Date: 06-11-2024
Location: ಬೆಂಗಳೂರು
ಬೆಂಗಳೂರು: ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದಿಂದ ನೀಡುವ 'ಕನಕ ಗೌರವ ಪುರಸ್ಕಾರ' ಹಾಗೂ 'ಕನಕ ಯುವ ಪುರಸ್ಕಾರ' ಗಳನ್ನು ಪ್ರಕಟಿಸಲಾಗಿದೆ.
2021 -22 ರಿಂದ 2024 - 25ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, 2024 - 25 ನೇ ಸಾಲಿನ ‘ಯುವ ಪುರಸ್ಕಾರ’ ಕ್ಕೆ ಅರ್ಹರು ಲಭ್ಯವಾಗದ ಕಾರಣ ಆಯ್ಕೆಗೊಂಡಿರುವುದಿಲ್ಲ ಎಂದು ಕೇಂದ್ರದ ಅಧ್ಯಕ್ಷ ಕಾ. ತ. ಚಿಕ್ಕಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
'ಕನಕ ಗೌರವ ಪುರ- ಸ್ಕಾರ'ಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ತಾಳ್ತಜೆ ವಸಂತಕುಮಾರ್ (2021-22), ಹಾವೇರಿಯ ನೀಲಪ್ಪ ಮೈಲಾರಪ್ಪ ಅಂಬಲಿಯವರ (2022- 23), ಬೆಂಗಳೂರಿನ ಎಚ್.ಎನ್. ಮುರಳೀಧರ (2023-24) ಹಾಗೂ ತುಮಕೂರಿನ ಜಿ.ವಿ. ಆನಂದಮೂರ್ತಿ (2024-25) ಆಯ್ಕೆಯಾಗಿ ದ್ದಾರೆ. 'ಕನಕ ಯುವ ಪುರಸ್ಕಾರ'ಕ್ಕೆ ಮೈಸೂರಿನ ಅನಿಲ್ ಕುಮಾರ್ (2021-22), ಚಿಕ್ಕಮಗಳೂರಿನ ಚಿಕ್ಕಮಗಳೂರು ಗಣೇಶ್ (2022-23) ಹಾಗೂ ವಿಜಯನಗರ ಜಿಲ್ಲೆಯ ಉಮೇಶ ಎಂ. (2023-24) ಆಯ್ಕೆಯಾಗಿದ್ದಾರೆ.
ಕನಕ ಗೌರವ ಪುರಸ್ಕಾರವು ರೂ 75 ಸಾವಿರ ನಗದು, ಕನಕ ಯುವ ಪುರಸ್ಕಾರವು ರೂ 50 ಸಾವಿರ ನದು, ಪುತ್ಥಳಿ ಹಾಗೂ ಫಲಕ ಒಳಗೊಂಡಿದೆ ಎಂದು ತಿಳಿಸಿದ್ದಾರೆ.
ವಿಜಯಪುರ: ನಗರದ ಚೇತನಾ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಡಿಸೆಂಬರ್ 1 ರವಿವಾರ ಜರುಗಲಿರುವ ಕನ್ನಡ ಪುಸ್ತಕ ಪರಿಷತ್ತು ಸಮ್...
ಬೆಂಗಳೂರು: ಪಿ. ಶೇಷಾದ್ರಿ ಸಿನಿಮಾವಲೋಕನ, ಚಿತ್ರೋತ್ಸವ, ಸಿನಿಮಂಥನ 'ಮುನ್ನುಡಿ' ಚಿತ್ರದಿಂದ ಆರಂಭಗೊಂಡಿದೆ. ಹ...
ಬೆಂಗಳೂರು: ನಮ್ಮನಾಡಿನ ಸಾಂಸ್ಕೃತಿಕ ಇತಿಹಾಸ, ಆಚರಣೆಗಳು, ಕಲೆಯನ್ನು ಪ್ರತಿಬಿಂಬಿಸುವ ಒಂದಷ್ಟು ಚಲನಚಿತ್ರಗಳು ಈಗ...
©2024 Book Brahma Private Limited.