Date: 28-10-2024
Location: ಬೆಂಗಳೂರು
ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘ, ಕನ್ನಡ ಜನಶಕ್ತಿ ಕೇಂದ್ರ ಹಾಗೂ ನಾಡೋಜ ಡಾ. ಕಮಲಾ ಹಂಪನಾ ಸಾಹಿತ್ಯ ವೇದಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕವಿಗೋಷ್ಠಿ ಹಾಗೂ ನಾಡೋಜ ಡಾ. ಕಮಲಾ ಹಂಪನಾ ದತ್ತಿ ಉಪನ್ಯಾಸ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ 2024 ಅ. 28 ಸೋಮವಾರದಂದು ನಗರದ ನಯನ ರಂಗಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕವಿ, ಮಾಜಿ ಸಂಸದ ಡಾ.ಎಲ್. ಹನುಮಂತಯ್ಯ ಅವರು ಮಾತನಾಡಿ, "ಕಮಲಾ ಹಂಪನಾ ಅವರ ಕುಟುಂಬಕ್ಕೆ ಮತ್ತು ಮಕ್ಕಳಿಗೆ ಮಾತ್ರ ತಾಯಿಯಾಗಿರಲಿಲ್ಲ. ನಮ್ಮೆಲ್ಲರಿಗೂ ತಾಯಿಯಾಗಿದ್ದರು. ನಾನು ಅವರ ಸಂಪರ್ಕಕ್ಕೆ ಬಂದದ್ದು ಬಹಳ ಚಿಕ್ಕ ಹುಡುಗನಿಂದ,ಆಗ ಅವರು ನನ್ನನ್ನು ಪುಸ್ತಕ ಬಿಡುಗಡೆಯ ಕಾರ್ಯಕ್ರಮವೊಂದಕ್ಕೆ ನನ್ನನ್ನು ಕರೆದುಕೊಂಡು ಹೋಗಿದ್ದರು. ಹೀಗೆ ಅವರು ನನ್ನ ಪ್ರತಿಯೊಂದು ಸಾಹಿತ್ಯದ ಜೊತೆಯಲ್ಲೂ ಹೆಜ್ಜೆಯಾಗಿದ್ದರು. ನಾನು ಪುಸ್ತಕದ ಕುರಿತು ಮಾತನಾಡುವಾಗ ಬಹಳಷ್ಟು ಸಲ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಇದೇ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಾಗಲು ಕಾರಣ," ಎಂದು ತಿಳಿಸಿದರು.
ವೇದಿಕೆಯಲ್ಲಿ ಕನ್ನಡ ಜನಶಕ್ತಿ ಕೇಂದ್ರದ ಗೌರವ ಸಲಹೆಗಾರ ಪಿ. ಮಲ್ಲಿಕಾರ್ಜುನ ಅವರು ಉಪಸ್ಥಿತರಿದ್ದರು.
ಕವಿಗೋಷ್ಠಿಯಲ್ಲಿ ಡಾ.ಮಮತಾ ಸಾಗರ್, ಸುಬ್ಬು ಹೊಲೆಯಾರ್, ಹಾಜಿರಾ ಖಾನಂ, ಡಾ. ಲಕ್ಷ್ಮಣ್ ವಿ.ಎ, ಭಾರತಿ ಹೆಗಡೆ, ಜಯಲಕ್ಷ್ಮಿ ಪಾಟೀಲ್, ಸುಜಾತಾ ಕೆ, ಮಧುಮತಿ ಬಿ.ಎಸ್, ಅನ್ನಪೂರ್ಣ ಪದ್ಮಸಾಲಿ ಅವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ದತ್ತಿ ಉಪನ್ಯಾಸ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಪ್ರಶಸ್ತಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಅವರು ಹಿರಿಯ ಲೇಖಕ, ಸಂಶೋಧಕ ಡಾ. ಬಾಳಾಸಾಹೇಬ ಲೋಕಾಪುರ ಹಾಗೂ ಸಾಮಾಜಿಕ ಕಾರ್ಯಕರ್ತೆ, ಕಲಾವಿದೆ, ಕವಯಿತ್ರಿ ಚಾಂದಿನಿ ಅವರಿಗೆ ಪ್ರದಾನಿಸಿದರು.
ವಿಶೇಷ ದತ್ತಿ ಉಪನ್ಯಾಸವನ್ನು ಪ್ರಸಿದ್ಧ ಕವಯಿತ್ರಿ ಹಾಗೂ ವಿಮರ್ಶಕಿ ಡಾ. ವಿನಯಾ ಒಕ್ಕುಂದ ಅವರು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ, ಸಂಶೋಧಕ ನಾಡೋಜ ಹಂಪ ನಾಗರಾಜಯ್ಯ ಅವರು ವಹಿಸಿದ್ದರು. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್. ಪುಪ್ಪ ಅವರು ಆಶಯ ನುಡಿಗಳನ್ನಾಡಿದರು.
ಕಳೆದ ವರ್ಷ ದಸರಾ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿದ್ದರು ನಿರ್ದೇಶಕ ವಿಜಯಪ್ರಸಾದ್. ಆದರೆ, ಅವರು ...
ಬೆಂಗಳೂರು: ನಾಟಕಕಾರ, ಚಿತ್ರಕಲಾವಿದ ಡಾ.ಡಿ.ಎಸ್. ಚೌಗಲೆ ಅವರ ‘ಸದರಬಜಾರ್’(ಕಾದಂಬರಿ) ಹಾಗೂ ‘ವಾರಸ...
ಮಂಗಳೂರು: ಲೇಖಕ ರಾಜಾರಾಂ ತಲ್ಲೂರು ಅವರ ‘ಪಿಟ್ಕಾಯಣ’ ಅಂಕಣ ಬರಹಗಳ ಕೃತಿಯು 2025 ಜ. 04 ಶುಕ್ರವಾರದಂದು ಮ...
©2025 Book Brahma Private Limited.