ಕಮಲಾ ಮೇಡಂ 'ಗುರು'ವಾಗಿದ್ದವರಾದ್ದರಿಂದ ಇವು 'ಲಘು' ವಾದವುಗಳಲ್ಲ


ಪುಸ್ತಕದ ಶೀರ್ಷಿಕೆಯ ಅಡಿಯಲ್ಲಿ 'ಹಗುರ ಪ್ರಬಂಧ'ಗಳು ಎನ್ನಲಾಗಿದೆ. ಖಂಡಿತಾ, ಕಮಲಾ ಮೇಡಂ 'ಗುರು'ವಾಗಿದ್ದವರಾದ್ದರಿಂದ ಇವು 'ಲಘು' ವಾದವುಗಳಲ್ಲ ಎನ್ನುತ್ತಾರೆ ಲೇಖಕ ಶಿವಕುಮಾರ್ ಮಾವಲಿ ಅವರು ಎಂ.ಆರ್. ಕಮಲ ಅವರ ಹೊಂಬಳ್ಳಿ ಪ್ರಬಂಧ ಸಂಕಲನಕ್ಕೆ ಬರೆದ ಆಪ್ತ ಅನಿಸಿಕೆ. 

ಕಮಲಾ ಮೇಡಂ ಅವರ ಪ್ರಬಂಧಗಳ ಸಂಕಲನ ಹೊಂಬಳ್ಳಿ ಓದುವಾಗ ನನಗೆ ಕನೆಕ್ಟ್ ಆಗುವ ಅನೇಕ ವಿಷಯಗಳು ಸಿಕ್ಕವು. ಮುಖ್ಯವಾಗಿ ಅವರ ಬರಹದ‌ ಸರಳತೆ ಮತ್ತು ಅದರಲ್ಲಿ ಪ್ರಸ್ತಾಪಿಸುವ ದರ್ಶನಗಳು ಇಷ್ಟವಾಗುತ್ತವೆ. ಹಾಗೆ ನೋಡಿದರೆ self help ವಿಭಾಗಕ್ಕೆಂದೇ ಬರೆಯುವ ಅನೇಕ‌ ಪುಸ್ತಕಗಳು ಎಷ್ಟೊಂದು ಅಸಹಜ ಮತ್ತು ಅತಾರ್ಕಿಕ ಅನ್ನಿಸುತ್ತವೆ. ಆದರೆ ಇಲ್ಲಿನ ಪ್ರಬಂಧಗಳಲ್ಲಿ ಹೇಳುವ ವಿಷಯಕ್ಕೆ ಅವರು ತೆಗೆದುಕೊಳ್ಳುವ ದೃಷ್ಟಾಂತಗಳು ತುಂಬಾ ಕನ್ ವಿನ್ಸಿಂಗ್ ಆಗಿವೆ .

ಇಲ್ಲಿನ ಅನೇಕ ಬರಹಗಳಲ್ಲಿ ಪ್ರಸ್ತಾಪಿಸುವ ಕಾವ್ಯದ ಸಾಲುಗಳಿಂದ ಆ ಬರಹಗಳಿಗೊಂದು ಅಥೆಂಟಿಸಿಟಿ‌ ಬಂದಿದೆ. ಪಿಯು ಕಾಲೇಜಿನಲ್ಲಿ ಪಾಠ‌ ಮಾಡಿದ ಕಮಲಾ ಮೇಡಂ ಪ್ರಸ್ತಾಪಿಸಿರುವ ಘಟನೆಗಳು ಹತ್ತು ವರ್ಷ ಉಪನ್ಯಾಸಕನಾಗಿದ್ದ ನನಗೂ ಅನುಭವಕ್ಕೆ ಬಂದಿವೆ. 

