ಕಲಾವಿದರು, ಸಾಧಕರು ಸಂಕಷ್ಟದಲ್ಲಿದ್ದಾಗ ಸರ್ಕಾರ ನೆರವಾಗಬೇಕು: ನ್ಯಾ. ಶಿವರಾಜ್ ವಿ. ಪಾಟೀಲ್

Date: 08-11-2024

Location: ಬೆಂಗಳೂರು


ಬೆಂಗಳೂರು: ಕಲಾವಿದರು, ಸಾಧಕರು ಸಂಕಷ್ಟದಲ್ಲಿದ್ದಾಗ ಸರ್ಕಾರ ನೆರವು ನೀಡುವುದೇ ನಿಜವಾದ ಪ್ರಶಸ್ತಿ. ಸರ್ಕಾರ ಇಂತಹ ಕೆಲಸ ಮಾಡಬೇಕು ಎಂದು ನ್ಯಾಯಮೂರ್ತಿ ಶಿವರಾಜ್ ವಿ ಪಾಟೀಲ್ ಹೇಳಿದರು.

ಯೋಗ್ಯರಿಗೆ ಪ್ರಶಸ್ತಿ ಕೊಡಬೇಕು ಆಗ ಮಾತ್ರ ಪ್ರಶಸ್ತಿಗೆ ಮತ್ತು ಪುರಸ್ಕೃತರಿಗೆ ಗೌರವ ಮೌಲ್ಯ ಹೆಚ್ಚಾಗುತ್ತದೆ ಎಂದು ಡಾ. ವೇಮಗಲ್ ನಾರಾಯಣಸ್ವಾಮಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಆಶ್ರಯದ ನಾಡಿನ ಶ್ರೇಷ್ಠ ಸಾಧಕರಿಗೆ ಸಾಂಸ್ಕೃತಿ ಸಿರಿ -2024 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ, ‘ನಾಡೋಜ ಹಂಪ ನಾಗರಾಜಯ್ಯ ಇಲ್ಲಿ ಸಪ್ತ ರತ್ನಗಳಿಗೆ ಗೌರವಿಸಲಾಗಿದೆ. ಎಲ್ಲರು ನಾಡಿನ ಕೀರ್ತಿಯನ್ನು ಹೆಚ್ಚಿಸಿದವರು. ಇವತ್ತು ನಾನು ಗುರುವಾಗಿದ್ದಕ್ಕೆ ಸಾರ್ಥಕ ಆಯ್ತು, ಕಾರಣ ದೊಡ್ಡರಂಗೇಗೌಡ, ಎಸ್.ಜಿ. ಸಿದ್ದರಾಮಯ್ಯ ಅಂತಹ ನನ್ನ ಶಿಷ್ಯ ರತ್ನಗಳಿಗೆ ಗೌರವಿಸುವ ವೇದಿಕೆಯನ್ನು ಉದ್ಘಾಟನೆ ಮಾಡಿರುವುದು ಎಂದರು. ಜೊತೆಯಲ್ಲಿ ಪ್ರಶಸ್ತಿ ಪಡೆದ ಎಲ್ಲರ ಕುರಿತು ನಲ್ನುಡಿಗಳನ್ನು,’ ಆಡಿದರು.

ಪ್ರಶಸ್ತಿ ಪುರಸ್ಕೃತರಾದ ದೊಡ್ಡರಂಗೇಗೌಡ ಮಾತನಾಡಿ, ‘ಜಾನಪದ ದೇಶದ ಆಸ್ತಿ. ಇಡೀ ಜಗತ್ತಿನಲ್ಲಿ ಬಹುಶಃ ಜಾನಪದ ಇಲ್ಲದ ದೇಶ ಇಲ್ಲ. ಸಂಸ್ಕೃತಿಯ ಮೂಲ ಜಾನಪದ,’ ಎಂದರು.

‘ಅಭಿವೃದ್ಧಿ ಎಂದರೆ ಏನಿದು. ನಗರ ಮಾಡೋದು, ರಸ್ತೆ ಮಾಡೋದು, ಮೈಸೂರಿಗೆ ಬೇಗ ತಲುಪುವುದು ಅಭಿವೃದ್ಧಿಯ. ಮೇಕೆದಾಟು ತಂದೇ ತರುತ್ತೇವೆ ಅಂತಾರೆ. ಪಶ್ಚಿಮ ಘಟ್ಟ ತುಂಡು ತುಂಡಾಗಿದೆ. ಇದರ ಬಗ್ಗೆ ಯಾರು ಕೇಳುವವರಿಲ್ಲ. ಇದೆಲ್ಲಾ ಅಭಿವೃದ್ಧಿನಾ,’ ಎಂದು ಅ.ನ. ಯಲ್ಲಪ್ಪ ರೆಡ್ಡಿ ಮಾತನಾಡಿದರು.

