‘ಕುಣಿಗಲ್ ಟು ಕಂದಹಾರ್’ ಕೃತಿ ಒಂದು ತರಹ ಹಾಲಿವುಡ್ನ ನಿರೂಪಣಾ ಚಿತ್ರದಂತಿದೆ: ಪ್ರಸಾದ್


‘ಸೈನ್ಯಾಸ್ತ್ರಗಳ ಬಹಳ ಹತ್ತಿರದಿಂದ ಕಾಲ ಕಳೆದು ಕೆಲಸದವಧಿ ಮುಗಿಸಿ ಮರಳಿ ತಮ್ಮ ಮನೆಗೆ ಬಂದು ಈ ಕೃತಿ ಬರೆದಿದ್ದಾರೆಯೆಂದರೆ ಇದು ನಮ್ಮ ಸಾಹಿತ್ಯಕ್ಕೆ ಬಹಳ ವಿಶೇಷವಾದದ್ದೇ ಸರಿ’ ಎನ್ನುತ್ತಾರೆ ಪ್ರಸಾದ್. ಅವರು ಮಂಜುನಾಥ್ ಕುಣಿಗಲ್ ಅವರ ‘ಕುಣಿಗಲ್ ಟು ಕಂದಹಾರ್’ ಕೃತಿ ಕುರಿತು ಬರೆದ ವಿಮರ್ಶೆ ನಿಮ್ಮ ಓದಿಗಾಗಿ….

ಪುಸ್ತಕ: ಕುಣಿಗಲ್ ಟು ಕಂದಹಾರ್
ಲೇಖಕ: ಮಂಜುನಾಥ್ ಕುಣಿಗಲ್
ಪ್ರಕಾಶನ: ವೀರಲೋಕ ಬುಕ್ಸ್

ಅಫ್ಘಾನಿಸ್ತಾನ, ಇರಾಕ್, ಅರಬ್ ರಾಷ್ಟ್ರಗಳು ಹಾಗೂ ಅವುಗಳ ಯುದ್ಧ ಭಯೋತ್ಪಾದನೆಗಳ ಬಗ್ಗೆ ಸಾಧಾರಣವಾಗಿ ಎಲ್ಲಾ ವಾರ್ತಾಚಾನೆಲ್, ಪೇಪರ್ ಗಳು ಮಾತಾಡಿರುತ್ತವೆ. ಆದ್ರೆ ಕಂದಹಾರ್ ಮತ್ತು ಸುತ್ತಮುತ್ತ ಅಮೇರಿಕಾದ ಹೈಟೆಕ್ ಸೇನಾ ನೆಲೆಗಳಲ್ಲಿ ಹಲವು ವರ್ಷ ಕೆಲಸ ಮಾಡಿ ಸಾವನ್ನ ಹತ್ತಿರದಿಂದ ಅನುಭವಿಸಿ, ಸೈನ್ಯಾಸ್ತ್ರಗಳ ಬಹಳ ಹತ್ತಿರದಿಂದ ಕಾಲ ಕಳೆದು ಕೆಲಸದವಧಿ ಮುಗಿಸಿ ಮರಳಿ ತಮ್ಮ ಮನೆಗೆ ಬಂದು ಈ ಕೃತಿ ಬರೆದಿದ್ದಾರೆಯೆಂದರೆ ಇದು ನಮ್ಮ ಸಾಹಿತ್ಯಕ್ಕೆ ಬಹಳ ವಿಶೇಷವಾದದ್ದೇ ಸರಿ.

