"ಪಂಪ, ರನ್ನ, ಲಕ್ಷ್ಮೀಶರಂತಹ ಮೇರು ಕವಿಗಳು ನೇರವಾಗಿಯೋ, ಪರೋಕ್ಷವಾಗಿಯೋ ಪ್ರಾಚೀನ ಕಾವ್ಯವಸ್ತುವನ್ನು ತೆಗೆದುಕೊಂಡು ಕಾವ್ಯರಚನೆ ಮಾಡಿರುವುದು ಗಮನಾರ್ಹ. ಪಂಪನಿಗಿಂತ ಪೂರ್ವದ ಹಲವು ಕವಿಗಳು ಮಹಾಭಾರತದ ಕಥೆಯನ್ನು ಆಧರಿಸಿ ಕಾವ್ಯರಚನೆ ಮಾಡಿರಬಹುದೆಂಬುದು ಕೆಲವು ಕಾವ್ಯಖಂಡಗಳಿಂದ ತಿಳಿದುಬರುತ್ತದೆ," ಎನ್ನುತ್ತಾರೆ ಶ್ರೀಧರ ಬನವಾಸಿ. ಅವರು ಪ್ರೊ. ಶಿವರಾಮಯ್ಯ ಅವರ ‘ನಿಚ್ಚಂ ಪೊಸತು’ ಕೃತಿ ಕುರಿತು ಬರೆದಿರುವ ಅನಿಸಿಕೆ.
ನಮ್ಮ ಪ್ರಾಚೀನ ಕನ್ನಡ ಸಾಹಿತ್ಯವು ಸಂಸ್ಕೃತ ಸಾಹಿತ್ಯದ ಪರಿಪೋಷಣೆ ಹಾಗೂ ಅದರೊಳಗಿನ ಸತ್ವದೊಂದಿಗೆ ಬೆಳೆದು ಬಂದಿರುವುದನ್ನು ಯಾರು ಅಲ್ಲಗೆಳೆಯುವುದಿಲ್ಲ. ಕನ್ನಡ ಕವಿಗಳು ಹೆಚ್ಚಾಗಿ ಪ್ರಾಚೀನ ಕಾವ್ಯಗಳಾದ ರಾಮಾಯಣ, ಮಹಾಭಾರತದ ಕಡೆ ಗಮನಹರಿಸಿರುವುದು, ಅದನ್ನು ಸಾಹಿತ್ಯ ಕೃಷಿಗೆ ಸಹಜವಾಗಿಯೇ ಬಳಸಿಕೊಂಡಿರುವುದನ್ನು ನಾವು ಕಾಣಬಹುದಾಗಿದೆ.
ಅದರಂತೆ ಪಂಪ, ರನ್ನ, ಲಕ್ಷ್ಮೀಶರಂತಹ ಮೇರು ಕವಿಗಳು ನೇರವಾಗಿಯೋ, ಪರೋಕ್ಷವಾಗಿಯೋ ಪ್ರಾಚೀನ ಕಾವ್ಯವಸ್ತುವನ್ನು ತೆಗೆದುಕೊಂಡು ಕಾವ್ಯರಚನೆ ಮಾಡಿರುವುದು ಗಮನಾರ್ಹ. ಪಂಪನಿಗಿಂತ ಪೂರ್ವದ ಹಲವು ಕವಿಗಳು ಮಹಾಭಾರತದ ಕಥೆಯನ್ನು ಆಧರಿಸಿ ಕಾವ್ಯರಚನೆ ಮಾಡಿರಬಹುದೆಂಬುದು ಕೆಲವು ಕಾವ್ಯಖಂಡಗಳಿಂದ ತಿಳಿದುಬರುತ್ತದೆ.
ಪಂಪನ ಕಾಲಘಟ್ಟವು, ಹಿಂದಿನ ಪೂರ್ವಾಪರವು ಕನ್ನಡ ಸಾಹಿತ್ಯದ ಬೆಳವಣಿಗೆಗೆ ಅತ್ಯಂತ ಪೂರಕವು, ಪ್ರಖರವಾದ ಕ್ರಾಂತಿಗೆ ಅಡಿಪಾಯವನ್ನು ಹಾಕಿಕೊಟ್ಟಿದೆ ಎಂಬುದನ್ನು ಅನೇಕ ಕನ್ನಡ ಶಾಸ್ತ್ರಕಾರರು ಅಭಿಪ್ರಾಯಪಡುತ್ತಾರೆ. ಅದಕ್ಕೆ ಪೂರಕವೆಂಬಂತೆ ಪ್ರೊ.ಶಿವರಾಮಯ್ಯರಂತಹ ಹಿರಿಯ ಕನ್ನಡ ವಿದ್ವಾಂಸರು ಪಂಪನ ಕಾಲಘಟ್ಟ , ಆತನ ಸಾಹಿತ್ಯ ಕೃಷಿಯ ಕುರಿತು ಇನ್ನಷ್ಟು ಬೆಳಕನ್ನು ಚೆಲ್ಲುವಂತಹ ಪ್ರಯತ್ನವನ್ನು ಈ ಕೃತಿಯ ಮೂಲಕ ಮಾಡಿದ್ದಾರೆ. ಅವರೇ ಹೇಳಿಕೊಂಡ ಹಾಗೆ, ಪಂಪಕಾವ್ಯದ ಜೊತೆಗೆ ಮತ್ತೊಮ್ಮೆ ಅನುಸಂಧಾನ ನಡೆಸಿದಂತೆ.
ಪಂಪನ ಕಾವ್ಯವು ಸಾರ್ವಕಾಲಿಕವಾಗಿಯೂ ಚರ್ಚೆ, ಸಂವಾದ, ವ್ಯಾಖ್ಯಾನಕ್ಕೆ ಈಡು ಮಾಡುವಂತಹ ಮೇರು ಶಿಖರವಿದ್ದಂತೆ. ಮಂಥನ ನಡೆಸಿದಷ್ಟು ಅಮೃತ ಸಿಗುವಂತೆ, ಪಂಪನ ಕಾವ್ಯವನ್ನು ಅರಿಯುತ್ತಾ ಹೋದಂತೆ, ಪಂಪ ಕವಿಯ ಶ್ರೇಷ್ಠತೆಯನ್ನು ನಾವು ಅರಿಯಲು ಸಾಧ್ಯವಾಗುತ್ತದೆ.
ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...
ಒಂದು ಶತಮಾನಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿರುವ ಕರ್ನಾಟಕಸ್ಥರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು...
©2024 Book Brahma Private Limited.