ನನ್ನ ಬದುಕು ಸಾರ್ವಜನಿಕರದು; ಅ.ರಾ. ಮಿತ್ರ

Date: 30-11-2024

Location: ಬೆಂಗಳೂರು


ಬೆಂಗಳೂರು: `ನೀನು ನೀನು ಅಂತ ಬದುಕ ಬೇಕು. ಸ್ವಾರ್ಥವೇ ಹೆಚ್ಚಾಗಿದೆ. ನನ್ನ ಬದುಕು ಸಾರ್ವಜನಿಕರದು. ಅವರು ಅವಕಾಶ ಕೊಡದಿದ್ದರೆ ನಮ್ಮ ಬದುಕು ಹೇಗೆ ಸಾಧ್ಯ,' ಎಂದು ಅ.ರಾ. ಮಿತ್ರ ಹೇಳಿದರು.

ಅವರು ನಗರದ ಭಾರತೀಯ ವಿದ್ಯಾಭವನದ ಖಿಂಚ ಸಭಾಂಗಣದಲ್ಲಿ ಮುದ್ದುರಾಮ ಪ್ರತಿಷ್ಠಾನ, ಮೈಸೂರು, ಅಭಿನವ, ಬೆಂಗಳೂರು ಮತ್ತು ಭಾರತೀಯ ವಿದ್ಯಾಭವನ, ಬೆಂಗಳೂರು ಇವರ ಆಶ್ರಯದ ಮುದ್ದುರಾಮ ಪ್ರಶಸ್ತಿ ಪ್ರದಾನ 2024 ಹಾಗೂ ಮುದ್ದುರಾಮ ಚೌಪದಿಗಳ ಹತ್ತು ಸಂಪುಟಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

`ಗುರಿ ಮತ್ತು ಆದರ್ಶ ಇಟ್ಟುಕೊಂಡು ಬದುಕಬೇಕು ಅದು ಆದರ್ಶ ಆಗಬೇಕು. ಬದಲಾಗಿ ತಾನು ಬದುಕಿದ ರೀತಿಯೇ ಆದರ್ಶ ಎನ್ನುವುದು ಸರಿಯಲ್ಲ. ಜಗತ್ತಿನಲ್ಲಿ ಬದುಕನ್ನೇ ಆದರ್ಶ ಎನ್ನುವುದು ಈಗಿನ ಕಾಲದಲ್ಲಿ ಹೆಚ್ಚಾಗಿದೆ. ಗುರಿ ಮತ್ತು ಆದರ್ಶಗಳಿಂದ ಬದುಕಿದವರು ಅ.ರಾ. ಮಿತ್ರ. ಸಾಹಿತ್ಯಕ್ಕಿಂತ ಆದರ್ಶ ಇಟ್ಟುಕೊಂಡು ಬದುಕಿದವರು ಅ.ರಾ. ಮಿತ್ರ. ಆಧುನಿಕ ದೃಷ್ಟಿ ಕೊನ ಎಂದರೆ ಬದುಕಿನ ಗಟ್ಟಿತನವನ್ನು ಒಪ್ಪಿಕೊಳ್ಳದಿರು. ರಾಮ, ಕೃಷ್ಣನ ಬದುಕಿನಲ್ಲೂ ಏನಾದರೂ ಲೋಪ ಹುಡುಕುವುದೇ ಪ್ರಸ್ತುತ ದೃಷ್ಟಿಕೋನವಾಗಿದೆ. ಕನ್ನಡದ್ದು ಶ್ರೇಷ್ಠ ವಿದ್ವತ್ ಪರಂಪರೆ. ಅಂತಹ ಕನ್ನಡ ವಿದ್ವತ್ ಪರಂಪರೆಯ ಮುಂದುವರಿಸಿದವರು ಅ.ರಾ. ಮಿತ್ರ,’ ಎಂದು ಪ್ರೊ ಎಂ. ಕೃಷ್ಣೇಗೌಡ ತಿಳಿಸಿದರು.

ಮುದ್ದುರಾಮ ಹತ್ತು ಸಂಪುಟಗಳ ಕುರಿತು ಮಾತನಾಡಿದ ಗುರುರಾಜ ಕರ್ಜಗಿ ಮಾತನಾಡಿ, ‘ಈ ಹತ್ತು ಕೃತಿಗಳ ಬಗ್ಗೆ ದಿನಕ್ಕೆ ಒಂದು ಗಂಟೆ ಮಾತನಾಡಿದರೆ ಐದು ವರ್ಷಕ್ಕೂ ಹೆಚ್ಚು ಕಾಲ ಮಾತನಾಡಬಹುದು. 'ನನ್ನದು ನಾ ಬರೆದೆ ಎಂದರೆ ಪಾತಾಳ ಬಿದ್ದೆ' ಎಂಬ ಮುದ್ದುರಾನ ಚೌಪದಿ ನೆನೆದು ಶಿವಪ್ಪ ವ್ಯಕ್ತಿತ್ವವೂ ಅಷ್ಟೇ ಮೃದುವಾದದ್ದು,’ ಎಂದರು.

ಕಾರ್ಯಕ್ರಮದಲ್ಲಿ ಮಲ್ಲಯ್ಯ ಸ್ವಾಮಿ, ಹಿರೇಮಂಗಳೂರು ಕಣ್ಣನ್, ಕೆ.ಸಿ. ಶಿವಪ್ಪ, ಸಿ ಸೋಮಶೇಖರ್ ಹಾಗೂ ಸುತ್ತೂರು ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಜಿಗಳು ಉಪಸ್ಥಿತರಿದ್ದರು. ಶಂಕರ ಶಾನುಭೋಗರ ಅವರು ಮುದ್ದುರಾಮನ ಚೌಪದಿ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದರು.

MORE NEWS

ರಾಜ್ಯಮಟ್ಟದ `ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿ-2024'ಕ್ಕೆ ಕೃತಿಗಳ ಆಹ್ವಾನ

30-11-2024 ಬೆಂಗಳೂರು

ಬಾಗಲಕೋಟೆ: ಶ್ರೀಮತಿ ತ್ರಿವೇಣಿ ಶೆಲ್ಲಿಕೇರಿ ಪ್ರತಿಷ್ಠಾನ, ಯಂಡಿಗೇರಿ, ಬಾಗಲಕೋಟೆ ಇವರು 2024ನೇ ಸಾಲಿನ ರಾಜ್ಯಮಟ್ಟದ &l...

2024ನೇ ಸಾಲಿನ ‘ಛಂದ ಪುಸ್ತಕ ಬಹುಮಾನ’ಕ್ಕಾಗಿ ಹಸ್ತಪ್ರತಿಗಳ

29-11-2024 ಬೆಂಗಳೂರು

ಬೆಂಗಳೂರು: ಕಳೆದ ಹದಿನೆಂಟು ವರುಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ, ಈ ...

ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ 10 ಮಂದಿ ಭಾಜನ

29-11-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು 2022 ಮತ್ತು 2023ನೇ ಸಾಲಿನಲ್ಲಿ ಕೊಡಮಾಡುವ ‘ಗೌರವ ಪ್ರಶಸ್ತಿ&rsquo...