ಸಾಹಿತ್ಯದಲ್ಲಿ ಮೊದಲು ಚರ್ಚೆ ನಡೆಸುತ್ತಿದ್ದಂತೆ ಈಗ ನಡೆಸಲು ಸಾಧ್ಯವಿಲ್ಲ; ಚಂದ್ರಶೇಖರ ಕಂಬಾರ

Date: 09-11-2024

Location: ಬೆಂಗಳೂರು


ಬೆಂಗಳೂರು: ‘ಈ ಹಿಂದೆ ನಡೆಯುತ್ತಿದ್ದ ಸಾಹಿತ್ಯ ಮತ್ತು ಚರ್ಚೆಗಳು ಒಂದು ರೀತಿಯಲ್ಲಿದ್ದವು. ಈಗ ಎಲ್ಲವೂ ಬದಲಾಗಿದೆ. ಮೊದಲು ಚರ್ಚೆ ನಡೆಸುತ್ತಿದ್ದಂತೆ ಈಗ ನಡೆಸಲು ಸಾಧ್ಯವಿಲ್ಲ,’ ಎಂದು ಕಂಬಾರರು ಹೇಳಿದರು.

ಅವರು ನ್ಯಾಷನಲ್ ಕಾಲೇಜು ಹಾಗೂ ಪ್ರಜಾವಾಣಿಯ ಸಹಯೋಗದಲ್ಲಿ ನಗರದಲ್ಲಿ ಹಮ್ಮಿಕೊಂಡಿದ್ದ ಸಾಹಿತ್ಯ ಹಬ್ಬವನ್ನು ಉದ್ಘಾಟಿಸಿ ಮಾತನಾಡಿ, "ಹೀಗೆ ಎಲ್ಲವೂ ಬದಲಾಗಿರುವ ಹೊತ್ತಿನಲ್ಲಿ ನ್ಯಾಷನಲ್ ಕಾಲೇಜು ಸಾಹಿತ್ಯ ಹಬ್ಬವನ್ನು ಆರಂಭಿಸಿದೆ. ಅದನ್ನು ಎರಡನೇ ವರ್ಷವೂ ಮುನ್ನಡೆಸುತ್ತಿದೆ. ಇಲ್ಲಿಂದ ಸಾಹಿತ್ಯದ ಹೊಸ ಚರ್ಚೆಗಳು ಆರಂಭವಾಗಲಿ. ಈ ಹಿಂದೆ ನಡೆಯುತ್ತಿದ್ದ ಸಾಹಿತ್ಯ ಮತ್ತು ಚರ್ಚೆಗಳು ಒಂದು ರೀತಿಯಲ್ಲಿದ್ದವು. ಈಗ ಎಲ್ಲವೂ ಬದಲಾಗಿದೆ. ಮೊದಲು ಚರ್ಚೆ ನಡೆಸುತ್ತಿದ್ದಂತೆ ಈಗ ನಡೆಸಲು ಸಾಧ್ಯವಿಲ್ಲ. ಚರ್ಚೆಗಳು ಬದಲಾಗಿವೆ," ಎಂದು ನಾಟಕಕಾರ ಹೇಳಿದರು.

ಇನ್ನು 'ಜನಪದ ಸಾಹಿತ್ಯ ಚರಿತ್ರೆ ಮತ್ತು ತತ್ವಗಳು' ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಲೇಖಕಿ ಸಂಧ್ಯಾರೆಡ್ಡಿ, "ಸೀತೆಯನ್ನು ಅಪಹರಿಸಿದರೂ, ಆಕೆಯ ಮಾತಿಗೆ ಬೆಲೆ ಕೊಟ್ಟು ರಾವಣ ಗೌರವದಿಂದ ನಡೆಸಿಕೊಂಡಿದ್ದ. ಮತ್ತೊಂದೆಡೆ ಸೀತೆಯನ್ನು ಕಾಡಿಗೆ ಅಟ್ಟಿದ್ದು ಮತ್ತು ಬೆಂಕಿಗೆ ದೂಡಿದ್ದು ರಾಮ. ಈ ಇಬ್ಬರು ಪುರುಷರಲ್ಲಿ ಯಾರನ್ನು ಗೌರವದಿಂದ ಕಾಣಬೇಕು' ಎಂಬ ಪ್ರಶ್ನೆಯನ್ನು ಸಭಿಕರ ಮುಂದಿಟ್ಟರು. ಈ ಪ್ರಶ್ನೆಯನ್ನು ಹಲವು ವಿದ್ಯಾರ್ಥಿನಿಯರೂ ಚರ್ಚಿಸಿದರು.

'ಯಾರನ್ನು ಗೌರವದಿಂದ ಕಾಣಬೇಕು ಎಂಬುದನ್ನೇ ಜನಪದರು, ಜನಪದ ರಾಮಾಯಣಗಳು ಚರ್ಚಿಸುತ್ತಾ ಹೋಗುತ್ತವೆ. ಈ ರೀತಿಯ ಚರ್ಚೆ ಜನಪದ ಸಾಹಿತ್ಯದಲ್ಲಿ ಮಾತ್ರ ಸಾಧ್ಯ. ವಾಲ್ಮೀಕಿ ರಾಮಾಯಣದಂತ ಶಿಷ್ಟ ಸಾಹಿತ್ಯದಲ್ಲಿ ಈ ರೀತಿಯ ವ್ಯಾಖ್ಯಾನ ಅಥವಾ ಚರ್ಚೆ ಎತ್ತಿಕೊಂಡರೆ ದಾಳಿಗಳೇ ಆಗಿಬಿಡುತ್ತವೆ' ಎಂದು ಸಂಧ್ಯಾ ಅವರು ತಮ್ಮ ಪ್ರಶ್ನೆಗೆ ತಾವೇ ವಿವರಣೆಯನ್ನೂ ನೀಡಿದರು.

