“ಅದೆಷ್ಟು ಪದರಗಳನ್ನು ಹೊಂದಿದ್ದ ಪುಸ್ತಕ ಎಂದರೆ ಓದಿದ್ದನ್ನು ಮನನ ಮಾಡಿಕೊಂಡು ನಂತರ ಮುಂದಿನ ಪುಟಗಳಿಗೆ ಹೋಗಬೇಕಾಗಿತ್ತು,” ಎನ್ನುತ್ತಾರೆ ಸಂಧ್ಯಾರಾಣಿ. ಅವರು ವಿವಿಧ ಲೇಖಕರ ಸಂಪಾದಕತ್ವದಲ್ಲಿ ಮೂಡಿಬಂದ “ಗಡಿಪಾರು ಮತ್ತು ಗದ್ದುಗೆ” ಕೃತಿ ಕುರಿತು ಬರೆದ ವಿಮರ್ಶೆ.
ಅಲ್ಬರ್ಟ್ ಕಮೂ – ಗಂಭೀರವಾಗಿ ಓದಲು ಪ್ರಾರಂಭಿಸಿದಾಗಿನಿಂದ ಆಗಾಗ ಮೆಚ್ಚಿಗೆ, ಗೌರವದ ದನಿಯಲ್ಲಿ ಕೇಳುತ್ತಿದ್ದ ಹೆಸರು. ಕೋವಿಡ್ ಸಮಯದಲ್ಲಿ ಹೆಚ್ ಎಸ್ ಆರ್ ದವರು ಅನುವಾದಿಸಿದ್ದ ಇವನ ಪ್ಲೇಗ್ ಕಾದಂಬರಿ ಓದಿ, ಅದರಲ್ಲಿ ಆಳವಾಗಿ ಮುಳುಗಿಹೋಗಿದ್ದೆ. ಕೋವಿಡ್ ಕಾಲಕ್ಕೂ ಅದಕ್ಕೂ ಒಂದು ಬೆಚ್ಚಿಬೀಳಿಸುವ ಸಾಮ್ಯ ಇತ್ತು. ಆ ಕೃತಿಯನ್ನು ಕಮೂ ಹಿಟ್ಲರ್ ನ ಆಕ್ರಮಣವನ್ನು ಕುರಿತು ಬರೆದಿದ್ದ ಎನ್ನುವ ಮಾತಿದೆ. ಒಂದು ಮಹಾಕೃತಿ ಕಾಲಕ್ಕೆ ತಕ್ಕಂತೆ ತನ್ನ ಒಳಗನ್ನು ಹೊಸಬೇಳಕಿನಲ್ಲಿ ತೋರುವುದು ಎಂದರೆ ಇದೇ ಇರಬೇಕು. ಇವನ ‘ದ ಔಟ್‌ಸೈಡರ್’ ಇಂಗ್ಲಿಷಿನಲ್ಲಿ ಓದಿದ್ದೆ.
