರದಂದು ಮ...
©2025 Book Brahma Private Limited.