ಕನ್ನಡವನ್ನು ಕರುಳಿನ ಭಾಷೆಯಾನ್ನಾಗಿಸಿ ಬದುಕಿದ ವ್ಯಕ್ತಿ ಬಿಳಿಮಲೆ; ಹಂಪನಾ

Date: 10-10-2024

Location: ಬೆಂಗಳೂರು


ಬೆಂಗಳೂರು: ಚಿರಂತ್ ಪ್ರಕಾಶನ ವತಿಯಿಂದ ಡಾ. ಪುರುಷೋತ್ತಮ ಬಿಳಿಮಲೆಯವರ ‘ಹುಡುಕಾಟ’ ಸಂಶೋಧನಾ ಗ್ರಂಥ ಬಿಡುಗಡೆ ಸಮಾರಂಭವು 2024 ಅ.10 ಗುರುವಾರದಂದು ನಗರದ ಕುಮಾರಪಾರ್ಕ್ ಪೂರ್ವದ ಮಹದೇವ ದೇಸಾಯಿ ಸಭಾಂಗಣದಲ್ಲಿ ನಡೆಯಿತು.

ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಸಂಶೋಧಕ, ಹಿರಿಯ ಸಾಹಿತಿ ಹಂಪನಾ ನಾಗರಾಜಯ್ಯ ಅವರು, "ಕನ್ನಡವನ್ನು ಕೊರಳಿನ ನಾಲಿಗೆಯ ಮಾತನ್ನಾಗಿ ಮಾತ್ರ ಇಟ್ಟುಕೊಳ್ಳದೇ, ಕನ್ನಡವನ್ನು ಕರುಳಿನ ಭಾಷೆಯಾಗಿ ತನ್ನ ಬದುಕಿನುದ್ದಕ್ಕೂ, ದೆಹಲಿಯಲ್ಲಿ ಕೂತರೂ ಕರ್ನಾಟಕವನ್ನು, ಕನ್ನಡದ ಅಭ್ಯುಯದವನ್ನು, ಕನಸ್ಸು ಮನಸ್ಸಿನಲ್ಲಿ ನೆನೆಯುತ್ತಾ, ತನ್ನ ಬದುಕನ್ನು ರೂಪಿಸಿದವರು ಪುರುಷೋತ್ತಮ ಬಿಳಿಮಲೆ. ತನ್ನ ಬದುಕನ್ನು ಇಟ್ಟಿಗೆ ಮೇಲೆ ಇಟ್ಟಿಗೆ ಇಟ್ಟಿಕೊಂಡು, ಬದುಕನ್ನು ಕಟ್ಟಿಕೊಂಡು, ತುಳುನಾಡಿನಿಂದ ದೆಹಲಿಗೆ ಹೋದಂತಹ ಒಬ್ಬ ಸಾಹಸಿ ಹಾಗೂ ಧೀಮಂತರಿವರು. ಇನ್ನು ಜಾನಪದ ಕ್ಷೇತ್ರದಲ್ಲಿ ಪುರುಷೋತ್ತಮ ಬಿಳಿಮಲೆ ಅವರು ಬಹುಶ್ರುತರು. ಅವರ ಬಹುಶ್ರುತತ್ವ ಈ ಕೃತಿಯಲ್ಲಿ ಕೆನೆಗಟ್ಟಿದೆ. ಈ ಕೃತಿಯಲ್ಲಿನ ಒಂದೊಂದು ಲೇಖನವು ಒಂದೊಂದು ಲೋಕ ಹಾಗೂ ಅನುಭವವನ್ನು ಅನಾವರಣ ಮಾಡುತ್ತದೆ. ಅಂತಹ ಶಕ್ತಿಯುತವಾದ ಲೇಖನಗಳಿವು. ಇಂತಹ ಮಹತ್ವದ ಹಲವು ಲೇಖನಗಳನ್ನು ಓದಿದಾಗ ಈ ವ್ಯಕ್ತಿಯ ವ್ಯಕ್ತಿತ್ವ ಮತ್ತು ಲೇಖಕನ ಅಧ್ಯಯನಶೀಲತೆಯ ವ್ಯಾಪ್ತಿ, ಎಷ್ಟು ಓದಿದ್ದಾರೆ ಮತ್ತು ಎಷ್ಟು ಬದುಕನ್ನು ಕಂಡಿದ್ದಾರೆ ಎಂಬುವುದನ್ನು ತಿಳಿಸುತ್ತದೆ," ಎಂದರು.

