ಸಂಬಂಧಗಳ ಒಳಸುಳಿಗಳ ಕಥೆಗಾರ್ತಿ ನೇಮಿಚಂದ್ರ


“ಸಂಬಂಧಗಳ ಒಳಸುಳಿಗಳ ಕಥೆಗಾರ್ತಿ ನೇಮಿಚಂದ್ರ. ಇಲ್ಲಿನ ಕಥೆಗಳನ್ನು ಬರೆದ ಕಾಲಮಾನದಲ್ಲಿ ಮುಂದೆ ಮುಂದೆ ಬಂದಂತೆಲ್ಲ ಕಥೆಗಳು ಆಪ್ತವಾಗುತ್ತ ಹೋಗಿವೆ. ಭಾವನೆಗಳ ಸಂಘರ್ಷ, ಒಳ-ಹೊರಗುಗಳ ತಾಕಲಾಟ, ತಲೆಮಾರುಗಳ ಪಲ್ಲಟದ ಕಂಪನ ಎಲ್ಲವೂ ಇವೆ ಇಲ್ಲಿ.,” ಎನ್ನುತ್ತಾರೆ ಲೇಖಕ ವಿನಾಯಕ ಅರಳಸುರಳಿ. ಅವರು ನೇಮಿಚಂದ್ರ ಅವರ ‘ಇಲ್ಲಿವರೆಗಿನ ನೇಮಿಚಂದ್ರರ ಕತೆಗಳು’ ಕೃತಿ ಕುರಿತು ಬರೆದ ವಿಮರ್ಶೆ.

ಮಧ್ಯಮ ವರ್ಗದ ಕಥೆಗಳಲ್ಲೊಂದು ವಿಶೇಷವಿದೆ. ಅವು ಕತ್ತಿಯೇ ಹಿಡಿಯದ ಹೋರಾಟದ ಕಥೆಗಳು. ದ್ವೇಷದ ಅನಿವಾರ್ಯತೆಯಿಲ್ಲ. ಮನ ನೋಯಿಸುವ ನಂಬಿಕೆಗಳ ಹಂಗಿಲ್ಲ. ಸಮಾಜದ ಕತ್ತಲೆಗೆ ಅರೆಬರೆ ಹಿಡಿದ ಕನ್ನಡಿಗಳಿಲ್ಲ. ಒಂದೇ ವಿಶಲ್ ಗೆ ಅನ್ನವಾದಂಥಾ ವಾದಗಳ ಇರಿಯುವಿಕೆಯಿಲ್ಲ. ನಮ್ಮದೇ ಹಗಲು. ನಮ್ಮದೇ ರಾತ್ರಿ. ಅದರ ನಡುವಿನದೇ ಒಂದು ಕ್ಷಣ. ಕೆಲ ಕ್ಷಣದ ಮಟ್ಟಿಗೆ ನಾವೇ ತೊಟ್ಟುಕೊಂಡ ಪಾತ್ರಗಳಂಥ ಕಥೆಗಳಿವು. ವೇಶ ಕಳಚಿಟ್ಟ ಮೇಲೂ, ಪುಸ್ತಕ ಮುಚ್ಚಿಟ್ಟ ಮೇಲೂ ಒಂದು ಕಲೆ ಉಳಿದೇ ಹೋಗುತ್ತದೆ ಕೊನೆಗೂ.

ಸಂಬಂಧಗಳ ಒಳಸುಳಿಗಳ ಕಥೆಗಾರ್ತಿ ನೇಮಿಚಂದ್ರ. ಇಲ್ಲಿನ ಕಥೆಗಳನ್ನು ಬರೆದ ಕಾಲಮಾನದಲ್ಲಿ ಮುಂದೆ ಮುಂದೆ ಬಂದಂತೆಲ್ಲ ಕಥೆಗಳು ಆಪ್ತವಾಗುತ್ತ ಹೋಗಿವೆ. ಭಾವನೆಗಳ ಸಂಘರ್ಷ, ಒಳ-ಹೊರಗುಗಳ ತಾಕಲಾಟ, ತಲೆಮಾರುಗಳ ಪಲ್ಲಟದ ಕಂಪನ ಎಲ್ಲವೂ ಇವೆ ಇಲ್ಲಿ. ಕೆಲವು ಕಥೆಗಳು ಆಗಿನ ಕಾಲಮಾನದ ಗೋಡೆಗಳನ್ನು ಮೀರ ಹೊರಟವರ ಪಾಡುಗಳು. ಇನ್ನು ಕೆಲವು ಈ ಕ್ಷಣಕ್ಕೂ ಪ್ರಸ್ತುತವಾಗಿರುವ ಭಾವನೆಗಳು. ಎಲ್ಲ ಸನ್ನಿವೇಶಗಳ ಭಾವನೆಗಳ ಕೆಳಗೂ ಅಡಿಗೆರೆ ಎಳೆದಿರುವ ಕಾರಣಕ್ಕೆ ಕಥೆಗಳು ಆಪ್ತ.

