‘ಸ್ಟಂಪ್ಡ್‌ –ಲೈಫ್ ಬಿಹ್ಯಾಂಡ್ ಅ್ಯಂಡ್ ಬಿಯಾಂಡ್ ದ 22 ಯಾರ್ಡ್ಸ್‌’ ಕೃತಿಯ ಲೋಕಾರ್ಪಣಾ ಸಮಾರಂಭ

Date: 30-12-2024

Location: ಬೆಂಗಳೂರು


ಬೆಂಗಳೂರು: ಸೈಯದ್ ಮುಜ್ತಾಬಾ ಹುಸೇನ್ ಕಿರ್ಮಾನಿ ಅವರ ಆತ್ಮಚರಿತ್ರೆ ‘ಸ್ಟಂಪ್ಡ್‌ –ಲೈಫ್ ಬಿಹ್ಯಾಂಡ್ ಅ್ಯಂಡ್ ಬಿಯಾಂಡ್ ದ 22 ಯಾರ್ಡ್ಸ್‌’ ಬಿಡುಗಡೆ ಸಮಾರಂಭವು 2024 ಡಿ.29 ಭಾನುವಾರದಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಸಭಾಭವನದಲ್ಲಿ ನಡೆಯಿತು.

ಕೃತಿಯನ್ನು 1983ರ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಕಪಿಲ್ ದೇವ್ ಅವರು ಬಿಡುಗಡೆ ಮಾಡಿದರು. ಅವರೊಂದಿಗೆ ಸ್ಪಿನ್ ದಿಗ್ಗಜರಾದ ಎರ‍್ರಪಳ್ಳಿ ಪ್ರಸನ್ನ, ಬಿ.ಎಸ್. ಚಂದ್ರಶೇಖರ್, ಅನಿಲ್ ಕುಂಬ್ಳೆ, ಬ್ರಿಜೇಶ್ ಪಟೇಲ್, ಬ್ಯಾಟಿಂಗ್‌ ಚಾಂಪಿಯನ್‌ ರಾಹುಲ್ ದ್ರಾವಿಡ್, ವಿ.ವಿ.ಎಸ್. ಲಕ್ಷ್ಮಣ್ ಅವರಿದ್ದರು. ಐಟಿ ಉದ್ಯಮದ ದಿಗ್ಗಜ, ಇನ್ಫೋಸಿಸ್‌ನ ಎನ್‌.ಆರ್. ನಾರಾಯಣ ಮೂರ್ತಿ, ಡಿಸಿಎಂ ಡಿ.ಕೆ. ಶಿವಕುಮಾರ್ ಉಪಸ್ಥಿತರಿದ್ದರು.

ಪುಸ್ತಕ ಬಿಡುಗಡೆ ಮಾಡಿದ ಕಪಿಲ್ ದೇವ್, "ಕಿರ್ಮಾನಿ ನಮ್ಮೊಂದಿಗೆ ತಂಡದಲ್ಲಿದ್ದಾಗ ಮಿತಭಾಷಿಯಾಗಿದ್ದರು. ಅಷ್ಟೇ ಅಲ್ಲದೆ ಶಾಂತಚಿತ್ತದಿಂದ ಇರುತ್ತಿದ್ದರು. ಆದರೆ ಅವರ ಶಿಸ್ತು, ಸಂಯಮವನ್ನು ನೋಡಿ ನಾವೂ ಬಹಳಷ್ಟು ಕಲಿತಿದ್ದೇವೆ," ಎಂದು ಹೇಳಿದರು.

ಎನ್‌.ಆರ್. ನಾರಾಯಣಮೂರ್ತಿ ಮಾತನಾಡಿ, "ಕರ್ನಾಟಕದ ಕ್ರಿಕೆಟಿಗರು ಸಭ್ಯವಾದ ಸಂಸ್ಕೃತಿಯನ್ನು ಹೊಂದಿದ್ದಾರೆ. ಅವರು ಎಲ್ಲಿಯೇ ಹೋಗಲಿ ತಮ್ಮ ಉತ್ತಮ ಆಟದ ಜೊತೆಗೆ, ಸ್ವಭಾವದಿಂದಲೂ ಜನಮನ ಗೆಲ್ಲುತ್ತಾರೆ. ದೇಶಕ್ಕೆ, ರಾಜ್ಯಕ್ಕೆ ಕೀರ್ತಿ ತರುತ್ತಾರೆ. ಅಂತಹ ಗಣ್ಯರಲ್ಲಿ ಕಿರ್ಮಾನಿ ಕೂಡ ಅಗ್ರಮಾನ್ಯರು," ಎಂದರು.

 

 

MORE NEWS

‘ಸಿದ್ಲಿಂಗು 2’ ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್ …

04-01-2025 ಬೆಂಗಳೂರು

ಕಳೆದ ವರ್ಷ ದಸರಾ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿದ್ದರು ನಿರ್ದೇಶಕ ವಿಜಯಪ್ರಸಾದ್‍. ಆದರೆ, ಅವರು ...

ಡಿ.ಎಸ್. ಚೌಗಲೆ ಅವರ ‘ಸದರಬಜಾರ್’ ಹಾಗೂ ‘ವಾರಸಾ’ ಕೃತಿಯ ಲೋಕಾರ್ಪಣೆ

04-01-2025 ಬೆಂಗಳೂರು

ಬೆಂಗಳೂರು: ನಾಟಕಕಾರ, ಚಿತ್ರಕಲಾವಿದ ಡಾ.ಡಿ.ಎಸ್. ಚೌಗಲೆ ಅವರ ‘ಸದರಬಜಾರ್’(ಕಾದಂಬರಿ) ಹಾಗೂ ‘ವಾರಸ...

ಲೇಖಕ ರಾಜಾರಾಂ ತಲ್ಲೂರು ಅವರ ‘ಪಿಟ್ಕಾಯಣ’ ಕೃತಿ ಲೋಕಾರ್ಪಣಾ ಸಮಾರಂಭ

04-01-2025 ಬೆಂಗಳೂರು

ಮಂಗಳೂರು: ಲೇಖಕ ರಾಜಾರಾಂ ತಲ್ಲೂರು ಅವರ ‘ಪಿಟ್ಕಾಯಣ’ ಅಂಕಣ ಬರಹಗಳ ಕೃತಿಯು 2025 ಜ. 04 ಶುಕ್ರವಾರದಂದು ಮ...