ದೊಡ್ಡರಂಗೇಗೌಡ (ಹಿರಿಯ ಸಾಹಿತಿಗಳು), ಅ. ನ. ಯಲ್ಲಪ್ಪ ರೆಡ್ಡಿ (, ಮಲ್ಲೇಶ್ವರಂ ಜಿ. ವೆಂಕಟೇಶ್, ಎಸ್.ಜಿ. ಸಿದ್ದರಾಮಯ್ಯ, ಜಯಶ್ರೀ ಅರವಿಂದ್, ಸಿ. ಬಸವಲಿಂಗಯ್ಯ ಮತ್ತು‌ಆರ್.ಕೆ. ಶೆಟ್ಟಿ ಅವರಿಗೆ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ಅವರು ಡಾ. ವೇಮಗಲ್ ನಾರಾಯಣಸ್ವಾಮಿ ಸಾಂಸ್ಕೃತಿಕ ಪ್ರತಿಷ್ಠಾನದ 'ಸಂಸ್ಕೃತಿ ಸಿರಿ -2024' ಪ್ರಶಸ್ತಿ ಪ್ರದಾನ ಮಾಡಿದರು.

ವೇಮಗಲ್ ನಾರಾಯಣಸ್ವಾಮಿ, ಹಿ.ಚಿ. ಬೋರಲಿಂಗಯ್ಯ, ಬಿ.ಕೆ. ಶಿವರಾಂ, ಗೊಲ್ಲಹಳ್ಳಿ ಶಿವಪ್ರಸಾದ್ ಉಪಸ್ಥಿತರಿದ್ದರು. ಆನಂದ ಮಾದಲಗೆರೆ ಸ್ವಾಗತ ನುಡಿಗಳನ್ನು ಆಡಿದರು.

MORE NEWS

ಕನ್ನಡ ಪುಸ್ತಕ ಪರಿಷತ್ತು ಸಮ್ಮೆಳನಾಧ್ಯಕ್ಷ ಡಾ.ಪ್ರಕಾಶ ಖಾಡೆಗೆ ಪರಿಷತ್ತಿನಿಂದ ಆಹ್ವಾನ

22-11-2024 ಬೆಂಗಳೂರು

ವಿಜಯಪುರ: ನಗರದ ಚೇತನಾ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಡಿಸೆಂಬರ್ 1 ರವಿವಾರ ಜರುಗಲಿರುವ ಕನ್ನಡ ಪುಸ್ತಕ ಪರಿಷತ್ತು ಸಮ್...

ಪಿ. ಶೇಷಾದ್ರಿ ಸಿನಿಮಾವಲೋಕನಕ್ಕೆ 'ಮುನ್ನುಡಿ'

21-11-2024 ಬೆಂಗಳೂರು

ಬೆಂಗಳೂರು: ಪಿ. ಶೇಷಾದ್ರಿ ಸಿನಿಮಾವಲೋಕನ, ಚಿತ್ರೋತ್ಸವ, ಸಿನಿಮಂಥನ 'ಮುನ್ನುಡಿ' ಚಿತ್ರದಿಂದ ಆರಂಭಗೊಂಡಿದೆ. ಹ...

ವಿಜಯ ರಾಘವೇಂದ್ರ ನಟನೆಯ 'ರುದ್ರಾಭಿಷೇಕಂ' ಚಿತ್ರಕ್ಕೆ ಚಾಲನೆ

21-11-2024 ಬೆಂಗಳೂರು

ಬೆಂಗಳೂರು: ನಮ್ಮ‌ನಾಡಿನ ಸಾಂಸ್ಕೃತಿಕ ಇತಿಹಾಸ, ಆಚರಣೆಗಳು, ಕಲೆಯನ್ನು ಪ್ರತಿಬಿಂಬಿಸುವ ಒಂದಷ್ಟು ಚಲನಚಿತ್ರಗಳು ಈಗ...