ಕತೆಗಾರ್ತಿ ಪೂರ್ಣಿಮಾ ಮಾಳಗಿಮನಿಯವರ ಡೂಡಲ್ ಕಥೆಗಳು ಕತಾ ಸಂಕಲನದ ಬಗ್ಗೆ ಲೇಖಕ ರಾಘವೇಂದ್ರ ಇನಾಮದಾರ ಅವರು ಬರೆದಿರುವ ಟಿಪ್ಪಣಿ ನಿಮ್ಮ ಓದಿಗಾಗಿ..
ಕೃತಿ: "ಡೂಡಲ್ ಕಥೆಗಳು"
ಲೇಖಕರು: ಪೂರ್ಣಿಮಾ ಮಾಳಗಿಮನಿ
ಪ್ರಕಾಶನ: ಸಾವಣ್ಣ ಪ್ರಕಾಶನ
ಬೆಲೆ: 200
ಪುಟಗಳು: 156
"ಡೂಡಲ್ ಕಥೆಗಳು"
ಸೂರೊಳಗೊಮದು ಕಿಟಿಕಿ ಎಂಬ ಪುಟ್ಟ ಕಥೆಯೊಂದಿಗೆ ಆರಂಭವಾಗುವ "ಡೂಡಲ್ ಕಥೆಗಳು" ಎಂಬ ಕಥಾ ಸಂಕಲನ ವಿಭಿನ್ನ ಕಥೆ ಬಯಸುವ ಓದುಗರಿಗೆ ಇಷ್ಟ ಆಗುತ್ತದೆ. ಲೇಖಕಿ ಪೂರ್ಣಿಮಾ ಮಾಳಗಿಮನಿಯವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ರೀತಿ ಮೊದಲನೇ ಚೆಂಡಿಗೆ ಸಿಕ್ಸರ್ ಹೊಡೆದಂತೆ ಮೊದಲನೆ ಕಥೆ ಇದೆ. ಇಲ್ಲಿ ಬರುವ ಶಾಲಿನಿ ಪರಿಸ್ಥಿತಿ ಓದಿದಾಗ ತುಂಬಾ ಬೇಸರ ಆಗುತ್ತೆ. ಮಹಾ ನಗರದಲ್ಲಿ ಒಳ್ಳೆಯ ಬದುಕು ಕಟ್ಟಿಕೊಳ್ಳಬಹುದು ಎಂಬ ಭ್ರಮೆಯಲ್ಲಿ ಬರುವ ಹೆಣ್ಣುಮಕ್ಕಳ ಚಿತ್ರಣವನ್ನು ಈ ಕಥೆ ಮೂಲಕ ಲೇಖಕಿ ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ.
ಪ್ರೀತಿ ಹಾಗೂ ವಂಚನೆಗೆ ಸಂಭಂಧಿಸಿದ ಎರಡನೆಯ ಕಥೆಯೇ "ರನ್" ಈ ಕಥೆ ಸಾಧಾರಣ ಅನಿಸಿದರೂ ಪೂರ್ಣಿಮಾ ಅವರ ನಿರೂಪಣೆ ಶೈಲಿಯಲ್ಲಿ ತುಂಬಾ ವಿಭಿನ್ನವಾಗಿ ಮೂಡಿ ಬಂದಿದೆ. ಇದರಲ್ಲಿ ಬರುವ ಸೂರ್ಯನ ಪಾತ್ರವಂತೂ ನನಗೆ ತುಂಬಾ ಇಷ್ಟ ಆಯ್ತು.
"ಶರದ್ರುತು" ಈ ಕಥೆಯಂತೂ ತುಂಬಾ ವಿಭಿನ್ನವಾಗಿದೆ. ಇಲ್ಲಿ ಬೆಳ್ಳಕ್ಕಿ ಎಂಬ ಬೆಕ್ಕಿನ ಬಗ್ಗೆ ಓದುವಾಗ ತುಂಬಾ ನಗು ಬಂತು. ಅದೇ ಬೆಕ್ಕು ಗಂಡ ಹೆಂಡತಿಯ ವಿಚ್ಛೇದನಕ್ಕೆ ಕಾರಣವಾದದ್ದು ಹೇಗೆ..? ಎಂದು ತಿಳಿಯಲು ಕಥೆ ಓದಲೇ ಬೇಕು.
"ಜೀವನ ಕೊಡದ ಅಪ್ಪ ಮಗನಿಂದ ಸಾವು ಬಯಸಿದ್ರು!" ಎಂಥಾ ಸಾಲು, ನಿಜಕ್ಕೂ ವಿಪರ್ಯಾಸ ಅಲ್ಲವೇ ? ಹೀಗೊಬ್ಬ ಅಪ್ಪ ಮಗನಿಂದ ಸಾವು ಬಯಸಿದ್ದಾದರೂ ಏಕೆ..? ಅಂತ ತಿಳಿಯಲು "ಜೀವದಾನ" ಕಥೆ ಓದಲೇಬೇಕು.
ಈ ಸಂಕಲನದಲ್ಲಿ ಇದೇ ರೀತಿಯ ಇನ್ನೂ ಅನೇಕ ಕಥೆಗಳಿದ್ದು. ಅವುಗಳು ಓದುಗನ ಮನಸ್ಸಿನ್ನು ತಣಿಸುತ್ತವೆ ಎಂದರೆ ತಪ್ಪಾಗಲಾರದು.
- ರಾಘವೇಂದ್ರ ಇನಾಮದಾರ, ಹುಬ್ಬಳ್ಳಿ
"ಮಾನವನಿಂದ ತಿಳಿಯಬಲ್ಲ ವಿಶ್ವದ ಬಗೆಗಿನ ಜ್ಞಾನದ ಸಮೂಹವೆ ವಿಜ್ಞಾನ. ವಿಜ್ಞಾನವು ತಾರ್ಕಿಕವಾಗಿ ವಿಶ್ವಾಸಾರ್ಹವಾಗಿ...
“ಕಾದಂಬರಿಯ ಈ ಶೀರ್ಷಿಕೆಯೇ ವಿಶಿಷ್ಟವಾಗಿದೆ. ಮಹತ್ವದ ಸುದ್ದಿ, ಪ್ರಭಾವ ವಲಯ-ಎಂಬುದು ಇದರ ಅರ್ಥವೆಂಬುದು ಕಾದಂಬರಿ...
“ನಾನು ಪದವಿ ವ್ಯಾಸಾಂಗದ ಅಂತಿಮ ವರ್ಷದ. ಕೊನೆಯ ಸೆಮ್ ನಲ್ಲಿ ಅಧ್ಯಯನ ಮಾಡುತ್ತಿದ್ದಾಗ, ವಿದ್ಯಾರ್ಥಿನಿಯರ ಪ್ರತಿನ...
©2025 Book Brahma Private Limited.