ರಾಜ್ಯಮಟ್ಟದ `ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿ-2024'ಕ್ಕೆ ಕೃತಿಗಳ ಆಹ್ವಾನ

Date: 30-11-2024

Location: ಬೆಂಗಳೂರು


ಬಾಗಲಕೋಟೆ: ಶ್ರೀಮತಿ ತ್ರಿವೇಣಿ ಶೆಲ್ಲಿಕೇರಿ ಪ್ರತಿಷ್ಠಾನ, ಯಂಡಿಗೇರಿ, ಬಾಗಲಕೋಟೆ ಇವರು 2024ನೇ ಸಾಲಿನ ರಾಜ್ಯಮಟ್ಟದ “ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿ”ಗೆ ಕೃತಿಗಳನ್ನು ಆಹ್ವಾನಿಸಿದ್ದಾರೆ. ಆಸಕ್ತ ಲೇಖಕರು ಮತ್ತು ಪ್ರಕಾಶಕರು ತಮ್ಮ ಕಥೆ, ಕವನ ಮತ್ತು ಕಾದಂಬರಿ ಈ ಮೂರು ಪ್ರಕಾರಗಳ ಒಳಪಡುವ ಕೃತಿಗಳನ್ನು ಕಳುಹಿಸಬಹುದು. ಕೃತಿಗಳು 2024ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡಿರುವವು ಆಗಿರಬೇಕು.

ಕೃತಿಗಳ ಮೂರು ಪ್ರತಿಗಳನ್ನು ಕಳುಹಿಸಬೇಕು, ಕೃತಿಗಳ ಲಕೋಟೆಯ ಮೇಲೆ “ರಾಜ್ಯಮಟ್ಟದ ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿ-2024” ಎಂದು ಸ್ಪಷ್ಟವಾಗಿ ನಮೂದಿಸಬೇಕು. ಕೃತಿಗಳು ಜನವರಿ 10, 2025 ರ ಒಳಗೆ ತಲುಪಬೇಕಾಗುತ್ತದೆ. ನಂತರ ಬಂದ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ.

ಪ್ರಶಸ್ತಿಯು ತಲಾ ಪ್ರಕಾರಕ್ಕೆ ₹10,000 ನಗದು ಬಹುಮಾನ, ಪ್ರಶಸ್ತಿಫಲಕ ಮತ್ತು ಸನ್ಮಾನವನ್ನು ಒಳಗೊಂಡಿರುತ್ತದೆ. ಆಯ್ಕೆಯಾದ ಕೃತಿಗಳಿಗೆ ಫೆಬ್ರವರಿ 2025ರಲ್ಲಿ ಬಾಗಲಕೋಟೆಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಕೃತಿಗಳನ್ನು ಕಳುಹಿಸಬೇಕಾದ ವಿಳಾಸ:
ಮಲ್ಲಿಕಾರ್ಜುನ ಶೆಲ್ಲಿಕೇರಿ,
#19/1/1, ಸಿರಿ, ಈಶ್ವರ ದೇವಾಲಯ ಹತ್ತಿರ,
22 ನೇಕ್ರಾಸ್, ವಿದ್ಯಾಗಿರಿ,
ಬಾಗಲಕೋಟೆ - 587102.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
ಮೊಬೈಲ್ ಸಂಖ್ಯೆ: 8310518841

MORE NEWS

ನನ್ನ ಬದುಕು ಸಾರ್ವಜನಿಕರದು; ಅ.ರಾ. ಮಿತ್ರ

30-11-2024 ಬೆಂಗಳೂರು

ಬೆಂಗಳೂರು: `ನೀನು ನೀನು ಅಂತ ಬದುಕ ಬೇಕು. ಸ್ವಾರ್ಥವೇ ಹೆಚ್ಚಾಗಿದೆ. ನನ್ನ ಬದುಕು ಸಾರ್ವಜನಿಕರದು. ಅವರು ಅವಕಾಶ ಕೊಡದಿದ...

2024ನೇ ಸಾಲಿನ ‘ಛಂದ ಪುಸ್ತಕ ಬಹುಮಾನ’ಕ್ಕಾಗಿ ಹಸ್ತಪ್ರತಿಗಳ

29-11-2024 ಬೆಂಗಳೂರು

ಬೆಂಗಳೂರು: ಕಳೆದ ಹದಿನೆಂಟು ವರುಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ, ಈ ...

ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ 10 ಮಂದಿ ಭಾಜನ

29-11-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು 2022 ಮತ್ತು 2023ನೇ ಸಾಲಿನಲ್ಲಿ ಕೊಡಮಾಡುವ ‘ಗೌರವ ಪ್ರಶಸ್ತಿ&rsquo...