ನಾವೆಲ್ಲರೂ ಅಂದರೆ ಕನ್ನಡಿಗರು, ಕನ್ನಡ ನೆಲದಲ್ಲಿ ವಾಸಿಸುವವರು...


"ನಾವೆಲ್ಲರೂ ಅಂದರೆ ಕನ್ನಡಿಗರು, ಕನ್ನಡ ನೆಲದಲ್ಲಿ ವಾಸಿಸುವವರು... ನಮ್ಮ ನದಿಯ ಹೆಸರು 'ಕನ್ನಡಿಗ'. ನಮ್ಮ ಜಾತಿ, ಧರ್ಮ, ವಲಸೆ ಬಂದ ಪ್ರದೇಶ...ಇತ್ಯಾದಿಯಾಗಿ ಎಲ್ಲವೂ ಇತರೆ ಗುರುತುಗಳಷ್ಟೇ. ಆಧಾರು, ಪ್ಯಾನ್ ಕಾರ್ಡುಗಳಿದ್ದಂಗೆ," ಎನ್ನುತ್ತಾರೆ ಮಧು ವೈ.ಎನ್. ಅವರು ಕನ್ನಡ ನಾಡು-ನುಡಿಯ ಕುರಿತು ಬರೆದ ಲೇಖನ ನಿಮ್ಮ ಓದಿಗಾಗಿ..

ನಂಗೆ ಯಾವಾಗಲೂ ಅನ್ಸೋದು ಭಾಷೆಯ ಹುಟ್ಟಿಗೆ ಕಾರಣ ನಿರ್ದಿಷ್ಟವಾದ ನಾಗರೀಕತೆ ಎಂದು. ಯಾವುದೇ ಒಂದು ನಾಗರೀಕತೆಯು ತನ್ನನ್ನು ಮುಂದಿನ‌ ಪೀಳಿಗೆಗೆ ದಾಟಿಸಲು ತನ್ನದೇ ಒಂದು ಮಾಧ್ಯಮವನ್ನು ಸೃಷ್ಟಿಸಿಕೊಳ್ಳುತ್ತದೆ. ಅದೇ ಭಾಷೆ. ಅದರ ಪ್ರಕಟಣೆಯ ಮತ್ತು ದಾಖಲೆಯ ರೂಪ ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ. ಜನಪದ-ಮೌಖಿಕ, ಕಾಗದ-ಲಿಖಿತ ಮತ್ತು ಇದೀಗ ಸಿಲಿಕಾನ್(ತಾಳೆಗರಿಗೆ ಸಮ)-ಡಿಜಿಟಲ್(ಲಿಖಿತಕ್ಕೆ ಸಮ).

ಇದರ ಒಟ್ಟು ಅರ್ಥ ಕನ್ನಡ ಭಾಷೆಯ ಹುಟ್ಟಿಗೆ ಮತ್ತು ಅಸ್ತಿತ್ವಕ್ಕೆ ಯಾವುದೋ ‌ಒಂದು ನಿರ್ದಿಷ್ಟ ‌ನಾಗರೀಕತೆ ಇದ್ದಿರಲೇಬೇಕು. ಅದನ್ನು ನಾವು ಕಂಡುಕೊಳ್ಳಬೇಕು. ನದಿಮೂಲವಿದ್ದಂತೆ ಅದುವೇ ನಮ್ಮೆಲ್ಲರ ಮೂಲ. ಈ ನದಿಗೆ ಉಪನದಿಗಳು ಸೇರಿಕೊಂಡಂತೆ ಅನೇಕರು ಬಂದು ಸೇರಿರಬಹುದು. ಕೊಂಕಣಿಯವರು, ತೆಲುಗರು, ತಮಿಳರು, ಮುಸ್ಲಿಮರು, ಹಿಂದಿ/ಉತ್ತರದವರು ಇತ್ಯಾದಿಯಾಗಿ. ಉಪನದಿ ಮುಖ್ಯನದಿಗೆ ಸೇರಿದ ನಂತರ ಅದು ಮುಖ್ಯನದಿಯಾಗುತ್ತದೆ. ಹಾಗೆ ಈ ಕನ್ನಡ ನಾಗರೀಕತೆಗೆ ಇತಿಹಾಸದುದ್ದ ಆಗಾಗ್ಗೆ ಅಲ್ಲಲ್ಲಿ ಸೇರ್ಪಡೆಯಾಗಿರುವರೆಲ್ಲರೂ ಈ ಕಾಲಕ್ಕೆ ಕನ್ನಡ-ನಾಗರೀಕರೇ ಆಗಿರುತ್ತಾರೆ.

