Date: 07-11-2024
Location: ಬೆಂಗಳೂರು
ಬೆಂಗಳೂರು: ದಿ ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕವು ಇದೇ 8 ಮತ್ತು 9 ರಂದು ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ 'ನ್ಯಾಷನಲ್ ಕಾಲೇಜು ಸಾಹಿತ್ಯ ಹಬ್ಬ' ಹಮ್ಮಿಕೊಂಡಿದೆ.
'ಪ್ರಜಾವಾಣಿ' ಸಹಯೋಗದಲ್ಲಿ ನಡೆಯುವ ಈ ಹಬ್ಬವನ್ನು ಸಾಹಿತಿ ಚಂದ್ರಶೇಖರ ಕಂಬಾರ ಅವರು ಉದ್ಘಾಟಿಸುತ್ತಾರೆ. ಎರಡು ದಿನಗಳ ಸಾಹಿತ್ಯ ಹಬ್ಬದಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಕುರಿತ ವಿಚಾರಗೋಷ್ಠಿಗಳು ನಡೆಯುತ್ತವೆ.
ಈ ನೆಲದ ಮೌಖಿಕ ಪರಂಪರೆಯ ಸಂಸ್ಕೃತಿಯನ್ನು ವಿದ್ಯಾರ್ಥಿ ಗಳಿಗೆ ಪರಿಚಯಿಸುವುದು ಸಹ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಮಂಟೇಸ್ವಾಮಿ ಜನಪದ ಹಾಡುಗಳನ್ನು ಮೈಸೂರಿನ ತಂಬೂರಿ ಶಿವಣ್ಣ ಹಾಡಲಿದ್ದಾರೆ. ನೀನಾಸಂ ಕಲಾವಿದರಿಂದ 'ಆನೆ ಡಾಕ್ಟರ್' ಕಥಾ ಪ್ರಸಂಗ ಪ್ರಸ್ತುತಿ, ಸುಧಾಕರ್ ಜೈನ್ ತಂಡದಿಂದ ತಾಳ ಮದ್ದಳೆ, ಎನ್‌ಇಎಸ್ ಸಂಸ್ಥೆಯ ವಿದ್ಯಾರ್ಥಿಗಳಿಂದ ಕಂಸಾಳೆ ಮತ್ತು ಜನಪದ ನೃತ್ಯಗಳ ಪ್ರದರ್ಶನ ಇರಲಿದೆ ಎಂದಿದ್ದಾರೆ.
'ಜನಪದ ಸಾಹಿತ್ಯ ಚರಿತ್ರೆ ಮತ್ತು ತತ್ವಗಳು' ವಿಷಯದ ಬಗ್ಗೆ ಲೇಖಕಿ ಕೆ.ಆರ್.ಸಂಧ್ಯಾರೆಡ್ಡಿ, ವಚನಗಳ ಹೊಸ ಓದಿನ ಅವಶ್ಯಕತೆ ಬಗ್ಗೆ ವಿಮರ್ಶಕರಾದ ಓ.ಎಲ್. ನಾಗಭೂಷಣಸ್ವಾಮಿ, 'ಜೆಯಮೋ- ಹನ್‌ರವರ ಕಥಾ ಸಾಹಿತ್ಯ'ದ ಬಗ್ಗೆ ಟಿ. ಪಿ.ಅಶೋಕ, 'ದಲಿತ ಬಂಡಾಯ ಸಾಹಿತ್ಯ ಅವಲೋಕನ' ವಿಷಯದ ಬಗ್ಗೆ ಬಂಜಗೆರೆ ಜಯಪ್ರಕಾಶ್ ಹಾಗೂ 'ಜೈನ ಸಾಹಿತ್ಯ ಚರಿತ್ರೆ ಮತ್ತು ತತ್ವಗಳು' ವಿಷಯದ ಬಗ್ಗೆ ಲಲಿತಾಂಬ ಮಾತನಾಡುತ್ತಾರೆ ಎಂದು 'ದಿ ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕ'ದ ಅಧ್ಯಕ್ಷ ಎಚ್.ಎನ್. ಸುಬ್ರಮಣ್ಯ ತಿಳಿಸಿದ್ದಾರೆ.
ಈ ನೆಲದ ಮೌಖಿಕ ಪರಂಪರೆಯ ಸಂಸ್ಕೃತಿಯನ್ನು ವಿದ್ಯಾರ್ಥಿ ಗಳಿಗೆ ಪರಿಚಯಿಸುವುದು ಸಹ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಮಂಟೇಸ್ವಾಮಿ ಜನಪದ ಹಾಡುಗಳನ್ನು ಮೈಸೂರಿನ ತಂಬೂರಿ ಶಿವಣ್ಣ ಹಾಡಲಿದ್ದಾರೆ. ನೀನಾಸಂ ಕಲಾವಿದರಿಂದ 'ಆನೆ ಡಾಕ್ಟರ್' ಕಥಾ ಪ್ರಸಂಗ ಪ್ರಸ್ತುತಿ, ಸುಧಾಕರ್ ಜೈನ್ ತಂಡದಿಂದ ತಾಳ ಮದ್ದಳೆ, ಎನ್‌ಇಎಸ್ ಸಂಸ್ಥೆಯ ವಿದ್ಯಾರ್ಥಿಗಳಿಂದ ಕಂಸಾಳೆ ಮತ್ತು ಜನಪದ ನೃತ್ಯಗಳ ಪ್ರದರ್ಶನ ಇರಲಿದೆ ಎಂದಿದ್ದಾರೆ.
'ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಜೊತೆಗೆ ಜಾನಪದ ಕಲೆಯ ಬಗ್ಗೆ ಹೊಸ ತಲೆಮಾರಿನವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ನಮ್ಮ ಆಶಯ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಪ್ರಮಾಣಪತ್ರಮ ನ್ನು ನೀಡಲಾಗುತ್ತದೆ. ಪ್ರವೇಶ ಉಚಿತ ಇರಲಿದ್ದು, ಭಾಗವಹಿಸು ವವರು ಕಡ್ಡಾಯವಾಗಿ ನೋಂರ್ದ ಮಾಡಿಕೊಳ್ಳಬೇಕು' ಎಂದು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ. ನೋಂದಣಿಗೆ ಸಂಪರ್ಕ ಸಂಖ್ಯೆ 9900999078, 8197414821
ಬೆಂಗಳೂರು: ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ‘ನಾಡೋಜ ಎಚ್.ಎಲ್. ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮ...
ವಿಜಯಪುರ: ನಗರದ ಚೇತನಾ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಡಿಸೆಂಬರ್ 1 ರವಿವಾರ ಜರುಗಲಿರುವ ಕನ್ನಡ ಪುಸ್ತಕ ಪರಿಷತ್ತು ಸಮ್...
ಬೆಂಗಳೂರು: ಪಿ. ಶೇಷಾದ್ರಿ ಸಿನಿಮಾವಲೋಕನ, ಚಿತ್ರೋತ್ಸವ, ಸಿನಿಮಂಥನ 'ಮುನ್ನುಡಿ' ಚಿತ್ರದಿಂದ ಆರಂಭಗೊಂಡಿದೆ. ಹ...
©2024 Book Brahma Private Limited.