ರಾಜಧಾನಿಯಲ್ಲಿ ಕಾವ್ಯ ಸಂಸ್ಕೃತಿ ಯಾನದ ಐದನೇ ಗೋಷ್ಠಿ

Date: 16-11-2024

Location: ಬೆಂಗಳೂರು


ಬೆಂಗಳೂರು: ಕಾವ್ಯಯಾನದ ಐದನೇ ಗೋಷ್ಠಿ ಈ ಬಾರಿ ಬೆಂಗಳೂರಿಗೆ ಬಂದಿದೆ. ರಂಗ ನಿರ್ದೇಶಕ, ಸಾಹಿತಿ ಮಲ್ಲಿಕಾರ್ಜುನ ಮಹಾಮನೆ ಹಾಗೂ ಗೆಳೆಯರ ತಂಡ ಕಳೆದ ನಾಲ್ಕು ಯಾತ್ರೆಗಳನ್ನು ಯಶಸ್ವಿಯಾಗಿ ಪೂರೈಸಿದೆ.

ರಂಗಮಂಡಲ ಮತ್ತು ಪರಂಪರಾ ಅವರ ಆಶ್ರಯದಲ್ಲಿ ಲಲಿತಕಲಾ ಅಕಾಡೆಮಿಯ ಗ್ಯಾಲರಿ (2ನೇ ಮಹಡಿ), ಕನ್ನಡ ಭವನ ವೇದಿಕೆಯಲ್ಲಿ ಇದೇ ಭಾನುವಾರ (ನ. 17) ಮನುಕುಲದ ನೋವಿಗೆ ಮದ್ದಾಗಲಿ ಕವಿತೆ. ಜನಸಾಮಾನ್ಯರ ದನಿಯಾಗಲಿ ಕಾವ್ಯ ಎಂಬ ಚಿಂತನೆಯಲ್ಲಿ ಕಾವ್ಯ ಸಂಸ್ಕೃತಿ ಯಾನ ನಡೆಯಲಿದೆ.

ಸವಿತಾ ನಾಗಭೂಷಣ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಮೂಡಿಬರಲಿದೆ. ರಾಜಧಾನಿಯಿಂದ ಕಾಫಿನಾಡಿಗೆ ದೀವಟಿಗೆಯನ್ನು ಡಾ. ಬೈರಮಂಗಲ ರಾಮೇಗೌಡ ಹಸ್ತಾಂತರ ಮಾಡಲಿದ್ದಾರೆ. ಮಹಾಬಲಮೂರ್ತಿ ಕೊಡ್ಲಕೆರೆ, ವಡದಡಗೆರೆ ನಾಗರಾಜಯ್ಯ, ಜಿ.ಪಿ. ರಾಜಣ್ಣ ಮತ್ತು ಮಲ್ಲಿಕಾರ್ಜುಮನಸ್ವಾಮಿ ಮಹಾಮನೆ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಲಿದೆ.

ಕವಿತಾ ವಾಚನದಲ್ಲಿ ಸಿರಾಜ್‌ ಅಹಮದ್‌, ರಂಗೇಗೌಡ ಕೆ.ಎಸ್‌., ವಿಜಯಲಕ್ಷ್ಮೀ ನುಗ್ಗೇಹಳ್ಳಿ, ಶೀಲಾ ಅರಕಲಗೋಡು, ಸುಭಾಷಿಣಿ ಹಾಸನ ರಮೇಶ್‌ ದೇವನೂರು ಮತ್ತು ರಾಜೇಶ್ವರಿ ಹೆಚ್‌.ಕೆ ಇರಲಿದ್ದಾರೆ

MORE NEWS

ಕನ್ನಡ ಪುಸ್ತಕ ಪರಿಷತ್ತು ಸಮ್ಮೆಳನಾಧ್ಯಕ್ಷ ಡಾ.ಪ್ರಕಾಶ ಖಾಡೆಗೆ ಪರಿಷತ್ತಿನಿಂದ ಆಹ್ವಾನ

22-11-2024 ಬೆಂಗಳೂರು

ವಿಜಯಪುರ: ನಗರದ ಚೇತನಾ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಡಿಸೆಂಬರ್ 1 ರವಿವಾರ ಜರುಗಲಿರುವ ಕನ್ನಡ ಪುಸ್ತಕ ಪರಿಷತ್ತು ಸಮ್...

ಪಿ. ಶೇಷಾದ್ರಿ ಸಿನಿಮಾವಲೋಕನಕ್ಕೆ 'ಮುನ್ನುಡಿ'

21-11-2024 ಬೆಂಗಳೂರು

ಬೆಂಗಳೂರು: ಪಿ. ಶೇಷಾದ್ರಿ ಸಿನಿಮಾವಲೋಕನ, ಚಿತ್ರೋತ್ಸವ, ಸಿನಿಮಂಥನ 'ಮುನ್ನುಡಿ' ಚಿತ್ರದಿಂದ ಆರಂಭಗೊಂಡಿದೆ. ಹ...

ವಿಜಯ ರಾಘವೇಂದ್ರ ನಟನೆಯ 'ರುದ್ರಾಭಿಷೇಕಂ' ಚಿತ್ರಕ್ಕೆ ಚಾಲನೆ

21-11-2024 ಬೆಂಗಳೂರು

ಬೆಂಗಳೂರು: ನಮ್ಮ‌ನಾಡಿನ ಸಾಂಸ್ಕೃತಿಕ ಇತಿಹಾಸ, ಆಚರಣೆಗಳು, ಕಲೆಯನ್ನು ಪ್ರತಿಬಿಂಬಿಸುವ ಒಂದಷ್ಟು ಚಲನಚಿತ್ರಗಳು ಈಗ...