'ಹುಡುಕಾಟ' ಕೃತಿ ಕುರಿತು ಮಾತನಾಡಿದ ಪ್ರಜಾವಾಣಿಯ ಹಿರಿಯ ಪತ್ರಕರ್ತ ರಘುನಾಥ ಚ.ಹ ಅವರು, "ಹುಡುಕಾಟ ಓದುವಾಗ ನನಗೆ ತಕ್ಷಣ ನೆನಪಾಗಿದ್ದು ಗೋಪಾಲಕೃಷ್ಣ ಅಡಿಗರ ‘ನೆಲ ಸಪಾಟಿಲ್ಲ’ ಕವಿತೆ. ನೀರು ನಮ್ಮ ಜೀವನಕ್ಕೆ ಅವಶ್ಯಕವಾದುದು. ಆದರೆ ನೀರು ಎಷ್ಟೇ ಪವಿತ್ರ ಅಂಥ ಭಾವಿಸಿದ್ದರೂ ಕೂಡ, ಅದು ಕಸದಿಂದ ಕೂಡಿದ್ದರೇ ಅಥವಾ ಸೂರ್ಯನ ಕಿರಣಗಳು ಅದಕ್ಕೆ ಸೋಕದೆ ಹೋದರೆ, ಅದು ಆರೋಗ್ಯಕ್ಕೆ ಹಿತಕರವಲ್ಲ. ಆ ಕಾರಣಕ್ಕಾಗಿಯೇ ಕಸವನ್ನು ಹಾಗೂ ಸೂರ್ಯನ ಕಿರಣಗಳಿಗೆ ನೀರನ್ನು ಒಡ್ಡುವ ಕೆಲಸವನ್ನು ನಿರಂತರವಾಗಿ ಮಾಡಬೇಕಾಗುತ್ತದೆ. ಈ ಕೃತಿಯು ಕನ್ನಡ ಭಾಷೆ, ಸಂಸ್ಕೃತಿಯನ್ನು ಒಳಗೊಂಡಂತಹ ಹಲವಾರು ವಿಚಾರಗಳನ್ನು ಓದುಗರಿಗೆ ನೀಡುತ್ತದೆ. ಸಂಶೋಧನೆಯ ಮಾದರಿಯನ್ನು ನಮ್ಮ ಮುಂದಿಡುತ್ತದೆ. ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಶೋಧನೆಗಳು ಕಡಿಮೆಯಾಗುತ್ತೆಯೇ ಅನ್ನುವಂತಹ ವಿಚಾರಗಳನ್ನಿಟ್ಟುಕೊಂಡು ಈ ಕೃತಿಯು ಪ್ರಾರಂಭವಾಗುತ್ತದೆ ಮತ್ತು ಸಂಶೋಧನೆಯ ಗುಣಮಟ್ಟ ಹೇಗೆ ಕ್ಷೀಣಿಸುತ್ತದೆ ಎಂಬಂತಹ ವಿಷಾದವನ್ನು ಕೂಡ ಕೃತಿ ಒಳಗೊಂಡಿದೆ. ಭಾರತವನ್ನು ಬಹುತ್ವದಿಂದ ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಯಾವ ಪ್ರಯತ್ನಗಳು ನಡೆದವೋ, ಆ ಪ್ರಯತ್ನ ಇವತ್ತು ಮತ್ತೊಂದು ನೆಲೆಗಟ್ಟಿನಲ್ಲಿ ನಡೆಯುವ ಅಗತ್ಯವಿದೆ ಎನ್ನುವುದನ್ನು ಈ ಕೃತಿ ಮತ್ತೇ ನಮ್ಮ ಗಮನಕ್ಕೆ ತರುತ್ತದೆ," ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿ ವೇದಿಕೆಯಲ್ಲಿ ಕರ್ನಾಟಕ ಸರಕಾರದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಲೇಖಕ ಡಾ. ಪುರುಷೋತ್ತಮ ಬಿಳಿಮಲೆ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಹಲವಾರು ಸಾಹಿತ್ಯಾಸಕ್ತರು ನೆರವೇರಿದ್ದರು.

ಕಾರ್ಯಕ್ರಮವನ್ನು ಆನ್ ಲೈನ್ ನಲ್ಲಿ ವೀಕ್ಷಿಸಲು ಬುಕ್ ಬ್ರಹ್ಮ ಯುಟ್ಯೂಬ್ ಚಾನೆಲ್ ನ ಈ ಕೊಂಡಿಯನ್ನು ಬಳಸಿ

MORE NEWS

ಕಲೆ, ಸಂಸ್ಕೃತಿಯಿಂದ ನಾಡು ಭಾಷೆ ಬೆಳೆಯುತ್ತದೆ ಉಳಿಯುತ್ತದೆ : ಪ್ರೊ.  ಕೃಷ್ಣೇಗೌಡ 

21-12-2024 ಬೆಂಗಳೂರು

ಮಂಡ್ಯ: ಕನ್ನಡ ನಾಡು ಚೆನ್ನಾಗಿ ಬೆಳೆಯಬೇಕು ಅಂದ್ರೆ ಈ ನೆಲದಲ್ಲಿರುವ ಎಲ್ಲವೂ ಬೆಳೆಯಬೇಕು. ಭಾಷೆ ಆಡುವುದರಿಂದ, ಬರೆಯುವು...

ಪರಿಸರದ ಬಗ್ಗೆ ಎಲ್ಲರೂ ಚಿಂತಿಸಿ; ಯಲ್ಪಪ್ಪರೆಡ್ಡಿ

21-12-2024 ಬೆಂಗಳೂರು

ಮಂಡ್ಯ: "ಅಲ್ಪ ಮಾಹಿತಿಯ ದತ್ತಾಂಶವು, ವಿಪತ್ತು ನಿರ್ವಾಹಣೆಯಲ್ಲಿ ಅಲ್ಪ ಪ್ರಮಾಣದ ತೊಡಕನ್ನು ಕಡಿಮೆಗಳಿಸುತ್ತದೆ,&q...

ಶಿಕ್ಷಣ ಸಂಸ್ಥೆಗಳನ್ನು ಶಿಕ್ಷಣ ಅಂಗಡಿಗಳೆಂದರೆ ಸೂಕ್ತ; ಸಾ. ರಾ. ಗೋವಿಂದು

21-12-2024 ಬೆಂಗಳೂರು

ಮಂಡ್ಯ: ಡಿ. 21 ರಂದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ “ಸಂಚಿ ಹೊನ್ನಮ್ಮ ಮತ್ತು ಕಾದಂಬರಿ ಸಾಮ್ರಾಜ್...