ನಾಡೋಜ ಶಾಂತರಸ ಹೆಂಬೆರಾಳು ಜನ್ಮ ಶತಮಾನೋತ್ಸವ ಸಮಾರಂಭ

Date: 13-12-2024

Location: ಬೆಂಗಳೂರು


ರಾಯಚೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡಿದ್ದ ನಾಡೋಜ ಡಾ.ಶಾಂತರಸ ಹೆಂಬೆರಾಳು ಜನ್ಮ ಶತಮಾನೋತ್ಸವ ಸಮಾರಂಭವು ಡಿ.12 ಗುರುವಾರದಂದು ನಗರದ ಕನ್ನಡ ಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಪ್ರೊ.ಅಲ್ಲಮಪ್ರಭು ಬೆಟ್ಟದೂರು ಅವರು ಉದ್ಘಾಟಿಸಿದರು.

ಅಧ್ಯಕ್ಷತೆಯನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ವಹಿಸಿಕೊಂಡರು. ಶಾಂತರಸರ ಬದುಕು ಬರಹ, ಶಾಂತರಸರ ಕಥೆ ಕಾದಂಬರಿ, ಶಾಂತರಸರ ಕಾವ್ಯ, ಗಜಲುಗಳು ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಗೋಷ್ಠಿಗಳು ನಡೆದವು. ಗಜಲ್ ಕಾವ್ಯ ವಾಚನ ಕಾರ್ಯಕ್ರಮವು ನಡೆಯಿತು.

ಕಾರ್ಯಕ್ರಮದಲ್ಲಿ 'ಸಂಗಾತ ಪುಸ್ತಕ' ಪ್ರಕಟಿಸಿದ ಎಚ್.ಎಸ್.ಮುಕ್ತಾಯಕ್ಕನವ 'ಅಪ್ಪ ನಾನು ಕಂಡಂತೆ'( ಶಾಂತರಸರ ನೆನಪುಗಳು' ಕೃತಿಯು ಲೋಕಾರ್ಪಣೆಗೊಂಡಿತು.

ಈ ಸಂದರ್ಭದಲ್ಲಿ ಹಲವಾರು ಗಣ್ಯರು ಉಪಸ್ಥಿತರಿದ್ದರು.

MORE NEWS

ಅಂತಾರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನ ಪ್ರತಿ ವರ್ಷ ನಡೆಯಲಿ:  ಅಮರನಾಥ ಗೌಡ  

22-12-2024 ಮಂಡ್ಯ

ಮಂಡ್ಯ: ವಿದೇಶದಲ್ಲಿ 40 ಲಕ್ಷಕ್ಕೂ ಅಧಿಕ ಕನ್ನಡಿಗರಿದ್ದು ಅವರಲ್ಲಿ 5 ಲಕ್ಷಕ್ಕೂ ಅಧಿಕ ಕನ್ನಡಿಗರು ಅಮೆರಿಕಾದಲ್ಲೇ ಇದ್ದ...

ಗಣಿನಾಡು ಬಳ್ಳಾರಿಯಲ್ಲಿ ಮುಂದಿನ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

22-12-2024 ಮಂಡ್ಯ

ಕನ್ನಡ ಸಾಹಿತ್ಯ ಪರಿಷತ್ತಿನ ಸಭೆಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿಯಲ್ಲಿ ಆಯೋಜಿಸಲು ನಿರ...

ಸರ್ಕಾರಿ ಶಾಲೆಗಳ ಜಮೀನು ಒತ್ತುವರಿಗೆ ನಾವೇ ದನಿಯಾಗಬೇಕು: ಪುರುಷೋತ್ತಮ ಬಿಳಿಮಲೆ 

22-12-2024 ಮಂಡ್ಯ

ಮಂಡ್ಯ:  100 ವರ್ಷ ಪೂರೈಸಿದ ಶಾಲೆಗಳಿಗೆ ಆಟದ ಮೈದಾನ ಇತ್ತು. ಇಂದು ಅವು ಇಲ್ಲ. ಸ್ಥಳೀಯ ರಾಜಕಾಣಿಗಳ, ಪ್ರಭಾವಿಗಳ ...