ಸಂವಾದದ ವೇಳೆ ಈ ಬಗ್ಗೆ ಪ್ರಶ್ನಿಸಿದ ವಿದ್ಯಾರ್ಥಿನಿಯೊಬ್ಬರು, 'ಜನಪದರು ರಾವಣನಲ್ಲಿನ ಒಳ್ಳೆಯ ಗುಣಗಳನ್ನು ಚರ್ಚಿಸಿದ್ದಾರೆ. ಆದರೆ ಆರ್ಯನ್ನರ ಪ್ರಭಾವದ ಶಿಷ್ಟ ಸಾಹಿತ್ಯಗಳು ಆ ಬಗ್ಗೆ ಮಾತನಾಡುವುದಿಲ್ಲ. ರಾವಣ ದ್ರಾವಿಡ ಜನಾಂಗದವನು ಎಂದು ಆರ್ಯನ್ನರು ಆತನನ್ನು ಕೆಟ್ಟವನಂತೆ ಚಿತ್ರಿಸಿದರೇ' ಎಂದು ಪ್ರಶ್ನಿಸಿದರು.

'ಸಂಸ್ಕೃತದಲ್ಲಿ ರಚನೆಯಾದ ಶಿಷ್ಟ ಸಾಹಿತ್ಯವೆಲ್ಲವೂ ಆರ್ಯನ್ನರದ್ದೇ. ಅವರು ತಮ್ಮ ಮೌಲ್ಯಗಳನ್ನು ಮುಂದು ಮಾಡುವುದಕ್ಕಾಗಿ ಪಾತ್ರಗಳನ್ನು ತಮಗೆ ಅಗತ್ಯವಿದ್ದಂತೆ ಚಿತ್ರಿಸಿದ್ದಾರೆ' ಎಂದು ಸಂಧ್ಯಾರೆಡ್ಡಿ ಉತ್ತರಿಸಿದರು.

'ವಚನಗಳ ಹೊಸ ಓದಿನ ಅವಶ್ಯಕತೆ' ಕುರಿತ ಗೋಷ್ಠಿಯಲ್ಲಿ ಓ.ಎಲ್‌. ನಾಗಭೂಷಣಸ್ವಾಮಿ ಮತ್ತು 'ಜಯಮೋಹನ್‌ರವರ ಕಥಾ ಸಾಹಿತ್ಯ' ಕುರಿತ ಗೋಷ್ಠಿಯಲ್ಲಿ ಟಿ.ಪಿ. ಅಶೋಕ ಮಾತನಾಡಿದರು.

ಸಮಾರಂಭದಲ್ಲಿ ಹಲವಾರು ಗಣ್ಯರು ಉಪಸ್ಥಿತರಿದ್ದರು.

 

 

MORE NEWS

ಕನ್ನಡ ಪುಸ್ತಕ ಪರಿಷತ್ತು ಸಮ್ಮೆಳನಾಧ್ಯಕ್ಷ ಡಾ.ಪ್ರಕಾಶ ಖಾಡೆಗೆ ಪರಿಷತ್ತಿನಿಂದ ಆಹ್ವಾನ

22-11-2024 ಬೆಂಗಳೂರು

ವಿಜಯಪುರ: ನಗರದ ಚೇತನಾ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಡಿಸೆಂಬರ್ 1 ರವಿವಾರ ಜರುಗಲಿರುವ ಕನ್ನಡ ಪುಸ್ತಕ ಪರಿಷತ್ತು ಸಮ್...

ಪಿ. ಶೇಷಾದ್ರಿ ಸಿನಿಮಾವಲೋಕನಕ್ಕೆ 'ಮುನ್ನುಡಿ'

21-11-2024 ಬೆಂಗಳೂರು

ಬೆಂಗಳೂರು: ಪಿ. ಶೇಷಾದ್ರಿ ಸಿನಿಮಾವಲೋಕನ, ಚಿತ್ರೋತ್ಸವ, ಸಿನಿಮಂಥನ 'ಮುನ್ನುಡಿ' ಚಿತ್ರದಿಂದ ಆರಂಭಗೊಂಡಿದೆ. ಹ...

ವಿಜಯ ರಾಘವೇಂದ್ರ ನಟನೆಯ 'ರುದ್ರಾಭಿಷೇಕಂ' ಚಿತ್ರಕ್ಕೆ ಚಾಲನೆ

21-11-2024 ಬೆಂಗಳೂರು

ಬೆಂಗಳೂರು: ನಮ್ಮ‌ನಾಡಿನ ಸಾಂಸ್ಕೃತಿಕ ಇತಿಹಾಸ, ಆಚರಣೆಗಳು, ಕಲೆಯನ್ನು ಪ್ರತಿಬಿಂಬಿಸುವ ಒಂದಷ್ಟು ಚಲನಚಿತ್ರಗಳು ಈಗ...