ವರ್ಕೋಹಾಲಿಕ್ ಗಂಡನಿಗೆ ಹೆಂಡತಿ 'ನೀನಿಲ್ಲದೆ ಫ್ಯಾಕ್ಟರಿ ನಡೆಯುವುದಿಲ್ಲವೇ?' ಎಂದು ಕೇಳುತ್ತಾಳೆ. ಅದಕ್ಕೆ ಅವನು 'ನಾನಿಲ್ಲದೆಯೂ ನಡೆದುಬಿಟ್ಟರೆ!' ಎಂದು ಗಾಬರಿಯಾಗುತ್ತಾನೆ. ಕಾರ್ಪೋರೇಟ್ ಮನಸ್ಸುಗಳ ತಲ್ಲಣಕ್ಕೆ ಇದಕ್ಕಿಂದ ಸ್ಫುಟವಾಗಿ ಕನ್ನಡಿ ಹಿಡಿಯುವುದು ಸಾಧ್ಯವಿಲ್ಲ. ಅಂತರಂಗವನ್ನು ಸವರಿ ಹೋಗುವ ಇಂಥದ್ದೇ ಹಲವಾರು ಕಥೆಗಳು ಇಲ್ಲಿವೆ. ಒಂದೇ ಗುಕ್ಕಿಗೆ ಓದಲಾಗದ, ಓದಬಾರದ, ತಣ್ಣಗಿನ, ಪೂರ್ವಗ್ರಹವಿಲ್ಲದ ಮನಸ್ಸಿಗೆ ಸುಲಭವಾಗಿ ಇಳಿಯುವ ಕಥೆಗಳು.

- ವಿನಾಯಕ ಅರಳಸುರಳಿ

MORE FEATURES

ಆತ್ಮಕಥೆ: ವ್ಯಕ್ತಿಯಿಂದ ಬರೆಯಲ್ಪಟ್ಟ ವ್ಯಕ್ತಿಯ ಜೀವನದ ಖಾತೆ

06-10-2024 ಬೆಂಗಳೂರು

“ಆತ್ಮಚರಿತ್ರೆ ಎಂದರೆ ಒಬ್ಬ ವ್ಯಕ್ತಿಯು ಕೆಲವು ನಿಯಮಗಳಿಗೆ ಬದ್ಧನಾಗಿ ತನ್ನ ಸ್ವಂತ ಜೀವನ ಕಥೆಯನ್ನು ಹೇಳುತ್ತಾನೆ...

ಹೆಣ್ಣಿನ ಅಂತರಂಗದ ನೋವನ್ನು ಅರಿಯುವಲ್ಲಿ ಕವಿ ಯಶಸ್ವಿಯಾಗಿದ್ದಾರೆ

06-10-2024 ಬೆಂಗಳೂರು

"ಸಮಾಜ ಈ ಮೈಲಿಗೆಯನ್ನು ಕೇವಲ ಋತುಮತಿ ಆದ ಹೆಣ್ಣಿಗೆ ಮೀಸಲಿಡಲಿಲ್ಲ ಹೆತ್ತ ಮಗುವನ್ನು, ಬಾಣಂತಿಯನ್ನು ಮೈಲಿಗೆಯೆಂದ...

ಕಥೆಗಳು ಮನುಷ್ಯನ ಜೀವನವೆ ಶ್ರೇಷ್ಠವೆಂದು ಧ್ವನಿಸುತ್ತವೆ‌

06-10-2024 ಬೆಂಗಳೂರು

"ಪಾತ್ರಗಳನ್ನು, ಅವುಗಳಿಗೆ ಸಂಬಂಧ ಪಟ್ಟ ಕಥಾನಕಗಳ ಪ್ರತ್ಯಕ್ಷ ಸಾಕ್ಷಿ ಇವರಾದ್ದರಿಂದ ಕಥೆಗಳಿಗೆ ಅಧಿಕೃತತೆ ಬಂದಿದೆ...