ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆಯುವ ಮೂರು ದಿನಗಳ ಕಮ್ಮಟ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

Date: 19-09-2024

Location: ಬೆಂಗಳೂರು


ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೋಟಗೋಡಿ, ಹಾವೇರಿ ಜಿಲ್ಲೆ ಇವರ ಸಹಯೋಗದಲ್ಲಿ ಮೂರು ದಿನಗಳ ಕಮ್ಮಟವನ್ನು ಆಯೋಜಿಸಿದೆ.

ಈ ಕಮ್ಮಟವು "ಗಿರಿಜನ ಉಪಯೋಜನೆಯಡಿ ಕನ್ನಡ ಸಾಹಿತ್ಯ ಮತ್ತು ಸಾಂವಿಧಾನಿಕ ಮೌಲ್ಯಗಳು" ಎಂಬ ಹೆಸರಿನಲ್ಲಿ 3 ದಿನಗಳ ಕಾಲ ನಡೆಯಲಿದ್ದು, ಅಕ್ಟೋಬರ್ ಕೊನೆಯ ವಾರದಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೋಟಗೋಡಿ, ಹಾವೇರಿ ಜಿಲ್ಲೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಕಮ್ಮಟಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಭಾಗವಹಿಸಲು ಆಸಕ್ತಿಯಿರುವ 20 ರಿಂದ 45 ವರ್ಷ ವಯಸ್ಸುಳ್ಳ ಪರಿಶಿಷ್ಟ ಪಂಗಡಕ್ಕೆ ಸೇರಿದ ರಾಜ್ಯದ ಎಲ್ಲಾ ಭಾಗದ ಅಭ್ಯರ್ಥಿಗಳು ಅರ್ಜಿಯನ್ನ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2024 ಅ.08 ಆಗಿದ್ದು, ಆಸಕ್ತ ಅಭ್ಯರ್ಥಿಗಳು ಕರ್ನಾಟಕ ಸಾಹಿತ್ಯ http://karnatakasahithyaacademy.org ವಿವರಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

MORE NEWS

ದಲಿತ ಬಂಡಾಯದ ಜೊತೆಗೆ ಮಹಿಳಾ ಎಂದು ಸೇರಿಸಬೇಕು; ಲಲಿತಾ ಸಿದ್ಧಬಸವಯ್ಯ

19-09-2024 ಬೆಂಗಳೂರು

ಬೆಂಗಳೂರು: ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘ ಕನ್ನಡ ಸಂಘದ ಸುವರ್ಣ ಮಹೋತ್ಸವ 2024ರ ಅಂಗವಾಗಿ ಏರ್ಪಡಿಸಿದ್ದ ಎರಡು ದಿನಗಳ ...

ಸಮಕಾಲೀನ ಸಾಮಾಜಿಕ ವಿಚಾರಗಳನ್ನು ಕುರಿತ ಮೂರು ದಿನಗಳ "ವಿಚಾರ ಕಮ್ಮಟ" ಸಂವಾದ ಕಾರ್ಯಾಗಾರ

17-09-2024 ಬೆಂಗಳೂರು

ಬೆಂಗಳೂರು: ಕನ್ನಡದ ಖ್ಯಾತ ಕತೆಗಾರ ದಿವಂಗತ ಡಾ. ಬೆಸಗರಹಳ್ಳಿ ರಾಮಣ್ಣ ಅವರ ಸ್ಮರಣಾರ್ಥವಾಗಿ ಆರಂಭವಾಗಿರುವ ಡಾ. ಬೆಸಗರಹಳ...

ಸಮಗ್ರ ಕರ್ನಾಟಕದ ಕಲೆಯೊಂದಿದ್ದರೆ ಅದು ಯಕ್ಷಗಾನ ಮಾತ್ರ: ನರಹಳ್ಳಿ

16-09-2024 ಬೆಂಗಳೂರು

ಬೆಂಗಳೂರು: ಯಕ್ಷವಾಹಿನಿ ಪ್ರತಿಷ್ಠಾನ ಮತ್ತು ಹೆಗ್ಗೋಡಿನ ಯಕ್ಷ ದುರ್ಗ ಕಲಾ ಬಳಗ ಜಂಟಿಯಾಗಿ ಹಮ್ಮಿಕೊಂಡಿದ್ದ ಪಿ. ಚಂದ್ರಿ...