Date: 08-11-2024
Location: ಬೆಂಗಳೂರು
ಹೊಸಪೇಟೆ: ಕರ್ನಾಟಕ ಇತಿಹಾಸ ಅಕಾಡೆಮಿಯ 'ಇತಿಹಾಸ ಸಂಸ್ಕೃತಿಶ್ರೀ' ಪ್ರಶಸ್ತಿಗೆ ಸಂಶೋಧಕ ಪ್ರೊ. ಕೆ.ಆರ್.ನರಸಿಂಹನ್ ಮತ್ತು ಜಲತಜ್ಞ ಡಾ.ಹರಿಹರ ಶ್ರೀನಿವಾಸ ರಾವ್ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ತಲಾ ₹ 1 ಲಕ್ಷ ನಗದು ಒಳಗೊಂಡಿದೆ.
ದತ್ತಿನಿಧಿ ಪ್ರಶಸ್ತಿ: ಡಾ. ಬಾ. ರಾ. ಗೋಪಾಲ್ ಶಾಸನ ದತ್ತಿ ಪ್ರಶಸ್ತಿಗೆ ವಿಜಯಪುರದ ಡಾ. ಎಸ್.ಕೆ.ಕೊಪ್ಪ, 'ನೊಳಂಬಶ್ರೀ ಪ್ರಶಸ್ತಿಗೆ ಬೆಂಗಳೂರಿನ ಟಿ.ವಿ. ನಾಗರಾಜ, ಸಂಶೋಧನಾ ಶ್ರೀ ಪ್ರಶಸ್ತಿಗೆ ಬೆಂಗಳೂರಿನ ಆದಪ್ಪ ಪಾಸೋಡಿ, ನಾಯಕ ಪ್ರಶಸ್ತಿಗೆ ಪುಂಡಿಕಾಯಿ ಗಣಪಯ್ಯ ಭಟ್, ಶ್ರೀಮತಿ ಸುಮಂಗಲ ಪಾಟೀಲ ಮಹಿಳಾಪ್ರಶಸ್ತಿಗೆ ಬೆಂಗಳೂರಿನ ಸ್ಮಿತಾ ರೆಡ್ಡಿ, ಸೂರ್ಯಕೀರ್ತಿ ಪ್ರಶಸ್ತಿಗೆ ನಾಗಮಂಗಲದ ಮಹಮದ್ ಕಲೀಂಉಲ್ಲ, ಡಾ.ಶ್ರೀನಿವಾಸ ಹಾವನೂರ ಸ್ಮರಣಾರ್ಥ ಪ್ರಶಸ್ತಿಗೆ ಧಾರವಾಡದ ಮಹೇಶ್ ಕುಮಾರ್ ಹ.ಪಾಟೀಲ್, ಡಾ. ಪ್ರತಿಭಾ ಚಿಣ್ಣಪ್ಪ ಸ್ಮರಣಾರ್ಥ ಪ್ರಶಸ್ತಿಗೆ ಬಾಗಲಕೋಟೆಯ
ಯಾದಪ್ಪಪರ ದೇಶಿ ಮತ್ತು ಡಾ. ಎಂ.ಎಚ್. ಕೃಷ್ಣ ಮೆರಿಟ್ ಪ್ರಶಸ್ತಿಗೆ ತುಮಕೂರಿನ ವಿಜ್ಞಾನಿ ಸೋಮಶೇಖರ ಬಿ.ಎಸ್. ಆಯ್ಕೆ- ಯಾಗಿದ್ದಾರೆ. ಶ್ರೀ ಹುಲ್ಲೂರು ಶ್ರೀನಿವಾಸ ಜೋಯಿಸ ಸ್ಮಾರಕ ಅತ್ಯುತ್ತಮ ಗ್ರಂಥ ಪ್ರಶಸ್ತಿಗೆ ಶ್ರೀನಿವಾಸರಾವ್ ಚಿತ್ರದುರ್ಗದ ಸಿ.ಎಂ. ತಿಪ್ಪೇಸ್ವಾಮಿ ಅವರ 'ರಕ್ಕಸದಂಗಡಿ ಕದನ' ಕೃತಿ ಆಯ್ಕೆಯಾಗಿದೆ.
ಹಂಪಿ ವಿ.ವಿ ಆವರಣದಲ್ಲಿ ಇದೇ 9ರಿಂದ 11ರವರೆಗೆ ನಡೆಯುವ ಅಕಾಡೆಮಿಯ 38ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು' ಎಂದು ಅಕಾಡೆಮಿ ಅಧ್ಯಕ್ಷ ದೇವರಕೊಂಡಾ ರೆಡ್ಡಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಸವಕಲ್ಯಾಣ: ‘ಈ ದೇಶದ ಪ್ರತಿಯೊಬ್ಬರೂ ಘನತೆಯಿಂದ ಬದುಕು ನಡೆಸಲು ಸಂವಿಧಾನದ ಅಗತ್ಯವಿದೆ. ಶಿಕ್ಷಣ, ಆಹಾರ, ಆರೋಗ್ಯ...
ಬೆಂಗಳೂರು: ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ಎಸ್. ವಿ. ಶ್ರೀನಿವಾಸರಾವ್ ಅವರು ಸ್ಥಾಪಿಸಲಾದ 2023ನೇ ಸಾಲಿನ ಸಾರಂಗ...
ಬೆಂಗಳೂರು: ಅಂಕಿತ ಪ್ರಕಾಶನದ ವತಿಯಿಂದ ಚಿತ್ರಸಮೂಹ ಸಹಯೋಗದಲ್ಲಿ ಸುಚಿತ್ರಾ ಫಿಲಂ ಸೊಸೈಟಿ ಹಾಗೂ ವಾರ್ತಾ ಮತ್ತು ಸಾರ್ವಜನ...
©2024 Book Brahma Private Limited.