Date: 21-12-2024
Location: ಮಂಡ್ಯ
ಮಂಡ್ಯ: ಕೃಷ್ಣೆಯ ನದಿ ನೀರಿನ ಆಶ್ರಿತ ಕೃಷಿ ಭೂಮಿಯ ಬೇಳೆಗಳು ಕರ್ನಾಟಕಕ್ಕೆ ಪೂರೈಸಲು ಸಾಕಾಗುತ್ತದೆ. ಅಷ್ಟು ಸಂಪತ್ಭರಿತ ನೆಲ ಅದು. ಉಳಿದ ಕಡೆ ಬೆಳೆದ ರಪ್ತು ಮಾಬಹುದು ಎಂದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ಪ್ರಧಾನ ವೇದಿಕೆಯ ನೆಲ - ಜಲ ಸಾಕ್ಷರತೆ : ಅವಲೋಕನ ಎಂಬ ಮೊದಲ ಗೊಷ್ಠಿಯಲ್ಲಿ ಡಾ. ಕೃಷ್ಣ ಕೋಲ್ಹಾರ ಕುಲಕರ್ಣಿ "ಕೃಷ್ಣಾ ಮತ್ತು ಮಹಾದಾಯಿ" ಕುರಿತು ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು, ಅಲಮಟ್ಟಿ ಜಲಾಶಯ ಮಾಡಲು 136 ಹಳ್ಳಿ ಮುಳುಗಿದೆ, ನಾರಾಯಣ ಪುರ ಜಲಾಶಯ ಮಾಡುವಾಗ 46 ಹಳ್ಳಿಗಳು ಮುಳುಗಿವೆ, ಒಟ್ಟಾರೆ 2,50,000 ಲಕ್ಷ ಜನರ ಸ್ಥಳಾಂತರ ಆಗಿದೆ. ಈಗ 524ಕ್ಕೆ ಏರಿಕೆ ಮಾಡಲು ಭೂ ಸ್ವಾಧೀನ ಪ್ರಕ್ರಿಯೆ ಕಷ್ಟವಾಗಿದೆ. ಅಲ್ಲದೇ ಅದಕ್ಕೆ ನೆರೆ ರಾಜ್ಯಗಳ ಸಂಕಷ್ಟವೂ ಇದೆ ಎಂದು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರು.
ಇದೇ ಗೋಷ್ಠಿಯ ಕಾವೇರಿ ಅಚ್ಚುಕಟ್ಟಿನ ಕೆರೆಗಳ ಸ್ಥಿತಿಗತಿಗಳ ಬಗ್ಗೆ ಮಾತನಾಡಿದ ಎಂ.ಎನ್. ತಿಮ್ಮೇಗೌಡ, ಜಲಾಶಯಗಳು ಮತ್ತು ಕೆರೆಗಳಲ್ಲಿ ಹೂಳುಗಳು ತುಂಬುವುದರಿಂದ ಆಗುವ ಸಮಸ್ಯೆಗಳ ಕುರಿತು ಮಾತನಾಡಿದರು. ಮಂಡ್ಯ ಒಂದರಲ್ಲೆ 1500 ಕ್ಕೂ ಹೆಚ್ಚು ಕೆರೆಳಿವೆ. ಅವುಗಳಲ್ಲಿ ಹೂಳು ಹೆಚ್ಚಿದೆ. ಇದಕ್ಕೆ ಕಾರಣ ಮಲಿನಗಳು. ಕೆರೆಗಳಲ್ಲಿ ಹೂಳು ಹೆಚ್ಚಾದರೆ ಕಳೆ ಗಿಡ ಬೆಳೆಯುತ್ತೆ. ಹೂಳು ಹೆಚ್ಚಾದರೆ ಅಂತರ್ಜಲವೂ ಕುಂಟಿಂತವಾಗುತ್ತದೆ. ನೀರು ಇಂಗುವುದಿಲ್ಲ. ಇದರಿಂದ ಅಂತರ್ಜಲ ಮಟ್ಟ ಕುಸಿತವಾಗುತ್ತಿದೆ ಎಂದು ವಿಚಾರ ಮಂಡಿಸಿದರು.
ಗೋಷ್ಠಿಯ ಅಧ್ಯಕ್ಷರಾದ ಕ್ಯಾಪ್ಟನ್ ರಾಜಾರಾವ್ ಮಾತನಾಡಿ, ಕಾಂಕ್ರಿಟ್ ರಸ್ತೆಗಳ ನಿರ್ಮಾಣವನ್ನು ಶೇಕಡಾ ಐವತ್ತರಷ್ಟು ಕಡಿಮೆಮಾಡಬೇಕಿದೆ. ಮಳೆ ನೀರು ಇಂಗುವಿಕೆಗೆ ಸಿಮೆಂಟ್ ರಸ್ತೆ ಮಾರಕವಾಗಿದೆ. ಭೂಮಿಗೆ ಬಿದ್ದ ನೀರು ಇಂಗುತ್ತಿಲ್ಲ. ಇದರಿಂದ ಅಂತರ್ಜಲ ಮಟ್ಟ ಕುಸಿದಿದೆ. ಮಳೆಯಾಗಿ ಬಂದ ನೀರು ನೇರವಾಗಿ ಸಮುದ್ರ ಸೇರುತ್ತಿದೆ. ಸಾಧ್ಯವಾದಷ್ಟು ನೆಲವನ್ನು ಹಾಗೆ ಬಿಡಬೇಕು, ನೀರು ಇಂಗುವಂತೆ ವ್ಯವಸ್ಥೆ ಮಾಡಬೇಕು ಎಂದರು.
KRS ಉಳಿಸಬೇಕು : ಕೆ.ಆರ್.ಎಸ್ ಅಣೆಕಟ್ಟಿಗೆ 100 ವರ್ಷ ಆಗಿದೆ. ನಾವು ಅದನ್ನ ಉಳಿಸಿಕೊಳ್ಳಬೇಕು. ಅದರ ಅಕ್ಕ ಪಕ್ಕದಲ್ಲಿ ನಡೆಯುವ ಗಣಿಗಾರಿಕೆಗೆ ಕಡಿವಾಣದ ಅಗತ್ಯ ಇದೆ. ವೈಜ್ಞಾನಿಕವಾಗಿ ಅಧ್ಯಯನ ಮಾಡಿ ನಂತರ ಗಣಿಗಾರಿಕೆ ಮಾಡಿ.
ಮಂಡ್ಯ: ಕನ್ನಡ ನಾಡು ಚೆನ್ನಾಗಿ ಬೆಳೆಯಬೇಕು ಅಂದ್ರೆ ಈ ನೆಲದಲ್ಲಿರುವ ಎಲ್ಲವೂ ಬೆಳೆಯಬೇಕು. ಭಾಷೆ ಆಡುವುದರಿಂದ, ಬರೆಯುವು...
ಮಂಡ್ಯ: "ಅಲ್ಪ ಮಾಹಿತಿಯ ದತ್ತಾಂಶವು, ವಿಪತ್ತು ನಿರ್ವಾಹಣೆಯಲ್ಲಿ ಅಲ್ಪ ಪ್ರಮಾಣದ ತೊಡಕನ್ನು ಕಡಿಮೆಗಳಿಸುತ್ತದೆ,&q...
ಮಂಡ್ಯ: ಡಿ. 21 ರಂದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ “ಸಂಚಿ ಹೊನ್ನಮ್ಮ ಮತ್ತು ಕಾದಂಬರಿ ಸಾಮ್ರಾಜ್...
©2024 Book Brahma Private Limited.