Date: 21-11-2024
Location: ಬೆಂಗಳೂರು
ಬೆಂಗಳೂರು: ಪಿ. ಶೇಷಾದ್ರಿ ಸಿನಿಮಾವಲೋಕನ, ಚಿತ್ರೋತ್ಸವ, ಸಿನಿಮಂಥನ 'ಮುನ್ನುಡಿ' ಚಿತ್ರದಿಂದ ಆರಂಭಗೊಂಡಿದೆ. ಹೆಚ್. ಎನ್. ನರಹರಿರಾವ್ ಅವರು ನಾಲ್ಕು ದಿನಗಳ ಕಾರ್ಯಕ್ರಮಕ್ಕೆ ಶುಭಾಶಯದ ನುಡಿಗಳನ್ನು ಆಡಿದರು.
ಮುನ್ನುಡಿ ಚಿತ್ರ ಪ್ರದರ್ಶನದ ನಂತರ ‘ಬರಹದಿಂದ ತೆರೆಗೆ’ ವಿಷಯದಲ್ಲಿ ನಿರ್ದೇಶಕ ಜಯತೀರ್ಥ, ಲೇಖಕ ಎಂ.ಆರ್. ದತ್ತಾತ್ರಿ ಅವರೊಂದಿಗೆ ಹಿರಿಯ ಪತ್ರಕರ್ತ ಬಿ.ಎಂ. ಹನೀಫ್ ಸಂವಾದ ನಡೆಸಿಕೊಟ್ಟರು. ಈ ವೇಳೆ ಪಿ. ಶೇಷಾದ್ರಿ ಅವರ ಸಿನಿಮಾಗಳಲ್ಲಿ ಇದ್ದ ಕಲಾವಿದರು ಮತ್ತು ತಂತ್ರಜ್ಞರು ಉಪಸ್ಥಿತರಿದ್ದರು. ಸಂವಾದದ ನಂತರ ಬೆಟ್ಟದ ಜೀವ ಸಿನಿಮಾ ಪ್ರದರ್ಶಿಸಲಾಯಿತು.
ಅಂಕಿತ ಪ್ರಕಾಶನ, ಚಿತ್ರಸಮೂಹ, ಸುಚಿತ್ರಾ ಫಿಲಂ ಸೊಸೈಟಿ ಸಹಯೋಗ ಹಾಗೂ ವಾರ್ತಾ ಮತ್ತು ಸಾರ್ವಜನಿಕರ ಸಂಪರ್ಕ ಇಲಾಖೆ ಸಹಕಾರದಲ್ಲಿ ನವೆಂಬರ್ 21 ರಿಂದ ನವೆಂಬರ್ 24ರ ವರೆಗೆ ಬನಶಂಕರಿಯ ಸುಚಿತ್ರ ಫಿಲಂ ಸೊಸೈಟಿಯಲ್ಲಿ ನಡೆಯುತ್ತಿದೆ.
ಈ ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ಪಿ. ಶೇಷಾದ್ರಿ ಅವರ ಎಂಟು ಸಿನಿಮಾಗಳ ಚಲನಚಿತ್ರೋತ್ಸವ, ಸಿನಿಮಂಥನ, ಪುಸ್ತಕ ಲೋಕಾರ್ಪಣೆ ನಡೆಯಲಿದೆ.
ನವೆಂಬರ್ 22 ಶುಕ್ರವಾರದಂದು ‘ವಿಮುಕ್ತಿ’, ‘ಭಾರತ್ ಸ್ಟೋರ್‍ಸ್’ ಚಿತ್ರ ಪ್ರದರ್ಶನ ‘ಸಂಕಲನ -ಸಂಗೀತ-ಸಂಯೋಜನೆ’ ಕುರಿತು ಸಂಗೀತ ನಿರ್ದೇಶಕ ಪ್ರವೀಣ್ ಗೋಡ್ಖಿಂಡಿ, ಸಂಕಲನಕಾರ ಗುಣಶೇಖರ್ ಅವರೊಂದಿಗೆ ಪತ್ರಕರ್ತೆ ಪ್ರಿಯಾ ಕೆರ್ವಾಶೆ ಸಂವಾದ ನಡೆಸಿಕೊಡಲಿದ್ದಾರೆ.
ನವೆಂಬರ್ 23 ಶನಿವಾರದಂದು ‘ಮೋಹನದಾಸ’, ‘ಮೂಕಜ್ಜಿಯ ಕನಸುಗಳು’ ಪ್ರದರ್ಶನಗೊಳ್ಳಲಿದೆ. ಸಂಜೆ 6 ಗಂಟೆಗೆ ‘ಬಿಂಬ ಮಂಥನ’ ಕುರಿತು ಸಿನಿಮಾ ವಿಶ್ಲೇಷಕ ವಿದ್ಯಾಶಂಕರ್, ಛಾಯಾಗ್ರಾಹಕ ಜಿ.ಎಸ್. ಭಾಸ್ಕರ್ ಅವರೊಂದಿಗೆ ಸಿನಿಮಾ ವಿದ್ಯಾರ್ಥಿ ವೀಣಾ ಸಂವಾದ ನಡೆಸಿಕೊಡಲಿದ್ದಾರೆ.
ನವೆಂಬರ್ 24 ಭಾನುವಾರದಂದು `ಡಿಸೆಂಬರ್-1' ಚಿತ್ರದ ‘ದೃಶ್ಯ ದರ್ಶನ’ ಕುರಿತು ಚಿತ್ರನಿರ್ದೇಶಕ ಗಿರೀಶ್ ಕಾಸರವಳ್ಳಿ ಮತ್ತು ಲೇಖಕ ಜೋಗಿ ಅವರೊಂದಿಗೆ ಚಿತ್ರನಿರ್ದೇಶಕಿ ರೂಪಾರಾವ್ ಸಂವಾದ ನಡೆಸಿಕೊಡಲಿದ್ದಾರೆ. ‘ಭೇಟಿ’ ಚಲನಚಿತ್ರದ ಕುರಿತು ಪಿ. ಶೇಷಾದ್ರಿ ಮತ್ತು ಚಿತ್ರತಂಡದೊಂದಿಗೆ ಪತ್ರಕರ್ತೆ ವಿದ್ಯಾರಶ್ಮಿ ಪೆಲತ್ತಡ್ಕ ಸಂವಾದ ನಡೆಸಿಕೊಡಲಿದ್ದಾರೆ. ಭಾನುವಾರ ಸಂಜೆ ಅಂಕಿತ ಪುಸ್ತಕ ಪ್ರಕಾಶನದ ನಾಲ್ಕು ಕೃತಿಗಳು ಲೋಕಾರ್ಪಣೆ ಗೊಳ್ಳಲಿದೆ.
ವಿಜಯಪುರ: ನಗರದ ಚೇತನಾ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಡಿಸೆಂಬರ್ 1 ರವಿವಾರ ಜರುಗಲಿರುವ ಕನ್ನಡ ಪುಸ್ತಕ ಪರಿಷತ್ತು ಸಮ್...
ಬೆಂಗಳೂರು: ನಮ್ಮನಾಡಿನ ಸಾಂಸ್ಕೃತಿಕ ಇತಿಹಾಸ, ಆಚರಣೆಗಳು, ಕಲೆಯನ್ನು ಪ್ರತಿಬಿಂಬಿಸುವ ಒಂದಷ್ಟು ಚಲನಚಿತ್ರಗಳು ಈಗ...
ಬೆಂಗಳೂರು: ಮಂಡ್ಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ...
©2024 Book Brahma Private Limited.