ಸಮಗ್ರ ಕರ್ನಾಟಕದ ಕಲೆಯೊಂದಿದ್ದರೆ ಅದು ಯಕ್ಷಗಾನ ಮಾತ್ರ: ನರಹಳ್ಳಿ

Date: 16-09-2024

Location: ಬೆಂಗಳೂರು


ಬೆಂಗಳೂರು: ಯಕ್ಷವಾಹಿನಿ ಪ್ರತಿಷ್ಠಾನ ಮತ್ತು ಹೆಗ್ಗೋಡಿನ ಯಕ್ಷ ದುರ್ಗ ಕಲಾ ಬಳಗ ಜಂಟಿಯಾಗಿ ಹಮ್ಮಿಕೊಂಡಿದ್ದ ಪಿ. ಚಂದ್ರಿಕಾ ಅವರ 'ಮೋದಾಳಿ' ನಾಟಕ ಆಧಾರಿತ 'ಮೋದಾಳಿ ಪರಿಣಯ' ಯಕ್ಷಗಾನ ತಾಳಮದ್ದಳೆ ಪ್ರದರ್ಶನ ಕಾರ್ಯಕ್ರಮ ಸೆಪ್ಟೆಂಬರ್ 15, 2024ರಂದು ಎಂ.ವಿ.ಸಿ. ಸಭಾಂಗಣ, ಬಿ.ಎಂ.ಶ್ರೀ. ಕಲಾಭವನ ನ.ರಾ. ಕಾಲೋನಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಕುರಿತು ಮಾತನಾಡಿದ ಹಿರಿಯ ಸಾಹಿತಿ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು, "ಸರ್ಕಾರದ ನೆರವಿಲ್ಲದೆ ಜನರೇ ಪೋಷಿಸಿ, ಪ್ರೋತ್ಸಾಹಿಸುತ್ತಿರುವ ಕಲಾ ಪ್ರಕಾರ ಯಕ್ಷಗಾನ.' 'ಸಮಗ್ರ ಕರ್ನಾಟಕದ ಕಲೆಯೊಂದಿದ್ದರೆ ಅದು ಯಕ್ಷಗಾನ ಮಾತ್ರ. ಈ ಕಲೆಯು ಉತ್ತರ ಮತ್ತು ದಕ್ಷಿಣ ಕರ್ನಾಟಕಕ್ಕೆ ಸೀಮಿತವಾಗದೆ, ಇದು ಅಖಂಡ ಕರ್ನಾಟಕದ ಕಲೆಯಾಗಿದೆ. ಭಾಷಾ, ವೇಷ, ಶೈಲಿ, ಕಥನ ಎಲ್ಲ ರೀತಿಯಲ್ಲಿಯೂ ತನ್ನ ದೇಸೀತನವನ್ನು ಉಳಿಸಿಕೊಂಡು, ಆಧುನಿಕ ಪರಿವೇಷದಲ್ಲಿಯೂ ತನ್ನ ಅನನ್ಯತೆಯನ್ನು ಈ ಕಲೆ ಉಳಿಸಿಕೊಂಡಿದೆ. ಇದು ಕೇವಲ ಕಲೆ ಮಾತ್ರವಾಗಿರದೆ, ಸಮುದಾಯ ಶಿಕ್ಷಣಕ್ಕೂ ನೆರವಾಗುವುದರಿಂದ ಸರ್ಕಾರ ಆದ್ಯತೆ ನೀಡಿ ಪ್ರೋತ್ಸಾಹಿಸಬೇಕು," ಎಂದು ಆಶಯ ಮಾತುಗಳನ್ನಾಡಿದರು.

ಕೃತಿ ಆರ್. ಪುರಪ್ಪೇಮನೆ ಅವರ ರಚನೆ, ನಿರ್ದೇಶನ ಹಾಗೂ ಭಾಗವತಿಕೆಯ 'ಮೋದಾಳಿ ಪರಿಣಯ' ಯಕ್ಷಗಾನ ತಾಳಮದ್ದಳೆಯ ಮುಮ್ಮೇಳದಲ್ಲಿ ಜಯಶ್ರೀ ಶರ್ಮ, ಪ್ರಶಾಂತಿ ರಾವ್, ಜಯಶ್ರೀ ಸಾಗರ, ನಿರ್ಮಲಾ ಕೃಷ್ಣಮೂರ್ತಿ, ರೂಪಜ ರಾವ್, ಅಕ್ಷತಾ ಹುಂಚದಕಟ್ಟೆ ಪ್ರದರ್ಶನ ನೀಡಿದರು. ಮದ್ದಳೆ-ಚಂಡೆಯಲ್ಲಿ ಕುಶ ಎಂ.ಆರ್, ಶ್ರೀನಿವಾಸ್ ಪುರಪ್ಪೇಮನೆ ಸಾಥ್ ನೀಡಿದರು.

MORE NEWS

ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆಯುವ ಮೂರು ದಿನಗಳ ಕಮ್ಮಟ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

19-09-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೋಟಗೋಡಿ, ಹಾವೇರಿ ಜಿಲ್ಲೆ ಇವರ ಸಹಯೋಗದಲ್ಲ...

ದಲಿತ ಬಂಡಾಯದ ಜೊತೆಗೆ ಮಹಿಳಾ ಎಂದು ಸೇರಿಸಬೇಕು; ಲಲಿತಾ ಸಿದ್ಧಬಸವಯ್ಯ

19-09-2024 ಬೆಂಗಳೂರು

ಬೆಂಗಳೂರು: ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘ ಕನ್ನಡ ಸಂಘದ ಸುವರ್ಣ ಮಹೋತ್ಸವ 2024ರ ಅಂಗವಾಗಿ ಏರ್ಪಡಿಸಿದ್ದ ಎರಡು ದಿನಗಳ ...

ಸಮಕಾಲೀನ ಸಾಮಾಜಿಕ ವಿಚಾರಗಳನ್ನು ಕುರಿತ ಮೂರು ದಿನಗಳ "ವಿಚಾರ ಕಮ್ಮಟ" ಸಂವಾದ ಕಾರ್ಯಾಗಾರ

17-09-2024 ಬೆಂಗಳೂರು

ಬೆಂಗಳೂರು: ಕನ್ನಡದ ಖ್ಯಾತ ಕತೆಗಾರ ದಿವಂಗತ ಡಾ. ಬೆಸಗರಹಳ್ಳಿ ರಾಮಣ್ಣ ಅವರ ಸ್ಮರಣಾರ್ಥವಾಗಿ ಆರಂಭವಾಗಿರುವ ಡಾ. ಬೆಸಗರಹಳ...