ಅದೆಷ್ಟು ಪದರಗಳನ್ನು ಹೊಂದಿದ್ದ ಪುಸ್ತಕ ಎಂದರೆ ಓದಿದ್ದನ್ನು ಮನನ ಮಾಡಿಕೊಂಡು ನಂತರ ಮುಂದಿನ ಪುಟಗಳಿಗೆ ಹೋಗಬೇಕಾಗಿತ್ತು. ಕಮೂನ ಒಂದೆರಡು ಕಥೆಗಳನ್ನು ಮಾತ್ರ ಓದಿದ್ದ ನಾನು, ಮಿಕ್ಕ ಕಥೆಗಳನ್ನು ಓದುವುದನ್ನು ಕಾಲದಿಂದಲೂ ಮುಂದಕ್ಕೆ ಹಾಕುತ್ತಿದ್ದೆ. ಈಗ ನುಡಿ ಪ್ರಕಾಶನ ಇವನ ಎಲ್ಲಾ ಕಥೆಗಳ ಕನ್ನಡ ಅನುವಾದವನ್ನು ಪ್ರಕಟಿಸಿದೆ. ಪುಸ್ತಕದ ಹೆಸರು, ‘ಗಡಿಪಾರು ಮತ್ತು ಗದ್ದುಗೆ’. ಓದದೆ ಇರುವುದು ಹೇಗೆ?! ಒಟ್ಟು 6 ಕಥೆಗಳನ್ನು ಹೊಂದಿರುವ ಈ ಪುಸ್ತಕದ ಕಥೆಗಳನ್ನು ಬಸವರಾಜ ನಾಯ್ಕರ, ಎಸ್ ದಿವಾಕರ್, ಪ್ರಕಾಶ್ ನಾಯಕ್, ಜಯಶ್ರೀ ಕಾಸರವಳ್ಳಿ, ಸಹನಾ ಹೆಗಡೆ ಮತ್ತು ಸಂಯುಕ್ತ ಪುಲಿಗಲ್ ಅನುವಾದಿಸಿದ್ದಾರೆ.
ಸಂಕೀರ್ಣ ಕಥೆಗಳನ್ನು ಕನ್ನಡಕ್ಕೆ ಇವರೆಲ್ಲಾ ಒಗ್ಗಿಸಿರುವ ಪರಿಗೆ ಶರಣು. ಕಥೆಯನ್ನು ಪದಗಳಲ್ಲಿ ಅಷ್ಟೇ ಅಲ್ಲದೆ, ವಾತಾವರಣದ ಮೂಲಕವೂ ಕಟ್ಟುವ, ಅದಕ್ಕೆ ಹಲವು ಪದರಗಳನ್ನು ನೇಯುವ ಕಮೂನ ಕಲೆಯನ್ನು ಕಂಡು ಅಚ್ಚರಿ, ಬೆರಗು, ಮೆಚ್ಚುಗೆ, ಗೌರವ ಎಲ್ಲವೂ. ಒಂದೊಂದು ಕಥೆ ಒಂದೊಂದು ಕಾರಣಕ್ಕೆ ಇಷ್ಟವಾಯಿತು. ಅವು ಹುಟ್ಟಿಸುವ ಅಂತರ್ಮಥನ ಮತ್ತು ವಿಷಾದ ಸುಲಭಕ್ಕೆ ಮರೆಯುವಂತಹುದಲ್ಲ. ಥ್ಯಾಂಕ್ಯೂ ನುಡಿಪುಸ್ತಕ ಈ ಅನುವಾದಕ್ಕೆ!.
- ಸಂಧ್ಯಾರಾಣಿ
“ಈಗಾಗಲೇ ಹೇಳಿದ ಹಾಗೆ ನನ್ನ ಸಾಹಿತ್ಯ ಕೃಷಿಯ ಬೀಜಾಂಕುರವಾದದ್ದು ಹಾಗೂ ನನ್ನ ಇಂಗ್ಲಿಷ್ ಭಾಷಾ ಬೋಧಕ ವೃತ್ತಿಗೆ ಭದ...
“ಹೊಸದೊಂದೇನಾದರೂ ಹೇಳುವ ತುಡಿತ ಹೊಂದಿರುವ ದೇಸಾಯಿಯವರು ಸೊಳ್ಳೆಯ ಲೋಕದ ದರ್ಶನ ಮಾಡಿಸಿದ್ದಾರೆ. ಸಮ್ಮು ಎಂಬ ಪ್ರಥ...
"ಒಂದು ದಿನ ಆ ತಪಸ್ವಿ ಎಂದಿನಂತೆ ರಾಜನಿಗೆ ಹಣ್ಣನ್ನು ಅರ್ಪಿಸಿ ಹೋದಾಗ, ಅಲ್ಲಿಗೆ ಆಕಸ್ಮಿಕವಾಗಿ ಬಂದ ಒಂದು ಸಾಕಿದ ...
©2024 Book Brahma Private Limited.