ಸವಿರಾಜ್ ಆನಂದೂರು ಹಾಗೂ ದಸ್ತಗೀರ ದಿನ್ನಿಗೆ ‘ಸಹೃದಯ ಕಾವ್ಯ ಪ್ರಶಸ್ತಿ’

Date: 08-04-2025

Location: ಬೆಂಗಳೂರು


ಸವದತ್ತಿ: ಸಹೃದಯ ಸಾಹಿತ್ಯ ಪ್ರತಿಷ್ಠಾನ ಕೊಡಮಾಡುವ ರಾಜ್ಯಮಟ್ಟದ ‘ಸಹೃದಯ ಕಾವ್ಯ ಪ್ರಶಸ್ತಿ’ಗಾಗಿ ಈ ಬಾರಿ ಎರಡು ಕೃತಿಗಳು ಆಯ್ಕೆಯಾಗಿವೆ ಎಂದು ಪ್ರತಿಷ್ಠಾನದ ಅಧ್ಯಕ್ಷ ನಾಗೇಶ್ ಜೆ. ನಾಯಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಂಗಳೂರಿನ ಸವಿರಾಜ್ ಆನಂದೂರು ರಚಿಸಿರುವ ‘ಗಂಡಸರನ್ನು ಕೊಲ್ಲಿರಿ’ ಎಂಬ ಕವನ ಸಂಕಲನ ಹಾಗೂ ಬಳ್ಳಾರಿಯ ದಸ್ತಗೀರಸಾಬ್ ದಿನ್ನಿ ರಚಿಸಿರುವ ‘ಮಧು ಬಟ್ಟಲಿನ ಗುಟುಕು’ ಎಂಬ ಗಜಲ್ ಸಂಕಲನಗಳಿಗೆ ಈ ಗೌರವ ಲಭಿಸಿದೆ.

ಪ್ರತಿಷ್ಠಾನದ ಮೂರನೇ ವಾರ್ಷಿಕೋತ್ಸವದ ಅಂಗವಾಗಿ ಈ ಪ್ರಶಸ್ತಿಗೆ ಕೃತಿಗಳನ್ನು ಆಹ್ವಾನಿಸಲಾಗಿತ್ತು. 100ಕ್ಕೂ ಹೆಚ್ಚು ಕೃತಿಗಳು ಸ್ಪರ್ಧೆಗಿದ್ದರು. ಪ್ರಶಸ್ತಿಗೆ ಅಂತಿಮವಾಗಿ ಆಯ್ಕೆಯಾಗಿರುವ ಈ ಕೃತಿಗಳನ್ನು ಹಿರಿಯ ಜಾನಪದ ವಿದ್ವಾಂಸ ಡಾ. ಸಿ. ಕೆ. ನಾವಲಗಿ ಅವರು ವಿಮರ್ಶಿಸಿದ್ದಾರೆ.

ಬರುವ ಮೇ ತಿಂಗಳಿನಲ್ಲಿ ಪಟ್ಟಣದಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಪ್ರಶಸ್ತಿ ವಿಜೇತರಿಗೆ ತಲಾ ರೂ.5 ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಗುವುದು.

ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಉಪಾಧ್ಯಕ್ಷ ಬಸವರಾಜ ಪಟ್ಟಣಶೆಟ್ಟಿ, ಕಾರ್ಯದರ್ಶಿ ರಮೇಶ್ ತಳವಾರ ಹಾಗೂ ಸಂಚಾಲಕರಾದ ಎಸ್. ಬಿ. ಗರಗ ಉಪಸ್ಥಿತರಿದ್ದರು.

MORE NEWS

‘ದಿವಂಗತ ಶ್ರೀ ಹೊಂಬಣ್ಣ ಪ್ರಶಸ್ತಿಗೆ’ ಕಪಿಲ ಪಿ.ಹುಮನಾಬಾದೆ ಅವರ ‘ಬಣಮಿ’ ಕೃತಿ ಭಾಜನ

02-05-2025 ಬೆಂಗಳೂರು

ಬೆಂಗಳೂರು: ಸಾಹಿತ್ಯ ಕ್ಷೇತ್ರದಲ್ಲಿ ಬರಹಗಾರರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಲ್ಲತ್ತಹಳ್ಳಿ ಬಾಲ ಗಂಗಾಧರ ನಗರದ &ls...

ವಿಶ್ವ ಬಸವ ಜಯಂತಿ 2025 ನಿಮಿತ್ತ ಬೈಲಹೊಂಗಲದಲ್ಲಿ ಮೇ 4ರಂದು ಗ್ರಂಥ ಲೋಕಾರ್ಪಣೆ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿ

28-04-2025 ಬೆಂಗಳೂರು

ಬೈಲಹೊಂಗಲ: ಬಸವ ಸಮಿತಿ ಬೆಂಗಳೂರು ಇವರ ವತಿಯಿಂದ ವಿಶ್ವ ಬಸವ ಜಯಂತಿ 2025 ರ ನಿಮಿತ್ತ ಮಹಾನ್ ದಾರ್ಶನಿಕ ಬಸವಣ್ಣ ಗ್ರಂಥ ...

‘ಆಕಾಶ ನದಿ ಬಯಲು’ ಕೃತಿಯ ಲೋಕಾರ್ಪಣಾ ಸಮಾರಂಭ

28-04-2025 ಬೆಂಗಳೂರು

ಬೆಂಗಳೂರು: ಹಲಸಂಗಿಯ ಸುಗಮ ಪುಸ್ತಕ ವತಿಯಿಂದ ಮೇರಿ ಆಲಿವರ್ ಅವರ ಮೂಲ ಕವಿತೆಗಳ ಅನುವಾದ ಚೈತ್ರಾ ಶಿವಯೋಗಿಮಠ ಅವರ &lsquo...