Date: 09-12-2024
Location: ಬೆಂಗಳೂರು
ಬೆಂಗಳೂರು: ಸಾಹಿತ್ಯ ಅಕಾಡೆಮಿ ವತಿಯಿಂದ ಫೆಲೋಶಿಪ್ ಪ್ರಸ್ತುತಿ ವಿದ್ವಾಂಸ, ಸಾಹಿತಿ ಚಂದ್ರಶೇಖರ ಕಂಬಾರ ಅವರಿಗೆ ಹಾಗೂ ಅವರೊಂದಿಗೆ ಸಂವಾದ ಕಾರ್ಯಕ್ರಮವನ್ನು 2024 ಡಿ.08 ಭಾನುವಾರದಂದು ನಗರದ ಸಾಹಿತ್ಯ ಕಾಂನ್ಫರೆನ್ಸ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಯಿತು.
ವಿದ್ವಾಂಸ, ಸಾಹಿತಿ ಚಂದ್ರಶೇಖರ ಕಂಬಾರ ಮಾತನಾಡಿ, 'ಸಾಹಿತ್ಯ ನನಗೆ ಬಹಳಷ್ಟು ನೀಡಿದೆ. ಇಂದು ನನಗೆ ಈ ಕಾರ್ಯಕ್ರಮ ತುಂಬಾ ಸಂತೋಷವನ್ನು ನೀಡಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಫೆಲೋಶಿಪ್ ಅನ್ನು ನೀಡಿ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ, ' ಎಂದರು.
ಹಿರಿಯ ಲೇಖಕ ಬಸವರಾಜ್ ಸಾದರ್ ಮಾತನಾಡಿ, 'ಶೋಷಿತ ಹಾಗೂ ಬಡ ಕುಟುಂಬದ ಮಗನಾಗಿ ಕಂಬಾರರು ಹರಸಿದ್ದು ಕಾವ್ಯವನ್ನು ನೋವಿನಿಂದ ಹಾಗೂ ಶೋಷಣೆಯ ಮಾರ್ಗದಿಂದ. ನವೋದಯ ಹಾಗೂ ನವ್ಯ ಕಾಲದ ಎಲ್ಲಾ ಕವಿಗಳು ಬೇರೊಂದು ಮಾರ್ಗದಲ್ಲಿ ವಿಹಾರಿಸುತ್ತಾ ಇದ್ದರೆ, ಕಂಬಾರರು ಮಾತ್ರ ಹೆಜ್ಜೆ ಹಿಟ್ಟಿದ್ದು ಶೋಷಿತರ ಧ್ವನಿಯಾಗಿ. ಇನ್ನು ಅವರ ಸಾಹಿತ್ಯದ ದಾರಿಯಲ್ಲಿ ಅವರು ತನ್ನದೇ ತನವನ್ನು ಕಂಡುಕೊಳ್ಳಲು ಕಲಿಸಿದ್ದು ತನ್ನ ತಾಯಿ ಎಂದು ಹೇಳಿಕೊಂಡಿದ್ದಾರೆ,' ಎಂದು ಹೇಳಿದರು.
ಹಿರಿಯ ಲೇಖಕ ಬಸವರಾಜ್ ಕಾಲ್ಗುಡಿ ಮಾತನಾಡಿ, ಭಾಷೆಯನ್ನು ಪಲ್ಲಟ ಮಾಡುವವರು ಕನ್ನಡದಲ್ಲಿ ಬಹಳ ಕಡಿಮೆ. ಆ ಸಾಲಿಗೆ ಸೇರುವವರು ಕಂಬಾರರು. ಇನ್ನು ಅವರ ಕೃತಿಗಳನ್ನು ನೋಡಿದಾಗ ನಮಗೆ ಗೊತ್ತಾಗುತ್ತದೆ ಕಂಬಾರರು ಕನ್ನಡ ಸಾಹಿತ್ಯಕ್ಕೆ ಎಷ್ಟು ಕೊಡುಗೆಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು, ಸಾಹಿತ್ಯಸಕ್ತರು ಉಪಸ್ಥಿತರಿದ್ದರು.
ಮಂಡ್ಯ: ವಿದೇಶದಲ್ಲಿ 40 ಲಕ್ಷಕ್ಕೂ ಅಧಿಕ ಕನ್ನಡಿಗರಿದ್ದು ಅವರಲ್ಲಿ 5 ಲಕ್ಷಕ್ಕೂ ಅಧಿಕ ಕನ್ನಡಿಗರು ಅಮೆರಿಕಾದಲ್ಲೇ ಇದ್ದ...
ಕನ್ನಡ ಸಾಹಿತ್ಯ ಪರಿಷತ್ತಿನ ಸಭೆಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿಯಲ್ಲಿ ಆಯೋಜಿಸಲು ನಿರ...
ಮಂಡ್ಯ: 100 ವರ್ಷ ಪೂರೈಸಿದ ಶಾಲೆಗಳಿಗೆ ಆಟದ ಮೈದಾನ ಇತ್ತು. ಇಂದು ಅವು ಇಲ್ಲ. ಸ್ಥಳೀಯ ರಾಜಕಾಣಿಗಳ, ಪ್ರಭಾವಿಗಳ ...
©2024 Book Brahma Private Limited.