ಸಣ್ಣ ಕತೆಗಾರ್ತಿ, ರಂಗಕಲಾವಿದೆ ಮನೋರಮಾ ಎಂ.ಭಟ್ ಇನ್ನಿಲ್ಲ

Date: 16-09-2024

Location: ಬೆಂಗಳೂರು


ಬೆಂಗಳೂರು: ಸಣ್ಣ ಕತೆಗಾರ್ತಿ, ಆಕಾಶವಾಣಿ ಕಲಾವಿದೆ, ಅಂಕಣಗಾರ್ತಿ, ರಂಗಕಲಾವಿದೆ, ಕವಯಿತ್ರಿ, ಲೇಖಕಿಯಾಗಿ ಗುರುತಿಸಿಕೊಂಡಿದ್ದ ಮನೋರಮಾ ಎಂ.ಭಟ್ ಅವರು ತಮ್ಮ 92ನೇ ವಯಸ್ಸಿನಲ್ಲಿ ಭಾನುವರದಂದು ನಿಧನರಾದರು.

ಲೇಖಕಿಯ ಪರಿಚಯ: ಮನೋರಮಾ ಎಂ ಭಟ್ ಅವರು ಮೂಲತಃ ದಕ್ಷಿಣ ಕನ್ನಡದ ಪುತ್ತೂರಿನವರು. 1932 ಜುಲೈ 15 ರಂದು ಜನನ. ನೋಬೆಲ್ ಪ್ರಶಸ್ತಿ ವಿಜೇತ ಅರ್ನೆಸ್ ಹೇಮಿಂಗ್ವೇಯ ಕಾದಂಬರಿ 'ಓಲ್ದ್ ಮ್ಯಾನ್ ಆಂಡ್ ದ ಸಿ'-ಇದರ ರೇಡಿಯೋ ನಾಟಕವನ್ನು ಕೇಳಿದ ಮನೋರಮಾರಿಗೆ ಅದೇ ಬಾನುಲಿ ಮಾಧ್ಯಮಕ್ಕೆ ಪ್ರವೇಶಿಸಲು ಈ ನಾಟಕ ಪ್ರೇರಣೆಯನ್ನೊದಗಿಸಿತು. ಮುಂದಕ್ಕೆ ಸ್ವಯಂ ಒಬ್ಬ ಕಲಾವಿದೆಯಾಗಿ, ನಿರ್ದೇಶಕಿಯಾಗಿ, ರಂಗಕಲಾವಿದೆಯಾಗಿ, ಕತೆಗಾರ್ತಿಯಾಗಿ ತಮ್ಮನ್ನು ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

’ಸ್ವಯಂವರ, ಶಬ್ದಗಳಾಗದ ಧ್ವನಿಗಳು’ ಅವರ ಕಥಾಸಂಕಲನಗಳು. “ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಲೇಖಕಿಯರು, ವ್ಯಂಗ್ಯ ಬದುಕು (ಶಿಂಗಣ್ಣ ಖ್ಯಾತಿಯ ಶ್ರೀ ಕೆ. ರಾಮಕೃಷ್ಣ ಅವರ ಜೀವನ ಮತ್ತು ಸಾಧನೆ), ಮುಳಿಯರ ನೆನಪು (ಮುಳಿಯ ತಿಮ್ಮಪ್ಪಯ್ಯನವರ ಜೀವನ ಸಾಧನೆ ಕುರಿತ ಲೇಖನ ಸಂಗ್ರಹ)” ಅವರ ಸಂಪಾದಿತ ಕೃತಿಗಳು. ’ಹೆಣ್ಣಿಗೇಕೆ ಈ ಶಿಕ್ಷೆ?’ ಎಂಬ ವೈಚಾರಿಕ ಬರಹವನ್ನು ಬರೆದಿದ್ದಾರೆ. ’ಅತ್ತಿಮಬ್ಬೆ ಪ್ರತಿಷ್ಠಾನದ ಸಾಹಿತ್ಯ ಪ್ರಶಸ್ತಿ, ಸಾಗರದ 'ಹೊಸಬಾಳೆ ಅನಂತಪ್ಪ ಸೇವಾ ಪುರಸ್ಕಾರ' ಮಂಗಳೂರಿನಲ್ಲಿ ರಾಜ್ಯೋತ್ಸವ ಪ್ರಶಸ್ತಿ’ಗಳು ಲಭಿಸಿವೆ. ಅವರು ಮಂಗಳೂರು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿದ್ದರು.

MORE NEWS

ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆಯುವ ಮೂರು ದಿನಗಳ ಕಮ್ಮಟ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

19-09-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೋಟಗೋಡಿ, ಹಾವೇರಿ ಜಿಲ್ಲೆ ಇವರ ಸಹಯೋಗದಲ್ಲ...

ದಲಿತ ಬಂಡಾಯದ ಜೊತೆಗೆ ಮಹಿಳಾ ಎಂದು ಸೇರಿಸಬೇಕು; ಲಲಿತಾ ಸಿದ್ಧಬಸವಯ್ಯ

19-09-2024 ಬೆಂಗಳೂರು

ಬೆಂಗಳೂರು: ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘ ಕನ್ನಡ ಸಂಘದ ಸುವರ್ಣ ಮಹೋತ್ಸವ 2024ರ ಅಂಗವಾಗಿ ಏರ್ಪಡಿಸಿದ್ದ ಎರಡು ದಿನಗಳ ...

ಸಮಕಾಲೀನ ಸಾಮಾಜಿಕ ವಿಚಾರಗಳನ್ನು ಕುರಿತ ಮೂರು ದಿನಗಳ "ವಿಚಾರ ಕಮ್ಮಟ" ಸಂವಾದ ಕಾರ್ಯಾಗಾರ

17-09-2024 ಬೆಂಗಳೂರು

ಬೆಂಗಳೂರು: ಕನ್ನಡದ ಖ್ಯಾತ ಕತೆಗಾರ ದಿವಂಗತ ಡಾ. ಬೆಸಗರಹಳ್ಳಿ ರಾಮಣ್ಣ ಅವರ ಸ್ಮರಣಾರ್ಥವಾಗಿ ಆರಂಭವಾಗಿರುವ ಡಾ. ಬೆಸಗರಹಳ...