ಒಂದು ಮಿಲಿಟರಿ ಬೇಸ್ನ ವಿವರವಾದ ಮಾಹಿತಿಯನ್ನ ಎಲ್ಲೋ ಒಮ್ಮೆ ಒಂದು ಡಾಕ್ಯುಮೆಂಟರಿಯಲ್ಲಿ ನೋಡಿದ ನೆನಪು. ನಂತರ ಈ ಕೃತಿಯಲ್ಲಿಯೇ. ಕಂದಹಾರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಲೇಖಕರ ಅನುಭವಕ್ಕೆ ನಗಬೇಕೋ? ಚಿಂತಿಸಬೇಕೋ? ಗೊತ್ತಾಗುತ್ತಿಲ್ಲ. ಲೇಖಕರು ಒಂದೊಂದಾಗಿ ಅನುಭವ ಬರೆದಿರುವ ಪರಿ ಲೇಖನಕ್ಕಿಂತ ಹೇಳಿದ್ದು ಕಣ್ಣಾರೆ ನೋಡಿದ್ದು ಅಂತನಿಸುತ್ತೆ. ಜೊತೆಗೆ ಅಫ್ಘಾನ್ ಸೈನಿಕರ ಮುಗ್ಧತೆ, ಬಿಳಿ ತೊಗಲಿನವರು ಅದನ್ನ ದುರುಪಯೋಗಿಸಿಕೊಳ್ಳೋದು, ದಾಳಿಯಲ್ಲಿ ಮುಗ್ಧ ಜನರ ಸಾವು, ಸೈನ್ಯ ಶಿಸ್ತು ಮತ್ತು ಕಠೋರತೆ, ಲೇಖಕರೇ ಹೇಳುವಂತೆ ದೀಪಾವಳಿಯಂತೆ ಪ್ರತಿದಿನ ಬೀಳುವ ಶೆಲ್ ದಾಳಿಗಳು, ಶಿಬಿರದ ಕಾರ್ಯವೈಖರಿ, ವ್ಯವಸ್ಥೆ ಮತ್ತು ತಂತ್ರಜ್ಞಾನ, ಉನ್ನತ ತಂತ್ರಜ್ಞಾನದ ಆಯುಧಗಳು, ಭಯೋತ್ಪಾದಕ ಕೃತ್ಯ, ಕ್ರೂರ ಸಾವು ನೋವು, ಶಿಬಿರಗಳ ಕೆಲಸಗಾರರ ಜೀವನ, ಹೀಗೆ ಅವರ ಅನುಭವಗಳನ್ನು ಹೇಳುತ್ತಾ ಹೋಗಿದ್ದಾರೆ.

ಒಂದು ತರಹ ಹಾಲಿವುಡ್ನ ನಿರೂಪಣಾ ಚಿತ್ರದಂತೆ ಕೃತಿ ಸಾಗುತ್ತ ಸಾಗುತ್ತ ಲೇಖಕರ ಅನುಭವಗಳಲ್ಲಿ ಮುಂದೇನಾಗುತ್ತದೆ ಅನ್ನೋ ಕುತೂಹಲ ಕೆರಳಿಸಿತು. ಕೃತಿಯ ಶೈಲಿ ಯುದ್ಧ ಸಮಯದಲ್ಲಿ ತಂತ್ರಜ್ಞನ ಅನುಭವದ ಸಾಕ್ಷ್ಯಚಿತ್ರ ನೋಡಿದಂತನಿಸಿತು.

MORE FEATURES

ಆತ್ಮಕಥೆ: ವ್ಯಕ್ತಿಯಿಂದ ಬರೆಯಲ್ಪಟ್ಟ ವ್ಯಕ್ತಿಯ ಜೀವನದ ಖಾತೆ

06-10-2024 ಬೆಂಗಳೂರು

“ಆತ್ಮಚರಿತ್ರೆ ಎಂದರೆ ಒಬ್ಬ ವ್ಯಕ್ತಿಯು ಕೆಲವು ನಿಯಮಗಳಿಗೆ ಬದ್ಧನಾಗಿ ತನ್ನ ಸ್ವಂತ ಜೀವನ ಕಥೆಯನ್ನು ಹೇಳುತ್ತಾನೆ...

ಹೆಣ್ಣಿನ ಅಂತರಂಗದ ನೋವನ್ನು ಅರಿಯುವಲ್ಲಿ ಕವಿ ಯಶಸ್ವಿಯಾಗಿದ್ದಾರೆ

06-10-2024 ಬೆಂಗಳೂರು

"ಸಮಾಜ ಈ ಮೈಲಿಗೆಯನ್ನು ಕೇವಲ ಋತುಮತಿ ಆದ ಹೆಣ್ಣಿಗೆ ಮೀಸಲಿಡಲಿಲ್ಲ ಹೆತ್ತ ಮಗುವನ್ನು, ಬಾಣಂತಿಯನ್ನು ಮೈಲಿಗೆಯೆಂದ...

ಕಥೆಗಳು ಮನುಷ್ಯನ ಜೀವನವೆ ಶ್ರೇಷ್ಠವೆಂದು ಧ್ವನಿಸುತ್ತವೆ‌

06-10-2024 ಬೆಂಗಳೂರು

"ಪಾತ್ರಗಳನ್ನು, ಅವುಗಳಿಗೆ ಸಂಬಂಧ ಪಟ್ಟ ಕಥಾನಕಗಳ ಪ್ರತ್ಯಕ್ಷ ಸಾಕ್ಷಿ ಇವರಾದ್ದರಿಂದ ಕಥೆಗಳಿಗೆ ಅಧಿಕೃತತೆ ಬಂದಿದೆ...