Date: 06-12-2024
Location: ಬೆಂಗಳೂರು
ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಕರ್ನಾಟಕ ನಾಟಕ ಸಾಹಿತ್ಯ ಅಕಾಡೆಮಿಯಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಗೊ.ರು. ಚನ್ನಬಸಪ್ಪ ಅವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮವು 2024 ಡಿ. 06 ಶುಕ್ರವಾರದಂದು ನಗರದ ಕರ್ನಾಟಕ ನಾಟಕ ಅಕಾಡೆಮಿ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಜಿ. ಸಿದ್ಧರಾಮಯ್ಯ ಮಾತನಾಡಿ, "ಇಡೀ ರಾಜ್ಯದ ಜನತೆಗೆ ಬಹಳ ಸಂಭ್ರಮವಾದ ವಿಚಾರ ಗೊ.ರು.ಚ ಅವರ ಆಯ್ಕೆ. ಇದೊಂದು ಅಪಸ್ವರವಿಲ್ಲದ ಆಯ್ಕೆ. ಇದಕ್ಕೆ ಮುಖ್ಯ ಕಾರಣ ವ್ಯಕ್ತಿಯ ವ್ಯಕ್ತಿತ್ವ ಮತ್ತು ಆತ ಸಮಾಜಕ್ಕೆ ನೀಡಿರುವಂತಹ ಕೊಡುಗೆ. ಇವರ ವೃತ್ತಿ ಜೀವನ, ಸಮಾಜ ಸೇವೆಯ ಪಾರದರ್ಶಕತೆ, ಬದ್ಧತೆಯಿಂದ ಕೂಡಿದೆ ಇವರ ಗೆಲುವಿಗೆ ಸಾಕ್ಷಿಯಾಗಿದೆ. ಗೊ.ರು.ಚ ಕೇವಲ ವ್ಯಕ್ತಿಯಲ್ಲ, ಇವರು ಸಾಂಸ್ಕೃತಿಕ ಮಹತ್ವದ ವ್ಯಕ್ತಿ," ಎಂದರು.
ಗೋಲ್ಲಹಳಿ ಶಿವಪ್ರಸಾದ್ ಮಾತನಾಡಿ, ‘ಪ್ರತೀ ವರ್ಷ ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡಿದಾಗ ಬಹಳಷ್ಟು ಚರ್ಚೆಗಳು, ವಿರೋಧಗಳು ಎದುರಾಗುತ್ತದೆ. ಆದರೆ ಮೊದಲ ಬಾರಿಗೆ ಗೊ.ರು. ಚನ್ನಬಸಪ್ಪ ಅವರ ವಿಷಯದಲ್ಲಿ ಇದು ಸುಳ್ಳಾಗಿದೆ. ಇದಕ್ಕೆ ಮುಖ್ಯ ಕಾರಣ ಅವರ ಸಾಹಿತ್ಯ, ಜನಪದ ಸಾಹಿತ್ಯ ಪ್ರಕಾರ, ವೃತ್ತಿ, ಸಮಾಜ ಸೇವೆ. ಇವೆಲ್ಲವೂ ಅವರ ಕೈ ಹಿಡಿದಿದೆ. ಚನ್ನಬಸಪ್ಪ ಅವರ ಸೇವೆಯ ವಿಸ್ತಾರತೆ ಅಗಾಧವಾದದ್ದು," ಎಂದರು.
ಕೆ.ವಿ. ನಾಗರಾಜಮೂರ್ತಿ ಮಾತನಾಡಿ, "ನಾವೆಲ್ಲರೂ ಒಂದಲ್ಲ ಒಂದು ದಿನ ಸಾಯುತ್ತೇವೆ. ಆದರೆ ಬದುಕಿದ್ದಾಗ ಸಮಾಜ ಏನು ಮಾಡಿದ್ದೇವೆ ಎಂಬುವುದು ಮುಖ್ಯವಾಗುತ್ತದೆ. ತನಗೋಸ್ಕರ ಮಾತ್ರವಲ್ಲದೇ ಸಮಾಜದಲ್ಲಿನ ಇತರರಿಗೂ ಉಪಕಾರಿಯಾಗುವ ಹಾಗೆ, ಸಮಾಜಸೇವೆಯನ್ನು ಮಾಡಿ ಬದುಕಿದವರು ಚನ್ನಬಸಪ್ಪ. ಸಮಾಜದ ಅಗ್ರಗಣ್ಯರ ಪಟ್ಟಿಗೆ ಇವರು ಕೂಡ ಸೇರುತ್ತಾರೆ. ಇವರು ಅಧಿಕಾರವಧಿಯಲ್ಲಿರುವಾಗ ಮಾಡಿದಂತಹ ಕೆಲಸಗಳು ಜನಪರವಾಗಿ, ಜೀವಪರವಾಗಿ, ಕಲಾವಿದರ ಪರವಾಗಿತ್ತು.
ಎಲ್.ಎನ್. ಮುಕುಂದರಾಜ್ ಮಾತನಾಡಿ, "ಪಾರ್ಲಿಮೆಂಟಿನ ಚುನಾವಣೆಯಲ್ಲಿ ಗೆಲ್ಲುವುದದು ಸುಲಭ, ಆದರೆ ಸಾಹಿತ್ಯ ಪರಿಷತ್ತಿನಲ್ಲಿ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಆದರೆ ಇಂತಹ ಸಂದರ್ಭದಲ್ಲಿ ಗೊ.ರು.ಚ ಅವರ ಗೆಲುವು ನಮಗೆಲ್ಲಾ ಬಹಳ ಖುಷಿ ತಂದಿದೆ. ಇದು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸೂಕ್ತವಾದ ವ್ಯಕ್ತಿಯನ್ನೇ ಜೋಶಿ ಹಾಗೂ ಅವರ ತಂಡ ಆಯ್ಕೆ ಮಾಡಿರುವುದು ನಿಜಕ್ಕೂ ಸಂತಸದ ಸಂಗತಿ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಎಸ್. ಮಹದೇವಯ್ಯ, ಗಣ್ಯರು, ರಂಗಭೂಮಿ ಕಲಾವಿದರು ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
ಮಂಡ್ಯ: ವಿದೇಶದಲ್ಲಿ 40 ಲಕ್ಷಕ್ಕೂ ಅಧಿಕ ಕನ್ನಡಿಗರಿದ್ದು ಅವರಲ್ಲಿ 5 ಲಕ್ಷಕ್ಕೂ ಅಧಿಕ ಕನ್ನಡಿಗರು ಅಮೆರಿಕಾದಲ್ಲೇ ಇದ್ದ...
ಕನ್ನಡ ಸಾಹಿತ್ಯ ಪರಿಷತ್ತಿನ ಸಭೆಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿಯಲ್ಲಿ ಆಯೋಜಿಸಲು ನಿರ...
ಮಂಡ್ಯ: 100 ವರ್ಷ ಪೂರೈಸಿದ ಶಾಲೆಗಳಿಗೆ ಆಟದ ಮೈದಾನ ಇತ್ತು. ಇಂದು ಅವು ಇಲ್ಲ. ಸ್ಥಳೀಯ ರಾಜಕಾಣಿಗಳ, ಪ್ರಭಾವಿಗಳ ...
©2024 Book Brahma Private Limited.