ಮರವೊಂದು ಬೀಜಕ್ಕೆ ಕೊಡಬೇಕಾದ ಅಗತ್ಯ ಕಾಣ್ಕೆಯನ್ನು ಕೊಡುವಲ್ಲಿ ಎಡವುತ್ತಿರುವ ಅನೇಕ ಶಿಕ್ಷಕರನ್ನು ನಾನು ಕಣ್ಣಾರೆ‌ ಕಂಡಿದ್ದೇನೆ. ಒಬ್ಬ ಪ್ರಾಂಶುಪಾಲರಾಗಿ, ಉಪನ್ಯಾಸಕಿಯಾಗಿ ಅವರು ಮಾಡಿರುವ ಪ್ರಯೋಗಗಳನ್ನು ಕಂಡು ನನ್ನ‌ ಹತ್ತು ವರ್ಷಗಳ ಉಪನ್ಯಾಸಕ ವೃತ್ತಿಯಲ್ಲಿ ಇಂಥ ಪ್ರಾಂಶುಪಾಲರು ಸಿಕ್ಕಿದ್ದರೆ‌ ತರಗತಿಗಳನ್ನು social laboratory ಆಗಿ ಮಾಡಬೇಕೆಂಬ ನನ್ನ ಆಸೆಗೆ ಇಂಬು ಸಿಗುತ್ತಿತ್ತು ಎಂದು ಯೋಚಿಸಿದೆ. 

ಅಂದಹಾಗೆ ಪುಸ್ತಕದ ಶೀರ್ಷಿಕೆಯ ಅಡಿಯಲ್ಲಿ 'ಹಗುರ ಪ್ರಬಂಧ'ಗಳು ಎನ್ನಲಾಗಿದೆ. ಖಂಡಿತಾ, ಕಮಲಾ ಮೇಡಂ 'ಗುರು'ವಾಗಿದ್ದವರಾದ್ದರಿಂದ ಇವು 'ಲಘು' ವಾದವುಗಳಲ್ಲ. ವಾರಾಂತ್ಯದಲ್ಲಿ ಮನಸ್ಸು ಪ್ರಫುಲ್ಲಗೊಳಿಸಿದ್ದಕ್ಕೆ ಥ್ಯಾಂಕ್ಯೂ ಮೇಡಂ... 

-ಶಿವಕುಮಾರ್ ಮಾವಲಿ

 

MORE FEATURES

ಕಡೆಗೂ ಸಾಮಾನ್ಯ ಮನುಷ್ಯರಿಗೆ ಉಳಿಯುವುದು ಬರಿಯ ವೇದನೆ ಮಾತ್ರ..

27-12-2024 ಬೆಂಗಳೂರು

"ಲೋಕವನ್ನೇ ನಡುಗಿಸಿದ ಕರೋನಾ ಕಾಲದಲ್ಲಿ ನಡೆದಿದೆ ಎಂದು ಈಗ ಬಗೆಯಲಾಗುತ್ತಿರುವ ಬ್ರಷ್ಟಾಚಾರದ ಕಾಳಮುಖದ ಪರಿಚಯ ಮತ್...

ಸತಿ ಎನ್ನುವ ಪದ್ಧತಿ ಹಿಂದೂ ಧರ್ಮದ ನಿಜವಾದ ಆಚರಣೆಯೇ?

27-12-2024 ಬೆಂಗಳೂರು

“ತಮ್ಮ ವೃತ್ತಿ ಜೀವನದಲ್ಲಿ ನಡೆದ ಒಂದು ಸಣ್ಣ ಘಟನೆಯ ಹಿಂದೆ ಬಿದ್ದ ಡಾ. ಸೂರ್ಯಕುಮಾರ್ ಅವರು, ಸಲೀಸಾಗಿ ಓದಿಸಿಕೊಂ...

ಸಮಾಜೋ ಅನುಭಾವಿಕ ಅಗತ್ಯದ ಪೂರೈಕೆ

27-12-2024 ಬೆಂಗಳೂರು

"ದೇಹವನ್ನು ಕೇವಲ ಒಂದು ಮಾಧ್ಯಮವಾಗಿಸಿಕೊಳ್ಳುವ ಅಥವಾ ಮಾಧ್ಯಮವನ್ನಷ್ಟೇ ಆಗಿಸಿಕೊಳ್ಳಬೇಕಾಗುವ ಹಾಗೂ ಬುದ್ಧಿ ಮನಸ್ಸ...