ನಾವೆಲ್ಲರೂ ಅಂದರೆ ಕನ್ನಡಿಗರು, ಕನ್ನಡ ನೆಲದಲ್ಲಿ ವಾಸಿಸುವವರು... ನಮ್ಮ ನದಿಯ ಹೆಸರು 'ಕನ್ನಡಿಗ'. ನಮ್ಮ ಜಾತಿ, ಧರ್ಮ, ವಲಸೆ ಬಂದ ಪ್ರದೇಶ...ಇತ್ಯಾದಿಯಾಗಿ ಎಲ್ಲವೂ ಇತರೆ ಗುರುತುಗಳಷ್ಟೇ. ಆಧಾರು, ಪ್ಯಾನ್ ಕಾರ್ಡುಗಳಿದ್ದಂಗೆ.

ಇದು ನಮ್ಮ ಸುಪ್ತ ಮನೋಭೂಮಿಕೆಯಲ್ಲಿ ಸೊಂಪಾಗಿ ಬೆಳೆಯಬೇಕಾದ ಆಸ್ಮಿತೆಯ ಸಸಿ‌ ಮತ್ತು ಹುಡುಕಾಟ. ಇದನ್ನೇ ನಾವು ಮುಂದಿನ ಪೀಳಿಗೆಗೂ ದಾಟಿಸಬೇಕಿರುವುದು. ಇದೇ ನಮ್ಮನ್ನು ಒಟ್ಟಾಗಿಸಬಹುದು, ಕೂಡಿ ಬಾಳುವ ಮಾರ್ಗವಾಗಬಹುದು‌.

ಕವಿ 'ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು' ಎಂದು ಹಾಡಿದಾಗ ಅದು ಕೇವಲ ಭಾವುಕ ಉದ್ಘೋಷವಾಗಿರಲಿಲ್ಲ, ಅದರ ಅರ್ಥ ಇದೇ ಆಗಿತ್ತು ಎಂದು ನನ್ನ ಬಲವಾದ ಅನಿಸಿಕೆ.

MORE FEATURES

ಕರ್ನಾಟಕದಲ್ಲಿ ಮೌರ್ಯ ಚಕ್ರಚರ್ತಿ ಅಶೋಕನ ಆಳ್ವಿಕೆಯ ನಗರಗಳು

01-11-2024 ಬೆಂಗಳೂರು

ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ತಿನ (ICHR) ದಕ್ಷಿಣ ಪ್ರಾದೇಶಿಕ ಕೇಂದ್ರದ ಉಪ-ನಿರ್ದೇಶಕರಾಗಿರುವ ಡಾ. ಶಿವಶರಣ ಅರುಣಿ...

ಜನಸಾಮಾನ್ಯರಿಗೆ ಸಂಕೀರ್ಣ ಶೈಲಿಯಲ್ಲಿ ಬರೆದ ಸಾಹಿತ್ಯ ಬೇಡ

01-11-2024 ಬೆಂಗಳೂರು

"ಸಾಹಿತ್ಯ ಕ್ಷೇತ್ರದಲ್ಲಿ ಜನಪ್ರಿಯ ಮತ್ತು ಗಂಭೀರ ಎಂಬ ಎರಡು ವರ್ಗಗಳ ನಡುವೆ ಇರುವ ಚರ್ಚೆ-ಭಿನ್ನಾಭಿಪ್ರಾಯಗಳು ಇಂದ...

ಕಾದಂಬರಿಯಲ್ಲಿ ಮೂರು ತಲೆಮಾರುಗಳ ಕತೆಯಿದೆ..

31-10-2024 ಬೆಂಗಳೂರು

“ಕಾಲ ಕಾಲದಲ್ಲಿ ಆಗುತ್ತ ಬರೋ ಬದುಕು, ಶೈಲಿ, ನಡವಳಿಕೆ, ಹವ್ಯಾಸ, ವಾತಾವರಣಗಳ ಬದಲಾವಣೆ ಈ ಕಾದಂಬರಿಯ ಮೂರು ತಲೆಮಾ...